ಸಾಧನೆ ಮಾಡಿದ್ರೆ ಇವರ ಹಾಗೆ ಇರಬೇಕು, ಏನು ಇಲ್ಲದ ಹುಡುಗ ಜಗತ್ತಿನ ಶ್ರೀಮಂತ ವ್ಯಕ್ತಿಯಾದ ರೋಚಕ ಕಥೆ

0 1

ಜಗತ್ತು ಕಂಡ ಉತ್ಸಾಹಿ ಉದ್ಯಮಿ ಎಲಾನ್ ಮಸ್ಕ್ ಅವರು ಇಂದು ಜಗತ್ತಿನ ಐದನೇ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಅವರು ಈ ಸ್ಥಾನಕ್ಕೆ ಬರಲು ಬಹಳ ಶ್ರಮಪಟ್ಟಿದ್ದಾರೆ. ಸಾಧನೆಯ ಹಾದಿಯಲ್ಲಿ ಅನೇಕ ಏಳುಬೀಳಿನ ನಡುವೆ ಗೆದ್ದು ತೋರಿಸಿದ್ದಾರೆ. ಎಲಾನ್ ಮಸ್ಕ್ ಅವರ ಬಾಲ್ಯದ ಜೀವನ ಹಾಗೂ ಅವರ ಸಾಧನೆಯ ಬಗ್ಗೆ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಸಾಧನೆ ಮತ್ತು ಅಧ್ಯಯನಕ್ಕೆ ಯಾವುದೇ ಮಿತಿ ಇಲ್ಲ. ಅಧ್ಯಯನ ಮತ್ತು ಸಾಧನೆ ಅಪರಿಮಿತ ಪ್ರಯತ್ನ ಎಂದು ಜಗತ್ತಿಗೆ ತೋರಿಸಿದವರು ಅಮೆರಿಕದ ಖ್ಯಾತ ಕ್ರಿಯಾಶೀಲ ಕೈಗಾರಿಕೋದ್ಯಮಿ ಎಲಾನ್ ಮಸ್ಕ್. ಅವರು ಜೂನ್ 28, 1971 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಜನಿಸುತ್ತಾರೆ. ಇವರ ತಾಯಿ ಮೊಡೆಲ್ ಹಾಗೂ ಡಯಟಿಷಿಯನ್ ಆಗಿದ್ದರು. ತಂದೆಯ ಹೆಸರು ಎರೋ ಮಸ್ಕ್ ಇವರು ಎಲೆಕ್ಟ್ರೋ ಮೆಕ್ಯಾನಿಕಲ್ ಇಂಜಿನಿಯರ್ ಅಲ್ಲದೆ ಪೈಲಟ್, ನಾವಿಕರಾಗಿದ್ದರು. ಎಲಾನ್ ಮಸ್ಕ್ ಅವರ ತಂದೆ ತಾಯಿ 1980ರಲ್ಲಿ ಡೈವೋರ್ಸ್ ಪಡೆದರು. ಆಗ ಎಲಾನ್ ತಮ್ಮ ತಂದೆಯ ಜೊತೆ ಇರಲು ನಿರ್ಧರಿಸಿದರು ಆದರೆ ಮುಂದಿನ ಎರಡು ವರ್ಷಗಳ ಕಾಲ ಚಿತ್ರಹಿಂಸೆಯ ಬದುಕನ್ನು ಅನುಭವಿಸಿದರು. ಎಲಾನ್ ಅವರ ತಂದೆ ವೃತ್ತಿ ಬದುಕಿನಲ್ಲಿ ಯಶಸ್ವಿಯಾಗಿದ್ದರು ಆದರೆ ಅವರಲ್ಲಿ ಬಹಳ ಕೆಟ್ಟ ಗುಣಗಳಿತ್ತು. ಎಲಾನ್ ಚಿಕ್ಕ ವಯಸ್ಸಿನಲ್ಲಿಯೇ ಓದುವ ಹವ್ಯಾಸವನ್ನು ಹೊಂದಿದ್ದರಿಂದ ತನ್ನ 12ನೇ ವಯಸ್ಸಿನಲ್ಲಿ ವಿಡಿಯೋಗೇಮ್ ಕಂಡುಹಿಡಿದನು.

ಎಲಾನ್ ಪ್ರಾಥಮಿಕ, ಪ್ರೌಢ ಶಿಕ್ಷಣ ಮುಗಿಸಿದ ನಂತರ ಅಮೇರಿಕಾಕ್ಕೆ ಹೋಗಿ ತನ್ನ ಮುಂದಿನ ವಿದ್ಯಾಭ್ಯಾಸವನ್ನು ಮುಂದುವರೆಸಲು ನಿರ್ಧರಿಸಿದರು. ಕೆನಡಾಕ್ಕೆ ಹೋಗಲು ವೀಸಾ ಸಿಕ್ಕಿತು ಆದರೆ ವೈಮಾನಿಕ ಹಾರಾಟಕ್ಕೆ ಕೆನಡಾದಿಂದ ಬರಬೇಕಿದ್ದ ಡಾಕ್ಯುಮೆಂಟ್ ಬರದ ಕಾರಣ ದಕ್ಷಿಣ ಆಫ್ರಿಕಾದಲ್ಲಿಯೇ ಪದವಿ ಸೇರಿದರು. 5 ತಿಂಗಳ ನಂತರ ಡಾಕ್ಯುಮೆಂಟ್ ಬಂದ ಕೂಡಲೆ ಎಲಾನ್ ಅಮೇರಿಕಾಕ್ಕೆ ಹೋದರು ಅಲ್ಲಿ ಪೆನ್ಸಿಲ್ ವೇನಿಯಾ ವಿವಿಗೆ ಸೇರಿ ಅರ್ಥಶಾಸ್ತ್ರ ಹಾಗೂ ಭೌತಶಾಸ್ತ್ರವನ್ನು ಆರಿಸಿಕೊಂಡು ಅರ್ಥಶಾಸ್ತ್ರ ಮತ್ತು ಭೌತಶಾಸ್ತ್ರ ವಿಷಯದಲ್ಲಿ ಪದವಿ ಪಡೆದರು. 1994 ರಲ್ಲಿ ಇಂಟರ್ನ್ಶಿಪ್ ಹಾಗೂ ಡೆಸರ್ಟ್ ಗಳನ್ನು ಅಲ್ಲಿನ ಸಿಲಿಕಾನ್ ವೇಲಿಯಲ್ಲಿ ಹೊಂದಬೇಕಿತ್ತು ಅದಕ್ಕಾಗಿ ಹತ್ತಿರದ ರಿಸರ್ಚ್ ಸಂಸ್ಥೆಗೆ ಸೇರಿದರು ಅಲ್ಲಿ ಎಲಾನ್ ಅವರ ಬುದ್ದಿವಂತಿಕೆಯನ್ನು ಸಂಸ್ಥೆಯ ಸಿಬ್ಬಂದಿ ಮೆಚ್ಚಿದರು. ನಂತರ ಅಲ್ಲಿನ ಕ್ಯಾಲಿಫೋರ್ನಿಯಾದ ಸ್ಟ್ಯಾಂಡ್ ಫೋರ್ಡ್ ವಿಶ್ವ ವಿದ್ಯಾಲಯದಲ್ಲಿ ಎನರ್ಜಿ ವಿಜ್ಞಾನದಲ್ಲಿ ಪಿಎಚ್ ಡಿ ಮಾಡಲು ಆಯ್ಕೆಯಾದರು. ನಂತರ ಎಲಾನ್ ಅವರ ಗಮನ ಇಂಟರ್ ನೆಟ್ ಕಡೆ ತಿರುಗಿತು ಆ ಸಮಯದಲ್ಲಿ ಅಮೇರಿಕಾದಲ್ಲಿ ಇಂಟರ್ನೆಟ್ ಕ್ರಾಂತಿ ಉಂಟಾಗಿತ್ತು ಎಲಾನ್ ಅವರಿಗೆ ಮೊದಲಿನಿಂದಲೂ ಕಂಪ್ಯೂಟರ್ ಸಾಫ್ಟವೇರ್ ಬಗ್ಗೆ ಆಸಕ್ತಿ ಇರುವ ಕಾರಣ ಆತ ತನ್ನ ಸಹೋದರನೊಂದಿಗೆ ಸೇರಿ ಝಿಪ್ 2 ಎಂಬ ಕಂಪನಿಯನ್ನು ಪ್ರಾರಂಭಿಸಿದ. ಇದು ಆಗಿನ ಅಮೇರಿಕಾ ಪತ್ರಿಕಾ ಮಾಧ್ಯಮಕ್ಕೆ ಒಂದು ಸಿಟಿ ಗೈಡ್ ಡೈರೆಕ್ಟರಿ ಹಾಗೂ ದಿಕ್ಸೂಚಿಯಾಗಿ ಕೆಲಸ ಮಾಡುತಿತ್ತು.

ಈ ಕಂಪನಿ ಯಶಸ್ವಿಯಾಗುವವರೆಗೆ ಎಲಾನ್ ಅವರಿಗೆ ಮಲಗಲು ಜಾಗವಿರಲಿಲ್ಲ ತಮ್ಮ ಆಫೀಸ್ ನಲ್ಲಿ ಮಲಗುತ್ತಿದ್ದರು ರಾತ್ರಿ ಹಗಲು ಅವರು ಕೆಲಸ ಮಾಡುತ್ತಿದ್ದರು. ನಂತರ ಅಲ್ಲಿನ ನ್ಯೂಯಾರ್ಕ್ ಟೈಮ್ಸ್ ಹಾಗೂ ಚಿಕಾಗೊ ಪತ್ರಿಕೆಗಳ ಮೂಲಕ ಸಿಟಿ ಸರ್ಚ್ ಎಂಬ ಬೃಹತ್ ಸಂಸ್ಥೆಯೊಂದಿಗೆ ಎಲಾನ್ ಅವರ ಸಂಸ್ಥೆ ವಿಲೀನವಾಯಿತು. ನಂತರ 1999 ರಲ್ಲಿ ಎಲಾನ್ ತಮ್ಮ ಝಿಪ್2 ಕಂಪನಿಯನ್ನು ಕೊಂಪ್ಯಾಕ್ ಸಂಸ್ಥೆಗೆ ಮಾರಿದರು ಕೊಂಪ್ಯಾಕ್ ಸಂಸ್ಥೆ 307 ಮಿಲಿಯನ್ ಕೊಟ್ಟು ಖರೀದಿಸಿತು. ನಂತರ ಎಲಾನ್ ಎಕ್ಸ್ ಡಾಟ್ ಕಾಮ್ ಎಂಬ ಆನ್ಲೈನ್ ಇಮೇಲ್ ಪೇಮೆಂಟ್ ಮಾಡುವ ಸಂಸ್ಥೆಯನ್ನು ಅಭಿವೃದ್ಧಿಪಡಿಸಿದರು, ಇದು ಮುಂದೆ ಪೇಪಲ್ ಎಂಬ ಹೆಸರಿನೊಂದಿಗೆ ಫೇಮಸ್ ಆಯಿತು. ಇದನ್ನು ಇಬೆ ಎಂಬ ಸಂಸ್ಥೆ ಒಂದೂವರೆ ಮಿಲಿಯನ್ ಕೊಟ್ಟು ಖರೀದಿಸಿತು. ನಂತರ ಎಲಾನ್ ಟೆಸ್ಲಾ ಕೊ ಎಂಬ ಸ್ಪೋರ್ಟ್ಸ್ ಕಾರುಗಳ ಬಿಡಿ ಭಾಗಗಳ ತಯಾರಿಕಾ ಘಟಕವನ್ನು ಆರಂಭಿಸಿ ಯಶಸ್ವಿಯಾದ ನಂತರ ಈ ಕಂಪನಿಯ ಸಿಇಓ ಆಗಿ ಗುರುತಿಸಿಕೊಂಡರು. ಇವರ ಕಂಪನಿಗೆ ಅಲ್ಲಿನ ನ್ಯಾಷನಲ್ ಹೈವೆ ಅಥೋರಿಟಿ 5.4 ರೇಟಿಂಗ್ ನೀಡಿ ಇದರ ಕಾರ್ಯಕ್ಷಮತೆ ಹಾಗೂ ದಕ್ಷತೆಯನ್ನು ಮೆಚ್ಚಿದೆ.

ಎಲಾನ್ ತನ್ನ ಸಹೋದರರು ಸ್ಥಾಪಿಸಿದ ಸೋಲಾರ್ ಸಿಟಿ ಎಂಬ ಸಂಸ್ಥೆಯ ಸಹಭಾಗಿತ್ವದಾರರಾಗಿದ್ದು ಅದರ ಅತಿದೊಡ್ಡ ಶೇರ್ ಹೋಲ್ಡರ್ ಹೊಂದಿದ್ದಾರೆ. ಎಲಾನ್ ಸ್ಪೇಸ್ ಎಕ್ಸ್ ಎಂಬ ರಾಕೆಟ್ ತಯಾರಿಕಾ ಘಟಕವನ್ನು ಪ್ರಾರಂಭಿಸಿದ್ದು ಅದಕ್ಕೆ ಹಣ ಹೂಡಲು ಹೂಡಿಕೆದಾರರು ಹಿಂಜರಿದಾಗ ಎಲಾನ್ ತನ್ನ ಎಲ್ಲ ಮೂಲದ ಆದಾಯವನ್ನು ಹೂಡಿಕೆ ಮಾಡಿದರು. ನಂತರ ಅವರ ಕಂಪನಿ ಯಶಸ್ವಿಯಾಗಿ ಅಮೇರಿಕಾದ ಸ್ಪೇಸ್ ಸಂಸ್ಥೆ ನಾಸಾದೊಂದಿಗೆ ವಿಲೀನವಾಯಿತು. ನಂತರ ಎಲಾನ್ ಅವರ ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ ಸಂಸ್ಥೆ ಭಾರಿ ವೈಫಲ್ಯ ಎದುರಿಸಿತು. ಟೆಸ್ಲಾ ಕಂಪನಿ ತಯಾರಿಸುವ ಬಿಡಿಭಾಗ ದೋಷವಿದೆ ಎಂಬ ಆರೋಪ ಕೇಳಿ ಬಂತು. ಸ್ಪೇಸ್ ಎಕ್ಸ್ ಹೊರಡಿಸಿದ 3 ಉಡಾವಣೆಗಳು ವಿಫಲವಾಗಿ ನಾಲ್ಕನೇ ಉಡಾವಣೆ ಯಶಸ್ವಿಯಾಯಿತು. ಅನ್ಯ ಗ್ರಹದಲ್ಲಿ ಜೀವಜಲದ ಮೇಲೆ ನಂಬಿಕೆ ಹೊಂದಿದ್ದು ತನ್ನ ಸ್ಪೇಸ್ ಎಕ್ಸ್ ಸಂಸ್ಥೆಯ ಮೂಲಕ ಮಂಗಳ ಗ್ರಹದ ಯಾನ ಹಾಗೂ ಶೋಧ ಹೆಚ್ಚಾಗಿ ಜರುಗಬೇಕೆಂದು ಎಲಾನ್ ಅವರ ಆಸೆ. ಇಷ್ಟೆಲ್ಲಾ ಸಾಧನೆ ಮಾಡಿದ ಅವರು ಹೊಸತನದ ಬಗ್ಗೆ ಯೋಚಿಸುತ್ತಲೆ ಇರುತ್ತಾರೆ. ಅವರ ಕಂಪನಿಯ ಟರ್ನೋವರ್ 93 ಬಿಲಿಯನ್ ಗೂ ಅಧಿಕ ಎಂದು ಫೋರ್ಬ್ಸ್ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಈ ಮೂಲಕ ಎಲಾನ್ ವಿಶ್ವದ ಐದನೇ ಶ್ರೀಮಂತ ವ್ಯಕ್ತಿ ಎಂಬ ಖ್ಯಾತಿ ಪಡೆದಿದ್ದಾರೆ.

Leave A Reply

Your email address will not be published.