Ultimate magazine theme for WordPress.

ಈ ಲಾಕ್ ಡೌನ್ ಸಮಯಲ್ಲಿ ಮನೆಯಲ್ಲೇ ಮಾಡಿ ಆರೋಗ್ಯಕರ ಸೋಪುಗಳು

0 1

ಸೋಪನ್ನು ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಅಂಗಡಿಯಲ್ಲಿ ದುಡ್ಡು ಕೊಟ್ಟು ತರಲಾಗುವುದು. ಆದರೆ ಎಲ್ಲಾ ಸೋಪುಗಳು ಒಳ್ಳೆಯದಲ್ಲ. ಕೆಲವು ಸೋಪುಗಳಿಗೆ ರಾಸಾಯನಿಕಗಳನ್ನು ಹಾಕಲಾಗುತ್ತದೆ. ಬಣ್ಣಕ್ಕಾಗಿ ಹಾಕಬಹುದು ಅಥವಾ ಘಮ ಘಮ ಪರಿಮಳ ಬರಬೇಕು ಎಂದು ಹಾಕಬಹುದು. ಆದರೆ ಮನೆಯಲ್ಲಿ ಸೋಪನ್ನು ತಯಾರಿಸಬಹುದು. ಆದ್ದರಿಂದ ನಾವು ಇಲ್ಲಿ ಮನೆಯಲ್ಲಿ ಸೋಪನ್ನು ತಯಾರಿಸುವುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಮೊದಲು ಒಂದು ಬಟಾಟೆಯನ್ನು ಸಿಪ್ಪೆಯನ್ನು ತೆಗೆದುಕೊಳ್ಳಬೇಕು. ನಂತರದಲ್ಲಿ ಅದನ್ನು ಚೂರನ್ನಾಗಿ ಮಾಡಿ ಮಿಕ್ಸಿಯಲ್ಲಿ ಹಾಕಿ ರುಬ್ಬಬೇಕು. ನಂತರ ಅದನ್ನು ಒಂದು ಪಾತ್ರೆಗೆ ಹಾಕಿ ಸೋಸಿಕೊಳ್ಳಬೇಕು. ಸೋಸಿಕೊಂಡ ಪಾತ್ರೆಗೆ ಒಂದು ಚಮಚ ಹಾಲನ್ನು ಹಾಕಬೇಕು. ನಂತರದಲ್ಲಿ ಒಂದು ಚಮಚ ಅಲೋವೆರಾ ಜೆಲ್ ನ್ನು ಹಾಕಬೇಕು. ಹಾಗೆಯೇ ಒಂದು ಚಮಚ ಬಾದಾಮಿ ಎಣ್ಣೆಯನ್ನು ಹಾಕಬೇಕು. ಹಾಗೆಯೇ ಔಷಧಿ ಅಂಗಡಿಯಲ್ಲಿ ವಿಟಮಿನ್ ಇ ಮಾತ್ರೆ ದೊರಕುತ್ತದೆ. ಅದನ್ನು ಒಂದನ್ನು ಇದಕ್ಕೆ ಹಾಕಬೇಕು. ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಬೇಕು. ಹಾಗೆಯೇ 60ಗ್ರಾಮ್ ನ ಗ್ಲಿಸರಿನ್ ಸೋಪನ್ನು ತೆಗೆದುಕೊಂಡು ಚೂರಾಗಿ ಕಟ್ ಮಾಡಿ ಕುದಿಯುವ ನೀರಿನಲ್ಲಿ ಒಂದು ಪ್ಲೇಟ್ಗೆ ಈ ಚೂರುಗಳನ್ನು ಹಾಕಿ ಕುದಿಸಬೇಕು.

ಆಗ ಅದು ಕರಗುತ್ತದೆ. ನಂತರ ಎಲ್ಲವನ್ನೂ ಮಿಶ್ರಣ ಮಾಡಿ ಸೋಪಿನಾಕಾರದ ತಪ್ಪಲೆಗೆ ಹಾಕಿ ಫ್ರೀಜರ್ ನಲ್ಲಿ ಇಡಬೇಕು. ಹೀಗೆಯೇ ಅನೇಕ ರೀತಿಯಲ್ಲಿ ಮಾಡಬಹುದು. ಹೀಗೆ ಟೊಮೆಟೊ ಸೋಪನ್ನು ತಯಾರಿಸಿಕೊಳ್ಳಬಹುದು. ಮೊದಲು ಒಂದು ಟೊಮೆಟೊವನ್ನು ಅದನ್ನು ಚೂರನ್ನಾಗಿ ಮಾಡಿ ಮಿಕ್ಸಿಯಲ್ಲಿ ಹಾಕಿ ರುಬ್ಬಬೇಕು. ನಂತರ ಅದನ್ನು ಒಂದು ಪಾತ್ರೆಗೆ ಹಾಕಿ ಸೋಸಿಕೊಳ್ಳಬೇಕು. ಇದಕ್ಕೆ ಒಂದು ಚಮಚ ಗಂಧದ ಪುಡಿಯನ್ನು ಹಾಕಬೇಕು. ನಂತರದಲ್ಲಿ ಒಂದು ಚಮಚ ಅಲೋವೆರಾ ಜೆಲ್ ನ್ನು ಹಾಕಬೇಕು. ಹಾಗೆಯೇ ಔಷಧಿ ಅಂಗಡಿಯಲ್ಲಿ ವಿಟಮಿನ್ ಇ ಮಾತ್ರೆ ದೊರಕುತ್ತದೆ. ಅದನ್ನು ಒಂದನ್ನು ಇದಕ್ಕೆ ಹಾಕಬೇಕು. ಹಾಗೆಯೇ 60ಗ್ರಾಮ್ ನ ಗ್ಲಿಸರಿನ್ ಸೋಪನ್ನು ತೆಗೆದುಕೊಂಡು ಚೂರಾಗಿ ಕಟ್ ಮಾಡಿ ಕುದಿಯುವ ನೀರಿನಲ್ಲಿ ಒಂದು ಪ್ಲೇಟ್ಗೆ ಈ ಚೂರುಗಳನ್ನು ಹಾಕಿ ಕುದಿಸಬೇಕು. ಆಗ ಅದು ಕರಗುತ್ತದೆ. ನಂತರ ಎಲ್ಲವನ್ನೂ ಮಿಶ್ರಣ ಮಾಡಿ ಸೋಪಿನಾಕಾರದ ತಪ್ಪಲೆಗೆ ಹಾಕಿ ಫ್ರೀಜರ್ ನಲ್ಲಿ ಇಡಬೇಕು.

ಹಾಗೆಯೇ ಆರೆಂಜ್ ಪೀಲ್ ಸೋಪನ್ನು ಮಾಡಬಹುದು. ಮೊದಲು ಆರೆಂಜ್ ಸಿಪ್ಪೆಯನ್ನು ಚೂರನ್ನಾಗಿ ಮಾಡಿ ಮಿಕ್ಸಿಯಲ್ಲಿ ಹಾಕಿ ರುಬ್ಬಬೇಕು. ನಂತರದಲ್ಲಿ ಒಂದು ಚಮಚ ಅಲೋವೆರಾ ಜೆಲ್ ನ್ನು ಹಾಕಬೇಕು. ಒಂದು ಚಮಚ ಸೀಸಮ್ ಆಯಿಲ್ ನ್ನು ಹಾಕಬೇಕು. ಹಾಗೆಯೇ ಔಷಧಿ ಅಂಗಡಿಯಲ್ಲಿ ವಿಟಮಿನ್ ಇ ಮಾತ್ರೆ ದೊರಕುತ್ತದೆ. ಅದನ್ನು ಒಂದನ್ನು ಇದಕ್ಕೆ ಹಾಕಬೇಕು. ಒಂದು ಚಮಚ ಲೆಮನ್ ಎಸೆನ್ಶಿಯಯಲ್ ಹಾಕಬೇಕು. ಹಾಗೆಯೇ 60ಗ್ರಾಮ್ ನ ಗ್ಲಿಸರಿನ್ ಸೋಪನ್ನು ತೆಗೆದುಕೊಂಡು ಚೂರಾಗಿ ಕಟ್ ಮಾಡಿ ಕುದಿಯುವ ನೀರಿನಲ್ಲಿ ಒಂದು ಪ್ಲೇಟ್ಗೆ ಈ ಚೂರುಗಳನ್ನು ಹಾಕಿ ಕುದಿಸಬೇಕು. ಆಗ ಅದು ಕರಗುತ್ತದೆ. ನಂತರ ಎಲ್ಲವನ್ನೂ ಮಿಶ್ರಣ ಮಾಡಿ ಸೋಪಿನಾಕಾರದ ತಪ್ಪಲೆಗೆ ಹಾಕಿ ಫ್ರೀಜರ್ ನಲ್ಲಿ ಇಡಬೇಕು.

Leave A Reply

Your email address will not be published.