ಬಾರ್ಲಿ ನೀರು ಇದರ ಸೇವನೆಯಿಂದ ನಮಗೆ ಆಗುವಂತಹ ಹಲವು ಆರೋಗ್ಯಕರ ಲಾಭಗಳ ಕುರಿತಾಗಿ ತಿಳಿದುಕೊಳ್ಳೋಣ. ಬಾರ್ಲಿ ನೀರನ್ನು ಕುಡಿಯುವುದರಿಂದ ನಮ್ಮ ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ಇದ್ದರೆ ಕಡಿಮೆ ಆಗುತ್ತದೆ. ಹೆಚ್ಚಿನದಾಗಿ ಡಾಕ್ಟರ್ ಗಳು ಸಹ ಈ ಸಮಸ್ಯೆಗೆ ಇದೆ ಸಲಹೆಯನ್ನು ನೀಡುತ್ತಾರೆ. ನಮ್ಮ ದೇಹದಲ್ಲಿ ಸೇರಿಕೊಂಡ ಅನಗತ್ಯವಾದ ವಿಷದ ಅಂಶಗಳನ್ನು ಹೊರ ಹಾಕಲು ಈ ಬಾರ್ಲಿ ನೀರು ಸಹಾಯಕಾರಿ ಆಗುತ್ತದೆ. ಬಾರ್ಲಿಯಲ್ಲಿ ಇರುವಂತಹ ವಿಟಾ ಗ್ಲುಕೋನ್ ಅಂಶವು ನಮ್ಮ ದೇಹದಲ್ಲಿ ಇರುವಂತಹ ವಿಷಕಾರಿ ಅಂಶಗಳನ್ನು ಹೊರ ಹಾಕಲು ಸಹಾಯ ಮಾಡುತ್ತದೆ. ಉರಿ ಮೂತ್ರ ಹಾಗೂ ಮೂತ್ರದ ಸೋಂಕು ಹಾಗೂ ಮೂತ್ರದ ಮುಂತಾದ ಸಮಸ್ಯೆಯಿಂದ ಬಳಲುತ್ತಾ ಇರುವವರಿಗೆ ಬಾರ್ಲಿ ನೀರು ತುಂಬಾ ಪ್ರಯೋಜನಕಾರಿ. ಮೂತ್ರದ ಸೋಂಕು ಕಡಿಮೆ ಆಗುವವರೆಗೂ ಪ್ರತೀ ದಿನ ಖಾಲಿ ಹೊಟ್ಟೆಯಲ್ಲಿ ಬಾರ್ಲಿ ನೀರನ್ನು ಸೇವಿಸುವುದು ಒಳ್ಳೆಯದು.

ಉಷ್ಣದಿಂದ ಆಗುವ ಸಮಸ್ಯೆಗಳು, ಅಜೀರ್ಣದ ಸಮಸ್ಯೆಗಳು, ಗ್ಯಾಸ್ಟ್ರಿಕ್ ಮುಂತಾದ ಸಮಸ್ಯೆಗಳಿಗೂ ಸಹ ಬಾರ್ಲಿ ನೀರನ್ನು ಸೇವಿಸುವುದು ಒಳ್ಳೆಯದು ಎಂದು ಆಯುರ್ವೇದದಲ್ಲಿ ತಿಳಿಸಲಾಗಿದೆ. ಅದಲ್ಲದೇ ಮಲಬದ್ಧತೆ, ಬೇಧಿ ಮುಂತಾದ ಸಮಸ್ಯೆಗಳು ಇದ್ದಾಗಲೂ ಸಹ ಬಾರ್ಲಿ ನೀರನ್ನು ಸೇವಿಸಬಹುದು ಎಂದು ಹೇಳಲಾಗಿದೆ. ಬಾರ್ಲಿ ನೀರು ದೇಹದಲ್ಲಿ ಜೀರ್ಣ ಕ್ರಿಯೆ ಸರಿಯಾಗಿ ಆಗುವಂತೆ ನೋಡಿಕೊಳ್ಳುತ್ತದೆ ಈ ಮೂಲಕ ದೇಹದಲ್ಲಿರುವ ಬೇಡವಾದ ಅನಗತ್ಯವಾದ ಕೊಬ್ಬಿನ ಅಂಶವನ್ನು ಕರಗಿಸಲು ಸಹಾಯ ಮಾಡುವುದರಿಂದ ಬಾರ್ಲಿ ನೀರು ತೂಕ ಇಳಿಸಲು ಸಹ ಸಹಾಯ ಮಾಡುತ್ತದೆ.

By

Leave a Reply

Your email address will not be published. Required fields are marked *