ಗ್ಯಾಸ್ಟ್ರಿಕ್ ಅಸಿಡಿಟಿ ಸಮಸ್ಯೆಯು ಬಹಳಷ್ಟು ಜನರನ್ನು ಕಾಡುತ್ತಿದೆ. ಅಸಿಡಿಟಿ ಇರುವವರು ಯಾವ ಯಾವ ಆಹಾರವನ್ನು ಸೇವಿಸಬಾರದು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಕ್ರೋನಿಕ್ ಗ್ಯಾಸ್ಟ್ರಿಕ್ ಸುಲಭವಾಗಿ ವಾಸಿಯಾಗುವುದಿಲ್ಲ. ಆಹಾರದಲ್ಲಿ ನಿಯಂತ್ರಣ ಮಾಡುವುದರಿಂದ ಗ್ಯಾಸ್ಟ್ರಿಕ್ ಅಸಿಡಿಟಿಯನ್ನು ನಿಯಂತ್ರಣಕ್ಕೆ ತರಬಹುದು. ಕೆಲವು ಆಹಾರವನ್ನು ಬಿಡುವುದರಿಂದ ಗ್ಯಾಸ್ಟ್ರಿಕ್ ನಿಯಂತ್ರಣಕ್ಕೆ ತರಬಹುದು. ಟಿ ಮತ್ತು ಕಾಫಿ ಬಿಡಬೇಕು ಇದು ವಾತಾ ಮತ್ತು ಪಿತ್ತವನ್ನು ಹೆಚ್ಚಿಸುತ್ತದೆ. ಬೇಕರಿ ಐಟಮ್ಸ್ ಕುರ್ ಕುರೆ, ಪಾಪಡ್, ಚಿಪ್ಸ್ ಈ ರೀತಿಯ ಯಾವುದೇ ಬೇಕರಿ ಐಟಮ್ ತಿನ್ನದೆ ಇರುವುದರಿಂದ ಗ್ಯಾಸ್ಟ್ರಿಕ್ ನಿಯಂತ್ರಣದಲ್ಲಿರುತ್ತದೆ. ಖಡಕ್ ರೊಟ್ಟಿ ತಿನ್ನಬಾರದು. ಶೇಂಗಾ ಖಾರ ಅಥವಾ ಶೇಂಗಾ ಹಿಂಡಿಯನ್ನು ತಿನ್ನಬಾರದು. ಯಾವುದೇ ಆಹಾರದಲ್ಲಿ ಫೈನ್ ಖಾರದ ಪುಡಿ ಹಾಕಿರಬಾರದು ಬದಲಿಗೆ ಮೆಣಸಿನ ಕಾಯಿಯನ್ನು ಕಟ್ ಮಾಡಿ ತಿನ್ನಬಹುದು.

ಹುಳಿಯಿರುವ ಮೊಸರನ್ನು ಸೇವಿಸಬಾರದು. ಗುಟ್ಕಾ, ತಂಬಾಕು, ಪ್ಲೇನ್ ಅಡಿಕೆ, ಪಾನ್, ಸಾರಾಯಿ, ಸಿಗರೇಟ್ ಇವು ಗ್ಯಾಸ್ಟ್ರಿಕ್ ಹೆಚ್ಚಿಸುತ್ತದೆ. ಕುರುಕಲು ತಿಂಡಿಗಳು, ಚಪಾತಿ, ಒಬ್ಬಟ್ಟು ಇವುಗಳನ್ನು ಗ್ಯಾಸ್ಟ್ರಿಕ್ ಅಸಿಡಿಟಿ ಇರುವವರು ತಿನ್ನಬಾರದು. ಊಟದ ಸಮಯವನ್ನು ಸರಿಯಾಗಿ ಮೆಂಟೇನ್ ಮಾಡಬೇಕು. ಯಾವುದೇ ಕಾರಣಕ್ಕೆ ಉಪವಾಸ ಮಾಡಬಾರದು. ರಾಗಿ, ಜೋಳದ ರೊಟ್ಟಿ, ಅನ್ನ, ಹಣ್ಣುಗಳು, ತರಕಾರಿಗಳನ್ನು, ಹಾಲು, ತುಪ್ಪವನ್ನು ತಿನ್ನಬಹದು. ಗ್ಯಾಸ್ಟ್ರಿಕ್ ಇರುವವರು ಈ ರೀತಿಯ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುವುದರಿಂದ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದಾಗಿದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

Leave a Reply

Your email address will not be published. Required fields are marked *