ಜಗತ್ತಿನಾದ್ಯಂತ ಕೊರೊನ ಅನ್ನೋ ಮಹಾಮಾರಿಯಾ ಪಭಾವ ಹೆಚ್ಚಾಗಿದ್ದು ಜನರ ಸ್ಥಿತಿ ಅದೋಗತಿಗೆ ಹೋಗಿದೆ. ಇನ್ನು ಭಾರತದಲ್ಲಿ ಕೊರೊನ ಹೆಚ್ಚಾಗಿದ್ದು ವಿಶ್ವದಲ್ಲೇ ಅತಿ ಹೆಚ್ಚು ಕೊರೊನ ಸೋಂಕಿತರು ಇರುವ 3 ದೇಶ ಎಂಬುದಾಗಿ ಗುರುತಿಸಿಕೊಂಡಿದೆ. ಹಲವು ಸಂಶೋಧನೆಗಳು ಕೊರೊನಕ್ಕೆ ಲಸಿಕೆ ಕಂಡುಹಿಡಿಯುವಲ್ಲಿ ಮುಂದಾಗಿದೆ. ಅದರಲ್ಲಿ ಭಾರತದ ಸಂಸ್ಥೆಯೊಂದು ಭಾರತೀಯರಿಗೆ ಗುಡ್ ನ್ಯೂಸ್ ಕೊಡುವಲ್ಲಿ ಮುಂದಾಗಿದೆ ಕೊರೊನಕ್ಕೆ ಇನ್ನು ಕೆಲವೇ 73 ದಿನಗಳಲ್ಲಿ ಜನರ ಕೈಗೆ ಲಸಿಕೆ ಸಿಗುತ್ತೆ ಅನ್ನೋದನ್ನ ಹೇಳುತ್ತಿದೆ ಅಷ್ಟಕ್ಕೂ ಈ ಸಂಸ್ಥೆ ಯಾವುದು ನಿಜಕ್ಕೂ ಕೊರೊನಕ್ಕೆ ಲಸಿಕೆ ಸಿಗುತ್ತಾ ಅನ್ನೋದನ್ನ ಮುಂದೆ ನೋಡಿ.

ಭಾರತದ ಪುಣೆ ಮೂಲದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಅನ್ನೊ ಸಂಸ್ಥೆ ಇನ್ನು 73 ದಿನಗಳಲ್ಲಿ ಲಸಿಕೆ ಮಾರಾಟಕ್ಕೆ ಮುಕ್ತ ಮಾಡಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲದೆ ಈ ಲಸಿಕೆ ಸಿದ್ಧಪಡಿಸಲು ಪುಣೆ ಮೂಲದ ಸಂಸ್ಥೆ ಬ್ರಿಟನ್ ನಲ್ಲಿರುವ ಆಕ್ಸ್ ಫರ್ಡ್ ಯೂನಿವರ್ಸಿಟಿ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.

ಆಕ್ಸ್ ಫರ್ಡ್ ಯೂನಿವರ್ಸಿಟಿ ಮತ್ತು ಆಸ್ಟ್ರಜೇನಿಕಾ ಎಂಬ ಸಂಸ್ಥೆ ಅಭಿವೃದ್ಧಿ ಪಡಸಿರುವ ಕೋವಿಶೀಲ್ಡ್ ಲಸಿಕೆಯನ್ನು ಭಾರತದಲ್ಲಿ ಉತ್ಪಾದಿಸಲು ಅನುಮತಿ ಪಡೆದುಕೊಂಡಿದ್ದಾರೆ. ಆದ್ದರಿಂದ ಈ ಕೋವಿಶಿಲ್ಡ್ ಅನ್ನೋ ಹೆಸರಿನ ಲಸಿಕೆ ಮೊದಲ ಬಾರಿಗೆ ೧೬೦೦ ಕ್ಕೂ ಹೆಚ್ಚು ಜನರ ಮೇಲೆ ಪ್ರಯೋಗ ಮಾಡಲು ಮುಂದಾಗಿದ್ದು, ಈ ಒಂದು ಲಸಿಕೆಯ ಪ್ರಯೋಗವನ್ನು ಭಾರತದಲ್ಲಿ ೫೮ ದಿನಗಳ ಕಾಲ ನಡೆಸಿ ನಂತರ ೭೩ ದಿನಗಳಲ್ಲಿ ಅಂದ್ರೆ ಅಕ್ಟೊಬರ್ ಕೊನೆಯ ದಿನಗಳಲ್ಲಿ ಜನರ ಕೈಗೆ ಈ ಲಸಿಕೆ ಸಿಗುವಂತೆ ಮಾಡಲಾಗುವುದು ಅನ್ನೋದನ್ನ ಹೇಳಲಾಗುತ್ತಿದೆ ಆದ್ರೆ ಈ ಲಸಿಕೆ ಪ್ರಯೋಗದಲ್ಲಿದ್ದು ಬೇಗನೆ ಯಶಸ್ಸು ಕಾಣಲಿ ಜನರ ಕೈಗೆ ಈ ಲಸಿಕೆ ಸಿಗಲಿ ಅನ್ನೋದು ನಮ್ಮ ಆಶಯ.

By

Leave a Reply

Your email address will not be published. Required fields are marked *