Ginger Benefits: ಒಂದು ತುಂಡು ಹಸಿ ಶುಂಠಿ ಸಾಕು ಜ್ವ’ರ ನೆಗಡಿ ಏನೇ ಇರಲಿ ತಕ್ಷಣ ಪರಿಹಾರ

0 4

Ginger Benefits: ಜ್ವರ ನೆಗಡಿ ಆದರೆ ಸಾಕು ಮನೆಯಲ್ಲಿ ಹಿರಿಯರು ಹೇಳುವ ಮನೆಮದ್ದು ಎಂದರೆ ಶುಂಠಿ (Ginger Benefits Kashaya) ಕಷಾಯ.ಶುಂಠಿ ಆರೋಗ್ಯ ವರ್ಧಕ ಅಷ್ಟೇ ಅಲ್ಲ ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ.ಆರ್ಧ್ರಕ ಅಥವಾ ಶುಂಠಿಯನ್ನುವ ವಿಶ್ವಭೇಶಜ ಎಂದು ಕರೆಯಲಾಗುತ್ತದೆ. ಅಂದರೆ ವಿಶ್ವದ ಎಲ್ಲ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಶುಂಠಿಗಿದೆ.

ಯಾರಿಗೆ ಅಗ್ನಿ ಮಾಂಜಿ ಇದೆ ಅರುಚಿ ಇದೆ ಅಜೀರ್ಣ ಇದೆ ಹೊಟ್ಟೆಯ ಯಾವುದೇ ಸಮಸ್ಯೆ ಇರಲಿ ಅಂತವರು ಊಟಕ್ಕೆ ಕುಳಿತಾಗ ಹಸಿ (Raw ginger) ಶುಂಠಿಯನ್ನು ಒಂದು ನಾಲ್ಕಾಣೆ ಭಾಗದಷ್ಟು ಹೆಚ್ಚಿಕೊಂಡು ಒಂದೇಒಂದು ಚಿಟಿಕೆ ಸೈಂದ್ರವ ಲವಣವನ್ನು ತೆಗೆದುಕೊಂಡು ಅದನ್ನು ಬಾಯಿಯಲ್ಲಿ ಚಪ್ಪರಿಸಬೇಕು ಅದನ್ನು ಒಂದೇ ಸಾರಿ ಜಗಿದು ನುಂಗಬಾರದು ಇದರ ರದ ಹೊಟ್ಟೆಗೆ ಹೋಗುವುದರಿಂದ ಚೆನ್ನಾಗಿ ಆಹಾರ ಜೀರ್ಣವಾಗುತ್ತದೆ ಇದರಿಂದ ತಿಂದ ಆಹಾರ ನಿಮಗೆ ದಕ್ಕುತ್ತದೆ . ಜೀರ್ಣ ಕ್ರಿಯೆ ಸರಿಯಾಗಿ ಆಗದಿದ್ದಾಗ ನಿಮಗೆ ಶಕ್ತಿ ದೊರಕುವುದಿಲ್ಲ ಅಶಕ್ತತೆ ಉಂಟಾಗುತ್ತದೆ.

ಮಕ್ಕಳಿಗೆ ನೆಗಡಿ ಶಿತವಾಗಿ ಜ್ವರ (Cold and flu) ಬಂದು ಮೂಗುಕಟ್ಟಿ ಉಸಿರಾಡಲು ತೊಂದರೆಯಾದಾಗ ಮೂರರಿಂದ ಆರು ಹನಿ ಹಸಿ ಶುಂಠಿ ರಸ ಒಂದು ಚಮಚ ಜೇನುತುಪ್ಪ ಮತ್ತು ಎರಡು ಮೂರು ಹನಿ ತುಳಸಿರಸ ಸೇರಿಸಿಕೊಟ್ಟರೆ ಬಹುಬೇಗ ಶೀತ ಕಡಿಮೆಯಾಗಿ ಮಗುವಿಗೆ ಆರಾಮವಾಗುತ್ತದೆ. ಗಂಟಲು ನೋವು, ಕೆಮ್ಮಿನಿಂದಾಗಿ ಗಂಟಲು ಕೆರೆದಂತಾಗುತ್ತಿದ್ದರೆ ಹಸಿ ಶುಂಠಿ ಮತ್ತು ಉಪ್ಪು ಹಾಕಿ ತಿಂದರೆ ಗಂಟಲು ಕೆರೆತ ನಿವಾರಣೆ ಆಗುತ್ತದೆ. ರಾತ್ರಿಯಿಡಿ ಕೆಮ್ಮಿನಿಂದಾಗಿ ನಿದ್ರೆ ಮಾಡಲು ತೊಂದರೆಯಾಗುತ್ತಿದ್ದರೆ ಹೀಗೆ ಮಾಡಬಹುದು.

ಶುಂಠಿಯನ್ನು ಪ್ರತಿದಿನ ಊಟದಲ್ಲಿ ಸಾಕಷ್ಟು ಬಳಸಿದರೆ ಅದು ಊಟಕ್ಕೆ ರುಚಿಯನ್ನು ಕೊಡುವುದಲ್ಲದೆ ಪಚನ ಕ್ರಿಯೆಯನ್ನು ವೃದ್ಧಿಗೊಳಿಸಿ ಆಹಾರವು ಸುಲಭವಾಗಿ ಜೀರ್ಣವಾಗುವಂತೆ ಮಾಡುತ್ತದೆ. ದೇಹಕ್ಕೆ ಪೋಷಣೆ ಕೊಟ್ಟು ಆರೋಗ್ಯವನ್ನು ಕಾಪಾಡುತ್ತದೆ.

ಒಂದು ಚಮಚ ಹಸೀ ಶುಂಠಿ ರಸ ಎರಡು ಚಮಚ ನಿಂಬೆರಸ ಕ್ಕೆ ನಾಲ್ಕು ಚಮಚ ಜೇನುತುಪ್ಪವನ್ನು ಸೇರಿಸಿ ದಿನಕ್ಕೆ ಮೂರು ಬಾರಿ ಸೇವಿಸುವುದರಿಂದ ಮೂಲವ್ಯಾಧಿ ಮಲಬದ್ಧತೆ ನಿವಾರಣೆಯಾಗುತ್ತದೆ. ಊಟದ ನಂತರ ಸಣ್ಣ ತುಂಡು ಶುಂಠಿಯನ್ನು ಬಾಯಿಗೆ ಹಾಕುವ ಅಭ್ಯಾಸ ಮಾಡಿಕೊಂಡರೆ ಗ್ಯಾಸ್ಟ್ರಿಕ್ ಮತ್ತು ಪಿತ್ತದ ಸಮಸ್ಯೆ ನಿವಾರಣೆ ಆಗುತ್ತದೆ. ನೀವು ಹಸಿ ಶುಂಠಿಯನ್ನು ಬಳಸಿ ಜೊತೆಗೆ ನಮ್ಮ ಆರೋಗನ್ನು ಕಾಪಾಡಿಕೊಳ್ಳಿ.

Leave A Reply

Your email address will not be published.