ಮೊಮ್ಮಗ ನಿಖಿಲ್ ಬೆಳೆದ ರಾಗಿ ಬೆಳೆಯನ್ನು ಕಂಡು ದೇವೆಗೌಡ್ರು ಏನ್ ಅಂದ್ರು ನೋಡಿ

0 4

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಮಣ್ಣಿನ ಮಗ ಎಂದು ಹೆಸರು ಪಡೆದಿದ್ದಾರೆ. ದೇವೇಗೌಡರು ಮೇ 18,1933ರಂದು ಹಾಸನ ಜಿಲ್ಲೆಯ ಹೊಳೆನರಸಿಪುರ ತಾಲೂಕಿನ ಹರದನಹಳ್ಳಿಯಲ್ಲಿ ಜನಿಸಿದರು. ಸಿವಿಲ್ ಎಂಜಿನಿಯರಿಂಗ್‍ನಲ್ಲಿ ಡಿಪ್ಲೊಮಾ ಪಡೆದ ಬಳಿಕ ದೇವೇಗೌಡ ಅವರು ಹಾಸನ ತಾಲ್ಲೂಕಿನ ಮುತ್ತಿಗೆ ಹಿರೇಹಳ್ಳಿಯ ದೇವೇಗೌಡ ಅವರ ಮಗಳು ಚೆನ್ನಮ್ಮ ಅವರನ್ನು 1954ರಲ್ಲಿ ವಿವಾಹವಾದರು. ಅವರಿಗೆ ಎಚ್.ಡಿ. ಕುಮಾರಸ್ವಾಮಿ ಹಾಗೂ ಎಚ್.ಡಿ. ರೇವಣ್ಣ ಸೇರಿದಂತೆ ನಾಲ್ಕು ಜನ ಗಂಡು ಮಕ್ಕಳೂ, ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಎಚ್ ಡಿ ದೇವೇಗೌಡ ಅವರು ರಾಮನಗರದ ಕೇತಗನ ಹಳ್ಳಿಯಲ್ಲಿ ತೋಟವನ್ನು ಮಾಡಿದ್ದಾರೆ. ಆದ್ದರಿಂದ ನಾವು ಇಲ್ಲಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಎಚ್.ಡಿ. ಕುಮಾರಸ್ವಾಮಿ ಅವರು ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದರು. ಎಚ್.ಡಿ. ರೇವಣ್ಣ ಅವರು ಕರ್ನಾಟಕ ಸರ್ಕಾರದಲ್ಲಿ ಮಂತ್ರಿಗಳಾಗಿದ್ದರು. ಖ್ಯಾತ ಹೃದ್ರೋಗ ತಜ್ಞ ಡಾ. ಸಿ.ಎನ್. ಮಂಜುನಾಥ್ ಅವರು ದೇವೇಗೌಡರ ಅಳಿಯ. ರಾಜಕೀಯದಲ್ಲಿ ರಾಮಕೃಷ್ಣಹೆಗಡೆ ಯವರನ್ನು ಮಿತ್ರರನ್ನಾಗಿಸಿಕೊಂಡರು. ಎಚ್. ಡಿ.ಕುಮಾರಸ್ವಾಮಿ ಅವರು ಹರದನಹಳ್ಳಿಯಲ್ಲಿ  ಡಿಸೆಂಬರ್ 19, 1959 ರಲ್ಲಿ ಜನಿಸಿದರು. ರಾಜಕೀಯಅನುಭವವಿಲ್ಲದಿದ್ದರೂ 1996ರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು.

1998ರಲ್ಲಿ ಕನಕಪುರ ಲೋಕಸಭೆ ಕ್ಷೇತ್ರದಿಂದ ಮತ್ತು 1999ರಲ್ಲಿ ಸಾತನೂರು ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡ ಕುಮಾರಸ್ವಾಮಿ 2004 ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಆಯ್ಕೆಯಾದರು. ಕುಮಾರಸ್ವಾಮಿ ಫೆಬ್ರುವರಿ 3 2006ರಂದು ಭಾರತೀಯ ಜನತಾ ಪಕ್ಷದ ಸಹಕಾರದೊಂದಿಗೆ ಸ್ಥಾಪಿಸಲಾದ ನೂತನ ಸರ್ಕಾರದ ನೇತೃತ್ವ ವಹಿಸಿ ಕರ್ನಾಟಕದ 18ನೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. 2007 ನವೆಂಬರ್ 2 ರಂದು ಬಹುಮತ ಕಳೆದುಕೊಂಡರು. ಇವರಿಗೆ ನಿಖಿಲ್ ಕುಮಾರಸ್ವಾಮಿ ಮತ್ತು ಶಮಿಕಾ ಕುಮಾರಸ್ವಾಮಿ ಎಂಬ ಎರಡು ಮಕ್ಕಳಿದ್ದಾರೆ. ನಿಖಿಲ್ ಕುಮಾರಸ್ವಾಮಿ ಕನ್ನಡ ಹಾಗೂ ತೆಲುಗು ಚಲನಚಿತ್ರಗಳಲ್ಲಿ ಅಭಿನಯಿಸಿ ಈಗಾಗಲೇ ಓರ್ವ ನಟನಾಗಿ ಗುರುತಿಸಿಕೊಂಡಿದ್ದಾರೆ.

2016 ರಲ್ಲಿ ಜಾಗ್ವಾರ್ ಕನ್ನಡ ಚಲನಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದರು. ನಿಖಿಲ್ ಕುಮಾರಸ್ವಾಮಿಯವರು 2018 ರಲ್ಲಿ ಅಧಿಕೃತವಾಗಿ ಜೆ ಡಿ ಎಸ್ ಪಕ್ಷವನ್ನು ಸೇರಿದರು ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದು ಸೋತಿದ್ದಾರೆ. ಹೀಗೆ ದೇವೇಗೌಡ ಅವರ ಇಡೀ ಕುಟುಂಬವೇ ರಾಜಕೀಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇವರು ಕೃಷಿಯನ್ನು ತುಂಬಾ ಇಷ್ಟಪಡುತ್ತಾರೆ. ರಾಮನಗರ ಕೇತಗನಹಳ್ಳಿಯಲ್ಲಿ ತಮ್ಮದೇ ಆದ ಒಂದು ಕೃಷಿ ತೋಟವನ್ನು ಇವರು ನಿರ್ಮಿಸಿದ್ದಾರೆ. ಅದರಲ್ಲಿ ಹಲವಾರು ಬೆಳೆಗಳನ್ನು ಬೆಳೆಯುತ್ತಾರೆ. ಇತ್ತೀಚಿಗೆ ದೇವೇಗೌಡ ಅವರು ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಅವರು ತೋಟದಲ್ಲಿ ಬೆಳೆದ ಬೆಳೆಯನ್ನು ವೀಕ್ಷಿಸಿ ಸಂತೋಷಪಟ್ಟರು.

Leave A Reply

Your email address will not be published.