ಮುಂಬೈ ಅಥವಾ ಡೆಲ್ಲಿ ವಿರುದ್ಧ ಫೈನಲ್ ಆಡಲಿದೆ ಈ ತಂಡ

0 2

ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ನಿರ್ಣಾಯಕ ಹಂತವನ್ನು ತಲುಪಿದ್ದು, ಭಾರತ ತಂಡದ ಮಾಜಿ ಆಲ್‌ರೌಂಡರ್‌ ಯುವರಾಜ್‌ ಸಿಂಗ್ ಡೆಲ್ಲಿ ಅಥವಾ ಮುಂಬೈ ವಿರುದ್ಧ ಫೈನಲ್‌ ಆಡುವ ತಂಡವನ್ನು ಹೆಸರಿಸಿದ್ದಾರೆ. ಅವರು ಈ ಟೀಮ್ ಗಳನ್ನಿ ಹೆಸರಿಸಲು ಕಾರಣ ಏನು ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಡೆಲ್ಲಿ ವಿರುದ್ಧ ಪಂಜಾಬ್‌ ಸೆಣಸಲಿದ್ದು , ಕಿಂಗ್ಸ್ ಇಲೆವೆನ್‌ ಪಂಜಾಬ್‌ ಮುಂಬೈ ವಿರುದ್ಧ ಎರಡನೇ ಸೂಪರ್ ಓವರ್‌ನಲ್ಲಿ ಗೆಲುವನ್ನು ಸಾಧಿಸಿತ್ತು. ಯುವರಾಜ್‌ ಸಿಂಗ್‌ ಅವರು ಪಂಜಾಬ್‌ ತಂಡವು ಫೈನಲ್ಸ್ ನಲ್ಲಿ ಡೆಲ್ಲಿ ಅಥವಾ ಮುಂಬೈ ವಿರುದ್ಧ ಆಡಲಿದೆ ಎಂದು ಹೇಳಿದ್ದಾರೆ. ಪ್ರಸಕ್ತ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಆಡಿರುವ 9 ಪಂದ್ಯಗಳಿಂದ ಮೂರು ಹಣಾಹಣಿಗಳಲ್ಲಿ ಗೆದ್ದಿರುವ ಕಿಂಗ್ಸ್ ಇಲೆವೆನ್‌ ಪಂಜಾಬ್‌ , ಇತರೆ ತಂಡಗಳನ್ನು ಹಿಂದಿಕ್ಕಿ ಫೈನಲ್‌ ಗೆ ತಲುಪಲಿದೆ ಎಂದು ಭಾರತ ತಂಡದ ಮಾಜಿ ಆಲ್‌ರೌಂಡರ್‌ ಯುವರಾಜ್ ಸಿಂಗ್‌ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 2020ರ ಐಪಿಎಲ್‌ ಟೂರ್ನಿಯ ಅಂಕಪಟ್ಟಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್‌ ಸದ್ಯ ಆರನೇ ಸ್ಥಾನದಲ್ಲಿದೆ. ಈ ಹಂತದಲ್ಲಿ ನೋಡುವುದಾದರೆ, ಕಿಂಗ್ಸ್ ಇಲೆವೆನ್‌ ಪಂಜಾಬ್‌ ಪ್ಲೇ ಆಫ್‌ಗೆ ಅರ್ಹತೆ ಪಡೆಯುವ ಸಾಧ್ಯತೆ ಸ್ವಲ್ಪ ಕಠಿಣವಾಗಿದೆ. ಆದರೆ, ಯುವರಾಜ್‌ ಸಿಂಗ್‌ ಕ್ರಮವಾಗಿ 6 ಹಾಗೂ 5 ಪಂದ್ಯಗಳನ್ನು ಗೆದ್ದಿರುವ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತಾ ನೈಟ್‌ ರೈಡರ್ಸ್ ತಂಡಗಳನ್ನು ಬಿಟ್ಟು, ಪಂಜಾಬ್‌ ತಂಡವನ್ನು ಬೆಂಬಲಿಸಿದ್ದಾರೆ. ರಾಹುಲ್‌ ಪಡೆ ಪ್ಲೇ ಆಫ್‌ ಅಲ್ಲದೆ, ಫೈನಲ್‌ಗೆ ಹೋಗಲಿದೆ ಎಂಬುದು ಯುವರಾಜ್ ಸಿಂಗ್ ಅವರ ಅಭಿಮತ.

ಭಾನುವಾರ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ವೇಳೆ ಯುವರಾಜ್‌ ಸಿಂಗ್‌ ಈ ವಿಷಯವನ್ನು ತಿಳಿಸಿದ್ದಾರೆ. ಅಲ್ಲದೆ, ಹಾಲಿ ಚಾಂಪಿಯನ್ಸ್ ವಿರುದ್ಧ ಅದ್ಭುತ ಹೊಡೆತಗಳನ್ನು ಹೊಡೆದ ನಿಕೋಲಸ್‌ ಪೂರನ್‌ ಅವರನ್ನು ಶ್ಲಾಘನೇ ಕೂಡಾ ಮಾಡಿದ್ದಾರೆ. ಇದರ ನಡುವೆ ಡೆಲ್ಲಿ ಕ್ಯಾಪಿಟಲ್ಸ್‌ ಅಥವಾ ಮುಂಬೈ ಇಂಡಿಯನ್ಸ್ ಮತ್ತೊಂದು ತುದಿಯಲ್ಲಿ ಫೈನಲ್‌ ಹಣಾಹಣಿಯಲ್ಲಿ ಆಡಲಿದೆ ಎಂದು ಕೂಡಾ ಹೇಳಿದರು. ಹಾಗೆಯೇ ಗೇಮ್‌ ಚೇಂಜರ್‌ ನಿಕೋಲಸ್‌ ಪೂರನ್‌ ಬ್ಯಾಟ್‌ ಅನ್ನು ಸುಂದರವಾಗಿ ಬೀಸುತ್ತಿದ್ದಾರೆ. ನನ್ನ ಒಳಗೆ ಇರುವ ಆಟವನ್ನು ನೆನಪಿಸಿದ್ದಾರೆ. ಗೇಮ್‌ ಆನ್‌! ಕಿಂಗ್ಸ್ ಇಲೆವೆನ್‌ ಪಂಜಾಬ್‌ ಪ್ಲೇಆಫ್‌ಗೆ ತಲುಪಲಿದೆ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಅಥವಾ ಮುಂಬೈ ಇಂಡಿಯನ್ಸ್ ಯಾವುದಾದರೂ ಒಂದು ತಂಡದ ವಿರುದ್ಧ ಪಂಜಾಬ್ ಫೈನಲ್‌ನಲ್ಲಿ ಸೆಣಸಲಿದೆ. ಎಂದು ಯುವರಾಜ್ ಸಿಂಗ್ ಅವರು ಟ್ವೀಟ್‌ ಮಾಡಿದ್ದಾರೆ. ಸದ್ಯ ಡೆಲ್ಲಿ ಕ್ಯಾಪಿಟಲ್ಸ್ 14 ಅಂಕಗಳೊಂದಿಗೆ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನದಲ್ಲಿದೆ, ಹಾಗಾಗಿ ಪ್ಲೇ ಆಫ್‌ ಅರ್ಹತೆ ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಬಹುದು. ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಕ್ರಮವಾಗಿ ಎರಡು ಮತ್ತು ಮೂರನೇ ಕ್ರಮಾಂಕದಲ್ಲಿದೆ. ಕೋಲ್ಕತಾ ನೈಟ್‌ ರೈಡರ್ಸ್ ನಾಲ್ಕನೇ ಸ್ಥಾನದಲ್ಲಿದೆ. ಡಬಲ್ ಸೂಪರ್ ಓವರ್ ಪಡೆದಾಗಲೂ ಅದೃಷ್ಟ ಎನ್ನುವುದು ಪಂಜಾಬ್ ತಂಡದ ಪರವಾಗಿಯೇ ಇದ್ದಿತ್ತು. ಈ ನಿಯಮದ ಪ್ರಕಾರ ಮುಂಬೈ ಇಂಡಿಯನ್ಸ್ ಗೆಲ್ಲುತ್ತಿತ್ತು. ಸನ್‌ರೈಸರ್ಸ್ ಹೈದರಾಬಾದ್‌, ಕಿಂಗ್ಸ್ ಇಲೆವೆನ್‌ ಪಂಜಾಬ್‌, ಚೆನ್ನೈ ಸೂಪರ್‌ ಕಿಂಗ್ಸ್ ಹಾಗೂ ರಾಜಸ್ಥಾನ್‌ ರಾಯಲ್ಸ್ ಕೊನೆಯ ನಾಲ್ಕು ಸ್ಥಾನಗಳನ್ನು ಅಲಂಕರಿಸಿವೆ. ಈ ವರ್ಷದ ಐಪಿಎಲ್‌ನ ಫೈನಲ್‌ಗೆ ಯಾವ ತಂಡಗಳು ಸ್ಥಾನ ಪಡೆಯುತ್ತವೆ ಎಂಬುದನ್ನು ಕಾದು ನೋಡಬೇಕಿದೆ. ಆದಾಗ್ಯೂ ಯುವರಾಜ್ ಸಿಂಗ್ ಕಿಂಗ್ಸ್ ಇಲೆವೆನ್ ಪಂಜಾಬ್ ಅನ್ನು ಫೈನಲ್‌ ತಲುಪುವ ತಂಡಗಳ ಪಟ್ಟಿಗೆ ಸೇರಿಸಿರುವುದು ಆಶ್ಚರ್ಯ ಮೂಡಿಸಿದೆ.

ನಾವು ಪ್ರಕಟ ಮಾಡುವ ಯಾವುದೇ ಲೇಖನದಲ್ಲಿನ ಮಾಹಿತಿ ನಮ್ಮ ಸ್ವಂತದ್ದಾಗಿರುವುದಿಲ್ಲ. ಸಂಗ್ರಹಿತ ಮಾಹಿತಿಯನ್ನು ನಿಮ್ಮ ಮುಂದೆ ಇಡುತ್ತೇವೆ‌. ಇವುಗಳಿಂದ ಮೂಡುವ ಯಾವುದೇ ರೀತಿಯ ಭಿನ್ನಾಭಿಪ್ರಾಯ, ಗೊಂದಲಗಳಿಗೆ ನಾವು ಹೊಣೆಗಾರರಾಗಿರುವುದಿಲ್ಲ.

Leave A Reply

Your email address will not be published.