ತಂದೆ ತಾಯಿಗೆ ವೈದ್ಯನಾದ ದುನಿಯಾ ವಿಜಯ್ ಅಷ್ಟಕ್ಕೂ ಆಗಿದ್ದೇನು ನೋಡಿ

0 0

ಕೊರೊನಾ ರೋಗವು ದೇಶವ್ಯಾಪಿ ಹರಡಿ ಜನರ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಇದು ಪ್ರತಿಯೊಬ್ಬರನ್ನು ಬಿಡದೆ ಕಾಡುತ್ತಿರುವ ರೋಗವಾಗಿದೆ. ಈ ರೋಗವು ಗಾಳಿಯಲ್ಲಿಯೇ ಹರಡುತ್ತದೆ. ಈ ರೋಗದಿಂದ ಅನೇಕ ಜನರು ತಮ್ಮ ಜೀವವನ್ನು ತೆತ್ತಿದ್ದಾರೆ. ಈ ಮಹಾಮಾರಿ ಕೊರೊನಾ ಸೋಂಕಿಗೊಳಗಾಗಿದ್ದ ನಟ ದುನಿಯಾ ವಿಜಯ್ ಪೋಷಕರು ಸದ್ಯ ಗುಣಮುಖರಾಗಿದ್ದು ತಂದೆ, ತಾಯಿಯ ಕೊರೊನಾ ವಿರುದ್ಧದ ಕಾಳಗ ಮತ್ತು ದುನಿಯಾ ವಿಜಯ್ ತಮ್ಮ ಪೋಷಕರನ್ನು ಆರೈಕೆ ಮಾಡಿ ಕಾಪಾಡಿಕೊಂಡ ಬಗ್ಗೆ ನಾವಿಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಕಳೆದ 25 ದಿನಗಳ ಹಿಂದೆ ದುನಿಯಾ ವಿಜಯ್ ತಂದೆ ಮತ್ತು ತಾಯಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಈ ವೇಳೆ ವೈದರ ಸಲಹೆ ಮೇರೆಗೆ ಮನೆಯಲ್ಲಿಯೇ ಆರೈಕೆ ಮಾಡಿದ್ದಾರೆ. ವಯಸ್ಸಾದ ಪೋಷಕರಿಗೆ ಸೋಂಕು ತಗುಲಿರುವುದು ತಿಳಿಯುತ್ತಿದ್ದಂತೆ ಭಯಪಡದೆ ಮಗನಾಗಿ ಅವರಿಗೆ ಆರೈಕೆ ಮಾಡಿ ಕೊರೊನಾ ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ. 80 ವರ್ಷದ ತಂದೆ ರುದ್ರಪ್ಪ ಹಾಗೂ 76 ವರ್ಷದ ತಾಯಿ ನಾರಾಯಣಮ್ಮ ಕೊರೊನಾ ಗೆದ್ದು ಈಗ ಗುಣಮುಖರಾಗಿದ್ದಾರೆ. ಈ ಸಮಯದಲ್ಲಿ ದುನಿಯಾ ವಿಜಯ್ ಪೋಷಕರನ್ನು ಉಳಿಸಿಕೊಳ್ಳಲು ಸಾಕಷ್ಟು ಕಷ್ಟ ಪಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆರೈಕೆ ಮಾಡಿದ ವಿಡಿಯೋ ಶೇರ್ ಮಾಡಿದ್ದಾರೆ.

ಕೊರೊನಾ ಬಂತು ಅಂತ ಯಾರು ಧೈರ್ಯ ಕಳೆದುಕೊಳ್ಳಬಾರದು. ತಂದೆ ತಾಯಿಯನ್ನು ಕೈಬಿಡಬಾರದು ನನ್ನ ತಂದೆ ತಾಯಿ ಬದುಕಿದ್ದಾರೆ ಎಂಬ ಖುಷಿಯಿಂದ ಈ ವಿಡಿಯೋವನ್ನು ಹಂಚಿಕೊಳ್ಳುತ್ತಿಲ್ಲವೆಂದು ಹೇಳಿದ್ದಾರೆ. ಎಷ್ಟೋ ಜನ ನನ್ನ ರೀತಿ ಸೇವೆ ಮಾಡಿ ತಂದೆ ತಾಯಿಯನ್ನು ಕಳೆದುಕೊಂಡವರಿದ್ದಾರೆ. ಅವರ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಹೇಳಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಧೃತಿಗೆಡಬೇಡಿ ಎಂದು ಜನರನ್ನು ಕೊರೊನಾ ವಿರುದ್ಧದ ಹೋರಾಟಕ್ಕೆ ಆತ್ಮ ವಿಶ್ವಾಸ ತುಂಬುವ ಕೆಲಸ ಮಾಡಿದ್ದಾರೆ. ಗೆಲ್ಲಲು ಸಕಾರಾತ್ಮಕವಾಗಿ ಯೋಚಿಸಬೇಕು. ಜೊತೆಗೆ ನನ್ನ ಜೀವನದಲ್ಲಿ ನಡೆದ ಈ ಘಟನೆ ಕೆಲವರಿಗೆ ಸ್ಫೂರ್ತಿಯಾಗುತ್ತದೆ ಎಂಬ ಕಾರಣಕ್ಕೆ ಈ ವಿಚಾರವನ್ನು ಹಂಚಿಕೊಂಡಿದ್ದೇನೆ ಎಂದು ಹೇಳಿದ್ದಾರೆ.

ಜನರು ಇದಕ್ಕೆ ಹೆದರುವ ಅವಶ್ಯಕತೆ ಇಲ್ಲ ಬದಲಾಗಿ ಸರಿಯಾದ ವೈದ್ಯರ ಮಾರ್ಗದರ್ಶನದಲ್ಲಿ ಮನೆಯಲ್ಲಿಯೇ ಸರಿಯಾದ ಔಷಧವನ್ನು ಮಾಡಿ ಕೊರೊನಾವನ್ನು ತಡೆಗಟ್ಟಿಕೊಳ್ಳಬಹುದು ಎಂದು ದುನಿಯಾ ವಿಜಯ್ ಅವರು ಹೇಳಿದ್ದಾರೆ. ಅವರೇ ಸ್ವತಹ ಅವರ ತಂದೆ ತಾಯಿಯನ್ನು ಮನೆಯಲ್ಲಿಯೆ ಇಟ್ಟುಕೊಂಡು ಆರೈಕೆ ಮಾಡಿ ಕೊರೊನಾದಿಂದ ಗುಣಮುಖರಾಗಿದ್ದಾರೆ. ಪ್ರತಿಯೊಬ್ಬರೂ ಕೊರೊನ ರೋಗದಿಂದ ಜಾಗ್ರತಾರಾಗಿದ್ದು ಮಾಸ್ಕ್ ಮತ್ತು ಹ್ಯಾಂಡ್ ಗ್ಲೋಸ್ ಹಾಕಿಕೊಂಡು ಸಾನಿಟೈಸರ್ ಬಳಸಿ ಎಂದು ಜನರಿಗೆ ಸಂದೇಶವನ್ನು ನೀಡಿದ್ದಾರೆ.

Leave A Reply

Your email address will not be published.