ಗಣೇಶನ ಫೋಟೋ ಮುಖ್ಯ ದ್ವಾರದಲ್ಲಿದ್ದರೆ ಏನೆಲ್ಲಾ ಲಾಭಗಳಿವೆ ಗೊತ್ತಾ..

0 6

Kannada Astrology: ನಮಸ್ಕಾರ ಸ್ನೇಹಿತರೆ ಗಣೇಶನನ್ನು ಹಿಂದೂ ಸಂಸ್ಕೃತಿಯ ಪುರಾಣ ಹಾಗೂ ಗ್ರಂಥಗಳ ಪ್ರಕಾರ ವಿಜ್ಞಾನ ವಿನಾಶಕ ಹಾಗೂ ಸಂತೋಷದಾಯಕ ಎಂಬುದಾಗಿ ಪೂಜಿಸಲಾಗುತ್ತದೆ ಹಾಗೂ ಆಚರಿಸಲಾಗುತ್ತದೆ. ಒಂದು ವೇಳೆ ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಹೆಚ್ಚಾಗಿದ್ದಾವೆ ಎಂದರೆ ಖಂಡಿತವಾಗಿ ಅಲ್ಲಿ ಗಣೇಶನ ಸಾನಿಧ್ಯ ಇರಲೇ ಬೇಕು. ಗಣೇಶನ ವಿಗ್ರಹ ಅಥವಾ ಫೋಟೋ ಮನೆಯ ಮುಖ್ಯ ಬಾಗಿಲಿನ ಬಳಿ ಇಡುವ ಮೂಲಕ ದುಷ್ಟ ಶಕ್ತಿಗಳಿಂದ ಪರಿಹಾರವನ್ನು ಪಡೆದುಕೊಳ್ಳಬಹುದಾಗಿದೆ. ಇದು ವಾಸ್ತುಶಾಸ್ತ್ರದ ಪ್ರಕಾರವೂ ಕೂಡ ಸಾಬೀತಾಗಿರುವಂತಹ ವಿಚಾರ.

ಕೆಲವು ಜನರು ಮುಖ್ಯದ್ವಾರದಲ್ಲಿ ಯಾವುದೇ ದೇವರ ಚಿತ್ರಗಳು ಇರಬಾರದು ಎಂಬುದಾಗಿ ವಾದಿಸುತ್ತಾರೆ ಇನ್ನೊಂದು ವರ್ಗದ ಜನರು ಮುಖ್ಯದ್ವಾರದ ಬಳಿ ದೇವರ ಮೂರ್ತಿ ಇರುವುದರಿಂದ ಮನೆಗೆ ಒಳ್ಳೆಯದಾಗುತ್ತದೆ ಎಂಬ ವಾದವನ್ನು ಕೂಡ ಮಂಡಿಸುತ್ತಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಮೊದಲ ಪೂಜೆಗೆ ವಂದಿತನಾಗಿರುವ ಗಣೇಶನ ಮೂರ್ತಿ ಅಥವಾ ಫೋಟೋ ಎನ್ನುವುದು ಮುಖ್ಯದ್ವಾರದ ಬಳಿ ಇರುವುದು ಮನೆಗೆ ಶುಭವನ್ನು ತರುತ್ತದೆ ಎಂಬುದಾಗಿ ಹೇಳಲಾಗುತ್ತದೆ. ಮುಖ್ಯದ್ವಾರದಲ್ಲಿರುವ ಗಣಪನ ಫೋಟೋವನ್ನು ದೈನಂದಿನ ವಾಗಿ ಪೂಜೆ ಮಾಡಿದರೆ ಖಂಡಿತವಾಗಿ ಸಾಕಷ್ಟು ದೈವಿಕ ಲಾಭಗಳು ಸಿಗುತ್ತವೆ ಎಂಬುದಾಗಿ ಉಲ್ಲೇಖವಾಗಿ. ಹಾಗಿದ್ದರೆ ಇದರ ಕುರಿತಂತೆ ಇನ್ನಷ್ಟು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ವಾಸ್ತು ಶಾಸ್ತ್ರಜ್ಞರ ಪ್ರಕಾರ ಗಣೇಶನ ಮೂರ್ತಿ ಅಥವಾ ಫೋಟೋವನ್ನು ಇಡಲು ಪಶ್ಚಿಮ ಉತ್ತರ ಹಾಗೂ ಈಶಾನ್ಯ ದಿಕ್ಕುಗಳು ಉತ್ತಮ ಸ್ಥಳಗಳಾಗಿವೆ ಎಂಬುದಾಗಿ ಸಲಹೆ ನೀಡುತ್ತಾರೆ. ಆದರೆ ಗಣಪನ ಮುಖ ಮಾತ್ರ ಉತ್ತರ ದಿಕ್ಕಿನ ಕಡೆಗೆ ಮುಖ ಮಾಡಿರಬೇಕು ಎಂಬುದಾಗಿ ಹೇಳುತ್ತಾರೆ ಯಾಕೆಂದರೆ ಉತ್ತರ ದಿಕ್ಕಿನಲ್ಲಿ ಗಣಪತಿಯ ತಂದೆ ಪರಶಿವನ ವಾಸಸ್ಥಾನವಿದೆ.

ಗಣೇಶನ ಮೂರ್ತಿಯನ್ನು ಮಲಗುವ ಕೋಣೆ ಮೆಟ್ಟಿಲಿನ ಕೆಳಗೆ ಗ್ಯಾರೇಜ್ ಹಾಗೂ ಕಾರ್ ಪಾರ್ಕಿಂಗ್ ಸ್ಥಳದಲ್ಲಿ ಇಡಲೇಬಾರದು ಎಂಬುದಾಗಿ ಹೇಳುತ್ತಾರೆ. ಕೇವಲ ಗಣಪತಿಯ ಮೂರ್ತಿ ಅಥವಾ ಫೋಟೋಗಳನ್ನು ಮಾತ್ರವಲ್ಲದೆ ಯಾವುದೇ ದೇವರ ಫೋಟೋ ಅಥವಾ ಮೂರ್ತಿಗಳನ್ನು ಈ ಸ್ಥಳಗಳಲ್ಲಿ ಇಡಬಾರದು ಇಟ್ಟರೆ ಆ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಹೆಚ್ಚಾಗಿ ಮನೆಯ ಶಾಂತಿ ಕದಡುತ್ತದೆ.

ಸರಿಯಾದ ದಿಕ್ಕಿನಲ್ಲಿ ಗಣಪತಿಯ ಫೋಟೋ ಹಾಗೂ ಮೂರ್ತಿಯನ್ನು ಮನೆಯ ಮುಖ್ಯದ್ವಾರದ ಬಳಿ ಇಡುವುದರಿಂದ ಮನೆಯಲ್ಲಿ ಎಲ್ಲರ ಆರೋಗ್ಯ ಸ್ಥಿತಿ ಸರಿಯಾಗಿರುತ್ತದೆ ಮತ್ತು ಮನೆಯಲ್ಲಿ ಶಾಂತಿ ನೆಲೆಸಿರುತ್ತದೆ‌. ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದರೆ ಅದರಿಂದಲೂ ಕೂಡ ಹೊರಬರುವ ಎಲ್ಲಾ ಸಾಧ್ಯತೆಗಳಿವೆ. ಹೊಸ ಕೆಲಸ ಹುಡುಕುತ್ತಿರುವವರಿಗೆ ಅತೀ ಶೀಘ್ರದಲ್ಲಿ ಶುಭ ಸುದ್ದಿಗಳು ಕೇಳಿ ಬರುತ್ತದೆ. ಒಟ್ಟಾರೆ ವಿಘ್ನ ವಿನಾಶಕನ ಆರಾಧನೆಯಿಂದ ಒಳಿತು ಖಂಡಿತಾ ಉಂಟಾಗುತ್ತದೆ ಕೆಡುಕು ಖಂಡಿತ ನಿಮ್ಮ ಹತ್ತಿರವೂ ಕೂಡ ಸುಳಿಯುವುದಿಲ್ಲ.

Leave A Reply

Your email address will not be published.