ಮನೆಯಲ್ಲಿ ಮೊಟ್ಟೆ ಇದ್ರೆ ದಿಡೀರ್ ಅಂತ ಮಾಡಿ ರುಚಿಯಾದ ಎಗ್ ಕರಿ

0 2

ಯಾವುದೇ ಅಡುಗೆ ಆದರೂ ಪ್ರತೀ ಬಾರಿ ಒಂದೇ ರೀತಿ ಮಾಡಿಕೊಂಡು ತಿನ್ನಲು ಬೇಜಾರು. ಯಾವುದಾದರೂ ಹೊಸ ರೆಸಿಪಿ ಮಾಡುತ್ತಲೇ ಇರಬೇಕು ಅಥವಾ ಹೊಸ ಹೊಸ ವಿಧಾನದಲ್ಲಿ ಬೇರ್ ಬೇರೆ ರೀತಿಯಲ್ಲಿ, ಶೈಲಿಯಲ್ಲಿ ಅಡುಗೆ ಮಾಡಬೇಕು, ಕಲಿಯಬೇಕು ಎನ್ನುವುದು ಎಲ್ಲಾ ಹೆಂಗೆಳೆಯರಿಗೂ ಇರುವ ಆಸೆ. ಹಾಗಾಗಿ ಈ ಲೇಖನದ ಮೂಲಕ ನಾವು ಸುಲಭವಾಗಿ ಮತ್ತು ರುಚಿಯಾಗಿ ಎಗ್ ಕರಿ ಮಾಡುವುದು ಹೇಗೆ? ಮತ್ತು ಅದಕ್ಕೆ ಏನೆಲ್ಲಾ ಸಾಮಗ್ರಿಗಳು ಬೇಕು? ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಪ್ರತೀ ಬಾರಿ ಒಂದೇ ರೀತಿಯ ಎಗ್ ಕರಿ ಮಾಡಿ ಬೇಸರ ಬಂದಿದ್ರೆ ಈ ರೀತಿ ಒಮ್ಮೆ ಮಾಡಿ ನೋಡಿ ಮನೆಯ ಎಲ್ಲರಿಗೂ ಬಹಳ ಇಷ್ಟ ಆಗುತ್ತೆ. ಈ ಎಗ್ ಕರಿ ಬಹಳ ರುಚಿಯಾಗಿ ಇದ್ದು, ಇದನ್ನು ನೀವು ರೊಟ್ಟಿ ಚಪಾತಿ ಜೊತೆ ಸೇವಿಸಬಹುದು ಹಾಗೂ ಬಹಳ ಬೇಗ ಕೂಡಾ ಮಾಡಿಕೊಳ್ಳಬಹುದು. ಹಾಗಿದ್ದರೆ ಈ ಎಗ್ ಕರಿ ಮಾಡಲು ಬೇಕಾದ ಸಾಮಗ್ರಿಗಳು ಏನು ಹಾಗೂ ಮಾಡುವ ವಿಧಾನ ಏನೂ ಎನ್ನುವುದನ್ನು ನೋಡೋಣ.

ಎಗ್ ಕರಿ ಮಾಡಲು ಬೇಕಾದ ಸಾಮಗ್ರಿಗಳು : ಬೇಯಿಸಿದ ಮೊಟ್ಟೆ, ಈರುಳ್ಳಿ, ಟೊಮೆಟೊ, ಒಣಕೊಬ್ಬರಿ ಶೇಂಗಾ ಬೀಜ, ಗರಂ ಮಸಾಲ, ಧನಿಯಾ ಪುಡಿ, ಕೆಂಪು ಮೆಣಸಿನ ಪುಡಿ, ಎಣ್ಣೆ, ಅರಿಶಿನ, ಚಕ್ಕೆ, ಲವಂಗ, ಏಲಕ್ಕಿ, ಜೀರಿಗೆ, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು, ಉಪ್ಪು ರುಚಿಗೆ ತಕ್ಕಷ್ಟು.ಇವಿಷ್ಟು ಎಗ್ ಕರಿ ಮಾಡಲು ಬೇಕಾದ ಸಾಮಗ್ರಿಗಳು. ಇನ್ನು ಮಾಡುವ ವಿಧಾನ ಹೇಗೆ ಅಂತಾ ನೋಡುವುದಾದರೆ,

ಎಗ್ ಕರಿ ಮಾಡುವ ವಿಧಾನ : ಮೊದಲು ಸ್ಟೋವ್ ಮೇಲೆ ಒಂದು ಪ್ಯಾನ್ ಇಟ್ಟುಕೊಂಡು ಅದಕ್ಕೆ ಬಿಸಿ ಆದ ನಂತರ ಎರಡು ಟೀ ಸ್ಪೂನ್ ಶೇಂಗಾ ಬೀಜ, ಚಕ್ಕೆ, ಲವಂಗ , 2 ಏಲಕ್ಕಿ, ಲವಂಗ, ಒಣಕೊಬ್ಬರಿ ಇವೆಲ್ಲವನ್ನೂ ಸೇರಿಸಿ ಹಾಗೆಯೇ ಮಧ್ಯಮ ಉರಿಯಲ್ಲಿ ಹುರಿದುಕೊಳ್ಳಬೇಕು ನಂತರ ಅರ್ಧ ಟೀ ಸ್ಪೂನ್ ಅಷ್ಟು ಜೀರಿಗೆಯನ್ನು ಸಹ ಸೇರಿಸಿ ಹುರಿದುಕೊಳ್ಳಬೇಕು. ನಂತರ ಇವುಗಳನ್ನು ಒಂದು ಪ್ಲೇಟ್ ಗೆ ಹಾಕಿ ಪೂರ್ತಿ ತಣ್ಣಗಾಗಲು ಬಿಟ್ಟು, ತಣ್ಣಗಾದ ನಂತರ ಮಿಕ್ಸಿ ಜಾರಿಗೆ ಹಾಕಿಕೊಂಡು ನೀರು ಸೇರಿಸದೆ ಪುಡಿ ಮಾಡಿಕೊಳ್ಳಬೇಕು. ನಂತರ ಕಟ್ ಮಾಡಿಕೊಂಡ 2 ಟೊಮೆಟೊ ಸೇರಿಸಿ ಪೇಸ್ಟ್ ಮಾಡಿಕೊಳ್ಳಬೇಕು. ಇಷ್ಟು ಮಾಡಿಕೊಂಡರೆ ಮಸಾಲ ರೆಡಿ ಆಗಿರುತ್ತೆ.

ನಂತರ ಬೇಯಿಸಿದ ಮೊಟ್ಟೆಯನ್ನು ಕೈಯ್ಯಲ್ಲಿ ಸ್ಮಾಶ್ ಮಾಡಿಕೊಳ್ಳಬೇಕು. ಸ್ಟೋವ್ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಕಾಯಿಸಿ ಎಣ್ಣೆ ಕಾದ ನಂತರ ಅರ್ಧ ಟೀ ಸ್ಪೂನ್ ಜೀರಿಗೆ, ಕರಿಬೇವಿನ ಸೊಪ್ಪು ಹಾಕಿ, ಸಣ್ಣದಾಗಿ ಕಟ್ ಮಾಡಿದ ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು. ನಂತರ ಮೊದಲೇ ಪೇಸ್ಟ್ ಮಾಡಿಟ್ಟುಕೊಂಡ ಮಸಾಲ ಹಾಕಿ ಎಣ್ಣೆಯಲ್ಲಿ ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು. ನಂತರ ಇದಕ್ಕೆ ಅರ್ಧ ಟೀ ಸ್ಪೂನ್ ಅಷ್ಟು ಧನಿಯಾ ಪುಡಿ, ಗರಂ ಮಸಾಲ ಪುಡಿ, ಅರಿಶಿನ, ಒಂದೂವರೆ ಟೀ ಸ್ಪೂನ್ ಅಷ್ಟು ಕೆಂಪು ಮೆಣಸಿನ ಪುಡಿ ಈ ಎಲ್ಲವನ್ನೂ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಒಂದೂವರೆ ಕಪ್ ಅಷ್ಟು ನೀರು ಸೇರಿಸಿ ಕೊನೆಯಲ್ಲಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮುಚ್ಚಳ ಮುಚ್ಚಿ ಐದರಿಂದ ಆರು ನಿಮಿಷಗಳ ಕಾಲ ಚೆನ್ನಾಗಿ ಕುದಿಸಿಕೊಳ್ಳಬೇಕು. ನಂತರ ಬೇಯಿಸಿ ಸ್ಮಾಷ್ ಮಾಡಿಟ್ಟುಕೊಂಡ ಮೊಟ್ಟೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಮತ್ತೆ ಮುಚ್ಚಳ ಮುಚ್ಚಿ ಐದು ನಿಮಿಷ ಬೇಯಿಸಬೇಕು. ನಂತರ ಮೇಲಿನಿಂದ ಚಿಕ್ಕದಾಗಿ ಕಟ್ ಮಾಡಿದ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿದರೆ ಬಿಸಿಯಾದ, ರುಚಿಯಾದ ಎಗ್ ಕರಿ ರೆಡಿ.

Leave A Reply

Your email address will not be published.