ಜೀರಿಗೆ ಕರಿಮೆಣಸಿನ ರಸಂ ಮಾಡಿ ಶೀತಕ್ಕೆ ಒಳ್ಳೇದು

0 2

ಚಳಿಗಾಲದಲ್ಲಿ ನೆಗಡಿ ಆಗುವುದು ಸಾಮಾನ್ಯವಾಗಿರುತ್ತದೆ ಇಂತಹ ಸಮಯದಲ್ಲಿ ಮೆಣಸಿನ ರಸಂ ಆರೋಗ್ಯಕ್ಕೆ ಒಳ್ಳೆಯದು ಈ ರಸಂನ್ನು ಮನೆಯಲ್ಲಿಯೇ ಸುಲಭವಾಗಿ ಮಾಡುವ ವಿಧಾನವನ್ನು ಈ ಲೇಖನದ ಮೂಲಕ ತಿಳಿಯೋಣ.

ಒಂದು ಟೇಬಲ್ ಸ್ಪೂನ್ ಜೀರಿಗೆ, ಒಂದುವರೆ ಟೇಬಲ್ ಸ್ಪೂನ್ ಮೆಣಸು, 10-12 ಕಾಳು ಮೆಂತೆ, ಸ್ವಲ್ಪ ಕರಿಬೇವು ಇವುಗಳನ್ನು ಪೌಡರ್ ಮಾಡಿಟ್ಟುಕೊಳ್ಳಬೇಕು. 4 ಟೊಮೆಟೊ ಹಣ್ಣನ್ನು ಕಟ್ ಮಾಡಿಕೊಂಡು ರುಬ್ಬಿಕೊಳ್ಳಬೇಕು. ನಂತರ ಒಂದು ಪಾತ್ರೆಯಲ್ಲಿ 3 ಟೇಬಲ್ ಸ್ಪೂನ್ ಎಣ್ಣೆ ಹಾಕಿ ಬಿಸಿಯಾದ ನಂತರ ಅರ್ಧ ಸ್ಪೂನ ಸಾಸಿವೆ, ಅರ್ಧ ಸ್ಪೂನ್ ಜೀರಿಗೆ ಹಾಕಿ ನಂತರ 3 ಒಣಮೆಣಸು, 5-6 ಬೆಳ್ಳುಳ್ಳಿ ಎಸಳು, ಸ್ಪಲ್ಪ ಕರಿಬೇವನ್ನು ಹಾಕಿ ಪ್ರೈ ಮಾಡಬೇಕು. ಅದಕ್ಕೆ ಒಂದು ಚಿಟಿಕೆ ಇಂಗಿನ ಪೌಡರ್, ಕಾಲು ಟಿ ಸ್ಪೂನ್ ಅರಿಶಿಣ ಹಾಕಿ ಮಿಕ್ಸ್ ಮಾಡಬೇಕು ಇದಕ್ಕೆ ರುಬ್ಬಿದ ಟೊಮೆಟೊ ಹಾಕಿ ಮಿಕ್ಸ್ ಮಾಡಬೇಕು ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿ 5-6 ನಿಮಿಷ ಬೇಯಿಸಬೇಕು.

ನಂತರ ಇದಕ್ಕೆ ಹುಣಸೆ ಹಣ್ಣಿನ ರಸವನ್ನು ಮತ್ತು ನೀರನ್ನು ಹಾಕಬೇಕು ಇದನ್ನು ಮುಚ್ಚಿ ಒಂದು ಕುದಿ ಬರಬೇಕು ಕುದಿ ಬರುವಾಗ ಮೆಣಸು ಮತ್ತು ಜೀರಿಗೆಯ ಪೌಡರ್ ಹಾಕಬೇಕು.ಇದಕ್ಕೆ ಬೇಕಾದರೆ ಸ್ವಲ್ಪ ಬೆಲ್ಲ ಹಾಕಬೇಕು ಮತ್ತು ಕೊತ್ತೊಂಬರಿ ಸೊಪ್ಪನ್ನು ಹಾಕಿ ಮಿಕ್ಸ್ ಮಾಡಿ 2 ಕುದಿ ಬಂದರೆ ಸಾಕು. ಈ ಮೆಣಸಿನ ಸಾರನ್ನು ಹಾಗೆಯೇ ಕುಡಿಯಬಹುದು ಅನ್ನದೊಂದಿಗೂ ಸವಿಯಬಹುದು. ಮನೆಯಲ್ಲೆ ಸುಲಭವಾಗಿ ರಸಂ ಮಾಡಬಹುದು ಈ ಮಾಹಿತಿಯನ್ನು ಹೆಚ್ಚು ಜನರಿಗೆ ತಿಳಿಸಿ.

Leave A Reply

Your email address will not be published.