ಹಸಿವಿನ ಮುಂದೆ ಮರಣ ಕೂಡಾ ಕಣವೆ ಏಕೆಂದರೆ ಹಸಿವು ಅನ್ನೋದು ಸಾವಿಗಿಂತಲೂ ಘನಘೋರವಾದದ್ದು ಜೀವಂತ ಇರುವಾಗಲೇ ಪ್ರಾಣ ಹಿಂಡುತ್ತದೆ”. ಆಹಾರ ನಮ್ಮೆಲ್ಲರ ದಿನನಿತ್ಯದ ಅವಶ್ಯಕ. ನಾವು ಪ್ರತೀ ನಿತ್ಯ ಕಷ್ಟಪಟ್ಟು ದುಡಿಯುವುದು ಮುಂದಿನ ದಿನಗಳಲ್ಲಿ ಭವಿಷ್ಯದಲ್ಲಿ ಸುಖವಾಗಿ ಇರಬೇಕು ಎಂದು. ಹಸಿವಿನಿಂದ ಇದ್ದಾಗ ಆಹಾರಕ್ಕಾಗಿ ಕಾಯುವುದು ಪ್ರತಿಯೊಬ್ಬ ಮನುಷ್ಯನಿಗೂ ಒಂದು ಅನಿವಾರ್ಯ. ಇಂತಹ ಸಮಯದಲ್ಲಿ ಎಲ್ಲರಿಗೂ ಆಹಾರವನ್ನು ತಯಾರಿಸಿ ಸಮಯಕ್ಕೆ ಸರಿಯಾಗಿ ಒಂದು ಆರ್ಡರ್ ಮೂಲಕ ಗ್ರಾಹಕರು ಹೇಳಿದ ಸ್ಥಳಕ್ಕೆ ಆಹಾರವನ್ನು ತಲುಪಿಸಿ ಯಶಸ್ಸನ್ನು ಕಂಡಂತಹ ಸಾಕಷ್ಟು ಹೋಟೆಲ್ ಮಾಲೀಕರು ಕೇಟರಿಂಗ್ ಸರ್ವಿಸ್ ನವರು ಇದ್ದಾರೆ. ಇಂದು ಅದೇ ರೀತಿ ಆರ್ಡರ್ ಪಡೆದು ಜನರಿಗೆ ಅಗತ್ಯ ಇರುವ ಅವಶ್ಯವಾದ ಊಟವನ್ನು ಒದಗಿಸುತ್ತಾ ಇರುವ ದೇಶದಾದ್ಯಂತ ಪ್ರಸಿದ್ದಿ ಆಗಿರುವ ಜೋಮೇಟೋ ಇದರ ಸ್ಥಾಪಕರ ಬಗ್ಗೆ ಹಾಗೂ ಜೋಮೇಟೋ ಯಶಸ್ಸಿನ ಗುಟ್ಟನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಪ್ರತಿಯೊಬ್ಬರಿಗೂ ಆಹಾರವನ್ನು ಅವರವರು ಹೇಳಿದ ಸ್ಥಳಕ್ಕೆ ತಲುಪಿಸಿ ಕೋಟ್ಯಾಂತರ ಗ್ರಾಹಕರನ್ನು ಹೊಂದಿರುವ ಒಂದು ಪ್ರಸಿದ್ಧ ಕಂಪನಿಯ ಸಂಸ್ಥಾಪಕರು ದೀಪಿಂದರ್ ಗೋಯಲ್ ಮತ್ತು ಪಂಕಜ್ ಚಢ್ಢಾ. ಇವರಿಬ್ಬರೂ ೨೦೦೮ ರಲ್ಲಿ ಸ್ಥಾಪನೆ ಮಾಡಿ ಜೊಮೇಟೋ ಎಂಬ ಹೆಸರಿಗೂ ಮೊದಲು ‘ ಫೂಡಿಬೆ ‘ ಎಂದು ಹೆಸರಿನಿಂದ ಆರಂಬಿಸಿದರು. ನಂತರ ಎರಡು ವರ್ಷ ಬಿಟ್ಟು ಅಂದರೆ ೧೮ ಜನವರಿ ೨೦೧೦ ರಲ್ಲಿ ಜೊಮೇಟೋ (ಜೊಮಾಟೊ ಮೀಡಿಯಾ ಪಿವಿಟಿ ಲಿಮಿಟೆಡ್) ಎಂದು ಮರುನಾಮಕರಣ ಮಾಡಲಾಯಿತು.

2011 ರಲ್ಲಿ ಇದು ತನ್ನ ವ್ಯವಹಾರವನ್ನು ದೆಹಲಿ ಎನ್‌ಸಿಆರ್, ಮುಂಬೈ, ಬೆಂಗಳೂರು, ಚೆನ್ನೈ, ಪುಣೆ ಮತ್ತು ಕೋಲ್ಕತ್ತಾಗೆ ವಿಸ್ತರಿಸಿತು. 2012 ರಲ್ಲಿ ಯುಎಇ, ಶ್ರೀಲಂಕಾ, ಕತಾರ್, ಯುಕೆ, 
ಫಿಲಿಪೈನ್ಸ್ ಮತ್ತು ದಕ್ಷಿಣ ಆಫ್ರಿಕಾ ಸೇರಿದಂತೆ ಇತರ ದೇಶಗಳಿಗೆ ತನ್ನ ವ್ಯವಹಾರವನ್ನು ವಿಸ್ತರಿಸಲು ಕಂಪನಿ ನಿರ್ಧರಿಸಿತು. 

ನಂತರ2013ರಲ್ಲಿಇದು ಬ್ರೆಜಿಲ್, ನ್ಯೂಜಿಲೆಂಡ್, ಟರ್ಕಿ, ಇಂಡೋನೇಷ್ಯಾಗಳಲ್ಲಿ ವಿಸ್ತರಿಸಲ್ಪಟ್ಟಿತು. ಹಾಗೆ ಜೋಮೇಟೋ ಅದರ ಅಪ್ಲಿಕೇಶನ್ ಮತ್ತು ಸೈಟ್ ಅನ್ನು ಟರ್ಕಿಶ್, ಇಂಡೋನೇಷಿಯನ್ ಮತ್ತು ಇಂಗ್ಲಿಷ್ ಭಾಷೆಗಳಲ್ಲಿಯೂ ಪ್ರಾರಂಭಿಸಿತು. 2014 ರಲ್ಲಿ ಇದು ತನ್ನ ಸೈಟ್ ಮತ್ತು ಅಪ್ಲಿಕೇಶನ್ ಅನ್ನು ಪೋರ್ಚುಗೀಸ್ ಭಾಷೆಯಲ್ಲಿ ಮತ್ತು ಕೆನಡಾ, ಲೆಬನಾನ್ ಮತ್ತು ಐರ್ಲೆಂಡ್ನಲ್ಲಿ 2015 ರಲ್ಲಿ ಪ್ರಾರಂಭಿಸಿತು.

ದೀಪಿಂದರ್ ಗೋಯಲ್ ಮತ್ತು ಪಂಕಜ್ ಚಢ್ಢಾ ಇವರಿಬ್ಬರೂ ಜನರು ಆಹಾರ ಪಡೆಯುವುದರ ಸಲುವಾಗಿ ಗಂಟೆಗಟ್ಟಲೆ ಕ್ಯೂ ನಿಲ್ಲುವುದನ್ನು ಗಮನಿಸಿದರು. ಇದನ್ನು ನೋಡಿ ಈ ಸಮಸ್ಯೆಗೆ ಪರಿಹಾರ ಹುಡುಕುತ್ತಾ ಹೋದವರಿಗೆ ಸಿಕ್ಕ ಪರಿಹಾರ ಎಂದರೆ ಅದೇ ‘ ಫೂಡಿಬೆ ‘. ಮೊದಲು ಮೆನ್ಯೂ ಕಾರ್ಡ್ ತಯಾರಿಸಿ ಕಂಪನಿಯ ಖಾಸಗಿ ನೆಟ್ವರ್ಕ್ ನಲ್ಲಿ ಅಪ್ಲೋಡ್ ಮಾಡಿದರು. ಕೆಲಸಗಾರರು ಎಲ್ಲಾ ಸಮಯ ಉಳಿಸುವ ಸಲುವಾಗಿ ಈ ಸೌಕರ್ಯದ ಉಪಯೋಗ ಪಡೆಯಲು ಆರಂಭಿಸಿದರು. ಅತೀ ಕಡಿಮೆ ಸಮಯದಲ್ಲಿ ಇವರ ವೆಬ್ಸೈಟ್ ಎಲ್ಲರಿಗೂ ಪರಿಚಯವಾಗಿ ಜನಪ್ರಿಯತೆ ಗಳಿಸಿತು. ಈ ಕೆಫಿಟೆರಿಯಾದಿಂದ ದೆಲ್ಲಿಯ ಹಲವಾರು ಕಡೆಗಳಲ್ಲಿ ಜನರು ಆರ್ಡರ್ ಮಾಡಲು ಶುರು ಮಾಡಿದರು. ಡೆಲ್ಲಿಯ ನಂತರ ಇವರು ತಮ್ಮ ವ್ಯಾಪಾರವನ್ನು ವಿಸ್ತರಿಸಲು ಬೆಂಗಳೂರು ಸೇರಿದಂತೆ ಮೇಲೆ ತಿಳಿಸಿದ ಕೆಲವು ಪ್ರಮುಖ ನಗರಗಳನ್ನೂ ಆಯ್ಕೆ ಮಾಡಿಕೊಂಡರು. ಇವರ ಸೇವೆಗಳನ್ನು ಬಳಸುವ ಜನರ ಸಂಖ್ಯೆ ಕ್ರಮೇಣ ಅಧಿಕವಾಗತೊಡಗಿತು.

ಇನ್ನೂ ಹೆಚ್ಚಿನ ಜನರಿಗೆ ವ್ಯವಸ್ಥೆ ಕಲ್ಪಿಸಲು ಜೋಮೇಟೋ ಸಂಸ್ಥಾಪಕರು ಆಯ್ದುಕೊಂಡ ಉತ್ತಮ ಮಾರ್ಗ ಎಂದರೆ ಮೊಬೈಲ್ ಅಪ್ಲಿಕೇಶನ್. ಆದರೆ ಈ ಆಲೋಚನೆಯನ್ನು ಪ್ರಾಯೋಗಿಕವಾಗಿ ತರಲು ಆರ್ಥಿಕ ಸಹಾಯ ಬೇಕಿತ್ತು. ಹೊಸ ಆಲೋಚನೆ ಹಾಗೂ ಉತ್ತಮವಾದ ಆಲೋಚನೆ ಆದ ಕಾರಣ ಇವರಿಬ್ಬರಿಗೂ ಸಾಕಷ್ಟು ಜನ ಸಹಾಯ ಮಾಡಿದರು ಹಾಗೂ ಫಂಡ್ಸ್ ಕೂಡಾ ದೊರಕಿತು. ಇದಕ್ಕೆ ಪ್ರಮುಖ ಜಾಬ್ ಸರ್ಚಿಂಗ್ ಫೌಂಡರ್ naukri.com ನ ಫೌಂಡರ್ ಆದ ಸಂಜಯ್ ಅವರು ಆರ್ಥಿಕ ಸಹಾಯ ಮಾಡಿ ಒಂದು ಮಿಲಿಯನ್ ಡಾಲರ್ ಅನ್ನು ನೀಡಿದರು. ಇವರ ನಂತರ ಜೊಮೇಟೋಗೆ ಸಾಕಶ್ಟು ಇನ್ವೆಸ್ಟರ್ಸ್ ಡಾಲರ್ ರೂಪದಲ್ಲಿ ಹಣವನ್ನು ನೀಡಿದರು. ಒಟ್ಟೂ ೨೩೫ ಮಿಲಿಯನ್ ಡಾಲರ್ ಅಷ್ಟು ಫಂಡ್ ಜೊಮೇಟೋಗೆ ದೊರಕಿತು. ಒಟ್ಟೂ ತೊಂಭತ್ತು ಮಿಲಿಯನ್ ಬಳಕೆದಾರರ ಜೊತೆಗೆ ಜಗತ್ತಿನಾದ್ಯಂತ ತನ್ನ ಸೇವೆಯನ್ನು ಇಂದು ಜೊಮೇಟೋ ನೀಡುತ್ತಿದೆ. ಇದರ ವಿಸ್ತಾರವನ್ನು ಕಂಡಂತಹ ದೊಡ್ಡ ದೊಡ್ಡ ಹೋಟೆಲ್ , ರೆಸ್ಟೋರೆಂಟ್ ಗಳು ತಮ್ಮ ಆಹಾರದ, ವ್ಯಾಪಾರದ ಪ್ರಕಟಣೆಗಳನ್ನು ಜೊಮೇಟೋ ವೆಬ್ಸೈಟ್ ನಲ್ಲಿ ಹಾಕಲು ಆರಂಭಿಸಿದವು. ಇದರಿಂದ ಮುಂದೆ ರೆವೆನ್ಯೂ ಜನರೇಟ್ ಆಯಿತು. ಇದರ ಮುಖ್ಯ ಉದ್ದೇಶ ಎಂದರೆ ಫುಡ್ ಫೆಸ್ಟಿವಲ್. ಜೊಮೇಟೋ ಕಂಪನಿಗೆ ಅದೆಷ್ಟೇ ಕಷ್ಟ ತೊಂದರೆಗಳು ಎದುರಾದರೂ ಸಹ ತಮ್ಮಲ್ಲಿರುವ ಒಗ್ಗಟ್ಟಿನ ಮ್ಯಾನೇಜ್ಮೆಂಟ್ ಸಹಾಯದಿಂದ ಎಲ್ಲವನ್ನೂ ಸರಿದೂಗಿಸಿಕೊಂಡು ಮುನ್ನಡೆಸಿಕೊಂಡು ಹೋಗಿತ್ತಿದ್ದಾರೆ. ಪ್ರತೀ ದಿನವೂ ಒಂದಲ್ಲ ಎಂದು ಸಮಸ್ಯೆಯನ್ನು ಎದುರಿಸಿದರೂ ಒಟ್ಟೂ ಒಂದು ಲಕ್ಷ ರೆಸ್ಟೋರೆಂಟ್ ಗಳನ್ನೂ ಹೊಂದಿದ ಜೊಮೇಟೋ ಉತ್ತಮ ಸೇವೆಯನ್ನು ನೀಡುತ್ತಿದೆ.

Leave a Reply

Your email address will not be published. Required fields are marked *