Fenugreek Seeds Benefits: ಮೆಂತೆ ಕಾಳಿನ ಬಗ್ಗೆ ತಿಳಿಯದವರು ಇಲ್ಲವೆನ್ನಬಹುದು. ಪ್ರತಿಯೊಂದು ಅಡುಗೆ ಮನೆಯಲ್ಲಿ ಮೆಂತೆ ಕಾಳು ಪ್ರತಿನಿತ್ಯವು ಲಭ್ಯವಾಗುವುದು. ಮೆಂತೆ ಕಹಿಯಾಗಿದ್ದರೂ ಇದು ಯಾವುದೇ ಖಾದ್ಯಕ್ಕೂ ರುಚಿ ನೀಡುವುದು. ಇದರಿಂದ ಮೆಂತ್ಯೆಯನ್ನು ವಿವಿಧ ರೀತಿಯಿಂದ ಬಳಸಿಕೊಳ್ಳುವರು.
ಪ್ರಮುಖವಾಗಿ ಮೆಂತೆ ಕಾಳಿನಲ್ಲಿ ಹಲವಾರು ರೀತಿಯ ಆರೋಗ್ಯ ಗುಣಗಳು ಇರುವ ಕಾರಣದಿಂದಾಗಿ ಇದನ್ನು ಭಾರತೀಯರು ಹಿಂದಿನಿಂದಲೂ ತಮ್ಮ ದೈನಂದಿನ ಆಹಾರದಲ್ಲಿ ಬಳಕೆ ಮಾಡಿಕೊಂಡು ಬರುತ್ತಿದ್ದಾರೆ. ಇದು ಆರೋಗ್ಯವನ್ನು ಕಾಪಾಡುವುದು ಮಾತ್ರವಲ್ಲದೆ, ಹಲವಾರು ರೀತಿಯ ಸೌಂದರ್ಯವರ್ಧಕ ಗುಣಗಳು ಕೂಡ ಇದರಲ್ಲಿದೆ. ಹೀಗಾಗಿ ಈ ಲೇಖನದಲ್ಲಿ ನಾವು ನಿಮಗೆ ಮೆಂತೆ ಕಾಳಿನಿಂದ ಸೌಂದರ್ಯವನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂದು ಹೇಳಲಿದ್ದೇವೆ.
Fenugreek Seeds Benefits
ಹೆಚ್ಚಾಗಿ ತಲೆಬುರುಡೆಯು ಒಣಗಿ ಚರ್ಮದ ಸತ್ತ ಕೋಶಗಳು ಮೇಲೆ ಬಂದಾಗ ಕಾಡುವಂತಹ ಸಮಸ್ಯೆ ತಲೆಹೊಟ್ಟು. ಇದು ತುಂಬಾ ಕಿರಿಕಿರಿ ಉಂಟು ಮಾಡುವುದು ಮಾತ್ರವಲ್ಲದೆ ಹಲವಾರು ರೀತಿಯಿಂದ ಸಮಸ್ಯೆ ತರುವುದು. ಯಾರ ಎದುರು ಆತ್ಮವಿಶ್ವಾಸದಿಂದ ನಿಲ್ಲಲು ತಲೆಹೊಟ್ಟು ಬಿಡದು. ಇದರ ನಿವಾರಣೆಗೆ ಮೆಂತೆ ಕಾಳನ್ನು ರಾತ್ರಿ ನೆನೆಸಲು ಹಾಕಬೇಕು. ಬೆಳಗ್ಗೆ ಎದ್ದ ಬಳಿಕ ಅದನ್ನು ರುಬ್ಬಿಕೊಂಡು ಪೇಸ್ಟ್ ಮಾಡಿಕೊಳ್ಳಿ.
ಈ ಪೇಸ್ಟ್ ಗೆ ಸ್ವಲ್ಪ ಮೊಸರು ಹಾಕಿಕೊಂಡು ಮಿಶ್ರಣ ಮಾಡಿ. ಇದು ತಯಾರಾದ ಬಳಿಕ ತಲೆಬುರುಡೆ ಹಾಗೂ ಕೂದಲಿನ ಬುಡಕ್ಕೆ ಹಚ್ಚಿಕೊಳ್ಳಿ. 30 ನಿಮಿಷ ಬಿಟ್ಟು ಕೂದಲು ತೊಳೆಯಿರಿ. ನಿಯಮಿತವಾಗಿ ಬಳಸಿದರೆ ಉತ್ತಮ ಫಲಿತಾಂಶ ಸಿಗುವುದು. ಹೆಚ್ಚುವರಿ ತೂಕದಿಂದಾಗಿ ನಿಮಗೆ ದೊಡ್ಡ ಸಮಸ್ಯೆಯಾಗುತ್ತಲಿದೆಯಾ? ಹಾಗಾದರೆ ನೀವು ಮೆಂತೆ ಕಾಳನ್ನು ಬಳಕೆ ಮಾಡಬಹುದು. ಖಾಲಿ ಹೊಟ್ಟೆಯಲ್ಲಿ ಸ್ವಲ್ಪ ಮೆಂತೆ ಕಾಳು ಸೇವಿಸಿದರೆ ಹೊಟ್ಟೆ ತುಂಬಿರುವಂತೆ ಮಾಡುವುದು.
ಇದನೊಮ್ಮೆ ಓದಿ..ಪುರುಷರು ಬೆಳ್ಳುಳ್ಳಿ ತಿಂದ್ರೆ ಸ್ವರ್ಗ ಸುಖ ಅಂತಾರೆ ಮಹಿಳೆಯರು, ಯಾಕೆ ಗೊತ್ತಾ ಸಂಶೋಧನೆ ಬಿಚ್ಚಿಟ್ಟ ಸತ್ಯ
ಮೆಂತೆ ಕಾಳಿನಲ್ಲಿ ಇರುವಂತಹ ನಾರಿನಾಂಶವು ಇದಕ್ಕೆ ಕಾರಣವಾಗಿದೆ. ರಾತ್ರಿ ವೇಳೆ ಎರಡು ಚಮಚ ಮೆಂತೆ ಕಾಳನ್ನು ನೆನೆಯಲು ಹಾಕಿ ಅದರ ನೀರನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಇದು ದೇಹದಲ್ಲಿ ದ್ರವ ಶೇಖರಣೆ ತಡೆಯುವುದು ಮತ್ತು ಹೊಟ್ಟೆ ಉಬ್ಬರ ಕೂಡ. ದೇಹದಲ್ಲಿ ಮೂಡುವಂತಹ ನೆರಿಗೆ, ಗೆರೆ, ಕಪ್ಪು ಕಲೆಗೆ ಪ್ರಮುಖ ಕಾರಣ ಫ್ರೀ ರ್ಯಾಡಿಕಲ್. ಮೆಂತೆ ಕಾಳು ದೇಹದಲ್ಲಿ ಇರುವಂತಹ ಫ್ರೀ ರ್ಯಾಡಿಕಲ್ ನ್ನು ನಿವಾರಿಸುವುದು. ಮೆಂತೆ ಕಾಳು ತ್ವಚೆಗೆ ಬಣ್ಣ ನೀಡುವುದು ಮತ್ತು ಸುಂದರವಾಗಿ ಕಾಣುವಂತೆ ಮಾಡುವುದು.
ಮೆಂತೆ ಕಾಳಿನ ಪೇಸ್ಟ್, ಮೆಂತೆ ನೆನೆಸಿದ ನೀರು, ಕಡಲೆ ಹಿಟ್ಟು ಮತ್ತು ಮೊಸರು ಬಳಸಿದ ಮೆಂತ್ಯೆಯ ಫೇಸ್ ಪ್ಯಾಕ್ ಮಾಡಿದರೆ ಚರ್ಮದಲ್ಲಿನ ಸತ್ತಕೋಶಗಳನ್ನು ಇದು ತೆಗೆಯುವುದು ಮತ್ತು ಕಪ್ಪು ವೃತ್ತಗಳನ್ನು ನಿವಾರಿಸುವುದು. ಇದರಿಂದ ಚರ್ಮವು ಬಣ್ಣ ಪಡೆಯುವುದು ಮತ್ತು ಕಾಂತಿಯುತವಾಗುವುದು ಮೆಂತೆ ಸೇವನೆ ಮಾಡಿದರೆ ಕರುಳಿನ ಕ್ರಿಯೆ ಸುಧಾರಣೆ ಆಗುವುದು ಮತ್ತು ಇದು ಜೀರ್ಣಕ್ರಿಯೆ ಮತ್ತು ಎದೆ ಉರಿ ಸಮಸ್ಯೆಗಳಿಗೆ ಒಳ್ಳೆಯ ಪರಿಹಾರವಾಗಿದೆ. ಜೀರ್ಣಕ್ರಿಯೆ ಸಮಸ್ಯೆಗೆ ಮೆಂತೆ ಕಾಳಿನ ಪೇಸ್ಟ್ ಗೆ ತುರಿದ ಶುಂಠಿ ಹಾಕಿಕೊಳ್ಳಿ ಮತ್ತು ಊಟಕ್ಕೆ ಮೊದಲು ಇದರ ಒಂದು ಚಮಚ ಸೇವಿಸಿ.
ಮೆಂತೆ ಕಾಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡುವುದು. ಇದರಲ್ಲಿ ಇರುವಂತಹ ಅಮಿನೊ ಆಮ್ಲವು ಇನ್ಸುಲಿನ್ ಹೀರಿಕೊಳ್ಳಲು ನೆರವಾಗುವುದು ಮತ್ತು ಇದರಿಂದಾಗಿ ಸಕ್ಕರೆ ಮಟ್ಟವು ಕಡಿಮೆ ಆಗುವುದು. ಮೆಂತೆ ಕಾಳುಗಳ ಸೇವನೆ ಮಾಡಿದವರಲ್ಲಿ ಮಧುಮೇಹದಲ್ಲಿ ಗಣನೀಯ ಸುಧಾರಣೆ ಕಂಡುಬಂದಿದೆ ಎಂದು ಅಧ್ಯಯನಗಳು ಹೇಳಿವೆ. ಮೆಂತೆ ಸೇವನೆ ಮಾಡಿದರೆ ಕಿಡ್ನಿ ಆರೋಗ್ಯ ಕಾಪಾಡಬಹುದು.
ಕೆಲವೊಂದು ರೀತಿಯ ಕಿಡ್ನಿ ಕಲ್ಲಿನ ಸಮಸ್ಯೆಗೆ ಮೆಂತೆ ಕಾಳು ತುಂಬಾ ಪರಿಣಾಮಕಾರಿ ಆಗಿರಲಿದೆ. ಒಂದು ಚಮಚ ಜೇನುತುಪ್ಪ ಮತ್ತು ಲಿಂಬೆಯೊಂದಿಗೆ ಮೆಂತೆ ಕಾಳಿನ ಸೇವನೆ ಮಾಡಿದರೆ ಆಗ ಖಂಡಿತವಾಗಿಯೂ ಜ್ವರ ನಿವಾರಣೆ ಮಾಡಬಹುದು. ಇದು ಗಂಟಲಿನ ಕಿರಿಕಿರಿ ನಿವಾರಣೆ ಮಾಡುವುದು. ಜ್ವರವಿದ್ದರೆ ದಿನದಲ್ಲಿ 2-3 ಸಲ ನೀವು ಇದನ್ನು ಸೇವಿಸಿ ಮೆಂತೆ ಕಾಳು ಮಹಿಳೆಯರ ಸ್ತನ ದೊಡ್ಡದಾಗಿಸಲು ನೆರವಗುವುದು ಮತ್ತು ಇದರಲ್ಲಿನ ಕೆಲವೊಂದು ಅಂಶಗಳು ಹಾಲಿನ ಉತ್ಪತ್ತಿ ಮಾಡುವುದು.
ಇದನೊಮ್ಮೆ ಓದಿ..ಕೆಮ್ಮು ಕಫಕ್ಕೆ ಟಾನಿಕ್ ನಂತೆ ಕೆಲಸ ಮಾಡುತ್ತೆ ಈ ಮನೆಮದ್ದು
ಋತುಚಕ್ರದ ವೇಳೆ ಮಹಿಳೆಯರು ಎದುರಿಸುವ ಹಲವಾರು ಸಮಸ್ಯೆಗಳಿಗೆ ಇದು ಪರಿಹಾರ ನೀಡುವುದು. ಮೆಂತೆ ಕಾಳು ದೇಹದಲ್ಲಿನ ಉಷ್ಣತೆ ಕಡಿಮೆ ಮಾಡುವುದು. ಒಂದು ಚಮಚ ಮೆಂತೆ ಕಾಳು ತೆಗೆದುಕೊಂಡು ಅದನ್ನು ರಾತ್ರಿ ವೇಳೆ ನೀರಿನಲ್ಲಿ ನೆನೆಯಲು ಹಾಕಿ. ಬೆಳಗ್ಗೆ ಇದರ ನೀರನ್ನು ಕುಡಿಯಿರಿ. ಇದರ ಪೇಸ್ಟ್ ಮಾಡಿ ತಲೆಗೆ ಹಚ್ಚಿಕೊಳ್ಬಹುದು.