ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಕಾರ್ಯಕ್ರಮ ಒಂದು ಅದ್ಭುತ ರಿಯಾಲಿಟಿ ಶೋ ಆಗಿದೆ. ಇತ್ತೀಚೆಗೆ ಬಿಗ್ ಬಾಸ್ ಸೀಸನ್ 8 ಪ್ರಾರಂಭವಾಗಿ ಅನಿವಾರ್ಯ ಕಾರಣದಿಂದ ಮುಕ್ತಾಯವಾಗಿದೆ. ಬಿಗ್ ಬಾಸ್ ಸೀಸನ್ 8 ನಲ್ಲಿ ಬೇರೆ ಬೇರೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ಭಾಗವಹಿಸಿದ್ದರು ಅವರಲ್ಲಿ ಅರವಿಂದ್ ಕೂಡ ಒಬ್ಬರು. ಜನಮೆಚ್ಚುಗೆಯನ್ನು ಗಳಿಸಿದ ಕೆ.ಪಿ ಅರವಿಂದ್ ಅವರ ಬಗ್ಗೆ ಕೆಲವು ಸ್ವಾರಸ್ಯಕರ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಬಿಗ್ ಬಾಸ್ ಸೀಸನ್ 8 ರ ಸ್ಪರ್ಧಿಯಾದ ಕೆ.ಪಿ ಅರವಿಂದ್ ಅವರ ಬಗ್ಗೆ ಮೊದಲು ಅಷ್ಟಾಗಿ ಯಾರಿಗೂ ಗೊತ್ತಿರಲಿಲ್ಲ. ಉಡುಪಿ ಮೂಲದ ಅರವಿಂದ್ ಅವರು ಮೋಟಾರ್ ರೇಸ್ ನಲ್ಲಿ ರಾಷ್ಟ್ರೀಯ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಒಂದು ವೇಳೆ ಬಿಗ್ ಬಾಸ್ ಸೀಸನ್ 8 ಮುಂದುವರೆದಿದ್ದರೆ ಇವರೆ ವಿನ್ನರ್ ಆಗುತ್ತಿದ್ದರು ಎಂಬ ಅನಿಸಿಕೆ ಹೆಚ್ಚಾಗಿ ಕೇಳಿಬರುತ್ತದೆ. ಮೋಟಾರ್ ರೇಸ್ ನಲ್ಲಿ ವಿಶ್ವದ ಅತ್ಯಂತ ಕಠಿಣ ರೇಸ್ ಆದ ಡಾಕಾ ರ್ಯಾಲಿ ರೇಸ್ ನಲ್ಲಿ ಕಾಣಿಸಿಕೊಂಡ ಎರಡನೇ ಭಾರತೀಯ ಎಂಬ ಖ್ಯಾತಿಯನ್ನು ಅರವಿಂದ್ ಅವರು ಪಡೆದಿದ್ದಾರೆ. ಅರವಿಂದ್ ಅವರ ತಂದೆಯ ಹೆಸರು ಪ್ರಭಾಕರ ಉಪಾಧ್ಯಾಯ. ಅರವಿಂದ್ ಅವರು ರಾಷ್ಟ್ರೀಯ ಮಟ್ಟದ ಈಜು ಪಟು ಕೂಡ ಆಗಿದ್ದಾರೆ. 2004 ರಿಂದ ಮೋಟಾರು ರೇಸನ್ನೆ ತಮ್ಮ ವೃತ್ತಿ ಬದುಕನ್ನಾಗಿ ಮಾಡಿಕೊಂಡ ಅವರು ಹಲವಾರು ಸವಾಲುಗಳನ್ನು ಎದುರಿಸಿದರೂ ಛಲಬಿಡದೆ ಸಾಧನೆಯ ಮೆಟ್ಟಿಲು ಏರಿದರು. ದೇಶದ ನಂಬರ್ ಒನ್ ರೈಡರ್ ಎಂಬ ಪಟ್ಟವನ್ನು ಪಡೆದ್ದಿದ್ದಾರೆ.

ಇದುವರೆಗೂ 17 ರಾಷ್ಟ್ರೀಯ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿದ್ದಾರೆ. ರಿಸ್ಕ್ ತೆಗೆದುಕೊಳ್ಳುವುದು ಎಂದರೆ ಅರವಿಂದ್ ಅವರಿಗೆ ಬಹಳ ಇಷ್ಟ. ವಾರದಲ್ಲಿ ಮೂರು ದಿನ ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ಪ್ರಾಕ್ಟೀಸ್ ಮಾಡುತ್ತಾರೆ. ಪ್ರತಿದಿನವೂ ಗುರಿಯನ್ನು ಇಟ್ಟುಕೊಂಡು ಅದರ ಬಗ್ಗೆ ತಮ್ಮ ಗಮನ ಕೊಡುತ್ತಾರೆ. ಅಪಘಾತವೊಂದರಲ್ಲಿ ಸೊಂಟದ ಮೂಳೆ ಮುರಿದು ವೃತ್ತಿಬದುಕು ಕೊನೆಯಾಯಿತು ಎಂಬ ಪರಿಸ್ಥಿತಿ ಒದಗಿದಾಗಲೂ ಧೃತಿಗೆಡಲಿಲ್ಲ. ಅನೇಕ ಕಠಿಣ ರೇಸ್ ನಲ್ಲಿ ಭಾಗವಹಿಸಿ ಚಾಂಪಿಯನ್ ಶಿಪ್ ಪಡೆದುಕೊಂಡಿದ್ದಾರೆ. ಅರವಿಂದ್ ಅವರು ತಮ್ಮ ವೃತ್ತಿ ಬದುಕನ್ನು ಆರಂಭಿಸಿದ ಸಮಯದಲ್ಲಿ ಅವರ ಬಗ್ಗೆ ಅವರ ಮನೆಯವರಿಗೆ ಗೊತ್ತಿರಲಿಲ್ಲ. ಅರವಿಂದ್ ಅವರು ಪಿಯುಸಿ ಓದುತ್ತಿದ್ದಾಗ ಪರೀಕ್ಷೆಯಲ್ಲಿ ಶೇಕಡಾ 80ಕ್ಕಿಂತ ಹೆಚ್ಚು ಮಾರ್ಕ್ಸ್ ಪಡೆದುಕೊಂಡರೆ ಬೈಕ್ ಕೊಡಿಸುವುದಾಗಿ ಹೇಳಿದ್ದರು ಅದರಂತೆ ಅರವಿಂದ್ ಅವರು ಪಿಯುಸಿಯಲ್ಲಿ ಶೇ 80ಕ್ಕಿಂತ ಹೆಚ್ಚಿನ ಅಂಕಪಡೆದರು ಆದ್ದರಿಂದ ಅರವಿಂದ್ ಅವರಿಗೆ ಯಮಹಾ ಆರೆಸ್ 135 ಬೈಕ್ ಉಡುಗೊರೆಯಾಗಿ ಸಿಕ್ಕಿತ್ತು. 2005ರಲ್ಲಿ ಮಂಗಳೂರಿನಲ್ಲಿ ನಡೆದ ಮೋಟಾರ್ ರೇಸ್ ನಲ್ಲಿ ಭಾಗವಹಿಸಿದ ನಂತರ ಇದರಲ್ಲಿಯೇ ತಮ್ಮ ವೃತ್ತಿ ಬದುಕನ್ನು ಪ್ರಾರಂಭಿಸಲು ನಿರ್ಧರಿಸಿದರು.

ಮಂಗಳೂರಿನಲ್ಲಿ ನಡೆದ ಮೋಟಾರು ರೇಸ್ ನಲ್ಲಿ ಗೆದ್ದ ನಂತರ ತಾವು ರೇಸ್ ನಲ್ಲಿ ಭಾಗವಹಿಸಿ ಗೆಲ್ಲುತ್ತಿರುವ ಬಗ್ಗೆ ಮನೆಯಲ್ಲಿ ಹೇಳಿದರು. 2012 ರಲ್ಲಿ ಶ್ರೀಲಂಕಾದಲ್ಲಿ ನಡೆದ ಸೂಪರ್ ಕ್ರಾಸ್ ತರಬೇತಿಯಲ್ಲಿ ಪಾಲ್ಗೊಂಡು ಸ್ಟಂಟ್ ಜಂಪ್ ನಲ್ಲಿ ಬೈಕ್ ಕೈಕೊಟ್ಟ ಕಾರಣ ಅರವಿಂದ್ ಅವರು ಬಿದ್ದರು ಬೈಕ್ ಅವರ ಮೇಲೆ ಬಿದ್ದಿತು ಇದರಿಂದ ಅವರ ಸೊಂಟದ ಮೂಳೆ ಮುರಿಯಿತು ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದರು. ಅಪಘಾತವಾಗಿರುವ ವಿಷಯ ಮನೆಯಲ್ಲಿ ಗೊತ್ತಾದರೆ ತಮ್ಮ ವೃತ್ತಿ ಬದುಕನ್ನು ಮುಂದುವರಿಸಲು ಕಷ್ಟವಾಗುತ್ತದೆ ಎಂದು ಅಪಘಾತದ ಬಗ್ಗೆ ಮೊದಲು ಮನೆಯವರಿಗೆ ತಿಳಿಸಿರಲಿಲ್ಲ ನಂತರ ಒಂದು ವರ್ಷ ವಿಶ್ರಾಂತಿ ಪಡೆದರು. ನಂತರ ಅರವಿಂದ್ ಅವರು ಬೈಕ್ ಬೆನ್ನೇರಿ ಸಾಧನೆ ಮಾಡಲು ಪ್ರಾರಂಭಿಸಿದರು. 2015ರಲ್ಲಿ ಅರವಿಂದ್ ಅವರು ದೇಶದ ಎಲ್ಲಾ ಪ್ರತಿಷ್ಠಿತ ರ್ಯಾಲಿಯ ಚಾಂಪಿಯನ್ಶಿಪ್ ಪಡೆದುಕೊಂಡರು.

ಬಿಗ್ ಬಾಸ್ ಸೀಸನ್ ಎಂಟರ ಟಾಸ್ಕ್ ನಲ್ಲಿ ಸೈ ಎನಿಸಿಕೊಂಡ ಅರವಿಂದ್ ಕೇವಲ ಫಿಸಿಕಲ್ ಟಾಸ್ಕ್ ನಲ್ಲಿ ಮಾತ್ರ ಪ್ರತಿಭೆ ಹೊಂದಿರದೆ ಬಿಗ್ ಬಾಸ್ ನೀಡಿದ ಸೀಕ್ರೆಟ್ ಏಜೆಂಟ್ ಟಾಸ್ಕ್ ನಲ್ಲಿ ಮನೆಯವರಿಗೆ ಅನುಮಾನ ಬರದಂತೆ ವರ್ತಿಸಿ ಮನೆಯ ಸದಸ್ಯರ ಹುಬ್ಬೇರುವಂತೆ ಮಾಡಿದ್ದರು ಇದೆ ಕಾರಣಕ್ಕೆ ಕಿಚ್ಚ ಸುದೀಪ್ ಅವರಿಂದ ಮೆಚ್ಚುಗೆಯನ್ನು ಪಡೆದರು. ಬಿಗ್ ಬಾಸ್ ಮನೆಯಲ್ಲಿ ಎರಡು ಬಾರಿ ಕ್ಯಾಪ್ಟನ್ ಆಗಿದ್ದ ಅರವಿಂದ್ ಅವರು ಎರಡು ಬಾರಿಯೂ ಕಿಚ್ಚನ ಚಪ್ಪಾಳೆಯನ್ನು ಪಡೆದುಕೊಂಡಿದ್ದರು. ಮೋಟಾರ್ ರೇಸರ್ ಆಗಿದ್ದರೂ ಅರವಿಂದ್ ಅವರು ತಮ್ಮ ನೈಪುಣ್ಯತೆ, ತಂತ್ರಗಾರಿಕೆ, ಪ್ರತಿಭೆಯಿಂದ ಬಿಗ್ ಬಾಸ್ ಸೀಸನ್ ಎಂಟರ ಮೋಸ್ಟ್ ಬ್ರಿಲಿಯಂಟ್ ಸದಸ್ಯರಾಗಿದ್ದರು. ತಮ್ಮ ನೇರ ನಿಷ್ಠುರ, ಪ್ರಾಮಾಣಿಕ ಸ್ವಭಾವದಿಂದ ಪ್ರೇಕ್ಷಕರಿಗೆ ಇಷ್ಟವಾಗಿದ್ದ ಅರವಿಂದ್ ಅವರು ಮನೆಯ ಇತರ ಸದಸ್ಯರೊಂದಿಗೆ ಚೆನ್ನಾಗಿ ಹೊಂದಿಕೊಂಡಿದ್ದರು. ಬಿಗ್ ಬಾಸ್ ಮನೆಯಲ್ಲಿ ಅರವಿಂದ್ ಹಾಗೂ ದಿವ್ಯ ಉರುಡುಗ ಅವರ ನಡುವೆ ಒಂದು ವಿಶೇಷವಾದ ಫ್ರೆಂಡ್ಶಿಪ್ ಇರುವುದು ಎಲ್ಲರಿಗೂ ಗೊತ್ತಿದೆ. ಬಿಗ್ ಬಾಸ್ ಸೀಸನ್ 8 ಪ್ರಾರಂಭವಾದ ದಿನಗಳಲ್ಲಿ ಇವರಿಬ್ಬರು ಮಾತನಾಡುತ್ತಿರಲಿಲ್ಲ ನಂತರದ ದಿನಗಳಲ್ಲಿ ಹೆಚ್ಚು ಮಾತನಾಡಲು ಆರಂಭಿಸಿದರು. ಇವರಿಬ್ಬರೂ ಬಿಗ್ ಬಾಸ್ ಮನೆಯಲ್ಲಿ ತಮ್ಮ ನಡುವೆ ಇರುವ ಪ್ರೀತಿ, ಕಾಳಜಿ, ಗೌರವ ಭಾವನೆಯನ್ನು ತೋರಿಸಿಕೊಂಡಿದ್ದಾರೆ ಅಸಭ್ಯವಾಗಿ ವರ್ತಿಸಿಲ್ಲ ಎಂಬ ಕಾರಣಕ್ಕೆ ಜನರು ಇವರನ್ನು ಕ್ಯೂಟ್ ಪೇರ್ ಎಂದು ಹೇಳುತ್ತಾರೆ. ಅರವಿಂದ್ ಅವರ ಹತ್ತಿರ ದಿವ್ಯ ಉರುಡುಗ ಅವರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ ಎಂದು ಹೇಳಿದಾಗ ನಮ್ಮಿಬ್ಬರಲ್ಲಿ ಒಬ್ಬರಿಗೊಬ್ಬರೆಂದರೆ ಬಹಳ ಇಷ್ಟ ಆದರೆ ಮದುವೆಯ ಬಗ್ಗೆ ಚಿಂತನೆ ಮಾಡಿಲ್ಲ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *