ತಿನ್ನೋದು ಅಂದ್ರೆ ಯಾರಿಗೆ ತಾನೆ ಇಷ್ಟ ಆಗಲ್ಲ ಹೇಳಿ ನಮ್ಮಲ್ಲಿ ತುಂಬಾ ಜನರಿಲ್ಲಿ ವೆಜ್ ಪ್ರಿಯರು ಹಾಗೂ ನಾನ್ ವೆಜ್ ಪ್ರಿಯರು ಇದ್ದಾರೆ. ಎಷ್ಟೇ ಖರ್ಚಾದರೂ ಸಾಕಿನ್ನು ವಿಚಾರಕ್ಕೆ ಬಂದಾಗ ಯಾರೂ ಸಹ ಖರ್ಚಿನ ಬಗ್ಗೆ ಗಮನ ಕೊಡುವುದಿಲ್ಲ. ತಮಗೆ ಎನು ಇಷ್ಟವೋ ಅದನ್ನ ತಿಂದೆ ತಿನ್ನುತ್ತಾರೆ ಆದರೆ ಜಗತ್ತಲ್ಲಿ ಕೆಲವೊಂದು ಇಷ್ಟ ಅತ್ಯಂತ ದುಬಾರಿಯಾದ ಆಹಾರಗಳು ಇವೆ. ಯಾವುದೋ ಎಷ್ಟು ದುಬಾರಿಯಾಗಿದೆ ಎನ್ನುವುದರ ಬಗ್ಗೆ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಜಗತ್ತಿನಲ್ಲಿ ಅತ್ಯಂತ ದುಬಾರಿಯಾದ ಆಹಾರಗಳಲ್ಲಿ ಒಂದಾಗಿದ್ದು ಮೊದಲಿಗೆ ಗೈಂಟೋ ಬ್ಲೂ ಫಿಂಟುನ ಗೈಂಟೋ ಬ್ಲೂ ಫಿಂಟುನ ಇದು ಒಂದು ಮೀನ ಆಗಿದ್ದು ಇದು ಸುಮಾರು 250 ಕೆಜಿ ತೂಕ ಹೊಂದಿರುತ್ತದೆ. ಇದು ಜಪಾನಿನಲ್ಲಿ ಮಾತ್ರ ದೊರೆಯುವ ಮೀನು ಆಗಿದ್ದು ಇದರ ಬೆಲೆ ಸುಮಾರು ಏನಿದ್ದರೂ ಬರೋಬ್ಬರಿ 48 ಕೋಟಿ ರೂಪಾಯಿ. ನಂಬಲು ಸ್ವಲ್ಪ ಕಷ್ಟವಾದರೂ ಇದು ಸತ್ಯ. ಈ ಮೀನು ಸುಲಭವಾಗಿ ಎಲ್ಲೂ ಸಿಗುವುದಿಲ್ಲ ವರ್ಷಕ್ಕೆ ಒಂದು ಸಿಗುವುದು ಕಷ್ಟ ವಂತೆ. ಈ ಕಾರಣದಿಂದಾಗಿ ಈ ಮೀನಿಗೆ ಇಷ್ಟೊಂದು ಬೆಲೆ ಇದೆ.

ಡೆನ್ಸೋಕಿ ವಾಟರ್ ಮೆಲನ್: ಇದು ಜಗತ್ತಿನ ಅತ್ಯಂತ ದುಬಾರಿ ಕಲ್ಲಂಗಡಿ ಹಣ್ಣು. ಇದು ಜಪಾನಿನ ದ್ವೀಪವೊಂದರಲ್ಲಿ ಮಾತ್ರ ಬೆಳೆಯುತ್ತದೆ. ಈ ಒಂದು ಕಲ್ಲಂಗಡಿ ಹಣ್ಣಿನ ಬೆಲೆ ಬರೋಬ್ಬರಿ ಏಳು ಲಕ್ಷ ರೂಪಾಯಿ. ನಂಬಲು ಸ್ವಲ್ಪ ಕಷ್ಟವೇ. ಆದರೆ ಇದು ಬೇರೆ ಎಲ್ಲ ಹಣ್ಣುಗಳಿಗೂ ಹೋಲಿಕೆ ಮಾಡಿದಾಗ ತುಂಬಾ ಸಿಹಿಯಾಗಿರುತ್ತದೆ. ಈ ಕಾರಣದಿಂದಾಗಿಯೇ ಕಲ್ಲಂಗಡಿ ಹಣ್ಣಿಗೆ ಎಲ್ಲಿಲ್ಲದ ಬೇಡಿಕೆ ಇದೆ.

ಆಯಾಮಿ ಸಿಮನೀ ಚಿಕನ್: ಕಡುಗಪ್ಪು ಬಣ್ಣದಲ್ಲಿ ಇರುವ ಈ ಚಿಕನ್ ನೋಡಿದವರಿಗೆ ಸಂಪೂರ್ಣವಾಗಿ ಬಣ್ಣ ಬಳಿದ ಹಾಗೇ ಕಾಣುತ್ತದೆ. ಜೀವನ ಇದರ ರೆಕ್ಕೆ ಪುಕ್ಕ ಮಾತ್ರವಲ್ಲದೆ ಇದರ ಮಾಂಸವು ಸಹ ಸಂಪೂರ್ಣವಾಗಿ ಕಪ್ಪು ಬಣ್ಣದಿಂದ ಕೂಡಿದೆ. ಈ ಕೋಳಿ ಬರಿ ಇಂಡೋನೇಷ್ಯಾ ದೇಶದಲ್ಲಿ ಮಾತ್ರ ಕಾಣ ಸಿಗುತ್ತದೆ. ಈ ಒಂದು ಕೋಳಿಯ ಬೆಲೆ ಬರೋಬ್ಬರಿ ಎರಡು ಸಾವಿರದ ಐದುನೂರು ಡಾಲರ್ ಅಂದರೆ 3,80,000 ರೂಪಾಯಿಈ ಚಿಕನ್ ಆರೋಗ್ಯಕ್ಕೆ ತುಂಬಾ ಒಳ್ಳೆಯದಂತೆ ಹೀಗಾಗಿ ಶ್ರೀಮಂತರು ಹೆಚ್ಚಾಗಿ ಕೋಳಿಯನ್ನು ತಿಂತಾರೆ ಬಡವರಿಗೆ ಇದೊಂದು ಎಟುಕದ ನಕ್ಷತ್ರ.

ಕೋಪಿ ಲುವಕ್ ಕಾಫಿ: ಬಹಳ ದುಬಾರಿಯ ಕಾಫಿ ಇದಾಗಿದೆ. ಇಷ್ಟೊಂದು ದುಬಾರಿ ಕಾಫಿ ಬಗ್ಗೆ ನಾವೆಲ್ಲೂ ಕೇಳಿರಲೂ ಸಾಧ್ಯವಿಲ್ಲ. ಕಾಫಿ ಬೆಲೆ 1,10,000 ರೂಪಾಯಿ. ಕಾಫಿಯನ್ನು ತಯಾರಿಸುವ ರೀತಿ ವಿಚಿತ್ರವಾಗಿದೆ. ಕಾಫಿ ಮಾಡುವ ರೀತಿಯನ್ನು ಕೇಳಿದರೆ ಯಾರು ಸಹ ಕುಡಿಯಲು ಇಷ್ಟಪಡುವುದಿಲ್ಲ. ಮೊದಲು ಈ ಕಾಫಿ ಹಣ್ಣನ್ನು ಅಂದ ಪ್ರಾಣಿ ತಿನ್ನುತ್ತದೆ ಪ್ರಾಣಿ ಕಾಫಿ ಹಣ್ಣುಗಳನ್ನು ತಿಂದು ಹಾಕಿದ ನಂತರ ಬೀಜಗಳನ್ನು ಸಂಗ್ರಹಿಸಲಾಗುತ್ತದೆ. ಸಂಗ್ರಹಿಸಿದ ಬೀಜಗಳನ್ನು ತೊಳೆದು ನಂತರ ಕಾಫಿ ತಯಾರಿಸಲಾಗುತ್ತದೆ.

ಮಸ್ತು ಟೆಕ್ ಮಶ್ರೂಮ್: ಒಂದು ಕೇಜಿ ಅಣಬೆ ಬೆಲೆ ಬರೋಬ್ಬರಿ ಒಂದೂವರೆ ಲಕ್ಷ. ಅಣಬೆಯನ್ನು ಜಪಾನ್ ಕೊರಿಯಾ ಹಾಗೂ ಚೈನೀಸ್ ಫುಡ್ ಗಳಲ್ಲಿ ಬಳಕೆ ಮಾಡಲಾಗುತ್ತದೆ. ಅಣಬೆ ಅಷ್ಟು ಸುಲಭದಲ್ಲಿ ದೊರೆಯುವುದಿಲ್ಲ ದಟ್ಟ ಕಾಡುಗಳಲ್ಲಿ ಅಣಬೆಯನ್ನು ಹುಡುಕಬೇಕಾಗುತ್ತದೆ. ಈ ಕಾರಣದಿಂದಾಗಿಯೇ ಅಣಬೆ ಬೆಲೆ ಇಷ್ಟೊಂದು ದುಬಾರಿ ಪ್ರಮಾಣದಲ್ಲಿದೆ.

ಡೋಂಕಿ ಚೀಸ್: ಸಾಮಾನ್ಯವಾಗಿ ಎಲ್ಲರೂ ಪನ್ನೀರನ್ನು ಸೇವಿಸಿರುತ್ತಾರೆ. ಪನ್ನೀರ್ ಹಾಲಿನಿಂದ ತಯಾರಾಗುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಕತ್ತೆಯ ಹಾಲಿನಿಂದ ತಯಾರಿಸಿದಂತಹ ಪನ್ನೀರಿನ ಬಗ್ಗೆ ನಮಗೆ ಅಷ್ಟೊಂದು ತಿಳಿದಿರುವುದಿಲ್ಲ. ಕಥೆಯಿಂದ ತಯಾರಿಸಿದ ಪನ್ನೀರಿನ ಬೆಲೆ ಬರೋಬ್ಬರಿ ಒಂದು ಕೆಜಿಗೆ 1 ಲಕ್ಷ ರುಪಾಯಿ. ಪನ್ನೀರ್ ಅನ್ನು ಹೆಚ್ಚಾಗಿ ಶುಗರ್ ಸಮಸ್ಯೆ ಇರುವವರು ತಿನ್ನುತ್ತಾರೆ.

ಬೆನ್ನೊಟ್ಟೆ ಪೋಟೆಟೋ ಆಲೂಗಡ್ಡೆ ಕೇವಲ ಫ್ರಾನ್ಸ್ ನಲ್ಲಿ ಮಾತ್ರ ದೊರೆಯುತ್ತದೆ. ಈ ಆಲೂಗೆಡ್ಡೆಯ ಬೆಲೆ ಒಂದು ಕೆಜಿಗೆ ಬರೋಬ್ಬರಿ ಒಂದು ಲಕ್ಷದ ಮೂವತ್ತು ಸಾವಿರ ರೂಪಾಯಿ. ಇದನ್ನು ಫ್ರಾನ್ಸಿನ ಒಂದು ಪ್ರದೇಶದಲ್ಲಿ ಮಾತ್ರ ಬೆಳೆಯಲಾಗುತ್ತಿದೆ ಬೇರೆ ಎಲ್ಲಿಯೂ ಇದು ಬೆಳವಣಿಗೆ ಆಗುವುದಿಲ್ಲ. ಇಷ್ಟು ನಮ್ಮ ಜಗತ್ತಿನಲ್ಲಿ ಇರುವಂತಹ ದುಬಾರಿ ಬೆಲೆಯ ಆಹಾರ ಪದಾರ್ಥಗಳು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!