Ultimate magazine theme for WordPress.

ಈ ಮಾವಿನಹಣ್ಣಿಗೆ ಬಾರಿ ಬೇಡಿಕೆ ಇದರ ಬೆಲೆ 1 ಸಾವಿರ ರೂಪಾಯಿ ಏನಿದರ ವಿಶೇಷ ಇದು ಎಲ್ಲಿದೆ?

0 2

ವಿಶೇಷ ರುಚಿಯ ಮಾವು ಸವಿಯಲು ಯಾರಿಗೆ ಇಷ್ಟವಿಲ್ಲ ಹೇಳಿ? ವಿಶೇಷತೆಗೆ ತಕ್ಕಂತೆ ಆಯಾ ತಳಿ ಮಾವಿಗೆ ಬೇಡಿಕೆಯೂ ಹೆಚ್ಚೇ ಇರುತ್ತದೆ. ಮಾವಿನ ಹಣ್ಣಿನ ಸೀಸನ್ ಬರುವುದೇ ತಡ ಥರಾವರಿ ಮಾವುಗಳ ಮಾರಾಟವೂ ಭರ್ಜರಿಯಾಗಿರುತ್ತದೆ. ಹಾಗೆಯೇ ಮಧ್ಯಪ್ರದೇಶದ ಈ ವಿಶೇಷ ತಳಿಯ ಮಾವಿನ ಹಣ್ಣಿಗೂ ಭಾರೀ ಬೇಡಿಕೆ ಬಂದಿದೆ. ಒಂದು ಹಣ್ಣು 1000 ರೂಪಾಯಿಗೆ ಮಾರಾಟವಾಗುತ್ತಿದೆ. ಇಷ್ಟೊಂದು ದುಬಾರಿ ಬೆಲೆಗೆ ಮಾರಾಟವಾಗುತ್ತಿರುವ ಆ ಮಾವಿನ ಹಣ್ಣಿನ ತಳಿ ಯಾವುದು? ಯಾವ ರಾಜ್ಯದಲ್ಲಿ ಈ ತಳಿಯ ಮಾವು ಬೆಳೆಯಲಾಗುತ್ತದೆ ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಕಳೆದ ವರ್ಷ ನೂರ್ ಜಹಾನ್ ಮಾವು ಅಷ್ಟೊಂದು ಸಂಖ್ಯೆಯಲ್ಲಿ ಫಸಲು ಕೊಟ್ಟಿರಲಿಲ್ಲ. ಆದರೆ ಈ ಬಾರಿಯ ಹವಾಮಾನದಿಂದಾಗಿ ಇದು ಉತ್ತಮ ಬೆಳೆ ಬಂದಿದೆ ಹಾಗಾಗಿ ಮಾವಿನಕಾಯಿ ಹಣ್ಣಾಗುವ ಮೊದಲೇ ಭಾರೀ ಬೆಲೆಗೆ ಬುಕ್ ಆಗಿ ಬಿಟ್ಟಿವೆ. ಮಧ್ಯಪ್ರದೇಶದ ಅಲಿರಾಜಪುರ ಜಿಲ್ಲೆಯಲ್ಲಿ ಬೆಳೆಯುವ ನೂರ್ ಜಹಾನ್ ತಳಿಯ ಮಾವಿನ ಹಣ್ಣು ಈ ರೀತಿಯ ಬೇಡಿಕೆಯನ್ನು ಗಿಟ್ಟಿಸಿಕೊಂಡಿದೆಯಂತೆ. ಒಂದು ನೂರ್ ಜಹಾನ್ ಮಾವಿನ ಹಣ್ಣಿನ ಬೆಲೆ 500 ರೂಪಾಯಿಯಿಂದ ಇಂದ 1000 ರೂಪಾಯಿಯವರೆಗೂ ಇದೆಯಂತೆ. ಈ ಬಾರಿ ನೂರ್ ಜಹಾನ್ ಮಾವಿನ ಹಣ್ಣುಗಳ ಒಂದು ಹಣ್ಣಿನ ತೂಕವು ಎರಡರಿಂದ ಮೂರುವರೆ ಕಿಲೋಗ್ರಾಂಗಳಷ್ಟಿದೆ. ಮಧ್ಯಪ್ರದೇಶ ಮತ್ತು ಗುಜರಾತ್‌ ನ ಜನರು ಈ ಹಣ್ಣನ್ನು ಮೊದಲೇ ಕಾಯ್ದಿರಿಸಿದ್ದಾರೆ. ನೂರ್ ಜಹಾನ್ ಇದು ಅಫ್ಘಾನ್ ಮೂಲದ ಹಣ್ಣಂತೆ. ಇಂದೋರ್‌ನಿಂದ 250 ಕಿ.ಮೀ ದೂರದಲ್ಲಿರುವ ಕತ್ತಿವಾಡ ಪ್ರದೇಶದ ಅಲಿರಾಜ್‌ಪುರ ಜಿಲ್ಲೆಯಲ್ಲಿ ಮಾತ್ರ ಇದನ್ನು ಬೆಳೆಯಲಾಗುತ್ತಿದೆಯಂತೆ. ಇಂದೋರ್‌ನಿಂದ 250 ಕಿ.ಮೀ ದೂರದಲ್ಲಿರುವ ಕಟ್ಟಿವಾಡಾದ ಕೃಷಿಕ ಶಿವರಾಜ್ ಸಿಂಗ್ ಜಾಧವ್ ಇಲ್ಲಿ ಈ ಮಾವಿನ ತಳಿಯನ್ನು ಬೆಳೆಯುತ್ತಿದ್ದಾರೆ. ತನ್ನ ತೋಟದಲ್ಲಿ ಮೂರು ಮಾವಿನ ಮರಗಳಿವೆ. ಈ ಬಾರಿ 250 ಹಣ್ಣುಗಳು ದೊರೆತಿವೆ. ಒಂದು ಹಣ್ಣಿಗೆ 500 ರೂ ಇಂದ 1000ರೂ ಬೆಲೆ ನಿಗದಿ ಮಾಡಲಾಗಿದೆ. ಗ್ರಾಹಕರು ಬುಕ್ಕಿಂಗ್ ಮಾಡುತ್ತಿದ್ದಾರೆ ಎಂದು ಶಿವರಾಜ್ ಹೇಳಿಕೊಂಡಿದ್ದಾರೆ. ಒಂದು ಹಣ್ಣಿನ ತೂಕ 2 ಕೆ.ಜಿಯಿಂದ 3.5 ಕೆ.ಜಿವರೆಗೂ ಇರುತ್ತದೆಯಂತೆ.

ನೂರ್ ಜಹಾನ್ ಮರಗಳು ಸಾಮಾನ್ಯವಾಗಿ ಜನವರಿಯಿಂದ ಫೆಬ್ರವರಿ ತಿಂಗಳಲ್ಲಿ ಹೂಬಿಡಲು ಪ್ರಾರಂಭಿಸುತ್ತವೆ. ಜೂನ್ ನಲ್ಲಿ ಹಣ್ಣುಗಳು ಮಾರಾಟಕ್ಕೆ ಸಿದ್ಧವಾಗುತ್ತವೆ. ಈ ಮಾವಿನಹಣ್ಣಿನ ಬೀಜವೇ ಸುಮಾರು 150 ರಿಂದ 200 ಗ್ರಾಂ ತೂಕವಿರುತ್ತವೆ. ಕಳೆದ ಬಾರಿ ಹವಾಮಾನ ವೈಪರೀತ್ಯದ ನಡುವೆ ಹಣ್ಣಿನ ಇಳುವರಿ ಸಮರ್ಪಕವಾಗಿರಲಿಲ್ಲ. ಆಗ ಈ ತಳಿಯ ಹಣ್ಣಿನ ತೂಕ ಸರಾಸರಿ 2.75 ಕೆ.ಜಿ ಇತ್ತು. ಒಂದಕ್ಕೆ 1200 ರೂ ಮಾರಾಟವಾಗಿತ್ತು. ಈ ಬಾರಿ ಉತ್ತಮ ಇಳುವರಿ ದೊರೆತಿದೆ. 3.5 ಕೆ.ಜಿ ತೂಕದ ಹಣ್ಣುಗಳು ಇವೆ. ಆದರೆ ಲಾಕ್‌ಡೌನ್‌ನಿಂದಾಗಿ ಮಾರಾಟಕ್ಕೆ ಕೊಂಚ ಸಮಸ್ಯೆಯಾಗಿದೆ. ಆದರೂ ಮಧ್ಯಪ್ರದೇಶದ ಹಾಗೂ ನೆರೆಯ ಗುಜರಾತ್‌ ನ ಮಾವು ಪ್ರಿಯರು ಆನ್‌ಲೈನ್‌ನಲ್ಲಿಯೇ ಬೇಡಿಕೆ ಇಡುತ್ತಿದ್ದಾರೆ ಎಂದು ರೈತ ಶಿವರಾಜ್ ಸಿಂಗ್ ಹೇಳುತ್ತಾರೆ. 2020ರಲ್ಲಿ ಹವಾಮಾನ ವೈಪರೀತ್ಯದಿಂದ ಈ ಮಾವಿನ ಮರ ಸರಿಯಾಗಿ ಹೂ ಬಿಟ್ಟಿರಲಿಲ್ಲ. ಈ ಬಾರಿ ಉತ್ತಮ ಇಳುವರಿ ನೀಡಿದೆ. ರುಚಿಯೂ ತುಂಬಾ ಸಿಹಿಯಾಗಿರುತ್ತದೆ ಎಂದು ಮಾಹಿತಿ ನೀಡುತ್ತಾರೆ ಈ ಮಾವಿನ ತಳಿ ಕುರಿತು ಪರಿಣತಿ ಪಡೆದಿರುವ ಇಶಾಕ್ ಮನ್ಸೂರಿ.

Leave A Reply

Your email address will not be published.