ಪ್ರತಿಯೊಬ್ಬ ರೈತನಿಗೂ ತಾನು ಬೆಳೆದ ಬೆಳೆ ಕೈಗೆ ಬರಬೇಕು, ಅದರಿಂದ ಆದಾಯ ಬರಬೇಕು ಎಂದರೆ ಏನಿಲ್ಲಾ ಅಂದರೂ ಸಾಮಾನ್ಯವಾಗಿ ಮೂರರಿಂದ ನಾಲ್ಕು ತಿಂಗಳು ಅಂತೂ ಕಾಯಲೇಬೇಕು ಅಥವಾ ವಾರ್ಷಿಕ ಬೆಳೆ ಆಗಿದ್ದರಂತೂ ವರ್ಷಗಟ್ಟಲೆ ಕಾಯಬೇಕಾಗುವುದು. ಇಂತಹ ಸಂದರ್ಭದಲ್ಲಿ ಉಂಟಾಗುವ ಮಾಸಿಕ ಅಥವಾ ದಿನನಿತ್ಯದ ಖರ್ಚುಗಳನ್ನು ಭರಿಸಿಕೊಳ್ಳಲು ಇನ್ನೊಂದು ಆದಾಯದ ಮೂಲವನ್ನು ಹುಡುಕಿಕೊಳ್ಳಬಹುದು. ಸೈಡ್ ಇನ್ಕಮ್ ಆಗಿ ರೈತರು ಸಾಕಷ್ಟು ಬೆಳೆಗಳನ್ನು ಬೆಳೆಯಬಹುದು. ಅದರಲ್ಲಿ ಉದಾಹರಣೆಯಾಗಿ ನಾವು ಈ ಲೇಖನದಲ್ಲಿ ಕಡಿಮೆ ಅವಧಿಯಲ್ಲಿ ಕೊತ್ತಂಬರಿ ಸೊಪ್ಪು ಹೇಗೆ ಬೆಳೆಯುವುದು ಎನ್ನುವುದನ್ನು ತಿಳಿದುಕೊಳ್ಳೋಣ.

ಕೊತ್ತಂಬರಿ ಸೊಪ್ಪನ್ನು ಬೆಳೆಯಲು ವಿಶೇಷವಾದ ಜ್ಞಾನ ಬೇಕು ಅಂತೇನೂ ಇಲ್ಲ ರೈತರು ಅಲ್ಲದೆ ಇರುವವರೂ ಸಹ ಇದನ್ನು ಬೆಳೆಯಬಹುದು. ಆದರೆ ರೈತರಿಗೆ ಎಲ್ಲಾ ಬೆಳೆಗಳನ್ನು ಬೆಳೆಯುವುದರ ಬಗ್ಗೆ ಮಾಹಿತಿ ಹಾಗೂ ಜ್ಞಾನ ಇರುತ್ತದೆ. ನಾವು ನಮ್ಮ ಮನೆಗಳಿಗೆ ಮಸಾಲೆ ಪದಾರ್ಥಗಳನ್ನು ತರುತ್ತೇವೆ ಅದರ ಜೊತೆಗೆ ಕೊತ್ತಂಬರಿ ಅಥವಾ ಧನಿಯ ಬೀಜವನ್ನು ಸಹ ತರುತ್ತೇವೆ. ಕೊತ್ತಂಬರಿ ಸೊಪ್ಪನ್ನು ಬೆಳೆಯಲು ಇಚ್ಚಿಸುವವರು ನೀವು ತೆಗೆದುಕೊಂಡ ಕೊತ್ತಂಬರಿ ಬೀಜಗಳ ಆಧಾರದ ಮೇಲೆ ಭೂಮಿಯನ್ನು ಸಮ ಮಾಡಿ ಹದಗೊಳಿಸಿಕೊಳ್ಳಬೇಕು. ಸಗಣಿ ಗೊಬ್ಬರ ಇದ್ದರೆ ಅದನ್ನೂ ಕೂಡಾ ಹಾಕಿಕೊಳ್ಳಬೇಕು. ನಂತರ ಕೊತ್ತಂಬರಿ ಬೀಜಗಳನ್ನು ಸ್ವಲ್ಪ ಒಡೆದು ಎರಡು ಭಾಗ ಮಾಡಿಕೊಂಡು ಅದನ್ನು ಭೂಮಿಗೆ ಹಾಕಿ ಬಿತ್ತನೆ ಮಾಡಬೇಕು.

ಬಿತ್ತನೆ ಮಾಡಿ ಆದ ನಂತರ ಅದರ ಮೇಲೆ ಒಂದು ಬಾರಿ ಹುಲ್ಲಿನ ಹೊದಿಕೆಯನ್ನು ಹಾಕಬೇಕು. ಈ ಹುಲ್ಲಿನ ಹೊದಿಕೆ ಹಾಕುವುದರಿಂದ ಬಿತ್ತನೆ ಮಾಡಿದ ಬೀಜಗಳು ಬಹಳ ಬೇಗ ಮೊಳಕೆ ಒಡೆಯುತ್ತವೆ. ಬಿತ್ತನೆ ಮಾಡಿದ ಎಂಟರಿಂದ ಹತ್ತು ದಿನಗಳಲ್ಲಿ ಮೊಳಗೆ ಒಡೆದು ಚಿಗುರುತ್ತದೆ. ನಂತರ ಹುಲ್ಲಿನ ಹೊದಿಕೆಯನ್ನು ತೆಗೆಯಬೇಕು. ನಂತರ ಮುಂದಿನ ಹದಿನೈದರಿಂದ ಇಪ್ಪತ್ತು ದಿನಗಳಲ್ಲಿ ಕೊತ್ತಂಬರಿ ಸೊಪ್ಪು ಚೆನ್ನಾಗಿ ಬೆಳೆದು ಸಿದ್ಧವಾಗಿ ಇರುತ್ತದೆ. ಈ ಸಂದರ್ಭದಲ್ಲಿ ಇದಕ್ಕೆ ಸರಿಯಾಗಿ ನೀರನ್ನು ಹಾಕಬೇಕು. ಅತೀ ಹೆಚ್ಚು ನೀರನ್ನು ಹಾಕಿದಾಗ ಕೊತ್ತಂಬರಿ ಗಿಡಗಳು ಕೊಳೆಯುತ್ತದೆ ಹಾಗೂ ಕಡಿಮೆ ನೀರು ಹಾಕಿದಾಗ ಒಣಗಿ ಹೋಗುವ ಸಾಧ್ಯತೆಗಳು ಇರುತ್ತವೆ. ಹಾಗಾಗಿ ಇದಕ್ಕೆ ಸಮಪ್ರಮಾಣದಲ್ಲಿ ನೀರನ್ನು ಹಾಕಬೇಕು. ಹೀಗೆ ಮೂವತ್ತೈದರಿಂದ ನಲವತ್ತು ದಿನಗಳ ಅಂತರದಲ್ಲಿ ಬೆಳೆದ ಕೊತ್ತಂಬರಿ ಸೊಪ್ಪನ್ನು ಕಿತ್ತು ಮಾರಾಟ ಮಾಡಬಹುದು. ಈ ರೀತಿಯಾಗಿ ರೈತರು ಆಗಿದ್ದರೂ ಅಥವಾ ಮನೆಯ ಖರ್ಚಿಗಾಗಿ ಆದರೂ ಕೊತ್ತಂಬರಿ ಸೊಪ್ಪನ್ನು ಸೈಡ್ ಇನ್ಕಮ್ ಆಗಿ ಬೆಳೆದುಕೊಳ್ಳಬಹುದು. ಈ ರೀತಿಯಾಗಿ ಸೈಡ್ ಇನ್ಕಮ್ ಆಗಿ ಬರೀ ಕೊತ್ತಂಬರಿ ಸೊಪ್ಪು ಮಾತ್ರವಲ್ಲದೆ ನಾವು ಬಳಸುವ ಸಾಂಬಾರು ಪದಾರ್ಥಗಳಲ್ಲಿ ಇನ್ನೂ ಅನೇಕ ಬೀಜ , ಕಾಳುಗಳನ್ನು ಬೆಳೆದು ಆದಾಯ ಗಳಿಸಬಹುದು.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave a Reply

Your email address will not be published. Required fields are marked *