ಈ 8 ಕಾರಣಕ್ಕಾದ್ರು ಪ್ರತಿದಿನ ಹಸಿ ಕ್ಯಾರೆಟ್ ತಿನ್ನಬೇಕು ಅನ್ಸತ್ತೆ

0 3

ಕ್ಯಾರೆಟ್ ತಿಂದರೆ ಕಣ್ಣಿಗೆ ಬಹಳ ಒಳ್ಳೆಯದು ಎಂದು ಹಿರಿಯರು ಹೇಳುತ್ತಾ ಬಂದಿದ್ದನ್ನು ಕೇಳುತ್ತಲೇ ನಾವೂ ದೊಡ್ಡವರಾಗಿದ್ದೇವೆ ಎಂದು ಹೇಳಬಹುದು. ಕ್ಯಾರೆಟ್ ಸೇವನೆಯಿಂದ ಇದೊಂದೇ ಪ್ರಯೋಜನವಲ್ಲ. ಇದರಿಂದ ಇನ್ನೂ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ. ಇದೊಂದು ಸಡಿಲವಾದ ಮಣ್ಣಿನಲ್ಲಿ ಬೆಳೆಯುವ ಗಡ್ಡೆಯಾಗಿದ್ದು ಕೇಸರಿ ಬಣ್ಣದಲ್ಲಿನ ಕೋನಾಕೃತಿಯ ಗಡ್ಡೆಯಾಗಿದೆ. ಇದರಲ್ಲಿ ಹಲವಾರು ಪೋಷಕಾಂಶಗಳಿವೆ. ಇದರಲ್ಲಿ ಪ್ರಮುಖವಾಗಿರುವ ವಿಟಮಿನ್ ಎ ಕಣ್ಣಿನ ಆರೋಗ್ಯವನ್ನು ವೃದ್ಧಿಸುತ್ತದೆ. ಆದ್ದರಿಂದ ನಾವು ಇಲ್ಲಿ ಇದರ ಪ್ರಯೋಜನಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಕ್ಯಾರೆಟ್ ಇದನ್ನು ಕನ್ನಡದಲ್ಲಿ ಗಜ್ಜರಿ ಎಂದು ಕರೆಯುತ್ತಾರೆ. ಇದು ಸಹ ತರಕಾರಿಗಳಲ್ಲಿ ಒಂದು. ಜೀರ್ಣಾಂಗ ವ್ಯವಸ್ಥೆ, ತ್ವಚೆಯ ಆರೋಗ್ಯ, ಹೃದಯದ ಆರೋಗ್ಯ, ಮೆದುಳಿನ ಕ್ಷಮತೆ, ಎಲ್ಲವಕ್ಕೂ ಕಾಪಾಡುವಲ್ಲಿ ಕ್ಯಾರೆಟ್ ಉತ್ತಮ ಪಾತ್ರವನ್ನು ವಹಿಸುತ್ತದೆ. ಕ್ಯಾರೆಟ್ ಅನ್ನು ಹಸಿಯಾಗಿಯೂ ತಿನ್ನಬಹುದು. ಹಾಗೆಯೇ ಬೇಯಿಸಿಯೂ ತಿನ್ನಬಹುದು. ಸಾರು, ಸಾಂಬಾರ್ ಗಳಲ್ಲಿನ ತರಕಾರಿಯಾಗಿ ಬಳಸಬಹುದು. ಚಾಟ್ ಮಸಾಲಾ ಚಿಮುಕಿಸಿ ತಿನ್ನಬಹುದು. ಚಿಕ್ಕದಾಗಿ ತುರಿದು ಹಿಂಡಿ ರಸ ಸಂಗ್ರಹಿಸಿ ರಸವನ್ನೂ ಕುಡಿಯಬಹುದು. ಯಾವುದೇ ವಿಧಾನದಲ್ಲಿ ಸೇವಿಸಿದರೂ ಪ್ರಯೋಜನ ದೊರಕುವುದಂತೂ ಖಚಿತ.

ಆದರೆ ಹಸಿಯಾಗಿ ತಿಂದಾಗಲೇ ಇದರ ಗರಿಷ್ಟ ಪ್ರಯೋಜನ ಸಿಗುತ್ತದೆ. ಅದರಲ್ಲೂ ಇದರ ರಸವನ್ನು ಸೇವಿಸಿದಾಗ ಸಾಂದ್ರೀಕೃತ ಪ್ರಮಾಣದಲ್ಲಿ ಪೋಷಕಾಂಶಗಳು ದೊರಕುವುದರಿಂದ ಆರೋಗ್ಯಕ್ಕೆ ಹೆಚ್ಚಿನ ಲಾಭವಿದೆ. ಹಾಗೆಯೇ ಇದನ್ನು ಜ್ಯೂಸ್ ಮಾಡಿ ಕುಡಿಯುವುದರಿಂದ ಬಹಳ ಪ್ರಯೋಜನಗಳಿವೆ. ಕ್ಯಾರೆಟ್ ಇದರಿಂದ ಕಣ್ಣಿನ ಯಾವುದೇ ತೊಂದರೆ ಇದ್ದರೂ ದೂರವಾಗುತ್ತದೆ. ಹಾಗೆಯೇ ಇದು ಜೀರ್ಣಕ್ರಿಯೆ ಶಕ್ತಿಯನ್ನು ವೃದ್ಧಿಸುತ್ತದೆ. ಕೆಟ್ಟ ಬ್ಯಾಕ್ಟೀರಿಯಾಗಳಿಂದ ದೇಹವನ್ನು ರಕ್ಷಿಸುತ್ತದೆ. ಹಾಗೆ ಕ್ಯಾರೆಟ್ ಹಸಿಯಾಗಿ ಹೋಳುಗಳನ್ನು ಮಾಡಿ ತಿನ್ನುವುದರಿಂದ ಚರ್ಮದ ರಕ್ಷಣೆಯನ್ನು ಮಾಡುತ್ತದೆ. ನೇರಳಾತೀತ ಕಿರಣಗಳಿಂದ ಚರ್ಮಗಳಿಗೆ ಉಂಟಾಗುವ ದುಷ್ಪರಿಣಾಮಗಳನ್ನು ದೂರಮಾಡುತ್ತದೆ.

ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ನೀಡುತ್ತದೆ. ಹಾಗೆಯೇ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಯಾವುದೇ ರೀತಿ ಸೋಂಕುಗಳು ಇದ್ದರೂ ಅವುಗಳನ್ನು ದೇಹದಿಂದ ಹೊರ ಹಾಕುತ್ತದೆ. ಹಾಗೆಯೇ ಶ್ವಾಸಕೋಶಗಳ ಆರೋಗ್ಯವನ್ನು ಕಾಪಾಡುತ್ತದೆ. ಹಾಗೆಯೇ ಇದು ಫೈಬರ್ ಅಂಶವನ್ನು ಹೊಂದಿದ್ದು ದೇಹವನ್ನು ಗಟ್ಟಿಯಾಗಿ ಮಾಡುತ್ತದೆ. ಹಾಗೆಯೇ ದಿನನಿತ್ಯ ಇದನ್ನು ಸೇವನೆ ಮಾಡುವುದರಿಂದ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ ಒಳ್ಳೆಯ ಕೊಲೆಸ್ಟ್ರಾಲ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಹಾಗೆಯೇ ಮೆದುಳಿನ ಆರೋಗ್ಯವನ್ನು ಕಾಪಾಡಿ ಅತ್ಯಂತ ವೇಗವಾಗಿ ಕೆಲಸ ಮಾಡುವಂತೆ ಮಾಡುತ್ತದೆ. ಆದ್ದರಿಂದ ಇದನ್ನು ತಿಂದು ಪ್ರಯೋಜನ ಪಡೆದುಕೊಳ್ಳಿ.

Leave A Reply

Your email address will not be published.