ಆರೋಗ್ಯವಾಗಿರಲು ಈ 3 ನಿಯಮ ಪಾಲಿಸಿ, ಉತ್ತಮ ಅರೋಗ್ಯ ರೂಪಿಸಿಕೊಳ್ಳಿ

0 1

ಜೀವನ ಎಂದರೆ ಎಲ್ಲರಿಗೂ ಒಂದೇ. ಕೆಲವರಿಗೆ ಕೆಲಸದ ಒತ್ತಡ ಹೆಚ್ಚಿದ್ದರೆ ಉಳಿದವರಿಗೆ ಕಡಿಮೆ. ಆದರೆ ಕೆಲವು ವ್ಯಕ್ತಿಗಳು ಮಾತ್ರ ಆರೋಗ್ಯದಲ್ಲಿ ಉತ್ತಮರಾಗಿದ್ದು ಸದಾ ಹಸನ್ಮುಖರಾಗಿದ್ದು ನೆಮ್ಮದಿಯ ಜೀವನ ನಡೆಸುತ್ತಿರುತ್ತಾರೆ. ಅಂದರೆ ಇವರಿಗೆಲ್ಲಾ ಮಾನಸಿಕ ಒತ್ತಡ ಹಾಗೂ ಇತರ ಜವಾಬ್ದಾರಿಗಳು ಇಲ್ಲವೆಂದೇನೂ ಇಲ್ಲ. ಆದರೆ ಇತರರಿಗೆ ಸಾಧ್ಯವಾಗದೇ ಇದ್ದದ್ದು ಇವರಿಗೆ ಸಾಧ್ಯವಾಗಿರಬೇಕಾದರೆ ಇವರ ನಿತ್ಯದ ಅಭ್ಯಾಸಗಳೇ ಮುಖ್ಯ ಕಾರಣವಾಗಿವೆ. ಆದ್ದರಿಂದ ನಾವು ಇಲ್ಲಿ ಆರೋಗ್ಯವಂತ ಮನುಷ್ಯನ ಲಕ್ಷಣಗಳು ಮತ್ತು ಆತನ ಸೇರಿಸಬೇಕಾದ ಕಾರ್ಯಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಮನುಷ್ಯನು ಆರೋಗ್ಯವಾಗಿ ಇರುವುದಕ್ಕೆ ಕೆಲವೊಂದು ಲಕ್ಷಣಗಳು ಇರುತ್ತವೆ. ಮುಖ್ಯವಾಗಿ ಅದೇನೆಂದರೆ ಮನುಷ್ಯನ ಪಾದವು ಬಿಸಿಯಾಗಿರಬೇಕು. ಅಂದರೆ ವ್ಯಾಯಾಮ. ಇದು ಇಂತಹದ್ದೇ ಆಗಬೇಕೆಂದೇನೂ ಇಲ್ಲ. ವೃತ್ತಿಪರ ಮತ್ತು ದುಬಾರಿ ಆಗಬೇಕೆಂದೂ ಇಲ್ಲ. ಯಾವುದು ಇಷ್ಟವಾಗುತ್ತದೆಯೋ ಆ ವ್ಯಾಯಾಮ ಅಥವಾ ದೈಹಿಕ ಕಸರತ್ತನ್ನು ಒಂದು ದಿನವೂ ಬಿಡದೇ ನಿರ್ವಹಿಸುವುದೇ ಆರೋಗ್ಯಕರ ವ್ಯಕ್ತಿಗಳ ದೃಢಕಾಯದ ಗುಟ್ಟಾಗಿದೆ. ಯೋಗಾಭ್ಯಾಸ ಯಾವುದೇ ಬಗೆಯ ವ್ಯಾಯಾಮವನ್ನು ಮಾಡಬಹುದು.

ಇನ್ನೊಂದು ಲಕ್ಷಣವೆಂದರೆ ಮನುಷ್ಯನ ಹೊಟ್ಟೆಯು ಮೃದುವಾಗಿರಬೇಕು. ಅಂದರೆ ದಿನನಿತ್ಯ ಸರಿಯಾದ ಆಹಾರ ಕ್ರಮವನ್ನು ನಿರ್ವಹಿಸಬೇಕು. ಯಾವ ಹೊತ್ತಿನ ಆಹಾರವನ್ನು ಯಾವಾಗ ಸೇವಿಸಬೇಕೋ ಆಗಲೇ ಸೇವಿಸಬೇಕು. ವ್ಯಕ್ತಿಗಳು ತಮ್ಮ ದಿನದ ಎಲ್ಲಾ ಹೊತ್ತಿನ ಆಹಾರಗಳನ್ನು ಮುಂಚಿತವಾಗಿಯೇ ನಿರ್ಧರಿಸಿಟ್ಟುಕೊಳ್ಳಬೇಕು. ತಮಗೆ ಇಷ್ಟವಾದ ಆಹಾರ ಸರಿಯಾದ ಸಮಯಕ್ಕೆ ಲಭಿಸುವಂತೆ ವ್ಯವಸ್ಥೆ ಮಾಡಿಟ್ಟುಕೊಳ್ಳುವುದು ಉತ್ತಮ. ಮತ್ತೊಂದು ಮುಖ್ಯ ಲಕ್ಷಣವೆಂದರೆ ಮನುಷ್ಯನ ತಲೆಯು ಅಂದರೆ ಮನಸ್ಸು ಮತ್ತು ಪಂಚೇಂದ್ರಿಯಗಳು ಕೂಡ ಸರಿಯಾಗಿ ಶಾಂತವಾಗಿ ಇರಬೇಕು.

ಆರೋಗ್ಯವಂತ ವ್ಯಕ್ತಿಗಳಾಗಲು ತಮಗೆ ಎದುರಾಗುವ ಮಾನಸಿಕ ಒತ್ತಡವನ್ನು ಎದುರಿಸಿ ತಮ್ಮ ಸಾಮರ್ಥ್ಯದ ಪ್ರಕಾರ ನಿರ್ವಸಬೇಕು. ನಿಶ್ಚಿಂತೆಯಿಂದ ಬಂದ ಕಷ್ಟಗಳನ್ನು ತೊಂದರೆಗಳನ್ನು ಎದುರಿಸಬೇಕು. ಊರ್ದ್ವಜತ್ರಗತ ವ್ಯಾಧಿಗಳು ಅಂದರೆ ತಲೆಯ ಭಾಗದ ಮತ್ತು ಪಂಚೇಂದ್ರಿಯಗಳ ಸಮಸ್ಯೆಯನ್ನು ನಿವಾರಿಸಲು ಒಂದು ಮನೆಮದ್ದನ್ನು ತಯಾರಿಸಿಕೊಳ್ಳುವುದು ಉತ್ತಮ. ಅದೇನೆಂದರೆ ಬಾದಾಮಿ ಎಣ್ಣೆಯನ್ನು ಸ್ನಾನಕ್ಕಿಂತ ಮುಂಚಿತವಾಗಿ ಎರಡು ಹನಿಗಳನ್ನು ಮೂಗಿಗೆ ಹಾಕಿಕೊಳ್ಳಬೇಕು. ಇದರಿಂದ ಮನುಷ್ಯನ ಪಂಚೇಂದ್ರಿಯಗಳು ಆರೋಗ್ಯವಾಗಿರುತ್ತದೆ. ಹಾಗೆಯೇ ತಲೆಯು ತಂಪಾಗಿರುತ್ತದೆ.

Leave A Reply

Your email address will not be published.