8ನೇ ತರಗತಿ ಪಾಸಾದವರಿಗೆ ಅಂಚೆ ಇಲಾಖೆಯಲ್ಲಿದೆ ಉದ್ಯೋಗಾವಕಾಶ ಸಂಬಳ 19 ರಿಂದ 60 ಸಾವಿರ

0 0

job opportunity in the postal department: ಉದ್ಯೋಗವನ್ನು ಹುಡುಕುತ್ತಿರುವವರಿಗೆ ಭಾರತೀಯ ಅಂಚೆ ಇಲಾಖೆಯಿಂದ ಸುವರ್ಣ ಉದ್ಯೋಗಾವಕಾಶ ಸಿಕ್ಕಿದೆ ಎಂದು ಹೇಳಬಹುದಾಗಿದೆ. ಮೆಕ್ಯಾನಿಕ್, MV ಎಲೆಕ್ಟ್ರಿಷಿಯನ್, ಕಾಪರ್ ಮತ್ತು ಟಿನ್‌ಮಿತ್ ಮತ್ತು ಅಪ್ಹೋಲ್‌ಸ್ಟರರ್ ಸೇರಿದಂತೆ ಇನ್ನೂ ಹಲವಾರು ಹುದ್ದೆಗಳ ನೇಮಕಾತಿಗೆ ಆಫರ್ ಬಂದಿದೆ. ಇನ್ನು ಯಾವ್ಯಾವ ಹುದ್ದೆಗೆ ಎಷ್ಟು ನೇಮಕಾತಿಯ ಆಫರ್ ಇದೆ ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

MV MECHANIC ಗೆ ನಾಲ್ಕು ಹುದ್ದೆಗಳಿವೆ. MV ಎಲೆಕ್ಟ್ರಿಷಿಯನ್ ಗೆ 1 ಹುದ್ದೆ. ಕಾಪರ್ ಮತ್ತು ಟಿನ್ ಮಿತ್ ಗೆ ಹಾಗೂ ಅಪ್ಹೋಲ್‌ಸ್ಟರರ್ ಗೆ ತಲಾ ಒಂದು ಹುದ್ದೆಗಳ ಅವಕಾಶಗಳಿವೆ. ಈ ಹುದ್ದೆಗಾಗಿ ಅರ್ಜಿ ಸಲ್ಲಿಸುವ ಅವರಿಗೆ ಇರುವಂತಹ ಮುಖ್ಯ ಮಾನದಂಡ ಎಂದರೆ ಎಂಟನೇ ತರಗತಿಯ ಪಾಸ್ ಆಗಿರಬೇಕು. ಇದಕ್ಕೆ ಸಂಬಂಧಿಸಿದ ವಿಷಯದಲ್ಲಿ ಯಾವುದೇ ತಾಂತ್ರಿಕ ಸಂಸ್ಥೆಯಿಂದ ಸರ್ಟಿಫಿಕೇಟ್ ಅನ್ನು ಪ್ರಮುಖವಾಗಿ ಪಡೆದುಕೊಂಡಿರಬೇಕು. ವಯೋಮಿತಿಯ ವಿಚಾರವನ್ನು ನೋಡುವುದಾದರೆ 18 ರಿಂದ 30 ವರ್ಷದವೊಳಗಾಗಿರಬೇಕು.

ಅರ್ಜಿಗಾಗಿ ನೂರು ರೂಪಾಯಿ ಅರ್ಜಿ ಶುಲ್ಕವನ್ನು ಕೂಡ ಪಾವತಿಸಬೇಕು. ಇನ್ನೂ ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ 19900 ರಿಂದ 63200 ರೂಪಾಯಿಗಳವರೆಗೆ ಸಂಬಳ ದೊರಕಲಿದೆ. ಕಾಂಪಿಟೇಟಿವ್ ಎಕ್ಸಾಮ್ ಮಾಡುವ ಮೂಲಕವೇ ಇಲ್ಲಿ ಬೇಕಾಗಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಮುಂದಿನ ವರ್ಷದ ಅಂದರೆ 2023ರ ಜನವರಿ 9 ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಿದೆ.

ರಾಜ್ಯದ ಜನತೆಗೆ ಗುಡ್ ನ್ಯೂಸ್, ವಿದ್ಯುತ್ ದರ ಇಳಿಕೆ

ಈ ಕೆಲಸಗಳ ಕುರಿತಂತೆ ಇನ್ನಷ್ಟು ಹೆಚ್ಚಿನ ಹಾಗೂ ಸಂಪೂರ್ಣ ಅಧಿಕೃತ ಮಾಹಿತಿಗಳನ್ನು ಪಡೆಯಲು indiapost.gov.in ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಅಂಚೆ ಇಲಾಖೆಯ ಕೆಲಸ ಖಂಡಿತವಾಗಿ ಸುಲಭವಾಗಿರಲಿದ್ದು ವೇತನದ ವಿಚಾರದಲ್ಲಿ ಉತ್ತಮ ಸಂಭಾವನೆಯನ್ನು ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ. ಈ ಮೇಲಿನ ವಿವರಗಳು ನಿಮಗೆ ಇಷ್ಟವಾಗಿದ್ದಲ್ಲಿ ತಪ್ಪದೇ ನೀವು ಈ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

Leave A Reply

Your email address will not be published.