Aries Horoscope: ಮೇಷ ರಾಶಿಯವರಿಗೆ 2023 ಈ ವರ್ಷದಲ್ಲಿ ಏನೆಲ್ಲಾ ಬದಲಾವಣೆ ಆಗಲಿದೆ ಗೊತ್ತಾ..

Astrology

Aries Horoscope 2023: ಮೇಷ ರಾಶಿಯವರಿಗೆ 2023ರ ಯುಗಾದಿಯಿಂದ ಮುಂದಿನ ಯುಗಾದಿಯ ವರೆಗೆ ಮಿಶ್ರ ಫಲದಿಂದ ಕೂಡಿ ಇರುತ್ತದೆ ಜೀವನವೆಂಬುದು ಸುಖ ದುಃಖಗಳ ಸಮ್ಮಿಲನವಾಗಿದೆ ನಾವು ಈ ಲೇಖನದ ಮೂಲಕ 2023 ಯುಗಾದಿಯಿಂದ 2024ರ ಯುಗಾದಿಯವರೆಗೆ ಮೇಷ ರಾಶಿಯ ಬಗ್ಗೆ ತಿಳಿದುಕೊಳ್ಳೋಣ.

ಪ್ರಕೃತಿಯೇ ನಮಗೆ ಹೊಸ ಸಾಂಕೇತಿಕವಾಗಿ ಕೊಡುವ ಹಬ್ಬ ಯುಗಾದಿ ಹಿಂದುಗಳ ಹೊಸ ವರ್ಷ ಪ್ರಾರಂಭ ಆಗುತ್ತಿದೆ 2023 ಯುಗಾದಿಯಿಂದ ಮುಂದಿನ ಯುಗಾದಿಯವರೆಗೆ ಶುಭಕರವಾಗಿ ಇರುತ್ತದೆ ಏಪ್ರಿಲ್ 21ರಂದು ಗುರು ಮೇಷ ರಾಶಿಗೆ ಪ್ರವೇಶ ಮಾಡುತ್ತಾನೆ ಮಿಥುನ ರಾಶಿಯಲ್ಲಿ ಕುಜ ಇರುತ್ತಾನೆ ಮೇಷ ರಾಶಿಯಲ್ಲಿಯೆ ರಾಹು ಇರುತ್ತಾನೆ ಹಾಗಾಗಿ ಗುರು ಚಂಡಾಲ ಯೋಗ ಕಂಡು ಬರುತ್ತದೆ ಗುರು ಜ್ಞಾನಕ್ಕೆ ಕಾರಕ ಹಾಗೂ ರಾಹು ಕೆಟ್ಟ ಬುದ್ದಿಯನ್ನು ಕೊಡುತ್ತಾನೆ ಹೀಗಾಗಿ ಮೇಷ ರಾಶಿಯವರಿಗೆ ಕಪಟ ಬುದ್ದಿ ಜಾಸ್ತಿಯಾಗುತ್ತದೆ ಹಾಗಾಗಿ ತಪ್ಪು ನಿರ್ಧಾರ ತೆಗೆದುಕೊಂಡರೆ ನಷ್ಟ ಆಗುವ ಸಾಧ್ಯತೆ ಇರುತ್ತದೆ

ಮೇಷ ರಾಶಿಯವರು ಬುದ್ದಿಯನ್ನು ಸ್ಥಿಮಿತವಾಗಿ ಇಟ್ಟುಕೊಳ್ಳಬೇಕು ಒಂದು ಮತ್ತು ಒಂಬತ್ತನೆಯ ಮನೆಯ ಅಧಿಪತಿ ಲಗ್ನಕ್ಕೆ ಬರುತ್ತಾನೆ ಹಾಗೆಯೇ ವಿದೇಶ ಪ್ರಯಾಣ ಹಾಗೂ ಹೆಚ್ಚಿನ ವಿದ್ಯಾಭ್ಯಾಸವನ್ನು ವಿದೇಶದಲ್ಲಿ ಮಾಡಬೇಕು ಎನ್ನುವರಿಗೆ ಸುವರ್ಣ ಕಾಲವಾಗಿದೆ. ವಿದ್ಯಾರ್ಥಿಯವರಿಗೆ ಶುಭಕರವಾಗಿ ಇರುತ್ತದೆ ಶುಕ್ರನಿಂದಾಗಿ ಮದುವೆ ವಿಳಂಬ ಆಗುವ ಸಾಧ್ಯತೆ ಇರುತ್ತದೆ ಅಧಿಕವಾದ ಆಸೆಯಿಂದ ವಿಳಂಬ ಆಗುವ ಸಾಧ್ಯತೆ ಇರುತ್ತದೆ ಸಪ್ತಮ ಸ್ಥಾನವನ್ನು ಶುಕ್ರ ವೀಕ್ಷಣೆ ಮಾಡುವುದರಿಂದ ಹಾಗೂ ಕೇತು ಸಹ ಸಪ್ತಮ ಸ್ಥಾನದಲ್ಲಿ ಇರುತ್ತಾನೆ ರಾಹು ಶಾಂತಿಗಾಗಿ ದುರ್ಗಾ ದೇವಿಯ ದರ್ಶನ ಮಾಡಬೇಕು.

ಧನವನ್ನು ಕಾಪಾಡಿಕೊಳ್ಳಬೇಕು ಒಮ್ಮೊಮ್ಮೆ ಅಧಿಕವಾದ ಹಣ ಬರುತ್ತದೆ ಬಿಸ್ನೆಸ್ ಮಾಡುವರು ಬಂಡವಾಳ ಹಾಕುವಾಗ ತುಂಬಾ ಎಚ್ಚರಿಕೆಯಿಂದ ಇರಬೇಕು ವೈವಾಹಿಕ ಜೀವನದಲ್ಲಿ ಬಹಳ ಎಚ್ಚರಿಕೆಯನ್ನು ವಹಿಸಬೇಕು ವೈವಾಹಿಕ ಜೀವನಕ್ಕೆ ಮಾತಿನಿಂದ ಸಮಸ್ಯೆ ಕಂಡು ಬರುವ ಸಾಧ್ಯತೆ ಇರುತ್ತದೆ ಚತುರ್ಥ ಸ್ಥಾನಾಧಿಪತಿಯಾದ ಚಂದ್ರ ಹಾಗೆಯೇ ಆಸೆಗೆ ಚಂದ್ರ ಕಾರಕನಾಗಿ ಇರುತ್ತದೆ ಮನೆ ಕಟ್ಟುವ ಹಾಗೆ ಇನ್ನಿತರ ಕೆಲಸ ಕಾರ್ಯಗಳು ನಿಧಾನ ಗತಿಯಲ್ಲಿ ಕಂಡು ಬರುತ್ತದೆ

ಪಂಚಮಾಧಿಪತಿ ಸೂರ್ಯ ಆಗಿರುತ್ತಾನೆ ಸೂರ್ಯನು ದ್ವಾದಶ ಸ್ಥಾನದಲ್ಲಿ ಇರುತ್ತಾನೆ ಬುದ್ದಿ ಶಕ್ತಿಯಲ್ಲಿ ಆಲಸ್ಯ ಕಂಡು ಬರುವ ಸಾಧ್ಯತೆ ಇರುತ್ತದೆ ವಿಧ್ಯಾರ್ಥಿಗಳಿಗೆ ಬಹಳ ಎಚ್ಚರಿಕೆಯನ್ನು ವಹಿಸಬೇಕು ಕೆಲಸದಲ್ಲಿ ಸಹ ಅಭಿವೃದ್ದಿ ಕಂಡು ಬರುವುದು ಕಷ್ಟಕರವಾಗಿ ಇರುತ್ತದೆ ಸಾಲಗಾರರು ಸಹ ಜಾಸ್ತಿ ಆಗಿತ್ತಾರೆ ಧಾರ್ಮಿಕ ಕಾರ್ಯ ಗಳಲ್ಲಿ ಹೆಚ್ಚಿನ ಒಲವು ಕಂಡು ಬರುತ್ತದೆ ಮೇಷ ರಾಶಿಯವರು ಗೋಧಿಯನ್ನು ದಾನವಾಗಿ ಕೊಡಬೇಕು ಹಾಗೆಯೇ ಗುರುವಾರ ರಾಯರ ದೇವಸ್ಥಾನಕ್ಕೆ ಭೇಟಿ ಕೊಡಬೇಕು

ಶನಿವಾರದಂದು ತಿಂಗಳಿಗೆ ಅಥವಾ ಹದಿನೈದು ದಿನಕ್ಕೆ ಉದ್ದಿನಿಂದ ಮಾಡಿದ ಪದಾರ್ಥವನ್ನು ಆಂಜನೇಯ ದೇವಸ್ಥಾನಕ್ಕೆ ಕೊಡಬೇಕು ಮೇಷ ರಾಶಿಯವರಿಗೆ ಧೈರ್ಯ ಕಂಡು ಬರುತ್ತದೆ. ಓಂ ಬ್ರಹ್ಮ ಬ್ರಂಹಸ್ಮತೆಯೆ ನಮಃ ಎಂದು ನಾಮ ಸ್ಮರಣೆ ಮಾಡಬೇಕು ಇದರಿಂದ ಹೆಚ್ಚಿನ ಫಲವನ್ನು ಪಡೆದುಕೊಳ್ಳಲು ಸಾಧ್ಯ ಆಗುತ್ತದೆ ದತ್ತಾತ್ರೇಯ ದೇವಸ್ಥಾನಗಳಿಗೆ ಭೇಟಿ ನೀಡಬೇಕು ಅರಿಶಿಣ ಕೊಬ್ಬನ್ನು ತೆಯ್ದು ಹಣೆಯಲ್ಲಿ ಇಟ್ಟುಕೊಳ್ಳಬೇಕು ರಾಹುವಿನಿಂದ ಬರುವ ಸಮಸ್ಯೆಗಳು ದೂರ ಆಗುತ್ತದೆ ಬಡವರಿಗೆ ಕರಿ ಉದ್ದಿನ ಕಾಳನ್ನು ದಾನ ಮಾಡಬೇಕು ಹೀಗೆ ಮೇಷ ರಾಶಿಯವರಿಗೆ ಶುಭ ಹಾಗೂ ಮಿಶ್ರ ಫಲದಿಂದ ಕೂಡಿ ಇರುತ್ತದೆ.

Leave a Reply

Your email address will not be published. Required fields are marked *