RCB ಗೆ ಕಂಡೀಷನ್ ಹಾಕಿ ಬಂದ ದಿನೇಶ್ ಕಾರ್ತಿಕ್ ಹೇಳಿದ್ದೇನು ಗೊತ್ತೆ

0 1

ರಾಜಸ್ಥಾನ್‌ ರಾಯಲ್ಸ್ ವಿರುದ್ಧ ಕೇವಲ 23 ಎಸೆತಗಳಲ್ಲಿ ಅಜೇಯ 44 ರನ್‌ ಗಳಿಸಿದ ದಿನೇಶ್‌ ಕಾರ್ತಿಕ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ 4 ವಿಕೆಟ್‌ಗಳ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ್ದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಪೋಸ್ಟ್‌ ಮ್ಯಾಚ್‌ ಪ್ರೆಸೆಂಟೇಷನ್‌ ವೇಳೆ ಮಾತನಾಡಿದ ದಿನೇಶ್‌ ಕಾರ್ತಿಕ್‌, 2022ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಗೆ ಸಾಕಷ್ಟು ತಯಾರಿ ನಡೆಸಿದ್ದೇನೆ. ಪಂದ್ಯದಲ್ಲಿನ ಎಲ್ಲಾ ಸನ್ನಿವೇಶಗಳಿಗೂ ತಕ್ಕಂತೆ ಹೇಗೆ ಬ್ಯಾಟ್‌ ಮಾಡಬೇಕು ಎಂಬಂತ ಸಾಕಷ್ಟು ಹಾದಿಯಲ್ಲಿ ಸೂಕ್ತ ತಯಾರಿ ಮಾಡಿಕೊಂಡು ಇಲ್ಲಿಗೆ ಬಂದಿದ್ದೇನೆಂದು ಹೇಳಿಕೊಂಡಿದ್ದಾರೆ.

ರಾಜಸ್ಥಾನ್‌ ರಾಯಲ್ಸ್ ವಿರುದ್ಧ 4 ವಿಕೆಟ್‌ಗಳ ರೋಚಕ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಆಟಗಾರ ದಿನೇಶ್‌ ಕಾರ್ತಿಕ್‌, 2022ರ ಇಂಡಿಯನ್‌ ಪ್ರೀಮಿಯರ್‌ ಲೀಗ್ ಟೂರ್ನಿಗೆ ಸಾಕಷ್ಟು ತಯಾರಿ ನಡೆಸಿದ್ದೇನೆ ಎಂದು ಹೇಳಿದ್ದಾರೆ.

ಮಂಗಳವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ರಾಜಸ್ಥಾನ್‌ ರಾಯಲ್ಸ್‌ ನೀಡಿದ್ದ 170 ರನ್‌ ಗುರಿ ಹಿಂಬಾಲಿಸಿದ್ದ ಆರ್‌ಸಿಬಿ ಪರ ದಿನೇಶ್‌ ಕಾರ್ತಿಕ್‌ ಕೇವಲ 23 ಎಸೆತಗಳಲ್ಲಿ ಅಜೇಯ 44 ರನ್‌ ಸಿಡಿಸುವ ಮೂಲಕ ತಂಡವನ್ನು ಬಹುಬೇಗ ಗೆಲುವಿನ ಗೆರೆ ದಾಟಿಸಿದ್ದರು. ಆ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

ಮ್ಯಾನ್‌ ಆಫ್‌ ದಿ ಮ್ಯಾಚ್‌ ಸ್ವೀಕರಿಸಿದ ಬಳಿಕ ಮಾತನಾಡಿದ ದಿನೇಶ್‌ ಕಾರ್ತಿಕ್‌ “ಕಳೆದ ವರ್ಷ ನಾನು ಇನ್ನಷ್ಟು ಉತ್ತಮ ಪ್ರದರ್ಶನ ತೋರಬಹುದಾಗಿತ್ತು. ಆದರೆ ಈ ಬಾರಿ ಸಾಕಷ್ಟು ತಯಾರಿ ನಡೆಸಿಕೊಂಡು ಇಲ್ಲಿಗೆ ಬಂದಿದ್ದೇನೆ. ಆ ಮೂಲಕ ನನಗೆ ನಾನೇ ನ್ಯಾಯ ಒದಗಿಸಲು ನಿರ್ಧರಿಸಿದ್ದೇನೆ” ಎಂದರು. ಈ ಬಾರಿ ತರಬೇತಿ ನಡೆಸಿದ ಹಾದಿ ಅತ್ಯುತ್ತಮವಾಗಿತ್ತು. ನನ್ನ ಜೊತೆ ತರಬೇತಿ ನಡೆಸಿದ ವ್ಯಕ್ತಿಗೆ ನಾನು ಚಿರಋಣಿಯಾಗಿದ್ದೇನೆ. ಪ್ರಸಕ್ತ ಟೂರ್ನಿಯಲ್ಲಿ ನಾನಿನ್ನೂ ಏನೂ ಮಾಡಿಲ್ಲ ಎಂಬ ಭಾವನೆಯೊಂದಿಗೆ ಪ್ರತಿಯೊಂದು ಪಂದ್ಯದಲ್ಲಿ ಆಡುತ್ತಿದ್ದೇನೆ ಎಂದು ಹೇಳಿದರು.

ನಾನು ಕ್ರೀಸ್‌ಗೆ ಹೋದಾಗ ಒಂದು ಓವರ್‌ಗೆ 12ರ ಸರಾಸರಿಯಲ್ಲಿ ರನ್‌ ಗಳಿಸಬೇಕಾಗಿತ್ತು. ಪಂದ್ಯದಲ್ಲಿ ಇಂಥಾ ಸನ್ನಿವೇಶಗಳು ಬರುತ್ತವೆಂದು ನನಗೆ ಮೊದಲೇ ಗೊತ್ತಿತ್ತು. ಹಾಗಾಗಿ ಇದಕ್ಕೆ ತಕ್ಕಂತೆ ನಾನು ತಯಾರಿ ನಡೆಸಿದ್ದೇನೆ. ಶಾಂತವಾಗಿದ್ದು, ಯಾರ ಬೌಲಿಂಗ್‌ಗೆ ಆಕ್ರಮಣಕಾರಿಯಾಗಿ ಆಡಬೇಕೆಂದು ನನಗೆ ಗೊತ್ತಿತ್ತು ಎಂದು ತಿಳಿಸಿದರು.

ಪಂದ್ಯದ ಎಲ್ಲಾ ರೀತಿಯ ಸನ್ನಿವೇಶಕ್ಕೆ ಹೊಂದಿಕೊಳ್ಳುವ ಸಲುವಾಗಿ ಸಾಧ್ಯವಾದಷ್ಟು ಹೆಚ್ಚು ವೈಟ್‌ ಬಾಲ್‌ ಕ್ರಿಕೆಟ್‌ ಆಡಲು ನಾನು ಪ್ರಯತ್ನಿಸಿದ್ದೇನೆ. ಈ ನನ್ನ ಅಮೂಲ್ಯ ಪಯಣದಲ್ಲಿ ನನ್ನ ಜೊತೆ ಸಾಕಷ್ಟು ಮಂದಿ ಸಮಯ ಕಳೆದಿದ್ದಾರೆ. ಆ ಮೂಲಕ 2022ರ ಐಪಿಎಲ್‌ ಟೂರ್ನಿಗೆ ಸಾಕಷ್ಟು ಪರಿಶ್ರಮ ಪಟ್ಟಿದ್ದೇನೆ ಎಂದು ತಮ್ಮ ಮ್ಯಾಚ್‌ ಫಿನಿಷಿಂಗ್‌ ಯಶಸ್ವಿಗೆ ಕಾರಣ ಬಹಿರಂಗಪಡಿಸಿದರು.

170 ರನ್‌ ಗುರಿ ಹಿಂಬಾಲಿಸಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಕೊನೆಯ ಮೂರು ಓವರ್‌ಗಳಿಗೆ 28 ರನ್‌ ಅಗತ್ಯವಿತ್ತು. ಈ ವೇಳೆ ಟ್ರೆಂಟ್‌ ಬೌಲ್ಟ್‌ ಎಸೆತದಲ್ಲಿ ಶಹಬಾಝ್‌ ಅಹ್ಮದ್‌ ಅವರು ಒಂದು ಬೌಂಡರಿ ಹಾಗೂ ಒಂದು ಸಿಕ್ಸರ್‌ ಸಿಡಿಸುವ ಮೂಲಕ ತಂಡದಲ್ಲಿದ್ದ ಒತ್ತಡವನ್ನು ಕಡಿಮೆಗೊಳಿಸಿದ್ದರು.

ಕೊನೆಯ ಎರಡು ಓವರ್‌ಗಳಿಗೆ 15 ರನ್‌ ಅಗತ್ಯವಿದ್ದಾಗ ದಿನೇಶ್‌ ಕಾರ್ತಿಕ್ ಹಾಗೂ ಹರ್ಷಲ್ ಪಟೇಲ್‌ ಇನ್ನೂ ಐದು ಎಸೆತಗಳು ಬಾಕಿ ಇರುವಾಗಲೇ ತಂಡವನ್ನು ಗೆಲುವಿನ ದಡ ಸೇರಿಸಿದರು. ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನ ತೋರಿದ ಕಾರ್ತಿಕ್‌ 23 ಎಸೆತಗಳಲ್ಲಿ ಅಜೇಯ 44 ರನ್‌ ಬಾರಿಸಿದರು. ಒಟ್ಟಿನಲ್ಲಿ ಆರ್ ಸಿ ಬಿ ತಂಡದಲ್ಲಿರುವ ಅತಿ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಅವರಾಗಿದ್ದಾರೆ. ಇವರ ಅನುಭವೀ ಆಟವೇ ಆರ್ ಸಿ ಬಿ ತಂಡದ ಯಶಸ್ಸಿಗೆ ಕಾರಣವಾಗಳಿ ಎಂದು ಆಶಿಸೋಣ.

Leave A Reply

Your email address will not be published.