ಮೊಟ್ಟೆ ಸೇವನೆಯಿಂದ ಶರೀರಕ್ಕೆ ಹತ್ತಾರು ಆರೋಗ್ಯಕಾರಿ ಲಾಭಗಳನ್ನು ಪಡೆದುಕೊಳ್ಳಬಹುದು, ಮೊಟ್ಟೆಯಲ್ಲಿ ಪ್ರೊಟೀನ್, ಕ್ಯಾಲ್ಶಿಯಂ ಅಂಶಗಳನ್ನು ಕಾಣಬಹುದು. ಹಾಗಾಗಿ ಪ್ರತಿದಿನ ಒಂದು ಮೊಟ್ಟೆ ತಿಂದ್ರೆ ದೇಹಕ್ಕೆ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬಹುದು. ಶಾರೀರಿಕವಾಗಿ ಸ್ನಾಯು ಬಲ ಎನರ್ಜಿಯನ್ನು ಪಡೆಯಬಹುದು. ಇನ್ನು ಮೊಟ್ಟೆ ತಿಂದ್ರೆ ಪಾರ್ಶ್ವವಾಯು ಸಮಸ್ಯೆ ಬರೋದಿಲ್ವ? ಇದರ ಕುರಿತು ಇಲ್ಲೊಂದು ಸಂಶೋಧನೆ ಏನ್ ಹೇಳುತ್ತೆ ಅನ್ನೋದನ್ನ ಮುಂದೆ ನೋಡಿ.

ಇಲ್ಲೊಂದು ಸಂಶೋಧನೆ ಹೇಳುವ ಪ್ರಕಾರ ಮೊಟ್ಟೆ ತಿನ್ನೋದ್ರಿಂದ ನಿಮ್ಮ ಹತ್ರಕ್ಕೆ ಪಾರ್ಶ್ವವಾಯು ಸಮಸ್ಯೆ ಸುಳಿಯೋದಿಲ್ಲ ಎಂಬುದಾಗಿ. ಹೌದು ಅಮೆರಿಕದ ಆಹಾರತಜ್ಞ ಅಲೆಕ್ಸಾಂಡರ್ ನಡೆಸಿದ ಸಂಶೋಧನೆಯಲ್ಲಿ ಈ ಸತ್ಯ ಗೊತ್ತಾಗಿದೆ. ನಿತ್ಯ ಮೊಟ್ಟೆ ಸೇವಿಸುತ್ತಾ ಬಂದ ಶೇ.99 ಮಂದಿಯಲ್ಲಿ ಪಾರ್ಶ್ವವಾಯು ಕಾಣಿಸಿಕೊಂಡಿಲ್ಲ ಎಂಬ ಸತ್ಯ ಅವರ ಸರ್ವೆಯಿಂದ ತಿಳಿದುಬಂದಿದೆ. ಅಷ್ಟೇ ಅಲ್ದೆ ಈ ಸರ್ವೆಯಲ್ಲಿ ಮುಖ್ಯವಾಗಿ ಮೊಟ್ಟೆಯನ್ನು ತಿನ್ನದೆ ಇರುವಂತ 2,76,000 ಮಂದಿಯಲ್ಲಿ ವಿವಿಧ ರೀತಿಯ ಪಾರ್ಶ್ವವಾಯು ಕಾಣಿಸಿಕೊಂಡಿದೆ. ಇಂಥವರಲ್ಲಿ ಹೃದ್ರೋಗ ಹಾಗೂ ಮೆದುಳಿನ ಸಮಸ್ಯೆಗಳೂ ಕಾಣಿಸಿಕೊಂಡಿವೆ. ಮೊಟ್ಟೆಯಲ್ಲಿನ ಪ್ರೊಟೀನ್‌ಗಳು ದೇಹ ಹಾಗೂ ಮೆದುಳಿನ ಆರೋಗ್ಯವನ್ನು ಕಾಪಾಡುತ್ತವೆ.

ಇನ್ನು ಈ ಮೊಟ್ಟೆಯಲ್ಲಿ ಆ್ಯಂಟಿ ಆಕ್ಸಿಡೆಂಟ್ಸ್, ವಿಟಮಿನ್ ಡಿ, ಇ ಅಂಶಗಳು ಇರೋದ್ರಿಂದ 20ಕ್ಕೂ ಹೆಚ್ಚು ರೋಗಗಳನ್ನು ನಿಯಂತ್ರಿಸುವ ಗುಣ ಮೊಟ್ಟೆಯಲ್ಲಿದೆ ಅನ್ನೋದನ್ನ ಹೇಳಲಾಗುತ್ತದೆ. ಕೆಲವರು ಮೊಟ್ಟೆ ತಿನ್ನುತ್ತಾರೆ ಆದ್ರೆ ಮೊಟ್ಟೆಯಲ್ಲಿನ ಆರೋಗ್ಯಕಾರಿ ವಿಚಾರವನ್ನು ತಿಳಿದಿರುವುದಿಲ್ಲ. ನಿಮಗೆ ಈ ಮಾಹಿತಿ ಇಷ್ಟವಾದಲ್ಲಿ ಷೆರ್ ಮಾಡುವ ಮೂಲಕ ನಿಮ್ಮ ಸ್ನೇಹಿತರಿಗೂ ತಿಳಿಸಿ ಉಪಯೋಗವಾಗಲಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!