ರಾತ್ರಿ ನೀರಿನಲ್ಲಿ ಇವುಗಳನ್ನು ನೆನೆಸಿ ಬೆಳಿಗ್ಗೆ ಸೇವಿಸುವುದರಿಂದ ನಮಗೆ ಎಷ್ಟೇ ವರ್ಷ ಆದರೂ ಸಹ ಗಟ್ಟಿಮುತ್ತಾಗಿ ಇರಬಹುದು. ಅವು ಯಾವುದು ಹೇಗೆ ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

ಇವುಗಳನ್ನು ಪ್ರತೀ ದಿನ ತೆಗೆದುಕೊಳ್ಳುವುದರಿಂದ ಥೈರಾಯ್ಡ್ ಸಮಸ್ಯೆ ಬರುವುದಿಲ್ಲ. ಅಸ್ತಮಾ ಹಾಗೂ ರಕ್ತದೊತ್ತಡದಿಂದ ಬಳಲುತ್ತಾ ಇದ್ದರೆ , ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು ಎಂದರೆ , ಚರ್ಮಕ್ಕೆ ಸಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಾ ಇದ್ದರೆ ಈ ಒಂದು ಔಷಧ ಬಹಳ ಪ್ರಯೋಜನಕಾರಿ ಆಗುವುದು. ಇದನ್ನ ಮಾಡೋಕೆ ಬೇಜಾಗಿರುವುದು ಮುಖ್ಯವಾಗಿ ಕಡಲೆ ಒಂದು ಹಿಡಿ ಅಷ್ಟು , ಬಾದಾಮಿ 5 /6, ಒಣದ್ರಾಕ್ಷಿ 10 , ಇವುಗಳನ್ನೆಲ್ಲ ಚೆನ್ನಾಗಿ ತೊಳೆದು ನೆನೆಯಲು ಅವಶ್ಯ ಇರುವಷ್ಟು ನೀರು ಹಾಕಿ ಬೆಳಗಿನವರೆಗೂ ನೆನೆಯಲು ಬಿಡಬೇಕು. ನಂತರ ಇದಕ್ಕೆ ಬೆಳಿಗ್ಗೆ ಒಂದು ಸ್ಪೂನ್ ಜೇನುತುಪ್ಪವನ್ನ ಸೇರಿಸಿ ಮಿಕ್ಸ್ ಮಾಡಿ ಬಾದಾಮಿ ಕಡಲೆ ಹಾಗೂ ಒಣ ದ್ರಾಕ್ಷಿಯನ್ನು ಅಗೆದು ತಿನ್ನಬೇಕು. ನಂತರ ನೆನೆಸಿಟ್ಟ ನೀರನ್ನು ಕುಡಿಯಬೇಕು. ಇದನ್ನು ಒಂದು ತಿಂಗಳು ತೆಗೆದುಕೊಳ್ಳುವುದರಿಂದ ಶರೀರದಲ್ಲೂ ಸುಸ್ತು ಆಯಾಸ ಎಲ್ಲಾ ನಿವಾರಣೆ ಆಗಿ ಶಕ್ತಿ ದೊರೆಯುತ್ತದೆ.

ಕಡಲೆಯಲ್ಲಿ ಐರನ್, ಸೋಡಿಯಂ, ಕಾಪರ್, ಜಿಂಕ್, ಮೆಗ್ನಿಶಿಯಂ ಹಾಗೂ ಹೆಚ್ಚು ಪ್ರೊಟೀನ್ ಗಳು ಇರುತ್ತವೆ. ಕಡಲೆಯಲ್ಲಿರುವಂತಹ ನಾರಿನ ಅಂಶವು ನಮಗೆ ನೈಸರ್ಗಿಕವಾಗಿ ತೂಕ ಇಳಿಸಿಕೊಳ್ಳಲು ಆಹಾಯ ಆಗುವುದು. ಇದರಲ್ಲಿರುವ ಪ್ರೊಟೀನ್ ರಕ್ತದಲ್ಲಿರುವಂತಹ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ. ಜೀರ್ಣ ಕ್ರಿಯೆ ಸುಲಭವಾಗಿ ಮಲಬದ್ಧತೆ ನಿವಾರಣೆ ಆಗುವುದು.

ಬಾದಾಮಿಯಲ್ಲಿ ಫೈಬರ್, ಮೆಗ್ನಿಶಿಯಂ, ವಿಟಮಿನ್ ಎ ಹೆಚ್ಚಾಗಿ ಇರುತ್ತದೆ. ಹಾಗಾಗಿ ಇದು ಬ್ಲಡ್ ಶುಗರ್ ಲೆವೆಲ್ ಅನ್ನು ಕಡಿಮೆ ಮಾಡುತ್ತದೆ. ತೂಕ ಇಳಿಸಿಕೊಳ್ಳಲು ಸಹ ಇದು ಸಹಾಯಕಾರಿ. ವಿಟಮಿನ್ ಇ ಹೆಚ್ಚು ಇರುವುದರಿಂದ ಕ್ಯಾನ್ಸರ್ ರೋಗವನ್ನು ತಡೆಗಟ್ಟಬಹುದು. ಇದರ ಜೊತೆಗೆ ರಕ್ತದ ಒತ್ತಡವನ್ನು ಸಹ ನಿವಾರಿಸಿಕೊಳ್ಳಬಹುದು.

ಒಣದ್ರಾಕ್ಷಿಯಲ್ಲಿ ಅಧಿಕ ಪ್ರಮಾಣದಲ್ಲಿ ಕಬ್ಬಿಣದ ಅಂಶ ಇರುತ್ತದೆ. ದೇಹದಲ್ಲಿ ರಕ್ತ ಕಣಗಳನ್ನು ಹೆಚ್ಚಿಸಲು ಸಹಾಯಕಾರಿ. ರಕ್ತ ಹೀನತೆ ಇರುವವರು ಇದನ್ನು ಸೇವಿಸುವುದರಿಂದ ರಕ್ತ ಕಣಗಳನ್ನು ಹೆಚ್ಚಿಸಿಕೊಳ್ಳಬಹುದು. ಹಾಗೆ ಕ್ಯಾಲ್ಶಿಯಂ , ಪೊಟ್ಯಾಶಿಯಂ ಬೋರಾನ್ ಅಂಶಗಳು ಇದ್ದು ಮೂಳೆಗಳನ್ನು ಬಲಶಾಲಿಯನ್ನಾಗಿ ಮಾಡಿಸುತ್ತದೆ. ಚಿಕ್ಕ ಮಕ್ಕಳಿಗೆ ಒಣ ದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿ ಕೊಡುವುದರಿಂದ ಮಲವಿಸರ್ಜನೆ ನಿರಾಳವಾಗಿ ಆಗುವುದು. ತೂಕ ಹೆಚ್ಚಿಸಲು ಸಹಾಯವಾಗುತ್ತದೆ.

Leave a Reply

Your email address will not be published. Required fields are marked *