ರೈತರು ಯಾವುದೇ ಬಡ್ಡಿಯಿಲ್ಲದೆ 3 ಲಕ್ಷದವರೆಗೆ ಬೆಳೆಸಾಲ ಪಡೆಯಲು ಅರ್ಜಿ ಸಲ್ಲಿಸೋದು ಹೇಗೆ?

0 3

ಕೃಷಿ ಭಾರತದ ಪ್ರಮುಖ ಉದ್ಯೋಗಗಳಲ್ಲಿ ಒಂದಾಗಿದೆ. ರೈತರು ಬೆಳೆ ಸಾಲವನ್ನು ಹೂಡಿಕೆಗಾಗಿ ಮತ್ತು ಉತ್ಪಾದನೆಯಂತಹ ಅಲ್ಪಾವಧಿಯ ಉದ್ದೇಶಗಳಿಗಾಗಿ ಅರ್ಜಿ ಸಲ್ಲಿಸಬಹುದು. ಭಾರತದಲ್ಲಿ ಅನೇಕ ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕುಗಳು ಬೆಳೆ ಸಾಲವನ್ನು ಒದಗಿಸುತ್ತವೆ. ಇದರಿಂದ ರೈತರು ತಮ್ಮ ಕೃಷಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ನಡೆಸಬಹುದು. ರೈತರು 3 ಲಕ್ಷದವರೆಗೆ ಯಾವುದೇ ಬಡ್ಡಿ ಇಲ್ಲದೆ ಬೆಳೆ ಸಾಲವನ್ನು ಪಡೆಯಬಹುದಾಗಿದೆ. ಆದ್ದರಿಂದ ಈ ಬೆಳೆ ಸಾಲವನ್ನು ಪಡೆಯುವ ಸಲುವಾಗಿ ಆನ್ಲೈನ್ ಮೂಲಕ ಅರ್ಜಿ ತುಂಬುವ ವಿಧಾನವನ್ನು ನಾವಿಲ್ಲಿ ತಿಳಿದುಕೊಳ್ಳೋಣ.

ಅರ್ಜಿಯನ್ನು ತುಂಬಲು ಆಫಿಶಿಯಲ್ ವೆಬ್ ಸೈಟ್ ಅನ್ನು ಓಪನ್ ಮಾಡಿಕೊಳ್ಳಬೇಕು. ಅದರಲ್ಲಿ ಸಹಕಾರ ಸಮಾಚಾರ ಎಂಬ ಆಪ್ಷನ್ ದೊರಕುತ್ತದೆ. ಅದರಲ್ಲಿ ನಾಲ್ಕನೆಯ ಆಪ್ಷನ್ ಸಹಕಾರಿ ಸಂಘಗಳ ಮೂಲಕ ನಿವ್ವಳ ಶೂನ್ಯ ಶೇಕಡ ಬಡ್ಡಿಗೆ ಬೆಳೆ ಸಾಲ ಮೇಲೆ ಕ್ಲಿಕ್ ಮಾಡಬೇಕು. ಕ್ಲಿಕ್ ಮಾಡಿದ ಮೇಲೆ ಪಿಡಿಎಫ್ ಫಾರ್ಮೆಟ್ ದೊರಕುತ್ತದೆ. ಅದನ್ನು ಡೌನ್ಲೋಡ್ ಮಾಡಿ ಓಪನ್ ಮಾಡಿದಾಗ ರಾಜ್ಯ ಸರ್ಕಾರ ಬೆಳೆ ಸಾಲದ ಸಲುವಾಗಿ ಸುತ್ತೋಲೆ ಹೊರಡಿಸಿದ ಪ್ರತಿಯು ದೊರಕುತ್ತದೆ. ಜೊತೆಗೆ ಇದರೊಳಗೆ ಅರ್ಜಿ ಸಲ್ಲಿಸುವ ಫಾರಂ ಕೂಡ ದೊರಕುತ್ತದೆ. ಅದನ್ನು ಪ್ರಿಂಟೌಟ್ ತೆಗೆದುಕೊಳ್ಳಬೇಕು. ಅರ್ಜಿ ಒಳಗೆ ಬೆಳೆ ಸಾಲ ನೀಡುವ ಬ್ಯಾಂಕುಗಳ ವಿವರವನ್ನು ನೀಡುತ್ತಾರೆ. ಪ್ರಾಥಮಿಕ ಪತ್ತಿನ ಸಂಘಗಳು, ಡಿಸಿಸಿ ಬ್ಯಾಂಕ್ ಗಳಲ್ಲಿ ಬೆಳೆಸಾಲವನ್ನು ನೀಡಲಾಗುತ್ತದೆ.

ಯಾವ ಬ್ಯಾಂಕ್ ಎಂಬುದನ್ನು ಸೆಲೆಕ್ಟ್ ಮಾಡಿಕೊಂಡು ತಾಲೂಕು ಮತ್ತು ಜಿಲ್ಲೆಯನ್ನು ಅರ್ಜಿಯಲ್ಲಿ ತುಂಬಬೇಕು ಹಾಗೂ ಬಲಗಡೆ ಅರ್ಜಿದಾರನ ಫೋಟೋವನ್ನು ಅಂಟಿಸಬೇಕು. ನಂತರ ಅರ್ಜಿಯಲ್ಲಿ ಕೊಟ್ಟಿರುವ ಕಲಂನ ಪ್ರಕಾರದಲ್ಲಿ ಅರ್ಜಿಯನ್ನು ತುಂಬಬೇಕು. ಅರ್ಜಿದಾರನ ಹೆಸರು, ಅವನ ತಂದೆಯ ಹೆಸರು, ಆಧಾರ್ ನಂಬರ್, ಆಧಾರ್ ನಂಬರ್ ನಲ್ಲಿರುವಂತೆ ವ್ಯಕ್ತಿಯ ಹೆಸರು, ಮೊಬೈಲ್ ನಂಬರ್, ಜಾತಿ ಕಾಲಂ ಅನ್ನು ತುಂಬಬೇಕು. ಕಾಸ್ಟ್ ಸರ್ಟಿಫಿಕೇಟ್ ಇದ್ದಲ್ಲಿ ಅದರ ಅಡಿ ಸಂಖ್ಯೆಯನ್ನು ಹಾಕಬೇಕು. ನಂತರ ರೈತನ ವಯಸ್ಸು, ದೊಡ್ಡ ಅಥವಾ ಚಿಕ್ಕ ಹಿಡುವಳಿ ಎಂಬ ವರ್ಗೀಕರಣ, ನಂತರ ಡಿಸಿಸಿ ಬ್ಯಾಂಕ್ನ ಉಳಿತಾಯ ಖಾತೆ ನಂಬರನ್ನು ತುಂಬಬೇಕು. ನಂತರ ಆ ಬ್ಯಾಂಕ್ ಐಎಫ್ಎಸ್ಸಿ ಕೋಡ್ ಸಂಘದಲ್ಲಿ ಶೇರು ಹೊಂದಿದ್ದರೆ ಅದರ ಸಂಖ್ಯೆಯನ್ನು ತುಂಬಬೇಕು.

ನಂತರ ರೇಷನ್ ಕಾರ್ಡ್ ನಂಬರ್ ಹಾಕಿ ರೇಷನ್ ಕಾರ್ಡ್ ನಲ್ಲಿರುವ ಸದಸ್ಯರ ಸಂಪೂರ್ಣ ವಿವರವನ್ನು ತುಂಬಬೇಕು. ನಂತರ ಆಧಾರ್ ಕಾರ್ಡ್ ನಲ್ಲಿ ಇರುವಂತೆ ಅವನ ವಿಳಾಸವನ್ನು ತುಂಬಬೇಕು. ನಂತರ ರೈತರ ಜಮೀನಿನ ವಿವರವನ್ನು ತುಂಬಬೇಕು. ನಂತರ ರೈತನು ಬೆಳೆಯಲು ಹೆಚ್ಚಿಸಿರುವ ಬೆಳೆಯ ವಿವರವನ್ನು ಹಾಕಬೇಕು. ಇದಾದನಂತರ ಕೆಲವು ವಿವರಗಳನ್ನು ತುಂಬಿ ಸಂಘದ ಕಾರ್ಯದರ್ಶಿಯ ಹೆಸರು ಮತ್ತು ಸಹಿಯನ್ನು ಹಾಕಿಸಬೇಕು. ನಂತರ ಮಂಜೂರಾದ ಸಾಲದ ಮೊತ್ತ ಮತ್ತು ರೈತನ ಹೆಬ್ಬರಳಿನ ಅಚ್ಚನ್ನು ಹಾಕಬೇಕು. ಈ ಅರ್ಜಿಯ ಜೊತೆಗೆ ರೇಷನ್ ಕಾರ್ಡ್ ಜೆರಾಕ್ಸ್, ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್, ಪಹಣಿ ಪತ್ರಿಕೆ, ಆಧಾರ್ ಕಾರ್ಡ್ ಜೆರಾಕ್ಸ್ ಅನ್ನು ಜೋಡಿಸಿ ಪತ್ತಿನ ಸಹಕಾರಿ ಸಂಘ, ಡಿಸಿಸಿ ಬ್ಯಾಂಕ್ ಅಥವಾ ಪಿಕಾರ್ಡ್ ಬ್ಯಾಂಕ್ ಗೆ ಹೋಗಿ ಅರ್ಜಿಯನ್ನು ಸಲ್ಲಿಸಬೇಕು. ಈ ರೀತಿಯಾಗಿ ಅರ್ಜಿಯನ್ನು ಸಲ್ಲಿಸಿ ಬೆಳೆ ಸಾಲವನ್ನು ಪಡೆಯಬಹುದಾಗಿದೆ.

Leave A Reply

Your email address will not be published.