Eating Chicken Health ಮಾಂಸಾಹಾರಿಗಳ ಫೇವರೆಟ್ ಲಿಸ್ಟ್ ನಲ್ಲಿ ಮೊದಲು ಬರೋದು ಚಿಕನ್. ಇದರ ವಿಧವಿಧವಾದ ಖಾದ್ಯಗಳು ಬಾಯಲ್ಲಿ ನಿರೂರಿಸುತ್ತವೆ. ಪಾರ್ಟಿ ಇರಲಿ, ಡಿನ್ನರ್ ಇರಲಿ, ಚಿಕನ್ ನಿಂದ ತಯಾರಾದ ಡಿಶ್ ಗಳಿಗೆ ಎಲ್ಲರ ಕೈ ಹೋಗೋದು. ಚಿಕನ್ ಆರೋಗ್ಯಕರ ಆಹಾರವಾಗಿದ್ದು, ಪ್ರೋಟೀನ್‌ನಿಂದ ತುಂಬಿರುತ್ತದೆ ಜೊತೆಗೆ ನಿಮ್ಮ ದೇಹಕ್ಕೆ ಹಲವಾರು ಪೋಷಕಾಂಶಗಳನ್ನು ನೀಡುತ್ತದೆ. ಆದರೆ ಅತಿಯಾದರೆ ಅಮೃತವೂ ವಿಷವಾದಂತೆ ಕೋಳಿಯನ್ನು ಹೆಚ್ಚು ಸೇವಿಸಿದರೆ ಹಾನಿಯಾಗುವುದು ಖಂಡಿತ. ಚಿಕನ್ ನ ಅತಿಯಾದ ಸೇವೆನೆಯಿಂದ ಏನೆಲ್ಲಾ ಅಡ್ಡಪರಿಣಾಮಗಳಾಗಬಹುದು ಎಂಬುದನ್ನು ಈ ಕೆಳಗೆ ವಿವರಿಸಲಾಗಿದೆ.

ಚಿಕನ್ ಅನ್ನು ಹೆಚ್ಚು ಸೇವಿಸುವುದರಿಂದ ನಿಮ್ಮ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಬಹುದು. ಇದು ನೀವು ಹೇಗೆ ಸೇವಿಸುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ನೀವು ಡೀಪ್ ಫ್ರೈಡ್ ಚಿಕನ್‌ನ್ನು ನಿಯಮಿತವಾಗಿ ಸೇವಿಸುವವರಾದರೆ, ನಿಮ್ಮ ಕೊಲೆಸ್ಟ್ರಾಲ್ ಮಟ್ಟವು ಹೆಚ್ಚಾಗುವುದರಲ್ಲಿ ಸಂದೇಹವಿಲ್ಲ. (American Journal) ಅಮೇರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್‌ನಲ್ಲಿ ಪ್ರಕಟವಾದ ಅಧ್ಯಯನವು ಚಿಕನ್ ಸೇವನೆಯು ರೆಡ್ ಮೀಟ್ ನಂತೆ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಕಂಡುಹಿಡಿದಿದೆ.

ನಿಮ್ಮ (Cholesterol) ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡಲು, ಬೇಯಿಸಿದ ಅಥವಾ ಸುಟ್ಟ ಕೋಳಿಮಾಂಸವನ್ನು ಸೇವಿಸುವುದು ಉತ್ತಮ. ಚಿಕನ್ ಅನ್ನು ಹೆಚ್ಚು ಉಷ್ಣವಿರುವ ಆಹಾರವೆಂದು ಪರಿಗಣಿಸಲಾಗುತ್ತದೆ. ಇದು ನಿಮ್ಮ ದೇಹದ ಒಟ್ಟಾರೆ ತಾಪಮಾನವನ್ನು ಹೆಚ್ಚಿಸುತ್ತದೆ. ಸರಳವಾಗಿ ಹೇಳುವುದಾದರೆ, ಇದು ದೇಹದಲ್ಲಿ ‘ಶಾಖ’ವನ್ನು ಉಂಟುಮಾಡುತ್ತದೆ.

ಈ ಕಾರಣದಿಂದಾಗಿ, ಕೆಲವು ಜನರು ಮೂಗು ಸೋರುವಿಕೆ, ಬಾಯಲ್ಲಿ ಗುಳ್ಳೆ ಜೊತೆಗೆ ಜೀರ್ಣಕ್ರಿಯೆಯಲ್ಲೂ ಸಮಸ್ಯೆಯನ್ನು ಅನುಭವಿಸಬಹುದು. ಕೋಳಿಯ ದೈನಂದಿನ ಸೇವನೆಯಿಂದಾಗಿ ಈ ರೀತಿಯ ಪರಿಸ್ಥಿತಿಗಳು ಸಂಭವಿಸಿದರೆ, ನೀವು ಅದನ್ನು ಅಂತರದಲ್ಲಿ ಸೇವಿಸುವುದು ಉತ್ತಮ.ನಿಯಮಿತವಾಗಿ ಚಿಕನ್ ತಿನ್ನುವುದರಿಂದ ಉಂಟಾಗುವ ಮತ್ತೊಂದು ಅಡ್ಡಪರಿಣಾಮವೆಂದರೆ ತೂಕ ಹೆಚ್ಚಾಗಬಹುದು.

ಚಿಕನ್ ಬಿರಿಯಾನಿ, (Chicken biryani) ಬಟರ್ ಚಿಕನ್, (Butter chicken) ಫ್ರೈಡ್ ಚಿಕನ್ ಮತ್ತು ಇನ್ನೂ ಅನೇಕ ಆಹಾರ ಪದಾರ್ಥಗಳಲ್ಲಿ ಹೆಚ್ಚಿನ ಕ್ಯಾಲೋರಿ ಇರುವುದರಿಂದ, ತೂಕ ಹೆಚ್ಚಾಗಲು ಕಾರಣವಾಗಬಹುದು. ಇವುಗಳನ್ನು ತಿಂಗಳಿಗೆ ಒಮ್ಮೆ ತಿನ್ನಬಹುದು ಆದರೆ, ನಿಯಮಿತ ಸೇವನೆಯು ಖಂಡಿತವಾಗಿಯೂ ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಕೆಲವು ವಿಧದ ಕೋಳಿಮಾಂಸವು ಮೂತ್ರದ ಸೋಂಕು ಅಥವಾ ಯುಟಿಐ ನೊಂದಿಗೆ ಸಂಬಂಧ ಹೊಂದಿದೆ.

(American Society) ಅಮೇರಿಕನ್ ಸೊಸೈಟಿ ಫಾರ್ ಮೈಕ್ರೋಬಯಾಲಜಿಯ ಜರ್ನಲ್ ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಕೆಲವು ಕೋಳಿಗಳಲ್ಲಿ ಇ.ಕೋಲಿ ಬ್ಯಾಕ್ಟೀರಿಯಾ ಇದ್ದು, ಇದು ಮೂತ್ರದ ಸೋಂಕು ಸೇರಿದಂತೆ ಹಲವಾರು ಸೋಂಕುಗಳಿಗೆ ಕಾರಣವಾಗಬಹುದು. ಆದ್ದರಿಂದ ಇವುಗಳನ್ನು ತಡೆಗಟ್ಟಲು, ನಾಟಿ ಕೋಳಿಗಳನ್ನು ಸೇವಿಸುವುದು ಉತ್ತಮ, ಏಕೆಂದರೆ ಅವುಗಳಿಗೆ ಯಾವುದೇ ಪ್ರತಿಜೀವಕಗಳನ್ನು ನೀಡದೇ ಬೆಳೆಸಲಾಗುತ್ತದೆ.

ಕೆಮ್ಮು ಕಫಕ್ಕೆ ಟಾನಿಕ್ ನಂತೆ ಕೆಲಸ ಮಾಡುತ್ತೆ ಈ ಮನೆಮದ್ದು

ಸಾಮಾನ್ಯವಾಗಿ, ಕೋಳಿ ಸೇವನೆಯು ಪುರುಷರು ಮತ್ತು ಮಹಿಳೆಯರ ಸಂತಾನೋತ್ಪಿತ್ತಿಯನ್ನ ಸುಧಾರಿಸುತ್ತದೆ. ಆದರೆ, ಸಂಸ್ಕರಿಸಿದ, ಪ್ಯಾಕ್ ಮಾಡಿದ ಅಥವಾ ಹೆಪ್ಪುಗಟ್ಟಿದ ಕೋಳಿಯನ್ನು ಸೇವಿಸಿದರೆ, ಅದರಲ್ಲಿರುವ ರಾಸಾಯನಿಕಗಳು ಸಂತಾನೋತ್ಪತ್ತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ.

Leave a Reply

Your email address will not be published. Required fields are marked *