ರಾಶಿಗಳ ವಿಚಾರಕ್ಕೆ ಹೋದರೆ ಪ್ರತಿಯೊಂದು ನಕ್ಷತ್ರಕ್ಕೆ ಅನುಗುಣವಾಗಿ ರಾಶಿ ಪ್ರಭಾವ ಬೀರುತ್ತದೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹನ್ನೆರಡು ರಾಶಿ ಇಪ್ಪತ್ತೇಳು ನಕ್ಷತ್ರ ಇದ್ದು ಒಂದೊಂದು ರಾಶಿಗೆ ಒಂದೊಂದು ಗ್ರಹವು ಅಧಿಪತಿ ಆಗಿರುತ್ತಾರೆ ಹಾಗೆಯೇ ಕುಂಭ ರಾಶಿ ಹನ್ನೊಂದನೇ ರಾಶಿ ಆಗಿದ್ದು ಇದರ ಅಧಿಪತಿ ಶನಿ ಈ ರಾಶಿ ವಾಯುತತ್ವ ರಾಶಿ ಹಾಗೂ ಇವರು ಬುದ್ದಿವಂತರು ಹಾಗೂ ಕಲಾತ್ಮಕ ಆಗಿರುತ್ತಾರೆ ತುಂಬಾ ಬುದ್ದಿವಂತರು ಆತ್ಮವಿಶ್ವಾಸ ಹೊಂದಿರುತ್ತಾರೆ

ತಮ್ಮಲ್ಲಿ ಹಲವಾರು ರಹಸ್ಯ ಗೊತ್ತಿದ್ದರೂ ಯಾರಲ್ಲೂ ಹೇಳಿಕೊಳ್ಳದೆ ಗುಪ್ತವಾಗಿ ಜೀವನ ಸಾಗಿಸುವ ಗುಣ ಇದ್ದು ಹೊರಗಡೆ ಇವರ ಗುಣಕ್ಕೆ ಅನುಗುಣವಾಗಿ ಇರುವ ವ್ಯಕ್ತಿಗಳ ಜೊತೆ ಜಾಸ್ತಿ ಸಲುಗೆಯಿಂದ ಇದ್ದು ಹಾಸ್ಯ ಪ್ರವೃತ್ತಿಯನ್ನು ಹೊಂದಿರುತ್ತಾರೆ ಇನ್ನೂ ಎಷ್ಟೇ ನೋವು ದುಃಖ ಇದ್ದರೂ ಕೂಡ ತಮ್ಮಲ್ಲೇ ಇಟ್ಟಕೊಂಡು ಹೊರಗಡೆ ನಗುವಿನ ಮುಖವಾಡ ಹೊತ್ತು ಇರುತ್ತಾರೆ ಯಾವುದೇ ಸಮಸ್ಯೆಯನ್ನು ಒಬ್ಬಂಟಿಯಾಗಿ ಯಾರ ಸಹಾಯ ಇಲ್ಲದೆ ಯಾರಿಗೂ ತೊಂದರೆ ಕೊಡದೆ ಒಬ್ಬರೇ ಹೋರಾಡಿ ಸಮಸ್ಯೆಯನ್ನು ನಿವಾರಿಸಲು ಪ್ರಯತ್ನ ಪಡುತ್ತಾರೆ

ಆದರೆ ಇವರ ಸಹಾನುಭೂತಿ ಇಂದ ಇವರ ಒಳ್ಳೆತನವನ್ನ ಜನರು ದುರುಪಪಯೋಗಿಸಿ ಕೊನೆಗೆ ಇದರಿಂದ ಚಿಂತೆಗೆ ಗುರಿ ಆಗುತ್ತಾರೆ ಇನ್ನೂ ಕೆಲಸದ ವಿಷಯದಲ್ಲಿ ಪರಿಪೂರ್ಣತೆ ಹೊಂದಿದ್ದು ತಾನು ಅಂದುಕೊಂಡ ಕೆಲಸವನ್ನು ಪೂರ್ಣಗೊಳಿಸದೆ ಹಿಂದೆ ಸರಿಯುವ ಮಾತಿಲ್ಲ ಯಾರಾದರೂ ಅಡಚಣೆ ಮಾಡಿದಲ್ಲಿ ಇವರ ಕೋಪಕ್ಕೆ ಗುರಿಯಾಗುವ ಸಾಧ್ಯತೆ ಜಾಸ್ತಿ ಮಾತಿನಲ್ಲಿ ಕಡಿವಾಣ ಇರೋಲ್ಲ ಜಾಸ್ತಿ ಅಹಂಕಾರ ಇದ್ದು ತನ್ನದೇ ಮಾತು ಸರಿ ನಾನು ಹೇಳಿದ್ದೇ ನಡೆಯಬೇಕು ಎನ್ನುವ ಜಾಯಮಾನ ಹೊಂದಿರುತ್ತಾರೆ ಇನ್ನೂ ಯಾರಿಗೂ ಬಗ್ಗದೆ ಸ್ವತಂತ್ರ ಜೀವನ ನಡೆಸಲು ಇಷ್ಟ ಪಡುತ್ತಾರೆ

ಈ ರಾಶಿಯವರು ಉತ್ಸಾಹಿಗಳು ಸಂವೇದನಾ ಶೀಲ ವಿನಮ್ರ ತುಂಬಾ ದೂರಾಲೋಚನೆ ಹೊಂದಿದ್ದು ತನ್ನ ತಾಯಿಯ ಜೊತೆ ಜಾಸ್ತಿ ಪ್ರೀತಿ ಹಾಗೂ ಹೊಂದಾಣಿಕೆ ಜೀವನ ಸಾಗಿಸಿ ಹೊಸ ಹೊಸ ವಿಚಾರದಲ್ಲಿ ಸಂಶೋದನೆ ಅಲ್ಲಿ ಬಹಳ ಆಸಕ್ತಿ ಹೊಂದಿದ್ದಾರೆ ಯಾವುದಾದರೂ ಕಾರ್ಯಕ್ಕೆ ಹಿಂದಿನಿಂದ ಅವರನ್ನು ಪ್ರೋತ್ಸಾಹಿಸಿದರೆ ಇವರು ಕೈಗೊಂಡ ಕಾರ್ಯದಲ್ಲಿ ಯಶಸ್ಸು ಲಭ್ಯ ಹೃದ್ಯಯ ವಿಶಾಲತೆ ಹಾಗೂ ಪರೋಪಕಾರಿ ಗುಣ ಜಾಸ್ತಿ ಇದೆ . ಈ ರಾಶಿಯ ಪುರುಷರು ವಿವಾಹ ವಿಚಾರದಲ್ಲಿ ಹಿಂದೆ ಇರುತ್ತಾರೆ ಯಾಕೆಂದರೆ ತುಂಬಾ ನಾಚಿಕೆ ಸ್ವಭಾವದ ಗುಣ ಇದ್ದು ಪ್ರೇಮ ವಿಚಾರದಲ್ಲಿ ಹಿಂದೇಟು ಹಾಕಿ ಕೊನೆಗೆ ತಾವೇ ನೋವು ತಿನ್ನುತ್ತಾರೆ ತನ್ನ ಸಂಗಾತಿ ಕೂಡ ನನ್ನ ಹಾಗೆ ಇರ್ಬೇಕು ಎಂದು ಬಯಸುತ್ತಾರೆ ಹಾಗೂ ಏಕಾಂತದಲ್ಲಿ ಒಬ್ಬರೇ ತನ್ನ ಮನಸ್ಸಿನಲ್ಲಿ ಮನನ ಮಾಡುವ ಪ್ರವೃತ್ತಿ ಹೊಂದಿದ್ದು ಧಾರ್ಮಿಕ ವಿಚಾರವನ್ನು ಜಾಸ್ತಿ ಇಷ್ಟಪಡುತ್ತಾರೆ

ಇನ್ನು ದೂರ ಪ್ರಯಾಣ ಸಾಧ್ಯತೆ ಇದೆ ಪ್ರೀತಿಯ ವಿಚಾರದಲ್ಲಿ ತೋರ್ಪಡಿಕೆ ಇಷ್ಟ ಇಲ್ಲ ತುಂಬಾ ಸ್ವಾರ್ಥಿಗಳು ಇನ್ನೂ ತೀರ್ಥ ಯಾತ್ರೆ ನಡೆಸಲು ಇಷ್ಟ ಪಡುತ್ತಾರೆ ಆಧುನಿಕರಣ ಜೀವನ ಶೈಲಿಗೆ ಹೊಂದಿಕೊಳ್ಳಲು ಇಚ್ಛಿಸುತ್ತಾರೆ ಸಾಕಷ್ಟು ಸಾಮಾಜಿಕ ಕೆಲಸ ಕಾರ್ಯದಲ್ಲಿ ತಮ್ಮನ್ನು ತೊಡಗಿಸುವ ಗುಣ ಹೊಂದಿರುತ್ತದೆ ಹಾಗೂ ಸ್ನೇಹದ ವಿಚಾರದಲ್ಲಿ ನಿಯತ್ತು ಇದ್ದು ಸೃಜನಶೀಲ ಪ್ರಗತಿಪರ ಹಾಗೂ ಒಬ್ಬಂಟಿ ಜೀವನ ಸಾಗಿಸಲು ಇಚ್ಚಿಸಿದ್ದು ಮುಂದಾಲೋಚನೆ ಗುಣ ಇದ್ದು ಯೋಚನಾಲಹರಿ ಹೊಂದಿದ್ದು ಬುದ್ದಿ ಮನಸ್ಸನ್ನು ಕ್ಷಣಕ್ಕೆ ಬದಲಾಗುವ ಸಾಧ್ಯತೆ ಜಾಸ್ತಿ ಆಗಿದೆ ಪ್ರಾಮಾಣಿಕರು ಹಾಗೂ ಪ್ರಗತಿಶೀಲರು ಆಗಿರುತ್ತಾರೆ

ಇನ್ನೂ ಯಾವ ವ್ಯವಹಾರ ಮಾಡಿದರೆ ಒಳಿತು ಎಂದರೆ ಸಾಮಾನ್ಯವಾಗಿ ಕಬ್ಬಿಣ ಹಾಗೂ ಲೋಹ ಸರಕಾರಿ ಉದ್ಯೋಗ ಎಂಜಿನಿಯರಿಂಗ್ ಹಾಗೂ ವ್ಯಾಪಾರ ವಿಮಾನ ಚಾಲಕ ಛಾಯಾಗ್ರಹಣ ಜ್ಯೋತಿಷಿ ಶಿಕ್ಷಕರು ವಿಜ್ಞಾನ ಸಂಶೋಧನೆ ಬಿಸಿನೆಸ್ ಹಾಗೂ ಕಲಾವಿದರು ಕ್ಷೇತ್ರದಲ್ಲಿ ಜೀವನ ನಡೆಸಲು ಒಳ್ಳೆಯ ಅವಕಾಶ ಇನ್ನೂ ಆರೋಗ್ಯದ ವಿಚಾರದಲ್ಲಿ ವಾಯೂತತ್ವ ರಾಶಿ ಆಗಿರುವುದರಿಂದ ಕಣ್ಣು ತಲೆ ಹಾಗೂ ಹೊಟ್ಟೆಗೆ ಸಂಬಂಧಪಟ್ಟ ಖಾಯಿಲೆ ಶ್ವಾಸಕೋಶ ಹಾಗೂ ರಕ್ತಕ್ಕೆ ಸಂಬಂಧಪಟ್ಟ ರೋಗ ಬರುವ ಸಾಧ್ಯತೆ ಇದೆ ಇನ್ನೂ ಇವರು ದ್ವಿಸ್ವಭಾವ ವ್ಯಕ್ತಿತ್ವ ಹೊಂದಿರುವುದರಿಂದ ಚಂಚಲ ಮನಸ್ಸನ್ನು ನಿಗ್ರಹಿಸಬೇಕು ಹಾಗೂ ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡರೆ ಒಳಿತು ಇವರ ಈ ರಾಶಿಯ ಅಧಿಪತಿ ಶನಿ ಆಗಿರುವುದರಿಂದ ಪ್ರತಿ ಶನಿವಾರ ಶನೇಶ್ವರ ಆಲಯಕ್ಕೆ ಹೋಗಿ ಎಳ್ಳುಬತ್ತಿಯನ್ನು ಹಚ್ಚಿದರೆ ಒಳಿತು ದಿನಾಲು ಶನೈಶ್ಚರಾಯ ನಮಃ ಎಂಬ ಸ್ತೋತ್ರ 108 ಸಾರಿ ಪಠನೆ ಮಾಡಬೇಕು .

Leave a Reply

Your email address will not be published. Required fields are marked *