ಡ್ರೈ ಫುಡ್ಸ್ ಸೇವನೆಯಿಂದ ಶರೀರಕ್ಕೆ ಆಗುವ ಲಾಭವೇನು ತಿಳಿಯಿರಿ

0 58

ಯಾವುದಕ್ಕೆ ನಟ್ಸ್ ಎನ್ನುವರು. ನಟ್ಸ್ ಸೇವಿಸುವುದರಿಂದ ಪ್ರಯೋಜನಗಳೇನು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಬಾದಾಮಿಯಲ್ಲಿ ವಿಟಮಿನ್ ಇ ಇದೆ. ಮೀನ ಖಂಡದ ನೋವು ಬಂದರೆ ರಾತ್ರಿ 10-15 ಬಾದಾಮಿಯನ್ನು ರಾತ್ರಿ ನೆನೆಸಿಟ್ಟು ಬೆಳಗ್ಗೆ ತಿನ್ನುವುದರಿಂದ ಮೀನ ಖಂಡದ ನೋವು ಕಡಿಮೆಯಾಗುತ್ತದೆ. 15-20 ಗ್ರಾಂ ನಟ್ಸ್ ತಿನ್ನಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಗೋಡಂಬಿಯನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ ಇದು ಸುಳ್ಳು. 7-8 ಗೋಡಂಬಿ ತಿನ್ನಬಹುದು. ವಾಲನಟ್ ಸೇವಿಸುವುದರಿಂದ ಮೆದುಳಿಗೆ ಒಳ್ಳೆಯದು ನೆನಪಿನ ಶಕ್ತಿ, ಏಕಾಗ್ರತೆ ಹೆಚ್ಚಾಗುತ್ತದೆ. ಟೆನ್ಷನ್ ಕಡಿಮೆ ಮಾಡುತ್ತದೆ, ಹೃದಯ, ಚರ್ಮಕ್ಕೆ ಒಳ್ಳೆಯದು. ನಟ್ಸ್ ತಿನ್ನುವುದರಿಂದ ಆಕ್ಟೀವ್ ಆಗಿರಬಹುದು. ದಿನಕ್ಕೆ 1-2 ವಾಲ್ ನಟ್ ತಿನ್ನಬಹುದು. ಸಿಪ್ಪೆ ಸಹಿತ ವಾಲನಟ್ ಬಳಸಬೇಕು. ಇದರಲ್ಲಿ ಮೆಗ್ನೀಷಿಯಂ, ಜಿಂಕ್ ಅಂಶಗಳು ಇವೆ. ಕೂದಲಿನ ಆರೋಗ್ಯಕ್ಕೆ ವಾಲನಟ್ ಒಳ್ಳೆಯದು. ಪ್ರತಿದಿನ 50 ಗ್ರಾಂ ವಾಲನಟ್ ತಿನ್ನಬಹುದು.

ಸೊಲ್ಟೆಡ್ ಪಿಸ್ತಾ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಅನ್ ಸೊಲ್ಟೆಡ್ ಪಿಸ್ತಾ ತಿನ್ನುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಶೇಂಗಾವನ್ನು ಬೇಯಿಸಿ, ನೆನೆಸಿ ತಿನ್ನಬಹುದು. ಶೇಂಗಾ ಎಣ್ಣೆಯು ಆರೋಗ್ಯಕ್ಕೆ ಒಳ್ಳೆಯದು. 50 ಗ್ರಾಂ ಪ್ರತಿದಿನ ನಟ್ಸ್ ತಿನ್ನುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಒಳ್ಳೆ ಕೊಲೆಸ್ಟ್ರಾಲ್ ಹೆಚ್ಚಿಸಿ, ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ, ಪೋಷಕಾಂಶ ಸಿಗುತ್ತದೆ. ಅಮೆರಿಕದಲ್ಲಿ ಅತಿ ಹೆಚ್ಚು ವರ್ಷ ಬದುಕುತ್ತಿರುವ ಸಮುದಾಯವನ್ನು ಹುಡುಕಿದರು ಸೆವೆನ್ ಡೆ ಅಡ್ವೆಂಚರ್ ಎನ್ನುವ ಕ್ರಿಶ್ಚಿಯನ್ ಸಮುದಾಯ ಸಿಕ್ಕಿತು. ಇವರ ಆಹಾರದ ಬಗ್ಗೆ ಸ್ಟಡಿ ಮಾಡಿದಾಗ ಅವರು ಸಸ್ಯಾಹಾರಿಗಳಾಗಿದ್ದು ಬೆಣ್ಣೆ, ನಟ್ಸ್ ಗಳನ್ನು ಸೇವಿಸುತ್ತಿದ್ದರು. ಆಯಸ್ಸು ಹೆಚ್ಚಾಗಲು ನಟ್ಸ್ ತಿನ್ನಬೇಕು. ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ.

Leave A Reply

Your email address will not be published.