ಬೇಸಿಗೆಯಲ್ಲಿ ಎಳನೀರು ಕುಡಿಯುವ ಮುನ್ನ ಈ ಮಾಹಿತಿ ತಿಳಿಯುವುದು ಉತ್ತಮ

0 194

Drinking coconut water: ರಕ್ತದಲ್ಲಿರುವಂತಹ ಕಲ್ಮಶವನ್ನು ಹೊರಹಾಕಿ ದೇಹವು ನೀರಿನ ಮಟ್ಟವನ್ನು ಕಾಪಾಡಿಕೊಳ್ಳುವಂತಹ ಕೆಲಸ ಮಾಡುವ ಅಂಗವೇ ಕಿಡ್ನಿ. ನಮ್ಮ ಕಣ್ಣಿಗೆ ಕಾಣುವಂತಹ ಅಂಗಗಳ ಬಗ್ಗೆ ನಾವು ಹೆಚ್ಚಿನ ಕಾಳಜಿ ವಹಿಸಿದರೂ ದೇಹದ ಒಳಗೆ ಇರುವಂತಹ ಕೆಲವು ಅಂಗಗಳ ಬಗ್ಗೆ ನಿರ್ಲಕ್ಷ್ಯ ವಹಿಸುತ್ತೇವೆ. ನಮ್ಮ ಜೀವನಶೈಲಿ ಹಾಗೂ ಅನಾರೋಗ್ಯಕರ ಆಹಾರ ಕ್ರಮದಿಂದ ಕಿಡ್ನಿ ಮೇಲೆ ಒತ್ತಡ ಬೀಳುವುದು.

ಇದಕ್ಕಾಗಿ ನಮ್ಮ ಆಹಾರ ಕ್ರಮದಲ್ಲಿ ಕೆಲವೊಂದು ತರಕಾರಿಗಳನ್ನು ಸೇರಿಸಿಕೊಂಡರೆ ಅದರಿಂದ ಕಿಡ್ನಿಯು ಆರೋಗ್ಯವಾಗಿರುವುದು. ಕೊಬ್ಬು, ಹೆಚ್ಚು ಸೋಡಿಯಂ ಇರುವಂತಹ ಅತಿಯಾಗಿ ಸಂಸ್ಕರಿತ ಆಹಾರ, ಪರಿಷ್ಕರಿಸಿದ ಕೊಬ್ಬು ಇತ್ಯಾದಿಗಳನ್ನು ತ್ಯಜಿಸಬೇಕು. ಕೆಲವೊಂದು ತರಕಾರಿಗಳು ಕಿಡ್ನಿಯು ತುಂಬಾ ಆರೋಗ್ಯಕರವಾಗಿ ಶುದ್ಧೀಕರಿಸಲು, ರಕ್ಷಿಸಲು ಮತ್ತು ಕಾರ್ಯನಿರ್ವಹಿಸಲು ನೆರವಾಗುವುದು.

ಸಾಮಾನ್ಯವಾಗಿ ಹೋಟೆಲುಗಳಲ್ಲಿ ಸಾಂಬಾರ್ ಮತ್ತು ಪಲ್ಯ ಮಾಡಲು ಅಗ್ಗದ ತರಕಾರಿಗಳನ್ನೇ ಹೆಚ್ಚಾಗಿ ಆಯ್ದುಕೊಳ್ಳುವ ಕಾರಣ ಹೆಚ್ಚಿನ ದಿನಗಳಲ್ಲಿ ಮೂಲಂಗಿ ಸಾಂಬಾರ್ ಮತ್ತು ಎಲೆಕೋಸು ಪಲ್ಯ ತಯಾರಾಗಿರುತ್ತದೆ. ಆದರೆ ಅಗ್ಗವಾದ ಮಾತ್ರಕ್ಕೆ ಇದರ ಆರೋಗ್ಯಕರ ಗುಣಗಳೇನೂ ಕಡಿಮೆಯಲ್ಲ. ಇದರಲ್ಲಿರುವ ವಿಟಮಿನ್ ಸಿ, ಪೊಟ್ಯಾಶಿಯಂ ಮತ್ತು ವಿಟಮಿನ್ ಕೆ ಹಲವು ರೀತಿಯಲ್ಲಿ ಆರೋಗ್ಯವನ್ನು ವೃದ್ಧಿಸುತ್ತವೆ. ಅದರಲ್ಲಿಯೂ ಕಿಡ್ನಿಯ ಆರೋಗ್ಯಕ್ಕೆ ಇದು ಹೇಳಿ ಮಾಡಿಸಿದ ತರಕಾರಿಯಾಗಿದೆ. ಇನ್ನು ಎಲೆಕೋಸಿನಲ್ಲಿ ಪೊಟಾಶಿಯಂ ಅಂಶವಿಲ್ಲ. ಇದು ನಿಮ್ಮ ಯಕೃತ್ ಮತ್ತು ಕಿಡ್ನಿಗೆ ತುಂಬಾ ಪರಿಣಾಮಕಾರಿ. ಇದರಲ್ಲಿ ಉನ್ನತ ಮಟ್ಟದ ಫೈಥೋಕೆಮಿಕಲ್ ಇದ್ದು, ಇದು ಕ್ಯಾನ್ಸರ್ ಉಂಟು ಮಾಡುವ ಫ್ರೀ ರ್ಯಾಡಿಕಲ್ ವಿರುದ್ಧ ಹೋರಾಡುವುದು. ಎಲೆಕೋಸಿನಲ್ಲಿ ಕೆಲವು ಪ್ರಮುಖ ಪೋಷಕಾಂಶಗಳಾದ ನಾರಿನಾಂಶ, ವಿಟಮಿನ್ ಬಿ6, ಕೆ, ಸಿ ಮತ್ತು ಫಾಲಿಕ್ ಆಮ್ಲವಿದೆ. ಇದು ಕಿಡ್ನಿಸ್ನೇಹಿ ಆಹಾರದಲ್ಲಿ ತುಂಬಾ ಅಗ್ಗವಾಗಿ ಸಿಗುವ ತರಕಾರಿ.

ಹೂಕೋಸು, ಕ್ಯಾಬೇಜ್‌ನ೦ತಹ ತರಕಾರಿಗಳ ಕುಟುಂಬ ವರ್ಗಕ್ಕೆ ಸೇರಿದುದಾಗಿದ್ದು, ಇದು ತನ್ನಲ್ಲಿ ವಿಟಮಿನ್, ಪೋಷಕಾ೦ಶಗಳು, ಆಂಟಿ ಆಕ್ಸಿಡೆಂಟ್ ಗಳು, ಫೈಟೋನ್ಯೂಟ್ರಿಯೆನ್ಟ್ಸ್‌ಗಳು ಹಾಗೂ ಇನ್ನೂ ಅನೇಕ ಉಪಯುಕ್ತ ಘಟಕಗಳನ್ನು ಮೆಚ್ಚತಕ್ಕ ಪ್ರಮಾಣಗಳಲ್ಲಿ ಒಳಗೊಂಡಿದೆ. ಹೀಗಾಗಿ, ಹೂಕೋಸಿನ ಸಲಾಡ್‌ಗಳನ್ನು ತಯಾರಿಸಲಾರಂಭಿಸಿರಿ, ಅಡುಗೆಯ ತಯಾರಿಕೆಯಲ್ಲಿ ಹೂಕೋಸನ್ನು ಬಳಸಲಾರಂಭಿಸಿರಿ ಅಥವಾ ಅದನ್ನು ಹಸಿಯಾಗಿ ಹಾಗೆಯೇ ಸೇವಿಸಲೂ ಬಹುದು. ಇನ್ನು ಹೂಕೋಸು ಮತ್ತೊಂದು ಕಿಡ್ನಿ ಸ್ನೇಹಿಯಾಗಿರುವಂತಹ ತರಕಾರಿಯಾಗಿದೆ. ಈ ತರಕಾರಿಯಲ್ಲಿ ಫಾಲಿಕ್ ಆಮ್ಲ ಮತ್ತು ನಾರಿನಾಂಶವು ಸಮೃದ್ಧವಾಗಿದೆ. ಇದು ಕಿಡ್ನಿಯನ್ನು ಶುದ್ಧೀಕರಿಸಿ, ಅದನ್ನು ಬಲಗೊಳಿಸುವುದು. ಪೊಟಾಶಿಯಂ ಪ್ರಮಾಣ ಕಡಿಮೆ ಇರುವಂತಹ ತರಕಾರಿಯನ್ನು ದೀರ್ಘಕಾಲದ ಕಿಡ್ನಿ ಸಮಸ್ಯೆ ಇರುವಂತಹವರು ಬಳಸಬಹುದು.

ದಿನಕ್ಕೊಂದು ಎಳನೀರು ಕುಡಿಯುವುದರಿಂದ, ದೇಹದಲ್ಲಿ ಅತಿಯಾಗಿ ಸಂಗ್ರಹವಾಗಿದ್ದ ಅಧಿಕ ಪ್ರಮಾಣದ ಪೊಟ್ಯಾಶಿಯಂ, ಸಿಟ್ರೇಟ್ ಹಾಗೂ ಕ್ಲೋರೀನ್‌ಗಳನ್ನು, ಮೂತ್ರದ ವಿಸರ್ಜನೆಯ ಮೂಲಕ ಹೊರಹಾಕಲು ನೆರವಾಗುತ್ತದೆ. ಅಧ್ಯಾಯನದ ವರದಿಯ ಪ್ರಕಾರ ಸಾಮಾನ್ಯವಾಗಿ ಈ ಕಣಗಳೇ ಸಾಂದ್ರೀಕೃತಗೊಂಡು ಮೂತ್ರಪಿಂಡದ ಕಲ್ಲುಗಳಾಗಿ ರೂಪುಗೊಳ್ಳುತ್ತವೆಯಂತೆ, ಒಂದು ವೇಳೆ ಕಿಡ್ನಿ ಸ್ಟೋನ್ ಆಗಿ, ಪದೇ ಪದೇ ನೋವು ನೀಡುತ್ತಿದ್ದರೆ ಎಳನೀರಿನ ಸೇವನೆಯನ್ನು ಹೆಚ್ಚಿಸುವ ಮೂಲಕ ಮೂತ್ರನಾಳ ಮತ್ತು ಮೂತ್ರಕೋಶದಲ್ಲಿ ಹರಳುಗಟ್ಟಿರುವ ಕಲ್ಲುಗಳನ್ಜು ಕರಗಿಸಿ ಚಿಕ್ಕದಾಗಿಸಿ ನೈಸರ್ಗಿಕ ರೂಪದಲ್ಲಿಯೇ ಹೊರಹಾಕಲು ಸಾಧ್ಯವಾಗುತ್ತದೆ. ಅಲ್ಲದೇ ಎಳನೀರು ಉತ್ಕರ್ಷಣಶೀಲ ಒತ್ತಡವನ್ನು ನಿವಾರಿಸಿ ಮೂತ್ರಪಿಂಡ ಮತ್ತು ಮೂತ್ರವಿಸರ್ಜನಾ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ.

ದಿನಕ್ಕೊಂದು ಸೇಬು ತಿಂದರೆ ವೈದ್ಯರಿಂದ ದೂರ ಇರಬಹುದು ಎನ್ನುವುದು ಹಳೆಯ ನಾಣ್ಣುಡಿ! ನಮಗೆಲ್ಲಾ ಗೊತ್ತೇ ಇದೆ ಅಲ್ವಾ? ಇದಕ್ಕೆ ಮುಖ್ಯ ಕಾರಣಗಳು, ಇದರಲ್ಲಿರುವ ಈ ಹಣ್ಣಿನಲ್ಲಿ ಇರುವಂತಹ ಹಲವಾರು ರೀತಿಯ ಪೋಷಕಾಂಶಗಳು ನಮ್ಮ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಮತ್ತು ಇದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇನ್ನು ಈ ಹಣ್ಣಿನಲ್ಲಿ ನಾರಿನಾಂಶ ಮತ್ತು ಪೆಕ್ಟಿನ್ ಎನ್ನುವ ಅಂಶ ಅಧಿಕ ಪ್ರಮಾಣದಲ್ಲಿ ಸಿಗುತ್ತದೆ. ಜೊತೆಗೆ ಇದರಲ್ಲಿ ಹಲವಾರು ಬಗೆಯ ವಿಟಮಿನ್‌ಗಳು ಹಾಗೂ ಪೌಷ್ಟಿಕಾಂಶಗಳು ಹೇರಳವಾಗಿ ಸಿಗುವುದರಿಂದ, ಇವು ನಮ್ಮ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ದೇಹದ ಕಿಡ್ನಿಯನ್ನು ಕೂಡ ಸುರಕ್ಷಿತವಾಗಿ ಇಟ್ಟುಕೊಳ್ಳುತ್ತದೆ.

ಮಾರುಕಟ್ಟೆಯಲ್ಲಿ ಹಸಿರು ಹಾಗೂ ಹಸಿರೆಲೆ ತರಕಾರಿಗಳು ಒಂದು ಕಡೆಯಾದರೆ, ದಷ್ಟಪುಷ್ಟವಾಗಿ ಕಾಣುವ ತರಕಾರಿಗಳು ಇನ್ನೊಂದು ಕಡೆ. ಇನ್ನು ಇವುಗಳ ಮಧ್ಯೆ ಕೇಸರಿ ಬಣ್ಣದಲ್ಲಿ ಎಲ್ಲರನ್ನೂ ತನ್ನತ್ತ ಆಕರ್ಷಿಸುವ ಜೊತೆಗೆ ತುಂಬಾನೇ ಆರೋಗ್ಯ ಪ್ರಯೋಜನಗಳನ್ನು ಒಳಗೊಂಡಿರುವ ಎಲ್ಲರ ಫೇವರೇಟ್ ತರಕಾರಿ ಎಂದರೆ ಅದು ಕ್ಯಾರೆಟ್ ಇನ್ನು ಈ ತರಕಾರಿಯಲ್ಲಿ ಬೀಟಾ-ಕ್ಯಾರೋಟಿನ್ ಅಂಶದ ಪ್ರಮಾಣ ಹೆಚ್ಚಾಗಿರುವ ಕಾರಣ ಕಿಡ್ನಿಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅಲ್ಲದೇ ರಕ್ತದಲ್ಲಿ ಕಂಡುಬರುವ ಅತಿಯಾದ ಸೋಡಿಯಂ ಅಂಶವನ್ನು ನಿಯಂತ್ರಿಸಿ, ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಮೂತ್ರದ ಮೂಲಕ ಹೊರಹಾಕುವ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಕಾರ್ಯವನ್ನು ಮಾಡುತ್ತದೆ. ಅಲ್ಲದೇ ಕಿಡ್ನಿಗಳ ಮೇಲೆ ಉಂಟಾಗುವ ಒತ್ತಡವನ್ನು ಇದು ತಪ್ಪಿಸುತ್ತದೆ. ಹಾಗಾಗಿ ಪ್ರತಿದಿನ ಒಂದೊಂದು ಲೋಟ ಕ್ಯಾರೆಟ್ ಜ್ಯೂಸ್ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು.

ಮುಖ್ಯವಾಗಿ ಮೂತ್ರಪಿಂಡಗಳಲ್ಲಿ ಕಂಡುಬರುವ ವಿಷಕಾರಿ ಅಂಶವನ್ನು ತೆಗೆದು ಹಾಕುವ ಜೊತೆಗೆ ನಮ್ಮ ದೇಹದಲ್ಲಿ ಬೇಡದ ತ್ಯಾಜ್ಯ ನಿರ್ವಹಣೆಯಲ್ಲಿ ವಿಟಮಿನ್-ಡಿ ಅಂಶ ಹೆಚ್ಚು ಕೆಲಸ ಮಾಡುತ್ತದೆ. ಹಾಳಾಗಿರುವ ನಮ್ಮ ಮೂತ್ರ ಪಿಂಡಗಳನ್ನು ಸರಿಪಡಿಸಿ ಮತ್ತೆ ಮೊದಲಿನಂತೆ ಕೆಲಸ ಮಾಡಲು ಉತ್ತೇಜಿಸುತ್ತದೆ ಎಂದು ಹೇಳಬಹುದು.

ನಮ್ಮ ಆಹಾರ ಪದ್ಧತಿಯಲ್ಲಿ ಮಾವಿನಹಣ್ಣು, ಬ್ರೊಕೋಲಿ, ಪೀನಟ್ ಬಟರ್, ಬಾದಾಮಿ ಬೀಜಗಳು, ಟೊಮೇಟೊ ಹಣ್ಣು, ಪಾಲಕ್ ಸೊಪ್ಪು ಇತ್ಯಾದಿಗಳನ್ನು ಸೇರಿಸಿ ಸೇವನೆ ಮಾಡುವ ಮೂಲಕ ನಮ್ಮ ಮೂತ್ರಪಿಂಡಗಳ ಆರೋಗ್ಯ ರಕ್ಷಣೆ ಮಾಡಿಕೊಳ್ಳಬಹುದು.ಆಹಾರದಲ್ಲಿ ಕಂಡು ಬರುವ ಕ್ಯಾಲ್ಸಿಯಂ ಅಂಶವನ್ನು ನಮ್ಮ ದೇಹ ಹೀರಿಕೊಳ್ಳುವಂತೆ ನೋಡಿಕೊಳ್ಳುವ ಕಾರ್ಯ ನಿರ್ವಹಣೆಯನ್ನು ವಿಟಮಿನ್-ಡಿ ಅಂಶ ಪೂರೈಸುತ್ತದೆ. ಕೋಳಿ ಮೊಟ್ಟೆ, ಮೊಸರು, ಕಿತ್ತಳೆ ಹಣ್ಣಿನ ಜ್ಯೂಸ್ ಇತ್ಯಾದಿಗಳಲ್ಲಿ ವಿಟಮಿನ್ ಡಿ ಅಂಶ ಹೆಚ್ಚು ಸಿಗುತ್ತದೆ.

Leave A Reply

Your email address will not be published.