ಲವಂಗವನ್ನ ಕೇವಲ ಅಡುಗೆಯಲ್ಲಿ ಒಂದು ಸಾಂಬಾರ ಪದಾರ್ಥವಾಗಿ ಮಾತ್ರ ಬಳಸಿ ಗೊತ್ತು ಆದರೆ ಲವಂಗದಿಂದಲೂ ಸಹ ನಾವು ನಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂಬ ವಿಚಾರ ಎಷ್ಟೋ ಜನರಿಗೆ ತಿಳಿದೇ ಇರಲ್ಲ‌ . ಲವಂಗದಿಂದ ನಾವು ನಮ್ಮ ದೇಹದ ಎಷ್ಟೋ ಸಮಸ್ಯೆಗಳನ್ನು ಈ ಲವಂಗದಿಂದ ಪರಿಹರಿಸಿಕೊಳ್ಳಬಹುದು‌. ಪ್ರಮುಖ ಸಾಂಬಾರ ಪದಾರ್ಥಗಳಲ್ಲಿ ಒಂದಾಗಿರುವ ಲವಂಗವನ್ನ ನಮ್ಮ ದೇಶದಿಂದ ಹೊರದೇಶಗಳಿಗೂ ರಫ್ತು ಮಾಡಲಾಗುತ್ತಿದೆ. ಆದರೆ ಈ ಲವಂಗವನ್ನ ಅಡುಗೆಗೆ ಮಾತ್ರ ಬಳಸುವುದಲ್ಲದೇ ನಮ್ಮ ದೇಹಕ್ಕೆ ಆಗುವ ಹಲವಾರು ಪ್ರಯೋಜನಗಳ ಕುರಿತು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಲವಂಗ ಒತ್ತಡವನ್ನ ನಿವಾರಣೆ ಮಾಡಿ ದೇಹವನ್ನ ಸಮ ಸ್ಥಿತಿಗೆ ತರುತ್ತದೆ. ಲವಂಗ ಶುಂಠಿ ಎಲಕ್ಕಿ ಮತ್ತು ಪುದೀನಾವನ್ನು ಬಳಸಿ ಚಹಾ ಮಾಡಿ ಕುಡಿಯುವುದರಿಂದ ನಮ್ಮ ದೇಹದ ಒತ್ತಡವನ್ನ ನಿವಾರಣೆ ಮಾಡಿಕೊಳ್ಳಬಹುದು. ಕೆಲವರಿಗೆ ಪ್ರಯಾಣ ಮಾಡುವಾಗ ವಾಕರಿಕೆ ಬಂದ ಹಾಗೇ ಆಗತ್ತೆ ಅಥವಾ ತಿಂದ ಆಹಾರ ಜೀರ್ಣ ಆಗದೇ ಪಿತ್ತ ಆಗಿ ಸಹ ವಾಕರಿಕೆ ಆಗತ್ತೆ. ಇದಕ್ಕೆ ಲವಂಗವನ್ನ ಬಳಸುವುದೇ ಸೂಕ್ತ ಪರಿಹಾರ‌. ಇದನ್ನು ಆಯುರ್ವೇದದಲ್ಲಿ ಕೂಡ ಉಲ್ಲೇಖಿಸಲಾಗಿದೆ.

ಟೂತ್ ಪೇಸ್ಟ್ ಗಳಲ್ಲಿ ಸಹ ನಮ್ಮ ಹಲ್ಲಿನ ಆರೋಗ್ಯದ ದ್ರಷ್ಟಿಯಿಂದ ಲವಂಗವನ್ನು ಬಳಸಲಾಗುತ್ತದೆ. ಹಲ್ಲು ನೋವಾದಗ ಲವಂಗಕ್ಕೆ ಒಂದು ಚಮಚ ನಿಂಬೆರಸವನ್ನ ಸೇರಿಸಿ ಹಲ್ಲು ನೋವು ಇರುವ ಜಾಗದಲ್ಲಿ ಇಟ್ಟುಕೊಂಡರೆ ಹಲ್ಲು ನೋವು ಕಡಿಮೆ ಆಗುತ್ತದೆ. ಅಷ್ಟೇ ಅಲ್ಲದೇ ಹಲ್ಲುಗಳಲ್ಲಿರುವ ಬ್ಯಾಕ್ಟೀರಿಯ ಕೂಡ ಹೊರಗೆ ಬರತ್ತೆ‌. ಪ್ರತೀ ನಿತ್ಯ ೨ಲವಂಗ ಮತ್ತು ೧ಏಲಕ್ಕಿಯನ್ನ ಜಗಿಯುತ್ತಾ ಇದ್ದರೆ ಬಾಯಿಯ ದುರ್ವಾಸನೆ ಸಹ ಕಡಿಮೆ ಆಗತ್ತೆ‌ . ಹಾಗೇ ಬಾಯಲ್ಲಿ ಹುಣ್ಣು ಆಗಿದ್ದರೆ ಎರಡು ಲವಂಗವನ್ನ ಜಜ್ಜೀ ಬಾಯಲ್ಲಿಟ್ಟುಕೊಂಡರೆ ಹುಣ್ಣು ಕಡಿಮೆ ಆಗತ್ತೆ.

ಶೀತ ಮತ್ತು ಜ್ವರಕ್ಕೆ, ಒಂದು ಲೋಟ ಬಿಸಿ ನೀರಿಗೆ ಲವಂಗವನ್ನು ಜಜ್ಜಿ ಹಾಕಿ ಕುಡಿಯುವುದರಿಂದ ಶೀತ ಕಡಿಮೆ ಆಗತ್ತೆ. ೨ ಲವಂಗ ಮತ್ತು ೪/೫ ತುಳಸಿ ಎಲೆಗಳನ್ನ ನೀರಿಗೆ ಹಾಕಿ ಕುದಿಸಿ ಆರಿಸಿ ಸ್ವಲ್ಪ ಜೇನು ತುಪ್ಪ ಬೆರೆಸಿ ಕುಡಿಯುವುದರಿಂದ ಶೀತ ಮತ್ತು ಜ್ವರ ಕಡಿಮೆ ಆಗುತ್ತದೆ. ಹಾಗೇ ಕತ್ತು ನೋವಿಗೆ , ಸಾಸಿವೆ ಎಣ್ಣೆಗೆ ೨ ಲವಂಗವನ್ನ ಸೇರಿಸಿ ಸ್ವಲ್ಪ ಬಿಸಿ ಮಾಡಿ ಕುತ್ತಿಗೆ ನೋವಿರುವ ಜಾಗಕ್ಕೆ ಹಚ್ಚಿ ಮಸಾಜ್ ಮಾಡಿದರೆ ಕುತ್ತಿಗೆ ನೋವು ಕಡಿಮೆ ಆಗತ್ತೆ. ಪ್ರತೀ ನಿತ್ಯ ೨ ಲವಂಗವನ್ನ ನೀರಿಗೆ ಹಾಕಿ ಕುದಿಸಿ ತಣ್ಣಗಾದ ಮೇಲೆ ಕುಡಿಯುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ದೂರ ಆಗತ್ತೆ. ಜೊತೆಗೆ ಪ್ರತೀ ನಿತ್ಯ ೧ ಲವಂಗವನ್ನ ಊಟದ ನಂತರ ಸೇವಿಸುವುದರಿಂದ ಅಜೀರ್ಣದ ಸಮಸ್ಯೆ ಕೂಡಾ ನಿವಾರಣೆ ಆಗುತ್ತದೆ‌ . ಹಾಗಾಗಿ ನಮ್ಮ ದೆಹಕ್ಕೆ ಇಷ್ಟೊಂದು ಪ್ರಯೋಜನ ಇರುವ ಲವಂಗವನ್ನ ನಾವು ಪ್ರತೀ ದಿನವೂ ಸೇವಿಸುವುದರಿಂದ ನಮ್ಮ ಆರೋಗ್ಯವನ್ನ ಕಾಪಾಡಿಕೊಳ್ಳಬಹುದು.

By

Leave a Reply

Your email address will not be published. Required fields are marked *