Ultimate magazine theme for WordPress.

ಜಾಬ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳೋದು ಹೇಗೆ?

0 11

ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಪಂಚಾಯತಿಯಿಂದ ಅನೇಕ ಲಾಭಗಳನ್ನು ಮತ್ತು ಅನೇಕ ಕೆಲಸಗಳನ್ನು ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ಜಾಬ್ ಕಾರ್ಡನ್ನು ಮಾಡಿಕೊಳ್ಳಬೇಕಾಗುತ್ತದೆ. ಇದನ್ನು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಪಡೆಯಬಹುದಾಗಿದೆ. ಆನ್ಲೈನ್ ನಲ್ಲಿ ಅವರದೇ ಆದ ಗೌರ್ನಮೆಂಟ್ ವೆಬ್ಸೈಟ್ ಮೂಲಕ ಲಾಗ್ ಇನ್ ಆಗಿ ಬೇಕಾದ ಕಾಗದಪತ್ರಗಳನ್ನು ಸಲ್ಲಿಸಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಉದ್ಯೋಗ ಖಾತ್ರಿ ಯೋಜನೆಯ ಕಾರ್ಡನ್ನು ಮನೆಯಲ್ಲಿಯೇ ಕುಳಿತು ಆನ್ಲೈನ್ ಮೂಲಕ ಪ್ರಿಂಟ್ ತೆಗೆದುಕೊಳ್ಳಬಹುದಾಗಿದೆ. ಆದ್ದರಿಂದ ಇಲ್ಲಿ ನಾವು ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಮಹಾತ್ಮ ಗಾಂಧಿ ನ್ಯಾಷನಲ್ ರುರಲ್ ಎಂಪ್ಲೋಯ್ಮೆಂಟ್ ಗ್ಯಾರೆಂಟಿ ಆಕ್ಟ್ 2005 ಇದು ಉದ್ಯೋಗಕಾತರಿ ಯೋಜನೆಯ ಆಫೀಶಿಯಲ್ ವೆಬ್ಸೈಟ್ ಆಗಿದೆ. ಮೊದಲನೆಯದಾಗಿ ಈ ಅಫೀಷಿಯಲ್ ವೆಬ್ಸೈಟ್ ಅನ್ನು ಓಪನ್ ಮಾಡಿಕೊಂಡು ಅದರ ಕೆಳಗಡೆ ಇರುವ ರಿಪೋರ್ಸ್ಟ್ ಕೋಲಾಮ್ ನಲ್ಲಿ ಜಾಬ್ ಕಾರ್ಡ್ ಆಪ್ಷನ್ ಅನ್ನು ಕ್ಲಿಕ್ ಮಾಡಬೇಕು. ಇದನ್ನು ಸೆಲೆಕ್ಟ್ ಮಾಡಿದಾಗ ಎಲ್ಲ ರಾಜ್ಯಗಳ ಲಿಸ್ಟ್ ದೊರಕುತ್ತದೆ. ಅದರಲ್ಲಿ ಅವರವರ ರಾಜ್ಯವನ್ನು ಮೊದಲು ಆಯ್ಕೆ ಮಾಡಿಕೊಳ್ಳಬೇಕು. ನಂತರ ಅದರಲ್ಲಿ ಕೆಲವು ವಿಷಯಗಳನ್ನು ಕೇಳುತ್ತದೆ. ಮೊದಲನೆಯದಾಗಿ ಫೈನಾನ್ಸಿಯಲ್ ಇಯರ್ ಅಂದರೆ ಜಾಬ್ ಕಾರ್ಡ್ ಮಾಡಿಸಿದ ವರ್ಷವನ್ನು ಅದರಲ್ಲಿ ಹಾಕಬೇಕು.

ನಂತರ ಅದರ ಕೆಳಗಡೆ ಯಾವ ರಾಜ್ಯವೆಂದು ಆಯ್ಕೆ ಮಾಡಿಕೊಳ್ಳಬೇಕು. ಅದಾದ ನಂತರ ತಾಲ್ಲೂಕನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ಗ್ರಾಮ ಪಂಚಾಯತಿಯನ್ನು ಅದರಲ್ಲಿ ಆಯ್ಕೆ ಮಾಡಿಕೊಳ್ಳಬೇಕು. ಇದಾದನಂತರ ಕೆಳಗಡೆ ಪ್ರೋಸೀಡ್ ಎಂಬ ಆಯ್ಕೆಯೂ ಇರುತ್ತದೆ. ಅದನ್ನು ಕ್ಲಿಕ್ ಮಾಡಬೇಕಾಗುತ್ತದೆ. ಇದಾದ ನಂತರ ಆ ಪಂಚಾಯತ ವ್ಯಾಪ್ತಿಯಲ್ಲಿ ಆ ಇಸವಿಯಲ್ಲಿ ಮಾಡಿಸಿದ ಎಲ್ಲರ ಜಾಬ್ ಕಾರ್ಡ್ ನಂಬರ್ ಹಾಕು ಹೆಸರುಗಳು ದೊರಕುತ್ತದೆ. ಅದರಲ್ಲಿ ಜಾಬ್ ಕಾರ್ಡ್ ಪಡೆಯಲು ಬಯಸುವವರು ಮೊದಲನೆಯದಾಗಿ ಅದರಲ್ಲಿ ಅವರ ಹೆಸರಿರುವುದನ್ನು ಪರಿಶೀಲಿಸಿಕೊಳ್ಳಬೇಕು.

ಅದನ್ನು ಪರಿಶೀಲಿಸಿದ ನಂತರ ಆ ಹೆಸರು ಇರುವ ಪಕ್ಕದ ಕೋಲಮ್ ನಲ್ಲಿರುವ ಜಾಬ್ ಕಾರ್ಡ್ ನಂಬರ್ ಮೇಲೆ ಕ್ಲಿಕ್ ಮಾಡಬೇಕು. ಅದನ್ನು ಕ್ಲಿಕ್ ಮಾಡಿದಾಗ ಆ ವ್ಯಕ್ತಿಯ ವಿವರವಿರುವ ಉದ್ಯೋಗಖಾತ್ರಿ ಯೋಜನೆ ಕಾರ್ಡ್ ದೊರಕುತ್ತದೆ. ಅದಾದ ನಂತರ ಅಲ್ಲಿ ಕ್ಯಾನ್ಟ್ರೋಲ್ ಪಿ ಅನ್ನು ಕೀ ಬೋರ್ಡ್ ನಲ್ಲಿ ಹೊಡೆದಾಗ ಪ್ರಿಂಟಿಂಗ್ ತೆಗೆಯಲು ಆಪ್ಷನ್ ದೊರಕುತ್ತದೆ. ಅದರಲ್ಲಿ ಯಾವ ಪ್ರಿಂಟರ್ ಎಂದು ಸೆಲೆಕ್ಟ್ ಮಾಡಿ ಪ್ರಿಂಟ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿದರೆ ಅದರ ಪ್ರಿಂಟ್ ದೊರಕಿತ್ತದೆ. ಈ ರೀತಿಯಾಗಿ ಉದ್ಯೋಗಖಾತ್ರಿ ಯೋಜನೆಯ ಕಾರ್ಡನ್ನು ಆನ್ ಲೈನ್ ಮೂಲಕವೇ ಪ್ರಿಂಟ್ ತೆಗೆದುಕೊಳ್ಳಬಹುದಾಗಿದೆ.

Leave A Reply

Your email address will not be published.