ಸುಮಾರು 80% ಅಷ್ಟು ಜನ ರೈತರು ತಮ್ಮಂತೆಯೇ ತಮ್ಮ ಮಕ್ಕಳು ರೈತರು ಆಗಲಿ ಎಂದು ಬಯಸುವುದಿಲ್ಲ. ಇದಕ್ಕೆ ಮುಖ್ಯ ಕಾರಣ, ವ್ಯವಸಾಯ ಎಂದರೆ ನಷ್ಟ, ಹಗಲಿರುಳು ಕಷ್ಟ ಪಟ್ಟರೂ ಕೈ ಗೆ ಬಿಡಿಗಾಸು ಬರುವುದಿಲ್ಲ ಜೀವನ ಚೆನ್ನಾಗಿ ಇರಲ್ಲ ಎಂದು. ಆದರೆ ಪಂಜಾಬ್ ಹಾಗೂ ಹರಿಯಾಣ ಭಾಗದ ರೈತರು ವ್ಯವಸಾಯವನ್ನೇ ಮಾಡಿ ಐಷಾರಾಮಿ ಜೀವನವನ್ನು ನಡೆಸುತ್ತಾಇದ್ದಾರೆ. ಹೇಗೆ? ವಿದೇಶಗಳ ರೈತರೂ ಸಹ ವ್ಯವಸಾಯವನ್ನೇ ಮಾಡಿಕೊಂಡು ಕೋಟಿ ಕೋಟಿ ಲಾಭ ಗಳಿಸಿ ದೊಡ್ಡ ಬ್ಯುಸಿನೆಸ್ ಮ್ಯಾನ್ ಗಳ ಹಾಗೆ ಜೇವನ ನಡೆಸುತ್ತಾ ಇದ್ದಾರೆ. ಹೇಗೆಂದರೆ ಅವರು ತಂತ್ರಜ್ಞಾನದಲ್ಲಿ ಮುಂದೆ ಹೋಗಿದ್ದಾರೆ. ಆದರೆ ನಾವು ಮಾತ್ರ ಎಪ್ಪತ್ತು ವರ್ಷದ ಹಿಂದಿನ ಪದ್ಧತಿಯನ್ನು ಅನುಸರಿಸುತ್ತಾ ಬಹಳಷ್ಟು ಹಿಂದೆಯೇ ಉಳಿದುಕೊಂಡಿವೆ. ಹಿಂದಿನ ಕಾಲದಲ್ಲಿ ಕುದುರೆ ಎತ್ತಿನ ಗಾಡಿಗಳ ಮೇಲೆ ಪ್ರಯಾಣ ಮಾಡುತ್ತಿದ್ದರು ಈಗ ಬಸ್ಸು-ಕಾರು ವಿಮಾನಗಳಲ್ಲಿ ಪ್ರಯಾಣಿಸುತ್ತಿದ್ದೇವೆ. ಹಾಗಾಗಿ ಹೊಸ ಪದ್ಧತಿಗಳಿಗೆ ಹೊಂದಿಕೊಳ್ಳಬೇಕಾಗುತ್ತದೆ. ಹಾಗೆಯೇ ಇಲ್ಲೊಬ್ಬ ಹುಡುಗಿ ಲಕ್ಷ ಲಕ್ಷ ಆದಾಯ ಬರುವ ಕೆಲಸವನ್ನು ಬಿಟ್ಟು ತನ್ನನ್ನು ತಾನು ವ್ಯವಸಾಯದಲ್ಲಿ ತೊಡಗಿಸಿಕೊಂಡಿದ್ದಾಳೆ. ಈ ಹುಡುಗಿ ವ್ಯವಸಾಯದಲ್ಲಿ ಹೇಗೆ ಎಷ್ಟು ಆದಾಯವನ್ನು ಕಂಡುಕೊಂಡಿದ್ದಾಳೆ ಎಂಬುದರ ಬಗ್ಗೆ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಈ ಹುಡುಗಿಯ ಹೆಸರು ವಲ್ಲಾರಿ ಚಂದ್ರಕರ್ ಛತ್ತೀಸ್ಗಡ ರಾಜ್ಯದವರು. ಕಂಪ್ಯೂಟರ್ ಸೈನ್ಸ್ ನಲ್ಲಿ ಎಂಟೆಕ್ ಮುಗಿಸಿದವ ವಲ್ಲಾರಿ ಅವರಿಗೆ ಲಕ್ಷ ಲಕ್ಷ ಆದಾಯ ತರುವಂತಹ ಕೆಲಸ ಸಿಕ್ಕಿತ್ತು ಆದರೆ ಅದು ಇಷ್ಟವಿಲ್ಲದೆ ಕೆಲಸವನ್ನು ಬಿಟ್ಟು ಒಂದು ಸುದಿನ ಕಾಲೇಜ್ ಲೆಕ್ಚರರ್ ಆಗಿ ಕಾರ್ಯನಿರ್ವಹಿಸಿದರು. ರಾಯಪುರದಿಂದ ಆಗಾಗ ತಮ್ಮ ಹಳ್ಳಿಗೆ ಬರುತ್ತಿದ್ದ ವಲ್ಲಾರಿ ಅವರಿಗೆ ವ್ಯವಸಾಯದ ಮೇಲೆ ಹೆಚ್ಚು ಆಸಕ್ತಿ ಮೂಡಿತು ಹಾಗಾಗಿ ತನ್ನ ತಂದೆಯ ಬೆಳೆದ ನನಗೆ ಒಂದಷ್ಟು ಜಮೀನನ್ನು ಖರೀದಿಸಿ ಕೊಡುವಂತೆ ಹಾಗೂ ತಾನದರಲ್ಲಿ ವ್ಯವಸಾಯ ಮಾಡುತ್ತೇನೆ ಎಂದು ಹೇಳಿದರು. ಆಗ ಅಲ್ಲಿನ ಜನ ಇವರನ್ನು ನೋಡಿ ಈ ಹುಡುಗಿ ಹೋದಿರುವ ಅನಕ್ಷರಸ್ತೆ ಎಂದು ಗೇಲಿ ಮಾಡಿದರು ಮಾತನಾಡುತ್ತಿದ್ದರು. ಆದರೆ ವಲ್ಲಾರಿ ಅವರ ತಂದೆ, ಮಗಳ ಆಸೆಯಂತೆ 15 ಎಕರೆ ಜಮೀನನ್ನು ಖರೀದಿಸಿ ಕೊಟ್ಟರು. ಒಂದಿಷ್ಟು ಉಪಾಯಗಳನ್ನು ಮಾಡಿದಂತಹ ಹುಡುಗಿ ರೈತರ ಅನುಭವಿಸಿದಂತಹ ಸಾಮಾನ್ಯ ಸಮಸ್ಯೆಗಳನ್ನು ಪಟ್ಟಿ ಮಾಡಿ ಅವುಗಳಿಂದ ಹೊರಬರಲು ಸರಿಯಾದ ರೀತಿಯಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ವ್ಯವಸಾಯ ಮಾಡಬೇಕು ಎಂದರಿತು ಆಧುನಿಕ ಬೇಸಾಯ ಪದ್ಧತಿಯ ಬಗ್ಗೆ ಒಂದಿಷ್ಟು ಸಂಶೋಧನೆಯನ್ನು ಕೈಗೊಂಡರು.

ಆಗ ಥಾಯ್ಲ್ಯಾಂಡ್, ಇಸ್ರೇಲ್ ದೇಶಗಳಲ್ಲಿ ಬಳಕೆಯಾಗುತ್ತಿದ್ದ ಅಡ್ವಾನ್ಸ್ಡ್ ಕೃಷಿಪದ್ಧತಿಯನ್ನು ನೋಡಿ ತಾನೂ ಸಹ ಅದೇ ಪದ್ಧತಿ ವ್ಯವಸಾಯ ಮಾಡಲು ಆರಂಭಿಸಿದರು. ಎಲ್ಲಿ ಪ್ರಯತ್ನ ಇರುವುದು ಅಲ್ಲಿ ಫಲ ಇದ್ದೇ ಇರುವುದು ಎಂಬ ಮಾತಿನಂತೆ ಮೊದಲು ಒಂದೆರಡು ತಿಂಗಳುಗಳಲ್ಲಿ ವಲ್ಲಾರಿ ಅವರಿಗೆ ಕಷ್ಟ ಆದರೂ ನಂತರ ತಾವೆಲ್ಲಿ ಎಡವಿದ್ದೇವೆ ಎಂಬುದನ್ನು ಅರಿತು ತಮ್ಮ ತಪ್ಪುಗಳನ್ನು ತಿಳಿದುಕೊಂಡು ನಂತರದ ದಿನಗಳಲ್ಲಿ ಅಡ್ವಾನ್ಸ್ ಪದ್ಧತಿಯಲ್ಲಿ ಬೀನ್ಸ್, ಟೊಮೆಟೋ, ಹಾಗಲಕಾಯಿ ಕ್ಯಾಪ್ಸಿಕಂ, ಮೆಣಸಿನಕಾಯಿ ಬೆಳೆಗಳನ್ನು ಬೆಳೆದು ಅದರಲ್ಲಿ ಸಾಕಷ್ಟು ಒಳ್ಳೆಯ ಪ್ರತಿಫಲವನ್ನು ಸಹ ಕಂಡರು.

ಈಗ ಉತ್ತಮ ಇಳುವರಿಯನ್ನು ಪಡೆಯುತ್ತಿರುವ ವಲ್ಲಾರಿ ತಾನು ಬೆಳೆದಂತಹ ಬೆಳೆಗಳನ್ನು ಈಗ ದೆಲ್ಲಿ, ಬೆಂಗಳೂರು, ನಾಗಪೂರ್ , ಮುಂಬೈ ನಗರಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ವಲ್ಲಾರೀ ಗುಣಮಟ್ಟದಲ್ಲಿ ಹಾಗೂ ನೋಟದಲ್ಲಿ ಬಾಳಷ್ಟು ಉತ್ತಮವಾಗಿರುವುದರಿಂದ ದುಬಾಯಿ ಇಸ್ರೇಲ್ ಗಳಿಂದ ಬಹಳಷ್ಟು ಆರ್ಡರುಗಳು ಬರುತ್ತಿದ್ದು ಅಲ್ಲಿಗೂ ಸಹ ತರಕಾರಿಗಳನ್ನು ರಫ್ತು ಮಾಡಲಾಗುತ್ತಿದೆ ಹಾಗೂ ಇವರು ತಿಂಗಳಿಗೆ ಲಕ್ಷ ಲಕ್ಷ ಆದಾಯವನ್ನು ಸಹ ಗಳಿಸುತ್ತಿದ್ದಾರೆ. ಅಡ್ವಾನ್ಸ್ ಪದ್ಧತಿಯನ್ನು ಬಹು ಬೇಗವಾಗಿ ಅರ್ಥಮಾಡಿಕೊಳ್ಳಬಲ್ಲ ಇಂದಿನ ಯುವ ಪೀಳಿಗೆ ಹೆಚ್ಚಾಗಿ ವ್ಯವಸಾಯದ ಕಡೆಗೆ ಗಮನ ಹರಿಸಿದರೆ ಆರೋಗ್ಯದ ಜೊತೆಗೆ ಐಷಾರಾಮಿ ಜೀವನವನ್ನು ಸಹಕರಿಸಬಹುದು. ನಿಮಗೆ ಹೆಣ್ಣುಮಗಳ ಕೃಷಿ ಸಾಧನೆ ಇಷ್ಟವಾದ್ದಲ್ಲಿ ಶೇರ್ ಮಾಡುವ ಮೂಲಕ ನಮ್ಮನು ಪ್ರೋತ್ಸಾಹಿಸಿ ಶುಭವಾಗಲಿ.

By

Leave a Reply

Your email address will not be published. Required fields are marked *