ಸೌತೆಕಾಯಿ ತಿನ್ನೋದರಿಂದ ನಮ್ಮ ದೇಹಕ್ಕೆ ಆರೋಗ್ಯಕ್ಕೆ ಬಹಳ ಒಳ್ಳೆಯದು ಎನ್ನುವುದು ತುಂಬಾ ಜನರಿಗೆ ತಿಳಿದಿರುವ ವಿಷಯವೇ. ಡಯಟ್ ಮಾಡುವವರು ತಮ್ಮ ಡಯಟ್ ನಲ್ಲಿ ಸೌತೆ ಕಾಯಿಯನ್ನು ಬಳಸುತ್ತಾರೆ. ಸೌತೆಕಾಯಿ ನಮ್ಮ ಆರೋಗ್ಯಕ್ಕೆ ಬಹಳವೇ ಒಳ್ಳೆಯದು. ಆದರೆ ಒಳ್ಳೆಯದು ಅಂತ ಅತಿಯಾಗಿ ಬಳಸಿದರೆ ಅನಾರೋಗ್ಯಕ್ಕೆ ಮೂಲವಾಗಿರುವುದು ಹೌದು. ಕೆಲವರು ಡಯಟ್ ಎನ್ನುವ ನೆಪದಲ್ಲಿ ದಿನಕ್ಕೆ ಎಂಟರಿಂದ 10 ಸವತೆಕಾಯಿಯನ್ನು ತಿನ್ನುತ್ತಾರೆ. ಅದರ ಅವಶ್ಯಕ್ಕಿಂತ ಹೆಚ್ಚಿಗೆ ಸೌತೆಕಾಯಿಯನ್ನು ತಿನ್ನುವ ಕೆಲವೊಂದು ಸಮಯದಲ್ಲಿ ಅತಿಯಾಗಿ ಸೇವಿಸಿದರೆ, ಅಮೃತವೂ ವಿಷ ಆಗುವುದು ಎನ್ನುವ ಮಾತಿನಂತೆ ಈ ಸೌತೆಕಾಯಿಯನ್ನು ಅತಿಯಾಗಿ ಸೇವಿಸಿದಾಗ ಅದು ವಿಷವಾಗಿ ಪರಿಣಮಿಸುವುದು.

ರಾತ್ರಿಯ ಸಮಯದಲ್ಲಿ ಎಂದಿಗೂ ನಾವು ಸೌತೆಕಾಯಿಯನ್ನು ಸೇವಿಸಬಾರದು. ಬೆಳಗಿನ ಸಮಯದಲ್ಲಿ ಸೌತೆಕಾಯಿಯನ್ನು ಸೇವಿಸಿದರೆ ಮಾತ್ರ ನಮ್ಮ ಆರೋಗ್ಯಕ್ಕೆ ಬಹಳಷ್ಟು ಒಳ್ಳೆಯದು. ಮಧ್ಯಾಹ್ನದ ಸಮಯದಲ್ಲಿ ಸಹ ಸವತೆಕಾಯಿಯನ್ನು ಸೇವಿಸಬಹುದು ಆದರೆ ರಾತ್ರಿ ಸಮಯದಲ್ಲಿ ಸೌತೆಕಾಯಿಯನ್ನು ಸೇವಿಸುವುದು ಮಾತ್ರ ಬಹಳಷ್ಟು ಹಾನಿಕರ ವಾಗಿರುತ್ತದೆ.

ಸೌತೆಕಾಯಿಯಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಕುಕುರಿ ಪೀಟನ್ ಎಂಬ ವಿಷ ಅಂಶ ಇರುತ್ತದೆ. ಹಾಗಾಗಿ ನಾವು ಅಗತ್ಯಕ್ಕಿಂತ ಹೆಚ್ಚು ಸವತೆಕಾಯಿಯನ್ನು ಸೇವಿಸಿದಾಗ ನಮ್ಮ ದೇಹದಲ್ಲಿ ಟ್ಯಾಕ್ಷಿನ ಅಂಶ ಸಂಗ್ರಹವಾಗುತ್ತದೆ. ಇದರಿಂದ ನಮ್ಮ ಲಿವರ್ ಹಾಗೂ ಮೂತ್ರಪಿಂಡಗಳು ಊತ ಬರುವಂತಹ ಸಾಧ್ಯತೆಗಳು ಜಾಸ್ತಿ ಇರುತ್ತದೆ. ಹಾಗಾಗಿ ಸೌತೆಕಾಯಿ ನಮ್ಮ ಆರೋಗ್ಯಕ್ಕೆ ಒಳ್ಳೆಯದೇ ಆದರೂ ತನ್ನ ಇತಿಮಿತಿಯಲ್ಲಿ ಸೇವಿಸುವುದು ಒಳ್ಳೆಯದು.

ಸೌತೆಕಾಯಿ ಒಂದು ತಣ್ಣಗಿನ ಪದಾರ್ಥ ಆಗಿರುವುದರಿಂದ ನಮಗೆ ಕಫ ಶೀತ ನೆಗಡಿ ಅಂತಹ ಸಮಸ್ಯೆ ಇದ್ದಾಗ ಸೌತೆಕಾಯಿಯನ್ನು ಸೇವಿಸಬಾರದು. ಸೌತೆಕಾಯಿಯನ್ನು ಅತಿಯಾಗಿ ತಿನ್ನುವುದರಿಂದ ನಮ್ಮ ಆರೋಗ್ಯದ ಮೇಲೆ ಅಡ್ಡ ಪರಿಣಾಮವನ್ನು ಬೀರುತ್ತದೆ ಹಾಗಾಗಿ ಸವತೆಕಾಯಿಯನ್ನು ಮಿತಿಯಲ್ಲಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಹಾಗಾಗಿ ಯಾರೇ ಆಗಿರಲಿ ಯಾವುದೇ ಕಾರಣಕ್ಕೂ ರಾತ್ರಿಯ ಸಮಯದಲ್ಲಿ ಸೌತೆಕಾಯಿಯನ್ನು ಸೇವಿಸಬಾರದು.

Leave a Reply

Your email address will not be published. Required fields are marked *