ಮನೇಲಿ ಇದ್ದು ಬಾಯಿ ಕೆಟ್ಟಿದ್ದರೆ ಈ ತರ ರುಚಿಯಾದ ಚಾಟ್ಸ್ ಮಾಡಿ ನೋಡಿ ಸುಲಭವಾಗಿ

0 1

ಸುಲಭವಾಗಿ ಶೇಂಗಾಬೀಜ ಇಂದ ರುಚಿಕರವಾಗಿ ಸಂಜೆ ಟೈಮಿಗೆ ಚಾಟ್ಸ್ ಮಾಡುವುದು ಹೇಗೆ ಅನ್ನೋದನ್ನ ತಿಳಿದುಕೊಳ್ಳೋಣ.

ಶೇಂಗಾ ಬೀಜದ ಚಾಟ್ಸ್ ಮಾಡಲು ಬೇಕಾಗಿರುವ ಸಾಮಾಗ್ರಿಗಳು :- ಶೇಂಗಾ ಒಂದು ಕಪ್, ಈರುಳ್ಳಿ೧, ಟೊಮೆಟೊ 1, ಕೊತ್ತಂಬರಿ ಸೊಪ್ಪು, ಉಪ್ಪು, ಕೆಂಪು ಮೆಣಸಿನ ಪುಡಿ 1 ಚಮಚ
ಗರಂ ಮಸಾಲಾ ಪುಡಿ ಅರ್ಧ ಚಮಚ, ಚಾಟ್ ಮಸಾಲ 1 ಚಮಚ

ಮಾಡುವ ವಿಧಾನ :ಮೊದಲು ಒಂದು ಬೌಲಿಗೆ ಒಂದು ಕಪ್ ಶೇಂಗಾ ಬೀಜವನ್ನು ತೆಗೆದುಕೊಂಡು ಅದನ್ನು ಎರಡು ಮೂರು ಬಾರಿ ಚೆನ್ನಾಗಿ ತೊಳೆದುಕೊಳ್ಳಬೇಕು. ನಂತರ ಮತ್ತಷ್ಟು ನೀರು ಹಾಕಿ ಎರಡು ಮೂರು ತಾಸು ನೆನೆಯಲು ಬಿಡಬೇಕು. ನಂತರ ನೆನೆದ ಶೇಂಗಾ ಬೀಜವನ್ನು ಒಂದು ಕುಕ್ಕರ್ ಗೆ ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಸ್ವಲ್ಪ ನೀರನ್ನು ಹಾಕಿ ಮಧ್ಯಮ ಉರಿಯಲ್ಲಿ ಇಟ್ಟು ಮೂರರಿಂದ ನಾಲ್ಕು ವಿಸಿಲ್ ಕೂಗಿಸಿ ಕೊಳ್ಳಬೇಕು. ಬೇಯಿಸಿದ ಶೇಂಗಾವನ್ನು ನೀರು ಬಸಿದುಕೊಂಡು ಇನ್ನೊಂದು ಬೌಲಿಗೆ ಹಾಕಿಕೊಳ್ಳಬೇಕು. ನಂತರ ಇದಕ್ಕೆ 1 ರಿಂದ 1 ವರೆ ಟೀ ಸ್ಪೂನ್ ನಷ್ಟು ಕೆಂಪು ಮೆಣಸಿನ ಪುಡಿ ಹಾಗೂ 1 ಸ್ಪೂನ್ ನಷ್ಟು ಚಾಟ್ ಮಸಾಲ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಇದಕ್ಕೆ ಚಿಕ್ಕದಾಗಿ ಕಟ್ ಮಾಡಿಕೊಂಡಂತಹ ಈರುಳ್ಳಿ ಟೊಮೆಟೋ ಹಾಗೂ ಕೊತ್ತಂಬರಿ ಸೊಪ್ಪನ್ನು ಹಾಕಿ ಮತ್ತೆ ಮಿಕ್ಸ್ ಮಾಡಬೇಕು. ರುಚಿಕರವಾದ ಶೇಂಗಾಬೀಜ ಚಾಟ್ಸ್ ರೆಡಿಯಾಗಿರುತ್ತೆ. ಸಂಜೆ ಹೊತ್ತಿನಲ್ಲಿ ಕಾಫಿ ಆಯ್ತಾ ಟೀ ಜೊತೆಗೆ ಹಾಗೂ ಮಕ್ಕಳಿಗೆ ಕೂಡ ಇದನ್ನು ಸವಿಯಲು ಕೊಡಬಹುದು.

Leave A Reply

Your email address will not be published.