ಮಾಡೆಲ್ ಗಳೇ ನಾಚುವಂತೆ ಫೋಟೋಶೂಟ್ ಮಾಡಿಸಿಕೊಂಡ ದುನಿಯಾ ವಿಜಯ್ ಪತ್ನಿ, ಫೋಟೋ ಫುಲ್ ವೈರಲ್

0 6

Duniya Vijay wife Keerthi: ಕನ್ನಡ ಚಿತ್ರರಂಗದ ದೊಡ್ಡ ಸ್ಟಾರ್ ನಟರ ಪೈಕಿಯಲ್ಲಿ ಕಾಣಸಿಗುವಂತಹ (Duniya Vijay) ದುನಿಯಾ ವಿಜಯ್ ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮ ಪ್ರತಿಭೆಯ ಮುಖಾಂತರವೇ ಜನರ ಮನಸ್ಸನ್ನು ಮೆಚ್ಚಿಸಿ ಇಲ್ಲಿಯವರೆಗೆ ಬಂದವರು. ಕನ್ನಡ ಚಿತ್ರರಂಗದಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿ ಪ್ರಾರಂಭದಲ್ಲಿ ಕೆಲಸ ಮಾಡಿ ನಂತರ ದುನಿಯಾ ಸಿನಿಮಾದ ಮೂಲಕ ತಮ್ಮ ಅದೃಷ್ಟ ಪರೀಕ್ಷೆಯಲ್ಲಿ ಗೆದ್ದು ಮತ್ತೆ ಹಿಂದಿರುಗಿ ನೋಡಲೇ ಇಲ್ಲ. ಇದರ ನಡುವಲ್ಲಿ ದುನಿಯಾ ವಿಜಯ್ ಅವರ ಜೀವನದಲ್ಲಿ ಸಾಕಷ್ಟು ಏರುಪೇರುಗಳು ಹಾಗೂ ವಿವಾದಾತ್ಮಕ ವಿಚಾರಗಳು ಓಡಾಡಿದರು ಕೂಡ ಅವನ್ನೆಲ್ಲಾ ಮೆಟ್ಟಿನಿಂತು ಈಗ ವಿಜಯ್ ಮುಂದೆ ಸಾಗುತ್ತಿದ್ದಾರೆ.

ಸಾಕಷ್ಟು ಸಿನಿಮಾಗಳು ಸೋಲಿನಿಂದ ಕಂಗಟ್ಟಿದ್ದ ದುನಿಯಾ ವಿಜಯ್ ಅವರನ್ನು ಮತ್ತೆ ಕೈ ಹಿಡಿದಿದ್ದು ಅವರು ನಾಯಕನಟನಾಗಿ ಹಾಗೂ ನಿರ್ದೇಶಕನಾಗಿ ನಟಿಸಿರುವ ಇತ್ತೀಚಿಗಷ್ಟೇ ಬಿಡುಗಡೆ ಆಗಿರುವ ಸಲಗ ಸಿನಿಮಾ. ಸಲಗ ಸಿನಿಮಾದ ನಂತರ ಕನ್ನಡ ಚಿತ್ರರಂಗದಲ್ಲಿ ದುನಿಯಾ ವಿಜಯ್ ಅವರ ಬೇಡಿಕೆ ಹೆಚ್ಚಾಗಿದ್ದು ಕೇವಲ ನಾಯಕ ನಟನಾಗಿ ಮಾತ್ರವಲ್ಲದೆ ನಿರ್ದೇಶಕನಾಗಿಯೂ ಕೂಡ ಇನ್ನು ಹೆಚ್ಚೆಚ್ಚು ಸಿನಿಮಾಗಳನ್ನು ಮಾಡುವಂತಹ ದುನಿಯಾ ವಿಜಯ್ ಅವರು ಮಗ್ನರಾಗಿದ್ದಾರೆ. ಸದ್ಯಕ್ಕೆ ದುನಿಯಾ ವಿಜಯ್ ರವರು ನಾಯಕನಟನಾಗಿ ಹಾಗೂ ನಿರ್ದೇಶಕನಾಗಿ ಕಾಣಿಸಿಕೊಳ್ಳುತ್ತಿರುವ ಭೀಮ ಸಿನಿಮಾ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಇನ್ನು ಅವರ ವೈಯಕ್ತಿಕ ಜೀವನದ ಕುರಿತಂತೆ ಮಾತನಾಡುವುದಾದರೆ ದುನಿಯಾ ವಿಜಯ್ ಅವರು ಮೊದಲಿಗೆ ನಾಗರತ್ನ ಎನ್ನುವವರನ್ನು ಮದುವೆಯಾಗಿದ್ದರು. ನಂತರ ಅವರಿಗೆ ವಿವಾಹ ವಿಚ್ಛೇದನವನ್ನು ನೀಡಿ ಕನ್ನಡ ಚಿತ್ರರಂಗದ ನಟಿ ಆಗಿರುವ ಕೀರ್ತಿ ಅವರನ್ನು ಮದುವೆಯಾಗುತ್ತಾರೆ.

Duniya vijay Wife Kirthi

ಸದ್ಯಕ್ಕೆ ದುನಿಯಾ ವಿಜಯ್ ಅವರು ಕೀರ್ತಿ ಅವರ ಜೊತೆಗೆ ಹಾಗೂ ತಮ್ಮ ಮಕ್ಕಳ ಜೊತೆಗೆ ಒಂದೇ ಮನೆಯಲ್ಲಿ ವಾಸವಾಗಿದ್ದಾರೆ. ನಟಿ ಕೀರ್ತಿ ಅವರು ಕನ್ನಡ ಚಿತ್ರರಂಗದಲ್ಲಿ ನಟಿಸಿದ್ದು ಬೆರಳೆಣಿಕೆಯಷ್ಟು ಸಿನಿಮಾ ಆಗಿದ್ದರೂ ಕೂಡ ನೋಡೋದಕ್ಕೆ ಯಾವ ಟಾಪ್ ಹೀರೋಯಿನ್ಗಿಂತಲೂ ಕೂಡ ಕಡಿಮೆ ಇಲ್ಲ.

ಇನ್ನು ಕೀರ್ತಿ ಅವರು ಇತ್ತೀಚಿಗಷ್ಟೇ ಫೋಟೋಶೂಟ್ ಕೂಡ ಮಾಡಿಸಿಕೊಂಡಿದ್ದು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಆ ಫೋಟೋಗಳನ್ನು ಪೋಸ್ಟ್ ಮಾಡಿದ್ದು ನೆಟ್ಟಿಗರು ಈ ಫೋಟೋಗಳನ್ನು ನೋಡಿ ಫಿದಾ ಆಗಿದ್ದಾರೆ.

ನೀವು ಈಗಲೂ ಕೂಡ ಸಿನಿಮಾದಲ್ಲಿ ನಟಿಸುವುದಕ್ಕೆ ಓಕೆ ಅಂದ್ರೆ ನಿರ್ಮಾಪಕರು ಹಾಗೂ ನಿರ್ದೇಶಕರು ನಿಮ್ಮ ಮನೆ ಮುಂದೆ ಸಾಲು ಸಾಲಾಗಿ ನಿಲ್ತಾರೆ ಎಂಬುದಾಗಿ ಕೂಡ ಕಾಮೆಂಟ್ ಮಾಡಲು ಪ್ರಾರಂಭಿಸಿದ್ದಾರೆ. ಈ ಫೋಟೋ ನೋಡಿದ ನಂತರ ನಿಮಗೆ ಏನು ಅನ್ನಿಸಿತು ಎಂಬ ನಿಮ್ಮ ಅನಿಸಿಕೆಯನ್ನು ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಶೇರ್ ಮಾಡಿಕೊಳ್ಳಿ.

Leave A Reply

Your email address will not be published.