ಡ್ರೈ ಪ್ರುಟ್ಸ್ ತಿನ್ನೋದ್ರಿಂದ ನಿಜಕ್ಕೂ ಅಷ್ಟೊಂದು ಲಾಭವಿದೆಯಾ ನೋಡಿ..

0 0

ಸಾಕಷ್ಟು ಜನರಿಗೆ ಬಾದಾಮಿ ಗೋಡಂಬಿ ದ್ರಾಕ್ಷಿ ಎಂದರೆ ತುಂಬಾ ಇಷ್ಟ. ಡ್ರೈಫ್ರೂಟ್ಸಗಳನ್ನು ಮಿತವಾಗಿ ತಿನ್ನುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ ಕೆಲವರು ಇದನ್ನು ಹಸಿಯಾಗಿ ತಿನ್ನುತ್ತಾರೆ ಕೆಲವರು ಹುರಿದು ತಿನ್ನುತ್ತಾರೆ. ಹೇಗೆ ತಿಂದರೂ ಇವುಗಳಲ್ಲಿರುವ ಪೌಷ್ಟಿಕಾಂಶದ ಪ್ರಮಾಣ ಕಡಿಮೆ ಆಗುವುದಿಲ್ಲ. ಸಮತೋಲನ ಆಹಾರ ಪದ್ಧತಿಯನ್ನು ಕಾಯ್ದುಕೊಳ್ಳಲು ಇವುಗಳಿಂದ ಹಲವು ಬಗೆಯ ವಿಟಮಿನ್ ಖನಿಜಾಂಶಗಳು ಮತ್ತು ಇನ್ನಿತರ ಪೌಷ್ಠಿಕ ಸತ್ವಗಳನ್ನು ದೇಹಕ್ಕೆ ನಿರೀಕ್ಷೆ ಮಾಡಬಹುದು. ಯಾವುದೇ ಬಗೆಯ ನೀರಿನ ಅಂಶ ಡ್ರೈಫ್ರೂಟ್ಸ್ ಗಳಲ್ಲಿ ಕಂಡುಬರದಿದ್ದರು ದೇಹದ ಆರೋಗ್ಯಕ್ಕೆ ಯಾವುದೇ ತೊಂದರೆ ಉಂಟಾಗುವುದಿಲ್ಲ ಮತ್ತು ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ಹಾಗಾದರೆ ಡ್ರೈಫ್ರೂಟ್ಸ್ ಗಳನ್ನು ಸೇವಿಸುವುದರಿಂದ ಏನೆಲ್ಲಾ ಪ್ರಯೋಜನವಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.

ಮಧುಮೇಹದ ವಿಚಾರಕ್ಕೆ ಬರುವುದಾದರೆ ಡ್ರೈ ಫ್ರೂಟ್ಸ್ ಸೇವನೆಮಾಡುವುದರಿಂದ ಅನೇಕ ಆರೋಗ್ಯದ ಲಾಭಗಳನ್ನು ಸಕ್ಕರೆ ಕಾಯಿಲೆ ಹೊಂದಿರುವವರು ನಿರೀಕ್ಷೆ ಮಾಡಬಹುದು. ಇದರಲ್ಲಿ ಹೆಚ್ಚಿನ ಪ್ರಮಾಣದ ಫಾಲಿಪಿನಾಲ್ ಆಂಟಿ ಆಕ್ಸಿಡೆಂಟ್ ಅಂಶ ಲಭ್ಯವಿದ್ದು ಇಡೀ ದೇಹದ ತುಂಬಾ ಉತ್ತಮವಾದ ರಕ್ತ ಸಂಚಾರ ಉಂಟಾಗುವಂತೆ ಮಾಡುತ್ತದೆ.

ಮುಖ್ಯವಾಗಿ ದೇಹದಲ್ಲಿ ಕಂಡುಬರುವ ಆಕ್ಸಿಡಿಟಿ ಒತ್ತಡವನ್ನು ನಿಯಂತ್ರಣಕ್ಕೆ ತಂದು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನೀವು ಸೇವನೆ ಮಾಡುವ ಯಾವುದೇ ಡ್ರೈ ಫ್ರೂಟ್ಸ್ ಗಳಲ್ಲಿ ಕಡಿಮೆ ಕೊಬ್ಬಿನ ಅಂಶದ ಪ್ರಮಾಣದ ಜೊತೆಗೆ ಕೆಟ್ಟ ಕೊಲೆಸ್ಟ್ರಾಲ್ ಅಂಶ ತುಂಬಾ ಕಡಿಮೆ ಇರುತ್ತದೆ. ದೇಹದಲ್ಲಿ ರಕ್ತದೊತ್ತಡವನ್ನು ಹೆಚ್ಚುಮಾಡುವ ಸೋಡಿಯಂ ಅಂಶ ಡ್ರೈ ಫ್ರೂಟ್ಸ್ ಗಳಲ್ಲಿ ತುಂಬಾ ಕಡಿಮೆ ಇರುತ್ತದೆ.

ಇರುವ ಹಲವಾರು ಡ್ರೈ ಫ್ರೂಟ್ಸ್ ಗಳಲ್ಲಿ ಎರಡು ಬಗೆಯ ಡ್ರೈ ಫ್ರೂಟ್ಸ್ ನಿಮ್ಮ ಆರೋಗ್ಯಕರ ಆಹಾರ ಸೇವನೆಯಲ್ಲಿ ಅನುಕೂಲಕರವಾಗಿ ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿ ಅಚ್ಚುಕಟ್ಟಾಗಿ ಕೆಲಸಮಾಡುತ್ತದೆ. ಮೊದಲನೆಯದಾಗಿ ಬಾದಾಮಿ ಬೀಜಗಳು. ಇದನ್ನು ಒಣ ಹಣ್ಣು ಎಂದು ಕರೆಯುವುದಕ್ಕಿಂತ ಮುಂಚೆ ಇದನ್ನು ಹಣ್ಣು ಎಂದು ಕರೆಯುತ್ತಾರೆ ತನ್ನ ನೈಸರ್ಗಿಕವಾದ ರೂಪದಲ್ಲಿ ಅತ್ಯುತ್ತಮವಾಗಿ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣ ಮಾಡುತ್ತದೆ.

ಬಾದಾಮಿ ಬೀಜಗಳನ್ನು ನಿಯಮಿತವಾಗಿ ಆಹಾರ ಸೇವನೆ ಮಾಡುವುದರಿಂದ ದೇಹದಲ್ಲಿ ರಕ್ತದ ಉತ್ಪತ್ತಿ ಹೆಚ್ಚಾಗಿ ಅಂಗಾಂಗಗಳಿಗೆ ಅವಶ್ಯವಾಗಿ ಬೇಕಾದ ಪ್ರೊಟೀನ್ ಮತ್ತು ನಾರಿನ ಅಂಶ ಪೂರೈಕೆ ಆಗುವಂತೆ ಮಾಡುತ್ತದೆ. ಪ್ರೊಟೀನ್ ಮತ್ತು ನಾರಿನ ಅಂಶ ಶಕ್ತಿಕಾರಕಗಳಾಗಿ ಕೆಲಸಮಾಡಿ ದೇಹದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.

ಎರಡನೆಯದಾಗಿ ಕರ್ಜೂರ. ಬಹಳಷ್ಟು ಹಿಂದಿನ ಕಾಲದಿಂದಲೂ ಸಹ ಕರ್ಜೂರವನ್ನು ವಿವಿಧ ಆರೋಗ್ಯದ ಸಮಸ್ಯೆಗಳಿಗೆ ಪರಿಹಾರವಾಗಿ ಉಪಯೋಗಿಸುತ್ತಾ ಬಂದಿದ್ದಾರೆ. ಕರ್ಜೂರಗಳಿಗೆ ಬೇರೆ ಯಾವುದೇ ಬಗೆಯ ಡ್ರೈ ಫ್ರೂಟ್ಸ್ ಗಳಿಗೆ ಹೋಲಿಸಿದರೆ ಜೀವಿತಾವಧಿ ಹೆಚ್ಚು. ನೈಸರ್ಗಿಕವಾದ ಸಕ್ಕರೆ ಅಂಶ ಕರ್ಜೂರಗಳಲ್ಲಿ ಕಂಡುಬಂದರೂ ಸಹ ಅಪಾರ ಪ್ರಮಾಣದ ನಾರಿನಾಂಶ ಹೊಂದಿರುವ ಕಾರಣದಿಂದ ಹೊಟ್ಟೆಹಸಿವನ್ನು ನಿಯಂತ್ರಣ ಮಾಡುವುದರ ಜೊತೆಗೆ ದೇಹದಲ್ಲಿ ಬೊಜ್ಜು ಶೇಖರಣೆ ಆಗದಂತೆ ನೋಡಿಕೊಳ್ಳುತ್ತದೆ. ದೇಹದಲ್ಲಿ ಶಕ್ತಿಕೂಡ ಹೆಚ್ಚಾಗಲು ಸಹಾಯವಾಗುತ್ತದೆ.

ಡ್ರೈ ಫ್ರೂಟ್ಸ್ ಗಳ ಸೇವನೆಯಿಂದ ಬಹಳ ಬೇಗನೆ ದೇಹಕ್ಕೆ ಶಕ್ತಿ ದೊರಕುವುದಲ್ಲದೆ ದೇಹಕ್ಕೆ ಅಗತ್ಯವಿರುವ ಅನೇಕ ಪೋಷಕಾಂಶಗಳು ಲಭ್ಯವಾಗುತ್ತದೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗಾಗಿ ನೀವು ಕೂಡ ಡ್ರೈ ಫ್ರೂಟ್ಸ್ ಗಳನ್ನು ಸೇವಿಸಿ ಉತ್ತಮ ಆರೋಗ್ಯವನ್ನು ನಿಮ್ಮದಾಗಿಸಿಕೊಳ್ಳಿ.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.