ಒಂದು ಮಗುನ ಮುದ್ದಾಡ್ಬೇಕು ಅನ್ಸಿಲ್ವಾ? ದಿಗಂತ್ ದಂಪತಿಯ ಉತ್ತರ ಹೇಗಿತ್ತು ನೋಡಿ

0 2

ನಟ ದಿಗಂತ್​ ಹಾಗೂ ಐಂದ್ರಿತಾ ರೇ ಸ್ಯಾಂಡಲ್​ವುಡ್​ನ ಕ್ಯೂಟ್​ ಕಪಲ್​. ಇವರು ಮದುವೆ ಆಗಿ ಕೆಲ ವರ್ಷಗಳು ಕಳೆದಿವೆ. ಆದರೆ, ಇವರ ಮಧ್ಯೆ ಮೊದಲು ಎಷ್ಟು ಪ್ರೀತಿ ಇತ್ತೋ ಅಷ್ಟೇ ಪ್ರೀತಿ ಈಗಲೂ ಇದೆ. ಇಬ್ಬರೂ ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ಒಟ್ಟಾಗಿ ಸಮಯ ಕಳೆಯುವ ಇವರು ಸಾಕಷ್ಟು ಫೋಟೋಗಳನ್ನು ಇಬ್ಬರೂ ಆಗಾಗ ಹಂಚಿಕೊಳ್ಳುತ್ತಾರೆ.

ಕನ್ನಡ ಚಿತ್ರರಂಗದಲ್ಲಿ ದೂದ್ ಪೇಡಾ ಎಂದೇ ಖ್ಯಾತಿಗಳಿಸಿರುವ ದಿಗಂತ್ ಜನಿಸಿದ್ದು 28 ಡಿಸೆಂಬರ್ 1983 ಸಾಗರದಲ್ಲಿ. ತಂದೆ ಕೃಷ್ಣಮೂರ್ತಿ ತಾಯಿ ಮಲ್ಲಿಕಾ ಕೃಷ್ಣಮೂರ್ತಿ. ಇವರ ಬಾಲ್ಯ ವಿದ್ಯಾಬ್ಯಾಸವೆಲ್ಲ ಮುಗಿಸಿದ್ದು ಸಾಗರದಲ್ಲಿ. ನಂತರ ಇವರು ಬೆಂಗಳೂರಿನ ಶ್ರೀ ಭಗವನ್ ಮಹಾವೀರ್ ಜೈನ್ ಕಾಲೇಜ್ ನಲ್ಲಿ ವಾಣಿಜ್ಯಶಾಸ್ತ್ರದಲ್ಲಿ ಪದವಿಯನ್ನು ಪಡೆದು ನಂತರ ಮಾಡಲಿಂಗ್ ಕ್ಷೇತ್ರಕ್ಕೆ ಪರಿಚಿತರಾದರು. 2006 ರಲ್ಲಿ ಮಾಡಲಿಂಗ್ ಪದವಿಯನ್ನು ಪಡೆದುಕೊಂಡು ಚಿತ್ರರಂಗವನ್ನು ಪ್ರವೇಶಿಸಿದರು.

2010 ರಲ್ಲಿ ಇವರಿಗೆ “ಮನಸಾರೆ” ಚಿತ್ರದ ಮೂಲಕ ನಾಯಕನಾಗಿ ಪರಿಚಿತರಾದರು. ಅನಂತರ ಇವರಿಗೆ ಕನ್ನಡ ಚಿತ್ರ ರಂಗದಲ್ಲಿ ಸುಮಾರು ಚಿತ್ರಗಳಿಗೆ ನಾಯಕನಾಗಿ ಅಭಿನಹಿಸುವ ಅವಕಾಶ ಸಿಕ್ಕವು. ಪಂಚರಂಗಿ, ಲೈಫು ಇಷ್ಟೇನೆ, ಪಾರಿಜಾತ, ಹೀಗೆ ಇನ್ನು ಹಲವು ಕನ್ನಡ ಚಿತ್ರರಂಗದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಇನ್ನೂ ಐಂದ್ರಿತಾ ರೇ ರವರು ಭಾರತೀಯ ನಟಿ. ಮೊದಲು ಕನ್ನಡ ಹಾಗೂ ಬೆ೦ಗಾಲಿ ಚಿತ್ರರ೦ಗದಲ್ಲಿ ಅಭಿನಯಿಸಿದ್ದಾರೆ. ಅವರು ೨೦೦೭ ರಲ್ಲಿ ಮೆರವಣಿಗೆ ಚಿತ್ರದಲ್ಲಿ ಚಿತಿಸಿ ಹಾಗೂ ಹಲವಾರು ಚಿತ್ರದಲ್ಲಿ ಚಿತ್ರಿಸಿದ್ದಾರೆ. ಇವರು ಪ್ರಮುಖ ನಟಿಯರಲ್ಲಿ ಒಬ್ಬರಾಗಿದ್ದಾರೆ. ನಟಿ ಐಂದ್ರಿತಾ ಮೂಲತಃ ರಾಜಸ್ಥಾನದ ಉದಯ್‌ಪುರದವರು. ಬೆಂಗಾಲಿ ಕುಟುಂಬದಲ್ಲಿ ಜನಿಸಿದ ಐಂದ್ರಿತಾ, ಕನ್ನಡ ಸಿನಿಮಾ ಇಂಡಸ್ಟ್ರೀಗೆ ಕಾಲಿಟ್ಟ ಮೇಲೆ ಅಪ್ಪಟ ಕನ್ನಡತಿಯೇ ಆಗಿಬಿಟ್ಟಿದ್ದಾರೆ. ಕನ್ನಡ ಹುಡುಗ ದಿಗಂತ್ ಅವರನ್ನೇ ಮದುವೆ ಆಗಿ ಇಲ್ಲಿಯೇ ಸೆಟ್ಲ್‌ ಆಗಿದ್ದಾರೆ. ಕನ್ನಡ ಸಿನಿಮಾಗಳ ಜೊತೆ ಅಪರೂಪಕ್ಕೆ ಬೆಂಗಾಲಿ, ಹಿಂದಿ ಸಿನಿಮಾಗಳಲ್ಲೂ ಅವರು ನಟಿಸುತ್ತಾರೆ.

ಇತ್ತೀಚಿಗಷ್ಟೇ ಮೀಡಿಯಾದಲ್ಲಿ ಕಾಣಿಸಿಕೊಂಡ ಈ ಜೋಡಿಗೆ ನಿರೂಪಕಿ ನಿಮ್ಮಿಬ್ಬರಿಗೂ ಮಕ್ಕಳು ಅಂದ್ರೆ ತುಂಬಾ ಇಷ್ಟ ಒಂದು ಮಗು ಬೇಕು ಅನ್ಸಲ್ವ ಎಂದರು ಅದಕ್ಕೆ ಅವರು ಸದ್ಯ ಆ ಯೋಚನೆ ಮಾಡಿಲ್ಲ ಎಂದರು. ನಂತರ ದಿಗಂತ್ ಅವರು ತಾವು ನಾಯಕ ನಟನಾಗಿ ನಟಿಸಿದ ಗಾಳಿಪಟ 2 ಚಿತ್ರದ ಬಗ್ಗೆ ಮಾತನಾಡಿದರು.

ಯೋಗರಾಜ್ ಭಟ್ ನಿರ್ದೇಶನದಲ್ಲಿ 2008 ರಲ್ಲಿ ತೆರೆಕಂಡ ಗಾಳಿಪಟ ಚಿತ್ರ ಕನ್ನಡ ಚಿತ್ರರಂಗದಲ್ಲಿ ತನ್ನ ಮಧುರ ಕಥೆಯಿಂದ ಮತ್ತು ಸುಮಧುರ ಗೀತೆಗಳಿಂದ ತಂಗಾಳಿ ಬೀಸಿತ್ತು. ಈಗ ಮತ್ತೆ ಯೋಗರಾಜ್ ಭಟ್ ಗಾಳಿಪಟ 2 ಚಿತ್ರವನ್ನು ತೆರೆಗೆ ತರಲು ತೀರ್ಮಾನಿಸಲಾಗಿದೆ. ಮೊದಲ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್,ದಿಗಂತ್,ರಾಜೇಶ್ ಕೃಷ್ಣನ್ ಗಾಳಿಪಟ ಹಾರಿಸಿದ್ದರೆ, ಈ ಚಿತ್ರದಲ್ಲಿ ಮೊದಲು ಶರಣ್,ರಿಷಿ, ಪವನ ಕುಮಾರ್ ಗಾಳಿಪಟ ಹಾರಿಸಲಿದ್ದಾರೆ ಎಂಬುದಾಗಿ ನಿರ್ಧಾರವಾಗಿತ್ತು. ಆದರೆ ಸ್ಕ್ರಿಪ್ಟ್ ಬರೆದ ನಂತರ ಮತ್ತೇ ಗಣೇಶ್ ಮತ್ತು ದಿಗಂತ್ ಕತೆಗೆ ಹೆಚ್ಚು ಸೂಕ್ತ ಎಂದು ಚಿತ್ರ ತಂಡ ನಿರ್ಧರಿಸಿತು. ಈ ಚಿತ್ರಕ್ಕೆ ನಾಯಕಿಯರಾಗಿ ಶರ್ಮಿಳಾ ಮಾಂಡ್ರೆ, ಸೋನಲ್ ಮಾಂಟೆರಿಯೋ ಮತ್ತು ಆದಿತಿ ಪ್ರಭುದೇವ ನಟಿಸಿದ್ದಾರೆ. ಅರ್ಜುನ ಜನ್ಯ ಸಂಗೀತ ನೀಡಿದ್ದರೆ. ಮಹೇಶ್ ದಾನಣ್ಣವರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಮೊತ್ತಮೊದಲ ಬಾರಿಗೆ ಯೋಗರಾಜ್ ಭಟ್ ಚಿತ್ರಕ್ಕೆ ಅರ್ಜುನ ಜನ್ಯ ಸಂಗೀತ ನೀಡಲಿದ್ದಾರೆ. ಚಿತ್ರದ ಚಿತ್ರೀಕರಣ ಮಾರ್ಚ್‌ನಲ್ಲಿ ಆರಂಭವಾಗುವ ನೀರಿಕ್ಷೆಯಿದೆ. ಅನಂತನಾಗ್ ಮತ್ತು ರಂಗಾಯಣ ರಘು ಪ್ರಮುಖ ಪೋಷಕ ಪಾತ್ರಗಳಲಿದ್ದಾರೆ. ಚಿತ್ರದಲ್ಲಿ ಒಟ್ಟು ಒಂಭತ್ತು ಹಾಡುಗಳಿವೆ ಎಂದು ಭಟ್ಟರು ಹೇಳಿದ್ದಾರೆ. ಭಟ್ಟರ ಮುಂದಿನ ಚಿತ್ರದಲ್ಲಿ ಇದೇ ನಿರ್ಮಾಪಕರ ನಿರ್ಮಾಣದಲ್ಲಿ ಶರಣ್ ನಾಯಕನಾಗಿ ನಟಿಸಲಿದ್ದಾರೆ. ಚಿತ್ರದಲ್ಲಿ ಒಬ್ಬ ಕೊರಿಯನ್ ಅಥವಾ ಚೈನೀಸ್ ನಟಿ ನಟಿಸಿದ್ದಾರೆ. ಬೆಂಗಳೂರು ,ಮಂಡ್ಯ ಮತ್ತು ಧಾರವಾಡ ಮೂಲದ ಮೂರು ಯುವಕರ ಪಯಣದ ಕಥೆಯಿದೆ. ಚಿತ್ರವನ್ನು ಕರ್ನಾಟಕ ಮತ್ತು ಲಂಡನ್ ನಲ್ಲಿ ಚಿತ್ರೀಕರಿಸಲಾಗಿದೆ.

ಈಗ ಯೋಗರಾಜ್ ಭಟ್ ‘ಗಾಳಿಪಟ 2’ ಸಿನಿಮಾ ಕೈಗೆತ್ತಿಕೊಂಡು ಅದರ ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ಈ ಮೂಲಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಅವರು ಚಾಲನೆ ನೀಡಿದ್ದು ಸದ್ಯದಲ್ಲೇ ತೆರೆಗೆ ಬರಲು ಸಜ್ಜಾಗಿದೆ. ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ ಸಿನಿಮಾ ಹಿಟ್ ಆಗಿತ್ತು. ಈ ಸಿನಿಮಾವನ್ನು ನೋಡಿ ಸಾಕಷ್ಟು ಮಂದಿ ಮೆಚ್ಚಿಕೊಂಡಿದ್ದರು. ಈಗ ಈ ಚಿತ್ರದ ಮೇಲೂ ಅದಕ್ಕಿಂತ ಹೆಚ್ಚು ನಿರೀಕ್ಷೆ ಸಿನಿಪ್ರಿಯರಿಗಿದೆ. ಗಾಳಿಪಟ 2 ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು, ಇದರ ಫೋಟೋಗಳನ್ನು ಚಿತ್ರತಂಡ ಹಂಚಿಕೊಂಡಿದೆ. ಸದ್ಯದಲ್ಲೇ ಬಹು ನಿರೀಕ್ಷಿತ ಈ ಚಿತ್ರ ತೆರೆ ಕಾಣಲಿದೆ.

Leave A Reply

Your email address will not be published.