ಓದಿದ್ದನ್ನ ನೆನಪಲ್ಲಿ ಇಟ್ಟುಕೊಳ್ಳುವುದು ಹೇಗೆ? ಓದಿದ್ದನ್ನು ಮರೆಯದೇ ನೆನೆಪಿನಲ್ಲಿ ಇಟ್ಟುಕೊಳ್ಳುವುದು ಬರೀ ಮಕ್ಕಳಿಗೆ ಮಾತ್ರ ಅನ್ವಯ ಆಗುವುದಲ್ಲ. ದೊಡ್ಡವರಿಗೂ ಸಹ ಇದು ಅನ್ವಯ ಆಗುತ್ತದೆ ದೊಡ್ದ ದೊಡ್ಡ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕಟ್ಟಿದಾಗ ಓದಿದ್ದನ್ನು ನೆನೆಪಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯ. ಕೆಲವರಿಗೆ ಒಂದೆರಡು ಬಾರಿ ಓದಿದರೂ ಸಹ ನೆನಪಲ್ಲಿ ಇರುತ್ತೆ ಇನ್ನು ಕೆಲವರಿಗೆ ಎಷ್ಟೇ ಕಷ್ಟ ಪಟ್ಟು ಓದಿದರೂ ನೆನಪಲ್ಲಿ ಇಟ್ಟುಕೊಳ್ಳುವುದು ಕಷ್ಟ. ಕೆಲವರಿಗೆ ಮನೆಯಲ್ಲಿ ಓದಿಕೊಳ್ಳುವುದು ಹಲವಾರು ಸಮಸ್ಯೆಗಳಿಂದ ಅಸಾಧ್ಯವಾದ ಮಾತು. ಎಷ್ಟೋ ಜನರಿಗೆ ತಾವು ಏನಾದರೂ ಸಾಧನೆ ಮಾಡಬೇಕು ಅನ್ನೋ ಆಸೆ ಇರತ್ತೆ ಆದರೆ ಓದೋಕೆ ಸಮಯ ಸಿಗದೆ ಅವರ ಕನಸುಗಳು ಕನಸಾಗಿಯೇ ಉಳಿಯುತ್ತದೆ. ಏನೇ ಕಷ್ಟ ಎಂತಹದ್ದೇ ಕಠಿಣ ಪರಿಸ್ಥಿತಿ ಇದ್ದರೂ ಸಿಕ್ಕಂತಹ ಕಡಿಮೆ ಸಮಯದಲ್ಲಿಯೇ ಹೇಗೆ ಓದಿಕೊಳ್ಳುವುದು ಮತ್ತು ಓದಿದ್ದನ್ನ ನೆನಪಲ್ಲಿ ಇಟ್ಟುಕೊಳ್ಳೋದು ಹೇಗೆ ಅನ್ನೋದನ್ನ ನೋಡೋಣ.

ಪ್ರ್ಯಾಕ್ಟೀಸ್ ಮೇಕ್ಸ್ ಪೆರ್ಫೆಕ್ಟ್ ಓದೋವಾಗ ರಿವಿಸನ್ ತುಂಬಾ ಮುಖ್ಯ ಜಗತ್ತಿನ ಎಂತದ್ದೇ ಮೇಧಾವಿ ಆಗಿದ್ದರೂ ಸಹ ಕೊನೆಗೆ ಅವನಲ್ಲಿ ಓದಿದ್ದು ನೆನಪಿನಲ್ಲಿ ಇರುವುದು ಕೇವಲ 21% ಮಾತ್ರ. ಈ ಮೂಲಕ ಮರೆವು ಎಲ್ಲರಿಗೂ ಸಹಜ ಎನ್ನುವುದು ತಿಳಿಯುತ್ತೆ. ಹಾಗಾದ್ರೆ ಓದಿದ್ದು ಮರೆಯದೇ ಇರೋಕೆ ಏನು ಮಾಡಬಹುದು? ಈ ಫಾರ್ಮಲ Q111 ಅಂದ್ರೆ ಎಫರ್ಟ್, ಟೈಮ್, ಮಾರ್ಕ್ಸ್ ನಾವಿಲ್ಲಿ ಜಾಸ್ತಿ ಎಫರ್ಟ್ ಹಾಕಿ ಹೆಚ್ಚು ಸಮಯ ಓದಿದಾಗ ಹೆಚ್ಚು ಮಾರ್ಕ್ಸ್ ಬರತ್ತೆ. ಕಡಿಮೆ ಸಮಯದಲ್ಲಿ ಕಡಿಮೆ ಎಫರ್ಟ್ ಹಾಕಿ ಓದಿಕೊಂಡು ಹೆಚ್ಚು ಮಾರ್ಕ್ಸ್ ಬರತ್ತೆ ಅಂತ ನಿರೀಕ್ಷಿಸುವುದು ಸರಿಯಲ್ಲ. ಇನ್ನು ಕೆಲವರಿಗೆ ಎಫರ್ಟ್ ಜಾಸ್ತಿ ಹಾಕಿ ಹೆಚ್ಚು ಸಮಯ ಓದಿದಾಗಲೂ ಮಾರ್ಕ್ಸ್ ಮಾತ್ರ ಕಡಿಮೆ ಬರತ್ತೆ. ಯಾಕೆ ಹೀಗೆ ಆಗತ್ತೆ? ಅನ್ನೋ ಪ್ರಶ್ನೆ ಎಲ್ಲರಿಗೂ ಇದ್ದೇ ಇರುತ್ತೆ. Q111 ಅಂದ್ರೆ ಮೊದಲಿಗೆ Q- ಕ್ವಿಕ್ ರಿವಿಸನ್ ಅಂದ್ರೆ, ನಾವು ಒಂದು ಗಂಟೆ ಓದಲು ಕುಳಿತರೆ 50 ನಿಮಿಷ ಓದಬೇಕು ಇನ್ನು 10 ನಿಮಿಷ ನಾವು ಓದಿರುವುದನ್ನ ರಿವಿಸನ್ , ಮನನ ಮಾಡಿಕೊಳ್ಳಬೇಕು.

ಈ ಹತ್ತು ನಿಮಿಷದ ರಿವಿಸನ್ ಅಲ್ಲಿ 100 ರಷ್ಟು ಚಿತ್ತ ಇರಲೆಬೇಕು ಹಾಗೆ 1000 ಪಟ್ಟು ಓದಿದ್ದನ್ನು ಅರ್ಥೈಸಿಕೊಳ್ಳುವ ಆಸಕ್ತಿ ಇರಬೇಕು. ಕ್ವಿಕ್ ರಿವಿಸನ್ ಮಾಡುವಾಗ ಒಂದು ಶಬ್ಧವನ್ನೂ ಬಿಡದೇ ಪ್ರತೀ ಸಾಲು ಪ್ಯಾರ ಓದಲೇಬೇಕು ಅನ್ನುವುದೇನು ಇಲ್ಲ . ಕೆಲವು ಬೇಡವಾದ ಶಬ್ದಗಳನ್ನು ಬಿಟ್ಟು ಮುಖ್ಯವಾಗಿ ಬೇಕಿರುವ ಶಬ್ಧ, ಸಾಲುಗಳನ್ನು ಮಾತ್ರ ನೆನಪಲ್ಲಿ ಇಟ್ಟುಕೊಳ್ಳಬೇಕು ಹಾಗಾಗಿ ಮುಖ್ಯವಾದ ಶಬ್ದಗಳ ಮೇಲೆ ಮಾತ್ರ ಮಾರ್ಕರ್ ನಿಂದ ಹೈಲೈಟ್ ಮಾಡಿಕೊಳ್ಳಬೇಕು. ಈ ಹೈಲೈಟ್ ಮಾಡಿದ ಶಬ್ದಗಳನ್ನು ಪುಸ್ತಕದ ಕೆಳಗಿರುವ ಖಾಲಿ ಜಾಗದಲ್ಲಿ ಬರೆದಿಟ್ಟುಕೊಳ್ಳಬೇಕು. ಹೀಗೆ ಮಾಡುದಾಗ ರಿವಿಸನ್ ಮಾಡೋವಾಗ ಈ ಮುಖ್ಯ ಶಬ್ದಗಳನ್ನು ಮಾತ್ರ ನೆನಪಲ್ಲಿ ಇಟ್ಟುಕೊಂಡರೆ ಸುಲಭ ಆಗುವುದು. ಮತ್ತೊಮ್ಮೆ ರಿವಿಸನ್ ಮಾಡುವಾಗ ಕೆಳಗೆ ಬರೆದಿಟ್ಟ ಶಬ್ದಗಳನ್ನು ಮಾತ್ರ ನೋಡಿಕೊಂಡು, ಆಗಲೂ ನೆನಪಾಗದೇ ಇದ್ದಾಗ ಮಾತ್ರ ಇಡೀ ಪ್ಯಾರವನ್ನು ಓದಿಕೊಳ್ಳಬೇಕು. ಮೂರನೇ ಸ್ಟೆಪ್ ಅಲ್ಲಿ ಮತ್ತೆ ಮತ್ತೆ ಓದಿದ್ದನ್ನೇ ಓದದೆ ಆ ಟಾಪಿಕ್ ಮೇಲೆ ಪ್ರಶ್ನೆಗಳನ್ನು ಬಿಡಿಸಿ , ಹಳೆಯ ಪ್ರಶ್ನೆಪತ್ರಿಕೆಗಳನ್ನು ನೋಡಿ ಅಲ್ಲಿರುವ ಪ್ರಶ್ನೆಗಳನ್ನು ಬಿಡಿಸಿ. ನಂತರ ಮತ್ತೇ ಒಂದು ತಿಂಗಳ ನಂತರ ಮತ್ತೆ ರಿವಿಸನ್ ಆಗ ಮಾರ್ಕ್ ಮಾಡಿಕೊಂಡ ಶಬ್ಧಗಳ ನೆನಪಲ್ಲಿ ಇಟ್ಟುಕೊಳ್ಳುವ ಪ್ರಯತ್ನ ಮಾಡಬೇಕು. ರೀಡಿಂಗ್, ರಿವಿಸನ್, ರೀವಿವ್, ರೀಕಾಲ್ ಈ ರೀತಿ ಓದಬೇಕು.

ಇನ್ನು ಒಂದೇ ಬುಕ್ ಹಾಗೂ ಒಂದೇ ನೋಟ್ಸ್ ಓದುವ ಅಭ್ಯಾಸ ಇರಬೇಕು ಸಾಮಾನ್ಯವಾಗಿ ಎಲ್ಲ ಪ್ರಶ್ನೆ ಪತ್ರಿಕೆಗಳಲ್ಲಿ 20% ರಷ್ಟು ಸುಲಭವಾದ ಪ್ರಶ್ನೆಗಳೇ ಇರುತ್ತವೆ ಇದಕ್ಕೆ ಯಾರೂ ಅಷ್ಟು ತಲೆಕೆಡಿಸಿಕೊಳ್ಳುವ ಗೋಜಿಗೆ ಹೋಗಲ್ಲ. ಇನ್ನು 20 % ರಷ್ಟು ತೀರ ಕಷ್ಟದ ಪ್ರಶ್ನೆಗಳು ಇದ್ದಾಗ ಸಹ ಯಾರೂ ಅಷ್ಟು ತಲೆಕೆಡಿಸಿಕೊಳ್ಳಬಾರದು ಇದಕ್ಕೆ ಬೇರೆ ಬೇರೆ ಬುಕ್ ಗಳನ್ನು ರೆಫರ್ ಮಾಡುವ ಅಗತ್ಯ ಇರತ್ತೇ. ಇನ್ನುಳಿದ 60 % ಪ್ರಶ್ನೆಗಳಿಗೆ ಯಾವುದೇ ಬುಕ್ಸ್ ರೆಫರ್ ಮಾಡಿದ್ರೂ ಉತ್ತರ ಇದ್ದೆ ಇರತ್ತೆ. ಒಂದು ವಿಷಯದ ಮೇಲೆ ಒಂದೇ ಬುಕ್ ರೆಫರ್ ಮಾಡುವುದು ಉತ್ತಮ. ಗ್ರೂಪ್ ಡಿಸ್ಕಶನ್ ಗ್ರೂಪ್ ಡಿಸ್ಕಶನ್ ಬಹಳ ಮುಖ್ಯವಾಗಿ ಇರುತ್ತೆ. ಆದರೆ ಈ ಗ್ರೂಪ್ ಡಿಸ್ಕಶನ್ ಮಾಡುವಾಗ ಇಬ್ಬರಿಗಿಂತ ಕಡಿಮೆ ಇರಬಾರದು ಹಾಗೂ ನಾಲ್ಕಕ್ಕಿಂತ ಹೆಚ್ಚು ಜನ ಇರಬಾರದು. ನಾಲ್ಕು ಜನಕ್ಕಿಂತ ಹೆಚ್ಚು ಇದ್ದಾಗ ಟಾಪಿಕ್ ಬಗ್ಗೆ ವಿಷಯ ಮಾತನಾಡದೆ ಹರಟೆ ಹೊಡೆಯುವುದೇ ಹೆಚ್ಚಾಗಿರತ್ತೆ. ಒಂದು ದಿನದಲ್ಲಿ ಒಂದರಿಂದ ಒಂದೂವರೆ ಗಂಟೆ ಮಾತ್ರ ಗ್ರೂಪ್ ಡಿಸ್ಕಶನ್ ಮಾಡಬೇಕು. ಗ್ರೂಪ್ ಡಿಸ್ಕಶನ್ ಅಲ್ಲಿ ಯಾವ ರೀತಿ ಚರ್ಚೆ ಮಡಬೇಕು? ಡೇಂಜರ್ ಸಬ್ಜೆಕ್ಟ್ಸ್, ಸ್ಟ್ರಾಂಗ್ ಸಬ್ಜೆಕ್ಟ್ಸ್, ಇಂಟರೆಸ್ಟಿಂಗ್ ಸಬ್ಜೆಕ್ಟ್ಸ್ ಹಾಗೂ ಸ್ಕೊರಿಂಗ್ ಸಬ್ಜೆಕ್ಟ್ಸ್ ಅಂತ ಇರತ್ತೆ. ಡೇಂಜರ್ ಬ್ಜೆಕ್ಟ್ಸ್ ಸ್ಕೊರಿಂಗ್ ಸಬ್ಜೆಕ್ಟ್ಸ್ ಇವೆರಡನ್ನೂ ಸೇರಿಸಿ ಓದಿದಾಗ ಜಾಸ್ತಿ ನೆನಪಲ್ಲಿ ಇಟ್ಟುಕೊಳ್ಳಬಹುದು. ಈ ರೀತಿ ಓದುವಾಗ ನಾವು ಓದಿದ್ದನ್ನು ಜಾಸ್ತಿ ನೆನಪಲ್ಲಿ ಇಟ್ಟುಕೊಳ್ಳಬಹುದು.

ಈ ಕೆಳಗಿನ ವಿಡಿಯೋಗಳನ್ನು ನೋಡಿ. ಬೇರೆಯವರಿಗೂ ಶೇರ್ ಮಾಡುವ ಮೂಲಕ ಉಪಯುಕ್ತ ಮಾಹಿತಿಗಳನ್ನು ಹಂಚಿಕೊಳ್ಳಿ.

By

Leave a Reply

Your email address will not be published. Required fields are marked *