ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರದಲ್ಲಿ ಇತ್ತೀಚೆಗೆ ಪ್ರತಿ ಬ್ಯಾರೆಲ್‌ ದರ 70 ರಿಂದ 65 ಡಾಲರ್‌ಗೆ ಇಳಿಕೆಯಾಗಿದ್ದು, ಪೆಟ್ರೋಲ್‌ ದರದಲ್ಲಿ 2 ರೂಪಯಿ ಅಷ್ಟು ಇಳಿಕೆ ಮಾಡಲು ಅವಕಾಶ ಇದೆ ಎಂದು ವರದಿಯಾಗಿದೆ.  ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ದಾಖಲೆಯ ಗರಿಷ್ಠ ಮಟ್ಟ ತಲುಪಿದೆ. ಆದರೆ ಈ ವಾರ ಕೊಂಚ ನಿರಾಳವಾಗಿದ್ದ ಕಾರಣ ಈ ವಾರದಲ್ಲಿ 2ನೇ ಬಾರಿಗೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಕೆಯಾಗಿದೆ. ದೇಶದೆಲ್ಲೆಡೆ ತೈಲ ಬೆಲೆಯಲ್ಲಿ 20 ಪೈಸೆ ಇಳಿಕೆಯಾಗಿದೆ. ಈ ವಾರದಲ್ಲಿ ಒಟ್ಟು 60 ಪೈಸೆ ಇಳಿಕೆಯಾಗಿದೆ. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC) ಇದರ ಅಧಿಸೂಚನೆಯ ಪ್ರಕಾರ, ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು 20 ಪೈಸೆ ವರೆಗೆ ಇಳಿಸಲಾಗಿದೆ. ಈ ಬೆಲೆ ಇಳಿಕೆ 20 ಪೈಸೆಯಾಗಿದ್ದರೂ ಒಂದು ಹಂತದ ಸಮಾಧಾನ ತಂದಿದೆ. ಏರಿಕೆಯಾಗುತ್ತಿದ್ದ ಬೆಲೆ ಇದೀಗ ಇಳಿಮುಖವಾಗಿರುವುದೇ ಸಮಾಧಾನ.

ಕಳೆದ ಎರಡು ವಾರಗಳೊಂದೀಚೆಗೆ ಕಚ್ಚಾ ತೈಲ ದರದಲ್ಲಿ ಇಳಿಕೆಯಾಗುತ್ತಿದೆ. ಕಳೆದ ತಿಂಗಳು ಪ್ರತಿ ಬ್ಯಾರೆಲ್‌ಗೆ 77 ಡಾಲರ್‌ಗಳ ಎತ್ತರಕ್ಕೇರಿದ್ದ ದರ ಈಗ 65 ಡಾಲರ್‌ಗೆ ಇಳಿದಿದೆ. ಹೀಗಿದ್ದರೂ, ಭಾರತದಲ್ಲಿ ಗ್ರಾಹಕರಿಗೆ ಪೆಟ್ರೋಲ್‌ ದರ ತಗ್ಗಿಲ್ಲ. ಬೆಲೆ ಇಳಿಕೆಯಿಂದ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 105.13 ರೂಪಾಯಿಯಾಗಿದ್ದು, ಡೀಸೆಲ್ ಬೆಲೆ 94.49 ರೂಪಾಯಿ ಆಗಿದೆ.

ಏರಿಕೆ ರಾಕೆಟ್ ವೇಗದಲ್ಲಿ ಆಗಿದ್ದರೆ, ಇಳಿಕೆ ಸಿಟಿ ಬಸ್ ರೀತಿ ಇದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಕಳೆದ ಜುಲೈನಲ್ಲಿ ಕಚ್ಚಾ ತೈಲ ದರ ಬ್ಯಾರೆಲ್‌ಗೆ ಸರಾಸರಿ 73.54 ಡಾಲರ್‌ನಷ್ಟಿತ್ತು. ಹೀಗಿದ್ದರೂ ಆಗಸ್ಟ್‌ನಲ್ಲಿಸರಾಸರಿ 70.58 ಡಾಲರ್‌ಗೆ ಇಳಿದಿತ್ತು. ತಜ್ಞರ ಪ್ರಕಾರ ಕಚ್ಚಾ ತೈಲ ದರದಲ್ಲಿ1 ಡಾಲರ್‌ ಇಳಿಕೆಯಾದರೆ, ರಿಟೇಲ್‌ ದರದಲ್ಲಿಲೀಟರ್‌ಗೆ ರೂಪಾಯಿ-ಡಾಲರ್‌ ವಿನಿಮಯ ದರದಲ್ಲಿಮಹತ್ವದ ಬದಲಾವಣೆ ಇಲ್ಲದೆ 45-50 ಪೈಸೆ ಕಡಿತಗೊಳಿಸಲು ಅವಕಾಶ ಸೃಷ್ಟಿಯಾಗುತ್ತದೆ. ಈ ಲೆಕ್ಕಾಚಾರದ ಪ್ರಕಾರ ತೈಲ ಕಂಪನಿಗಳು ಲೀಟರ್‌ಗೆ 1.5 ರೂ.ಗಳಿಂದ 2 ರೂ. ತನಕ ದರ ಕಡಿತಗೊಳಿಸಬಹುದು.

ದೆಹಲಿಯಲ್ಲಿ ಪರಿಷ್ಕೃತ ಪೆಟ್ರೋಲ್ ದರ 101.64 ರೂಪಾಯಿ ಆಗಿದ್ದರೆ ಡೀಸೆಲ್ ಬೆಲೆ 89.07 ರೂಪಾಯಿ ಆಗಿದೆ. ಇನ್ನು ಮುಂಬೈನಲ್ಲಿ ಪೆಟ್ರೋಲ್ ಬೆಲೆ 107.66 ರೂಪಾಯಿ ಹಾಗೂ ಡೀಸೆಲ್ ಬೆಲೆ 96.64 ರೂಪಾಯಿ. ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 99.32 ರೂಪಾಯಿ ಹಾಗೂ ಡೀಸೆಲ್ ಬೆಲೆ 93.66 ರೂಪಾಯಿ ಆಗಿದೆ.

ಇನ್ನು ಕೋಲ್ಕತಾದಲ್ಲಿ ಪೆಟ್ರೋಲ್ ಬೆಲೆ 101.93 ರೂಪಾಯಿ ಹಾಗೂ ಡೀಸೆಲ್ ಬೆಲೆ 94.49 ರೂಪಾಯಿ ಆಗಿದೆ. ಇನ್ನು ಹೈದಾರಾಬಾದ್‌ನಲ್ಲಿ ಪೆಟ್ರೋಲ್ ಬೆಲೆ 105.69 ರೂಪಾಯಿ ಹಾಗೂ ಡೀಸೆಲ್ ಬೆಲೆ 97.15 ರೂಪಾಯಿ ಆಗಿದೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಿಂದ ಅಗತ್ಯವಸ್ತುಗಳ ಬೆಲೆ ಕೂಡ ಏರಿಕೆಯಾಗಿದೆ. 

19 ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ 100ರ ಗಡಿ ದಾಟಿ ಮುನ್ನುಗ್ಗಿತ್ತು. ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಹಾಣ, ಕರ್ನಾಟಕ, ಒಡಿಶಾ, ಜಮ್ಮು ಮತ್ತು ಕಾಶ್ಮೀರ, ಲಡಾಕ್ ಕೂಡಾ ಈ ಪಟ್ಟಿಯಲ್ಲಿ ಸೇರಿವೆ. ಇದರ ಹೊರತಾಗಿ ಪ್ರಮುಖ ಮೆಟ್ರೋ ನಗರಗಳಾದ ಮುಂಬೈ, ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿಯೂ ಲೀಟರ್ ಪೆಟ್ರೋಲ್ ಬೆಲೆ ಗರಿಷ್ಠ ಮಟ್ಟದಲ್ಲಿದೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕಗಳನ್ನು ಸೇರಿಸಿದ ನಂತರ, ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಪ್ರತಿನಿತ್ಯ ಹೊಸ ದರಗಳು ಬೆಳಿಗ್ಗೆ 6 ಗಂಟೆಗೆ ನಿಗದಿಯಾಗುತ್ತವೆ.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

By

Leave a Reply

Your email address will not be published. Required fields are marked *