ಸಂಕ್ರಾಂತಿ ಹಬ್ಬಕ್ಕೆ ಚಿನ್ನ ಖರೀದಿಸುವವರಿಗೆ ಶಾಕ್, ಚಿನ್ನದ ಬೆಲೆಯಲ್ಲಿ ಏರಿಕೆ ಎಷ್ಟಾಗಿದೆ ನೋಡಿ

0 1

Gold Rate on today: ಚಿನ್ನ ಎನ್ನುವುದು ಭಾರತ ದೇಶದಲ್ಲಿ ಇಡೀ ವಿಶ್ವದಲ್ಲಿ ಅತ್ಯಂತ ಖರೀದಿಗೆ ಒಳಗಾಗುವಂತಹ ಮೌಲ್ಯಯುತ ವಸ್ತುವಾಗಿದೆ ಎಂದರೆ ತಪ್ಪಾಗಲಾರದು. ಹಣ ಇರುವವರು ತಮ್ಮ ಸೌಂದರ್ಯ ಹೆಚ್ಚಳಕ್ಕಾಗಿ ಚಿನ್ನಾಭರಣಗಳನ್ನು ಖರೀದಿಸಿ ಧರಿಸುತ್ತಾರೆ. ಚಿನ್ನಾಭರಣಗಳು (Gold ornaments) ಹಲವಾರು ವಿವಿಧ ರೂಪದಲ್ಲಿ ಅದನ್ನು ಕೊಳ್ಳುವವರಿಗೆ ಉಪಯೋಗಕ್ಕೆ ಬರುತ್ತದೆ. ಕೆಲವರು ಅಂದಕ್ಕಾಗಿ ಖರೀದಿಸಿದರೆ ಇನ್ನು ಕೆಲವರು ಅದನ್ನು ಇನ್ವೆಸ್ಟ್ಮೆಂಟ್ (Investment) ರೂಪದಲ್ಲಿ ಖರೀದಿಸುತ್ತಾರೆ.

ಕಷ್ಟಕಾಲದಲ್ಲಿ ಚಿನ್ನವನ್ನು ಅಡವಿಟ್ಟು ಅದರಿಂದ ಹಣ ಪಡೆಯುವವರು ಕೂಡ ಸಾಕಷ್ಟು ಜನರಿದ್ದಾರೆ. ಇನ್ನು ಸದ್ಯಕ್ಕೆ ನೀವು ಚಿನ್ನವನ್ನು ಖರೀದಿಸುವ ಯೋಚನೆಯನ್ನು ಹೊಂದಿದ್ದರೆ ಈಗಾಗಲೇ ನಿಮಗೆ ತಿಳಿದಿರಬಹುದು ದಿನೇ ದಿನೇ ಚಿನ್ನದ ಬೆಲೆ ಏರಿಕೆ ಆಗುತ್ತದೆ. ಚಿನ್ನದ ಇಂದಿನ ಬೆಲೆಯ ಕುರಿತಂತೆ ತಿಳಿದುಕೊಳ್ಳೋಣ ಬನ್ನಿ. 22 ಕ್ಯಾರೆಟ್ ಮೌಲ್ಯದ 10 ಗ್ರಾಂ ಚಿನ್ನದ ಬೆಲೆ 200 ರೂಪಾಯಿ ಹೆಚ್ಚು ಆಗಿದೆ ಹಾಗೂ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 220 ರೂಪಾಯಿಗಳಷ್ಟು ಏರಿಕೆಯಾಗಿದೆ ಎಂಬುದಾಗಿ ಮಾರುಕಟ್ಟೆಯ ಮೂಲಗಳಿಂದ ತಿಳಿದು ಬಂದಿದೆ.

ಇದನ್ನೂ ಓದಿ..ನಿಪ್ಪಾನ್ ಪೇಂಟ್ ಡೀಲರ್‌ ಶಿಪ್ ಬಿಸಿನೆಸ್ ಮಾಡಿ ತಿಂಗಳಿಗೆ 1 ಲಕ್ಷದವರೆಗೆ ಆದಾಯಗಳಿಸಿ

ಒಂದು ಕೆಜಿ ಬೆಳ್ಳಿ ಬೆಲೆ 100 ರೂಪಾಯಿ ಏರಿಕೆಯಾಗಿದ್ದು ಭಾರತದ ಹಲವಾರು ಪ್ರಮುಖ ಪ್ರದೇಶಗಳಲ್ಲಿ ಇರುವಂತಹ ಚಿನ್ನದ ಬೆಲೆಯ ಕುರಿತಂತೆ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ. 22 ಕ್ಯಾರೆಟ್ ಚಿನ್ನದ ಬೆಲೆ ಚೆನ್ನೈನಲ್ಲಿ 52,500 ಮುಂಬೈನಲ್ಲಿ 51,600 ದೆಹಲಿಯಲ್ಲಿ 51750 ಕೊಲ್ಕತ್ತಾದಲ್ಲಿ 51,600 ನಮ್ಮ ಬೆಂಗಳೂರಿನಲ್ಲಿ 51,650 ಹೈದರಾಬಾದ್ ಹಾಗೂ ಕೇರಳ ಎರಡು ಪ್ರದೇಶಗಳಲ್ಲಿ ಕೂಡ 51600 ಬೆಲೆ ಇದೆ.

Gold Rate On today

ಇನ್ನು 24 ಕ್ಯಾರೆಟ್ ಚಿನ್ನಕ್ಕೆ ಚೆನ್ನೈನಲ್ಲಿ 57,250 ಮುಂಬೈನಲ್ಲಿ 56290 ದೆಹಲಿಯಲ್ಲಿ 56440 ಕೊಲ್ಕತ್ತಾದಲ್ಲಿ 56290 ನಮ್ಮ ಬೆಂಗಳೂರಿನಲ್ಲಿ 56340 ಹೈದರಾಬಾದ್ ಕೇರಳ ಹಾಗೂ ಪುಣೆಯಲ್ಲಿ 56290. ಮಂಗಳೂರು ಹಾಗೂ ಮೈಸೂರಿನಲ್ಲಿ 56340 ಇದೆ. ಒಂದು ವೇಳೆ ನೀವು ಖರೀದಿಸುವ ಹಾಗೂ ಹೂಡಿಕೆ ಮಾಡುವಂತಹ ಯೋಜನೆಯನ್ನು ರೂಪಿಸಿಕೊಂಡಿದ್ದರೆ ಬಂಗಾರದ ಈ ಬೆಲೆಯ ಬಗ್ಗೆ ನಿಮ್ಮ ರಿಸರ್ಚ್ ಮಾಡಿ ನಂತರವೇ ನಿರ್ಧಾರಕ್ಕೆ ಬರುವುದು ಉತ್ತಮ ಎಂದು ಭಾವಿಸಬಹುದಾಗಿದೆ.

ಇದನ್ನೂ ಓದಿ..ಗಂಡನಿಗೆ ತಿಳಿಯದಂತೆ 50 ಜನ ಗೆಳೆಯರೊಂದಿಗೆ ಹೆಂಡತಿಯ ಚಕ್ಕಂದ, ನಂತರ ಗಂಡ ಮಾಡಿದ್ದೇನು ಗೊತ್ತಾ..

Leave A Reply

Your email address will not be published.