ಪ್ರತಿದಿನ ಒಂದು ಎಳನೀರು ಸೇವನೆ ಮಾಡಿದ್ರೆ ಈ ಸಮಸ್ಯೆ ನಿಮ್ಮ ಹತ್ತಿರ ಸುಳಿಯೋದಿಲ್ಲ

0 90

ಎಳೆನೀರು ಅತುತ್ತಮ ರುಚಿಕರವಾದ ಪಾನಿಯವಾಗಿದೆ. ಇದನ್ನು ಎಲ್ಲರೂ ಇಷ್ಟಪಡುತ್ತಾರೆ. ಇದು ಎಷ್ಟೇ ದುಬಾರಿ ಎನಿಸಿದರೂ ಕೂಡ ಇದನ್ನು ಕುಡಿಯದೇ ಇರುವುದಿಲ್ಲ. ಏಕೆಂದರೆ ಇದರಿಂದ ಹಲವಾರು ಪ್ರಯೋಜನಗಳು ಇವೆ. ಇದು ಪ್ರತಿಯೊಬ್ಬರೂ ಸೇವಿಸುವಷ್ಟು ರುಚಿಕರವಾಗಿರುತ್ತದೆ. ಇದರಲ್ಲಿ ಅನೇಕ ಆರೋಗ್ಯಕರ ಉಪಯೋಗಗಳಿವೆ. ಆದ್ದರಿಂದ ನಾವು ಇಲ್ಲಿ ಎಳೆನೀರಿನ ಪ್ರಯೋಜನಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಎಳೆನೀರನ್ನು ಕೆಲವರಿಗೆ ವಾರದಲ್ಲಿ ಎರಡು ಬಾರಿಯಾದರೂ ಸೇವಿಸುವ ಅಭ್ಯಾಸ ಇರುತ್ತದೆ. ಇದು ಬಹಳ ಒಳ್ಳೆಯ ಅಭ್ಯಾಸ ಎಂದು ಹೇಳಬಹುದು. ಏಕೆಂದರೆ ಎಳೆನೀರನ್ನು ಕುಡಿಯುವುದರಿಂದ ದೇಹವು ತಂಪಾಗಿರುತ್ತದೆ. ದೇಹಕ್ಕೆ ಬಹಳ ಉಷ್ಣತೆ ಉಂಟಾದರೆ ಎಳೆನೀರನ್ನು ಕುಡಿಯಬೇಕು. ಇದರಿಂದ ದೇಹದ ಉಷ್ಣತೆ ಕಡಿಮೆ ಆಗುತ್ತದೆ. ಹೆಚ್ಚಾಗಿ ಬೇಸಿಗೆಯಲ್ಲಿ ಎಳೆನೀರನ್ನು ಕುಡಿಯಲೇಬೇಕು. ಏಕೆಂದರೆ ಬೇಸಿಗೆಯ ಸಮಯದಲ್ಲಿ ದೇಹದಲ್ಲಿ ಇರುವ ನೀರು ಬೆವರಿನ ಮೂಲಕ ಹೆಚ್ಚಾಗಿ ಹೊರ ಹೋಗುತ್ತದೆ.

ಪ್ರತಿದಿನ ಬೆಳಿಗ್ಗೆ ಎಳೆನೀರು ಸೇವನೆಯನ್ನು ಮಾಡಬೇಕು. ಇದರಿಂದ ಅನೇಕ ಸಮಸ್ಯೆಗಳನ್ನು ದೂರವಿಡಬಹುದು. ಎಳೆನೀರು ಒಂದು ಇಂಜೆಕ್ಷನ್ ಗೆ ಸಮಾನ ಎಂದು ಹೇಳಲಾಗುತ್ತದೆ. ಬೊಜ್ಜು ಕರಗಲು ದಿನ ಅರ್ಧಗಂಟೆ ವ್ಯಾಯಾಮ ಹಾಗೂ ಒಂದು ಎಳೆನೀರನ್ನು ಕುಡಿದರೆ ಬೊಜ್ಜು ಕರಗುತ್ತದೆ. ಹಾಗೆಯೇ ಮುಖದ ಕಾಂತಿ ಕೂಡ ಹೆಚ್ಚುತ್ತದೆ. ಹೃದಯದ ರೋಗವನ್ನು ತಡೆಗಟ್ಟಲು ಕೂಡ ಏಳನೀರು ಸಹಾಯಕಾರಿ. ಇದು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ ಒಳ್ಳೆಯ ಕೊಲೆಸ್ಟ್ರಾಲ್ ನ್ನು ಹೆಚ್ಚಿಸುತ್ತದೆ. ಇದರಿಂದ ಹೃದಯ ಸಂಬಂಧಿತ ಸಮಸ್ಯೆಗಳನ್ನು ನಿಯಂತ್ರಿಸಬಹುದು ಹಾಗೆಯೇ ದೂರವಿಡಬಹುದು.

ಎಳೆನೀರು ರಕ್ತದೊತ್ತಡವನ್ನು ನಿಯಂತ್ರಣ ಮಾಡುತ್ತದೆ ಎಂದು ವೆಸ್ಟ್ ಇಂಡಿಯಾ ಮೆಡಿಕಲ್ ಜನರಲ್ ಹೇಳಿದ್ದಾರೆ. ಎಳೆನೀರಿನಲ್ಲಿರುವ ಪೊಟ್ಯಾಶಿಯಂ ರಕ್ತದೊತ್ತಡವನ್ನು ನಿಯಂತ್ರಣ ಮಾಡುತ್ತದೆಯೆಂದು ಸಾಬೀತಾಗಿದೆ. ದೇಹದಲ್ಲಿ ನೀರಿನಂಶ ಕಡಿಮೆಯಾದಾಗ ತುಂಬಾ ಆಯಾಸವೆನಿಸುತ್ತದೆ. ಒಂದು ಎಳೆನೀರನ್ನು ಕುಡಿದರೆ ದಿನಪೂರ್ತಿ ಚಟುವಟಿಕೆಯಿಂದಿರಲು ಚೈತನ್ಯವನ್ನು ನೀಡುತ್ತದೆ. ದೇಹದಲ್ಲಿನ ಉಷ್ಣ ಅಂಶವನ್ನು ಸಮತೋಲನದಲ್ಲಿಡಲು ಅತ್ಯಂತ ಸಹಾಯಕಾರಿಯಾಗಿದೆ. ಹೀಗೆ ಎಳೆನೀರು ಅತ್ಯಂತ ಪ್ರಯೋಜನಕಾರಿಯಾಗಿದೆ ಆದ್ದರಿಂದ ಕೊನೆಯದಾಗಿ ಹೇಳುವುದು ಏನೆಂದರೆ ಎಳೆನೀರನ್ನು ಸೇವಿಸಿ ಆರೋಗ್ಯವನ್ನು ತಂಪಾಗಿಟ್ಟುಕೊಳ್ಳಿ.

Leave A Reply

Your email address will not be published.