ದಿನದಿಂದ ದಿನಕ್ಕೆ ಪೆಟ್ರೋಲ್ ಡಿಸೀಲ್ ಬೆಲೆ ಏರಿಕೆಯಾಗುತ್ತಿರುವ ಈ ದಿನಗಳಲ್ಲಿ ರೈತರಿಗೆ ನೆರವಾಗುವ ವಿದ್ಯುತ್ ಚಾಲಿತ ಟ್ರ್ಯಾಕ್ಟರ್ ನ್ನು ಸೋನಾಲಿಕಾ ಎಂಬ ಕಂಪನಿಯು ಅಭಿವೃದ್ಧಿ ಪಡಿಸಿದೆ. ಇದಕ್ಕೆ ಟೈಗರ್ ಟ್ರ್ಯಾಕ್ಟರ್ ಎಂದು ಹೆಸರಿಡಲಾಗಿದೆ. ಇದಕ್ಕೆ ಡೀಸೆಲ್‌ ಅವಶ್ಯಕತೆ ಇಲ್ಲ. ಕೇವಲ ಬ್ಯಾಟರಿ ಶಕ್ತಿಯಿಂದಲೇ ಕೆಲಸ ಮಾಡುತ್ತದೆ. ಇದರಿಂದ ವಾಯುಮಾಲಿನ್ಯ ಶೂನ್ಯ ಎಂದು ಹೇಳಲಾಗಿದೆ. ಈ ಪರಿಸರ ಸ್ನೇಹಿ ಟ್ರ್ಯಾಕ್ಟರ್‌ನಿಂದ ಹಲವಾರು ಪ್ರಯೋಜಗಳಿವೆ. ಮೊದಲನೆಯದಾಗಿ ಇದು ಹೊಗೆರಹಿತ ವಾಹನವಾಗಿದ್ದು, ಪರಿಸರ ಮಾಲಿನ್ಯ ತಡೆಗಟ್ಟಬಹುದು. ಅಲ್ಲದೆ ಇದಕ್ಕೆ ಪ್ರತಿಬಾರಿಯೂ ಡೀಸೆಲ್‌ ಹಾಕುವ ಖರ್ಚನ್ನು ತಪ್ಪಿಸುತ್ತದೆ. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ತಂತ್ರಜ್ಞಾನ ಮಂದುವರೆದ ಈ ಆಧುನಿಕ ಯುಗದಲ್ಲಿ ಮಾನವರ ಓಡಾಟಕ್ಕೆ ಅನುಕೂಲ ಆಗುವ ಬೈಕ್, ಕಾರು, ಆಟೋ, ಸ್ಕೂಟರ್ ಅಷ್ಟೇ ಅಲ್ಲದೆ ಕೃಷಿ ಕ್ಷೇತ್ರಕ್ಕೂ ಬಳಕೆಯಾಗಬಲ್ಲ ಟ್ರ್ಯಾಕ್ಟರನ್ನು ಸಹ ಕಂಡುಹಿಡಿಯಾಕಾಗಿದೆ. ಇದರಿಂದ ಕೃಷಿ ಕ್ಷೇತ್ರದಲ್ಲಿ ಹೊಸ ಸಂಚಲನವೇ ಸೃಷ್ಟಿಯಾಗುತ್ತಿದೆ. ಇನ್ನು ಈ ಸೋನಾಲಿಕಾ ಕಂಪನಿಯು ಅಭಿವೃದ್ಧಿ ಪಡಿಸಿದ ಟೈಗರ್ ಟ್ರ್ಯಾಕ್ಟರ್ ಬಗ್ಗೆ ಹೆಚ್ಚು ತಿಳಿದುಕೊಳ್ಳುವುದಾದರೆ ಇದನ್ನು ಕಳೆದ ವರ್ಷ ಅಂದರೆ 2020 ರ ಡಿಸೆಂಬರ್ 23 ರಂದು ರೈತರ ದಿನದಂದೇ ಸೋನಾಲಿಕ ಕಂಪನಿಯು ಈ ಟ್ರ್ಯಾಕ್ಟರನ್ನು ಬಿಡುಗಡೆ ಮಾಡಿತ್ತು. 11 ಕೆವಿ ಸಾಮರ್ಥ್ಯದ ಮೋಟರ್ ಹೊಂದಿರುವ ಈ ಟ್ರ್ಯಾಕ್ಟರ್ 25.5 ಕಿಲೋ ವ್ಯಾಟ್ ಸಾಮರ್ಥ್ಯ ಇರುವ ಲಿಥಿಯಂ ಅಯಾನ್ ಬ್ಯಾಟರಿಯನ್ನು ಹೊಂದಿದೆ.

ಟೈಗರ್ ಎಲೆಕ್ಟ್ರಿಕ್ ಟ್ರ್ಯಾಕ್ಟರ್ ಇದನ್ನು ಪಂಜಾಬ್ ನ ಹೋಶಿಯಾರ್ ಪುರ್ ನ ಸೊನಾಲಿಕಾ ಅವರ ಸಂಯೋಜಿತ ಟ್ರ್ಯಾಕ್ಟರ್ ಉತ್ಪಾದನಾ ಘಟಕದಲ್ಲಿ ತಯಾರಿಸಲಾಗುತ್ತದೆ. ಜರ್ಮನಿ ವಿನ್ಯಾಸದ ಈ ಟ್ರ್ಯಾಕ್ಟರ್ ಉತ್ತಮ ಪಿಕಪ್ ಮತ್ತು ಕಾರ್ಯಕ್ಷಮತೆಯನ್ನು ಹೊಂದಿದೆ. ಈ ಟ್ರ್ಯಾಕ್ಟರ್ ನಿಂದ ಶೇ. 75 ರಷ್ಟು ಇಂದನ ಉಳಿತಾಯವಾಗಲಿದೆ ಎಂದು ಕಂಪನಿ ತಿಳಿಸಿದೆ. ಟೈಗರ್ ಟ್ರ್ಯಾಕ್ಟರನ್ನು ಒಮ್ಮೆ ಚಾರ್ಜ್ ಮಾಡಿದರೆ ಸಾಕು, 2 ಟನ್ ಸಾಮರ್ಥ್ಯದ ಟ್ರಾಲಿಯ ಜೊತೆಗೆ ಎಂಟರಿಂದ ಹತ್ತು ಗಂಟೆಗಳ ಕಾಲ ಇದು ಕೆಲಸವನ್ನು ಮಾಡುತ್ತದೆ. ಮನೆಯಲ್ಲಿರುವ ತ್ರಿ ಪೈಂಟ್ ಚಾರ್ಜಿಂಗ್ ಪಿನ್ ಮೂಲಕವೇ ಬ್ಯಾಟರಿ ಚಾರ್ಜ್ ಮಾಡಬಹುದು. ನಾಲ್ಕು ಗಂಟೆಯಲ್ಲಿ ಈ ಬ್ಯಾಟರಿ ಫುಲ್ ಚಾರ್ಜ್ ಆಗುತ್ತದೆ. ಇನ್ನು ಈ ಈ ಸೋನಾಲಿಕಾ ಕಂಪನಿಯು ಅಭಿವೃದ್ಧಿ ಪಡಿಸಿದ ಟೈಗರ್ ಟ್ರ್ಯಾಕ್ಟರ್ ಇದರ ಬೆಲೆ ಎಷ್ಟು ಎಂದು ನೋಡುವುದಾದರೆ, ಎಕ್ಸ್ ಶೋರೂಂ ಇದರ ಬೆಳೆಯನ್ನು 5.99 ಲಕ್ಷ ರೂಪಾಯಿ ಎಂದು ಕಂಪನಿಯ ಪ್ರಕಟಣೆಯಲ್ಲಿ ತಿಳಿಸಿದೆ.

ಟೈಗರ್ ಎಲೆಕ್ಟ್ರಿಕ್ ಕಾರ್ಯಾಚರಣೆ ಯು ಸಾಮಾನ್ಯ ಟ್ರ್ಯಾಕ್ಟರ್ ಗಿಂತ ಭಿನ್ನವಾಗಿಲ್ಲ, ಇಂಧನ ವೆಚ್ಚವನ್ನು ಕಡಿತಮಾಡುವ ಮೂಲಕ ರೈತ ಸ್ನೇಹಿಯಾಗಿ ಕಾರ್ಯ ಮಾಡುತ್ತದೆ. ಗ್ರಾಹಕ ಕೇಂದ್ರಿತ ಬ್ರ್ಯಾಂಡ್ ಆಗಿ, ಭಾರತೀಯ ರೈತರು ಕಸ್ಟಮೈಸ್ಡ್ ಪರಿಹಾರಗಳನ್ನು ಒದಗಿಸಲು ಕಾಲಕಾಲಕ್ಕೆ ನಿರಂತರವಾಗಿ ಹೊಸ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದ್ದೇವೆ” ಎಂದು ಅವರು ಹೇಳಿದ್ದಾರೆ. ಸೋನಾಲಿಕಾ ಟ್ರ್ಯಾಕ್ಟರ್ಗಳು ಯಾವಾಗಲೂ ನಾವೀನ್ಯತೆಯ ಮುಂಚೂಣಿಯಲ್ಲಿವೆ ಮತ್ತು ವರ್ಗ ತಂತ್ರಜ್ಞಾನದಲ್ಲಿ ಅತ್ಯುತ್ತಮ ವಾಗಿ ಜಗತ್ತಿನಾದ್ಯಂತ, ಅದರಲ್ಲೂ ಯೂರೋಪ್ ಮತ್ತು ಯುಎಸ್ ಎ ಗೆ ಅತ್ಯುತ್ತಮ ವಾಗಿ ಸೇವೆ ಸಲ್ಲಿಸುತ್ತಲೇ ಇವೆ.

ಕೃಷಿ ಉತ್ಪಾದಕತೆ ಮತ್ತು ಲಾಭಗಳಿಕೆಯನ್ನು ಹೆಚ್ಚಿಸಲು ತಾಂತ್ರಿಕ ವಿಕಾಸಗಳನ್ನು ನಿರಂತರವಾಗಿ ಒದಗಿಸುವ ಪ್ರತಿಯೊಬ್ಬ ಭಾರತೀಯ ರೈತನಿಗೆ ನಾವು ನೀಡುವ ಭರವಸೆ ಟೈಗರ್ ಎಲೆಕ್ಟ್ರಿಕ್ ಟ್ರ್ಯಾಕ್ಟರ್ ನಲ್ಲಿ ಇದೆ, ರೈತರ ಸ್ನೇಹಿಯಾಗಿ, ಪರಿಸರಕ್ಕೆ ಪೂರಕವಾಗಿರುವ ನಿಟ್ಟಿನಲ್ಲಿ ಸೋನಾಲಿಕಾ ಕಂಪನಿಯು ಈ ಟ್ರ್ಯಾಕ್ಟರ್ ನ್ನು ನಿರ್ಮಿಸಿದೆ ಎಂದು ಸೊನಾಲಿಕಾ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ರಮಣ್ ಮಿತ್ತಲ್ ತಿಳಿಸಿದ್ದಾರೆ. ಒಟ್ಟಿನಲ್ಲಿ ರೈತರಿಗೂ ಅನುಕೂಲ ಆಗುವ ಹಾಗೆ ಪರಿಸರಕ್ಕೂ ಯಾವುದೇ ಹಾನಿ ಆಗದ ರೀತಿಯಲ್ಲಿ ಪೆಟ್ರೋಲ್ ದರ ಏರಿದ ಸಮಯದಲ್ಲಿ ಈ ಎಲೆಕ್ಟ್ರಿಕ್ ಟ್ರ್ಯಾಕ್ಟರ್ ಗಳು ಬಹಳ ಪ್ರಯೋಜನಕಾರಿ ಆಗುತ್ತವೆ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave a Reply

Your email address will not be published. Required fields are marked *