ಸಾಧನೆ ಎನ್ನುವುದು ಯಾರೊಬ್ಬರ ಸೊತ್ತಲ್ಲ. ಇದನ್ನು ಯಾರು ಬೇಕಾದರೂ ಮಾಡಬಹುದು. ಛಲ ಹೊತ್ತು ಹಿಡಿದ ಕೆಲಸವನ್ನು ಬಿಡದೇ ಗುರಿಯತ್ತ ಗಮನ ಇಟ್ಟರೆ ಎಲ್ಲವೂ ಸಾಧ್ಯ. ಯಶಸ್ಸನ್ನು ಸಾಧಿಸಬೇಕು ಎಂದರೆ ಅದಕ್ಕೆ ಎಷ್ಟೇ ಅಡೆತಡೆಗಳು ಬಂದರೂ ಅದನ್ನು ಎದುರಿಸಬೇಕು. ಆಗ ಮಾತ್ರ ಯಶಸ್ಸು ಎನ್ನುವುದು ದೊರಕುತ್ತದೆ. ಇದಕ್ಕೆ ಹಲವಾರು ಉದಾಹರಣೆಗಳು ಇವೆ. ಅಂತಹ ಒಂದು ಉದಾಹರಣೆ ಆದ ಲಾರಿ ಡ್ರೈವರ್ ಆದ ಒಂದು ಹುಡುಗಿಯ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಈಗ ಸ್ವಲ್ಪ ವರ್ಷಗಳ ಹಿಂದೆ ಸಾಮಾನ್ಯವಾಗಿ ಪುರುಷರು ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿದ್ದರು. ಕಾರಣ ಹುಡುಗಿಯರಿಗೆ ಶಿಕ್ಷಣದ ಕೊರತೆ ಇತ್ತು. ನಂತರದಲ್ಲಿ ಬದಲಾವಣೆ ಆಗಿ ಈಗ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಉನ್ನತಿ ಹೊಂದಿ ಸಾಧನೆ ಮಾಡಿದ್ದಾರೆ. ಲಾರಿ ಇದು ಬಹಳ ಭಾರವಾದ ವಾಹನ ಆಗಿದ್ದು ಲಾರಿಯನ್ನು ಹೆಚ್ಚಾಗಿ ಪುರುಷರು ಓಡಿಸುತ್ತಾರೆ. ಏಕೆಂದರೆ ಇದು ಸುಲಭದ ಕೆಲಸವಲ್ಲ. ಡೆಲಿಷಾ ಡೇವಿಸ್ ಎನ್ನುವ ಹುಡುಗಿ 23 ವರ್ಷದವಳು. ಇವಳು ಮೂಲತಃ ಕೇರಳದವಳು. ಕೇರಳದ ಮೊದಲ ಲಾರಿ ಚಾಲಕಿ ಎಂದು ಇವಳನ್ನು ಕರೆಯಲಾಗುತ್ತದೆ. ಎಲ್ಲಾ ವಾಹನಗಳನ್ನು ಅಂದರೆ ಕಾರು, ಬೈಕ್, ಬಸ್, ವಿಮಾನ, ರೈಲು ಎಲ್ಲವನ್ನೂ ಮಹಿಳೆಯರು ಡ್ರೈವರ್ ಸ್ಥಾನದಲ್ಲಿ ಕುಳಿತು ಓಡಿಸಿದ್ದಾರೆ. ಹಾಗೆಯೇ ಡೆಲಿಷಾ ಅವರು ಲಾರಿ ಚಾಲಕಿ ಆಗಿದ್ದಾಳೆ. ಇವಳ ಜೀವನ ಬಹಳ ಬಡತನದಿಂದ ಕೂಡಿದೆ.

ಇವರ ತಂದೆ ಒಬ್ಬ ಲಾರಿ ಚಾಲಕ ಆಗಿದ್ದಾರೆ. ಹಾಗೆಯೇ ಡೆಲಿಷಾ ಅವರು ಓದಿನಲ್ಲಿ ಬಹಳ ಬುದ್ಧಿವಂತೆ ಆಗಿದ್ದರು. ಆದ್ದರಿಂದ ಇವರ ತಂದೆ ಬಹಳ ಕಷ್ಟಪಟ್ಟು ಇವರಿಗೆ ಓಡಿಸಿದರು. ಇದರಿಂದ ನಾನು ನನ್ನ ತಂದೆಗೆ ಸಹಾಯ ಮಾಡಬೇಕು ಎಂಬ ಮನೋಭಾವ ಇವರ ಮನಸ್ಸಿನಲ್ಲಿ ಮೂಡಿತು. ಆದ್ದರಿಂದ ಲಾರಿ ಓಡಿಸುವ ಆಸಕ್ತಿಯ ಕುರಿತು ತಂದೆಗೆ ಹೇಳುತ್ತಾರೆ. ಆಗ ಅವರು ಮೊದಲು ಚೆನ್ನಾಗಿ ಓದು ನಂತರದಲ್ಲಿ ಸಹಾಯ ಮಾಡು ಎಂದು ಹೇಳಿದರು. ಆದರೂ ಸಹ ತಮ್ಮ ಹೈಸ್ಕೂಲ್ ನಲ್ಲಿ ಸ್ನೇಹಿತರ ಜೊತೆ ಟು ವೀಲರ್ ಓಡಿಸುವುದನ್ನು ಕಲಿತಳು. ಹಾಗೆಯೇ ನಂತರದಲ್ಲಿ ಪಳಗಿ ಕಾರು ಕಲಿಯಲು ನಿರ್ಧರಿಸಿದಳು. ಅಲ್ಲೇ ಹತ್ತಿರದಲ್ಲಿದ್ದ ಡ್ರೈವಿಂಗ್ ಸ್ಕೂಲ್ ನಲ್ಲಿ ಕಾರು ಚಲಿಸುವುದನ್ನು ಕಲಿಯುತ್ತಾಳೆ.

ಇಷ್ಟು ಕಲಿತಾಗ ಅವಳಿಗೆ 16ವರ್ಷ ವಯಸ್ಸಾಗಿತ್ತು. ಆದರೆ ಲೈಸನ್ಸ್ ಬೇಕೆಂದರೆ 18ವರ್ಷ ವಯಸ್ಸಾಗಿರಬೇಕು. ಪಿಜಿ ಕಲಿಯುವಾಗ ಇವಳ ತಂದೆಗೆ ತೀವ್ರ ಅನಾರೋಗ್ಯ ಉಂಟಾಗುತ್ತದೆ. ಇಂತಹ ಸಂದರ್ಭದಲ್ಲಿ ತಂದೆ ಕಷ್ಟವಾದರೂ ಸರಿ ಮಗಳಿಗೆ ಲಾರಿ ಬಿಡುವುದನ್ನು ಹೇಳಿಕೊಡುತ್ತಾರೆ. ಮಗಳು ಲಾರಿ ಹೊಡೆಯುವಾಗ ಪಕ್ಕದಲ್ಲೇ ಕುಳಿತುಕೊಳ್ಳುತ್ತಿದ್ದರು. ಹೈವೆಗಳಲ್ಲಿ ಇವಳ ಚಾಲನೆ ನೋಡಿ ತಂದೆ ಬಹಳ ಬೆರಗಾಗಿದ್ದರು. ಲಾರಿಯಲ್ಲಿ ಟ್ಯಾಂಕರ್ ಗಳನ್ನು ಸಾಗಿಸುವಾಗ ಓನರ್ ಹತ್ತಿರ ಇವಳ ತಂದೆ ತನ್ನ ಮಗಳು ಲಾರಿಯನ್ನು ಓಡಿಸುತ್ತಾಳೆ ಎಂದು ಹೇಳಿದಾಗ ಅಲ್ಲಿ ಇದ್ದವರೆಲ್ಲ ಬೆರಗಾಗುತ್ತಾರೆ. ಇಲ್ಲಿಯವರೆಗೆ ಸುತ್ತಮುತ್ತಲಿನಲ್ಲಿ ಇಂತಹ ಧೈರ್ಯವನ್ನು ಯಾರೂ ಮಾಡಿರಲಿಲ್ಲ.

ಇಂತಹ ಸಾಹಸಕ್ಕೆ ಯಾವ ಮಹಿಳೆಯು ಕೈ ಹಾಕಿರಲಿಲ್ಲ. ತಾನು ಓದುವಾಗ ರಜಾ ದಿನಗಳಲ್ಲಿ ಲಾರಿಯನ್ನು ಓಡಿಸುತ್ತಿದ್ದರು. ಆದರೆ ಕಳೆದ ವರ್ಷ ಲಾಕ್ ಡೌನ್ ಇರುವುದರಿಂದ ಅತಿ ಹೆಚ್ಚು ರಜೆ ಸಿಕ್ಕ ಕಾರಣ ಲಾರಿ ಓಡಿಸುತ್ತಲೇ ಇದ್ದಾಳೆ. ಆದರೆ ಇವಳು ಲಾರಿ ಓಡಿಸುವುದು ಯಾರಿಗೂ ಗೊತ್ತಿರಲಿಲ್ಲ. ಒಂದು ದಿನ ಒಬ್ಬ ಪೊಲೀಸ್ ನೋಡಿ ಮುಂದಿನ ಚೆಕ್ಪೋಸ್ಟ್ ನಲ್ಲಿ ಇವಳನ್ನು ಮತ್ತು ಲಾರಿಯನ್ನು ಹಿಡಿದು ವಿಚಾರಣೆ ಮಾಡಿದಾಗ ಇವಳ ಲೈಸನ್ಸ್ ಮತ್ತು ಡಿ.ಎಲ್.ಆರ್. ದೊರಕುತ್ತದೆ. ಮೂರ್ನಾಲ್ಕು ವರ್ಷಗಳಿಂದ ಇವಳು ಲಾರಿ ಓಡಿಸುತ್ತಿದ್ದನ್ನು ತಿಳಿದು ಬಹಳ ಮೂಕವಿಸ್ಮಿತರಾಗುತ್ತಾರೆ. ಈಗ ಇದು ವೈರಲ್ ಆಗಿ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬುತ್ತದೆ. ಆದ್ದರಿಂದ ಇಂತಹ ಸಾಧನೆಗೆ ಮುಂದಾದ ಇವಳು ಇನ್ನೂ ಹೆಚ್ಚಿನ ಯಶಸ್ಸನ್ನು ಕಾಣಲಿ ಎಂದು ಹಾರೈಸೋಣ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave a Reply

Your email address will not be published. Required fields are marked *