ಪಿಎಸ್ಐ ಅಧಿಕಾರಿಗಳ ಸಂಬಳ ಎಷ್ಟಿರುತ್ತೆ ಗೊತ್ತೇ

0 0

ದೇಶದ ಒಳಗೆ ಜನಸಾಮಾನ್ಯರ ರಕ್ಷಣೆ ಮಾಡುವ ಕೆಲಸವೆಂದರೆ ಅದು ಪೋಲಿಸ್ ಉದ್ಯೋಗ. ದಿನದ 24 ಗಂಟೆಗಳಲ್ಲಿ  ತಮ್ಮ ಸೇವೆಯನ್ನು ಮಾಡುವಂತಹ ಒಂದು ಉತ್ತಮ ಕೆಲಸವಾಗಿದೆ. ಅವರಿಗೆ  ಆ ಸೇವೆಗೆ  ಸರ್ಕಾರದಿಂದ ವೇತನ ದೊರೆಯುತ್ತದೆ. ಅದರಲ್ಲಿ ವಿವಿಧ ಹುದ್ದೆಗೆ ಅನುಗುಣವಾಗಿ ವಿವಿಧ ವೇತನಶ್ರೇಣಿ ಯು ಇರುತ್ತದೆ. ಪಿ ಸಿ, ಪಿ ಎಸ್ ಐ, ಡಿ ಎಸ್ ಐ , ಡಿಸಿ ಹೀಗೆ ವಿವಿಧ ರೀತಿಯ ಹುದ್ದೆಗಳು ಇದರೊಳಗೆ ಅಡಕವಾಗಿದೆ. ಅದರಲ್ಲಿ ಪಿಎಸ್ಐ ಹುದ್ದೆಯಲ್ಲಿರುವ ವೇತನ ಶ್ರೇಣಿಯ ವಿವರವನ್ನು ನಾವಿಂದು ತಿಳಿದುಕೊಳ್ಳೋಣ.

ಪಿಎಸ್ಐ ಹುದ್ದೆಯಲ್ಲಿ ಹುದ್ದೆಗೆ ಸೇರಿದಾಗ ನಿಂದ ಅವರು ನಿವೃತ್ತಿಯ ಬೆಳಗಿನ ವೇತನ ಶ್ರೇಣಿಯನ್ನು ನಿಗದಿಪಡಿಸಿರುತ್ತಾರೆ. ಅಂದರೆ ಅವರ ಸೇವೆಯ ಸರ್ವಿಸ್ ಮೇಲೆ ವೇತನದ ಹೆಚ್ಚುಗಾರಿಕೆ ಆಗುತ್ತದೆ. ಅಂದರೆ ಅವರು ಸೇರಿದಾಗಿನ ಬೇಸಿಕ್ ಮೊತ್ತ 37,900 ರೂ ಇದ್ದು ಅವರ ನಿವೃತ್ತಿ ವೇಳೆಗೆ ಅಜಮಾಸು 70,850 ವರೆಗೆ ದೊರೆಯುತ್ತದೆ. 37900 ಬೇಸಿಕ್ ಮತವಾದರೆ ಇದಕ್ಕೆ ಡಿಎ ಸೇರಿಕೊಳ್ಳುತ್ತದೆ. ಡಿಎ ವರ್ಷಕ್ಕೆ ಎರಡು ಸಾರಿ ಹೆಚ್ಚುವರಿ ಸೇರಿಸಲಾಗುತ್ತದೆ. ಈಗಿರುವ ಡಿಎ 11.25% ಬೇಸಿಕ್ ಮೇಲೆ ದೊರೆಯುತ್ತದೆ. ಅಂದರೆ ಆ ಮೊತ್ತ  4,164 ಆಗುತ್ತದೆ. ಪಿಎಸ್ಐ ಅವರಿಗೆ  ಪೊಲೀಸ್ ಕ್ವಾಟರ್ಸ್ ಉಳಿಯಲು ವ್ಯವಸ್ಥೆ ಇಲ್ಲದೇ ಇದ್ದರೆ ಹೆಚ್.ಆರ್.ಎ. ನೀಡುತ್ತಾರೆ.

ಉಳಿಯುವ ಹೆಡ್ ಕ್ವಾಟರ್ ವ್ಯವಸ್ಥೆಯಿದ್ದರೆ ಹೆಚ್.ಆರ್.ಎ. ಅವರ ಬಳಿಯಲ್ಲಿ ಇಟ್ಟುಕೊಳ್ಳುತ್ತಾರೆ. ಇದರಲ್ಲಿ ಮೂರು ವಿಧವಾದ ಅಂದರೆ 8%,16%,24% ರೂಪದಲ್ಲಿ ನೀಡುತ್ತಾರೆ. ಆಯಾ ಪ್ರದೇಶದ ವ್ಯವಸ್ಥೆ ಅನುಗುಣವಾಗಿ ಇದನ್ನು ಅಳವಡಿಸಲಾಗುತ್ತದೆ. ಇದರ ಜೊತೆಗೆ ಮುಖ್ಯವಾಗಿ ಮೆಡಿಕಲ್ ಅಲ್ಲೋವನ್ಸ್ ದೊರೆಯುತ್ತದೆ. ಅಂದರೆ ಇದು ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ 200ರೂ ಅಂತೇ ದೊರೆಯುತ್ತದೆ. ಜೊತೆಗೆ ಅದರ ಅಲಯನ್ಸ್ ದೊರೆಯುತ್ತದೆ. ಅಲಯನ್ಸಸ್ ಎಂದರೆ ಅದರೊಳಗೆ ಯೂನಿಫಾರ್ಮ್ ಸಂಬಂಧಪಟ್ಟಂತೆ, ರಿಸ್ಕ್ ಗಳ ಸಂಬಂಧಪಟ್ಟಂತೆ ಇರಬಹುದು. ಹಾಗೆ ಇನ್ನಿತರ ವಿಚಾರಗಳ ಭತ್ಯೆಗಳನ್ನು ಒಳಗೊಂಡಿರುತ್ತದೆ. ಅಜಮಾಸು ಮೂರು ಸಾವಿರ ರೂಗಳು ಪಿಎಸ್ಐ ಅವರಿಗೆ ಇತರೆ ಭತ್ಯೆ ರೂಪದಲ್ಲಿ ದೊರೆಯುತ್ತದೆ. ಇವೆಲ್ಲ ಮೊತ್ತವನ್ನು ಸೇರಿಸಿದಾಗ ಗ್ರೋಸ್ ಮೊತ್ತ ದೊರೆಯುತ್ತದೆ.

ಇದರೊಳಗೆ ಕೆಲವೊಂದು ಕಡತಗಳು ಕೂಡ ಇರುತ್ತವೆ. ಇದನ್ನು ಕಡ್ಡಾಯವಾಗಿ ಮಾಡಲೇಬೇಕಾಗುತ್ತದೆ. ಇದರೊಳಗೆ ಮೊದಲನೇದಾಗಿ ಪ್ರೊಫೆಷನಲ್ ಟ್ಯಾಕ್ಸ್  200 ರೂ ಕಟ್ ಆಗುತ್ತದೆ. ಜೊತೆಗೆ ಐಜಿಎಸ್ಐ ಗೆ ಕೂಡ ಹಣ ಕಟ್ ಆಗುತ್ತದೆ. ಜೊತೆಗೆ ಕೆಜಿಐಡಿ ಇನ್ಸೂರೆನ್ಸ್ ಗೂ ಹಣ ಕಟ್ ಆಗುತ್ತದೆ. ಜೊತೆಗೆ 2006ರ ನಂತರ ಹುದ್ದೆಗೆ ಸೇರಿದವರಿಗೆ ನ್ಯಾಷನಲ್ ಪೆನ್ಶನ್  ಸ್ಕೀಮ್ ನ್ನಲ್ಲಿ ಹಣವು ಕಟ್ ಆಗುತ್ತದೆ. ಅದರೊಳಗೆ 10% ಮುರೀತಾಯ ಮಾಡುತ್ತಾರೆ. ಇವಿಷ್ಟು ಕಡ್ಡಾಯವಾಗಿ ಮಾಡಲೇಬೇಕಾದ ಮುರಿತಾಯವಾಗಿದೆ. ಇದರ ಹೊರತಾಗಿ ಎಲ್ಐಸಿ ಗಳ ರೂಪದಲ್ಲಿ ಕಡಿತವನ್ನು ಮಾಡಿಕೊಳ್ಳಬಹುದು. ಹೀಗೆ ಮಾಡಿಸುವುದರಿಂದ ಇನ್ಕಮ್ ಟ್ಯಾಕ್ಸ್ ತುಂಬುವುದರಲ್ಲಿ ತುಂಬಾ ಸಹಾಯವಾಗುತ್ತದೆ. ಇವೆಲ್ಲ ಕಡಿತಗಳ ನಂತರ ಒಟ್ಟು ಮೊತ್ತ ಅವರ ಕೈಗೆ ದೊರಕುತ್ತದೆ. ಇದು ಪಿಎಸ್ಐರವರ ವೇತನದ ವಿವರವಾಗಿದೆ.

Leave A Reply

Your email address will not be published.