ಊಟಕ್ಕೆ ಉಪ್ಪಿನಕಾಯಿ ಬೇಕೆ ಬೇಕು. ನಮ್ಮ ಹಿರಿಯರು ಅವರ ಕಾಲದಲ್ಲಿ ಉಪ್ಪಿನಕಾಯಿಯನ್ನು ಚೆನ್ನಾಗಿ ರುಚಿಯಾಗಿ ವರ್ಷಕ್ಕೆ ಸಾಕಾಗುವಷ್ಟು ಒಂದೆಸಲ ಮಾಡಿ ಇಡ್ತಾ ಇದ್ರು. ಆದ್ರೆ ಈಗ ಅವರ ಕೈ ರುಚಿ ನಮಗೆ ಮಾಡೋಕೆ ಬರಲ್ಲ ಸುಮಾರು ಎಲ್ಲರ ಮನೆಯಲ್ಲೂ ಈಗ ಹೊರಗಡೆ ಸಿಗುವ ರೆಡಿಮೇಡ್ ಉಪ್ಪಿನಕಾಯಿಗಳದ್ದೇ ಹಾವಳಿ. ಎಷ್ಟೇ ದುಡ್ಡು ಕೊಟ್ಟು ತಂದಿರುವ ಉಪ್ಪಿನಕಾಯಿ ಆದರೂ ಸಹ ಮನೆಯಲ್ಲಿ ಮಾಡಿದ ರುಚಿ ಸಿಗಲ್ಲ. ಹಾಗಾಗಿ ಮನೆಯಲ್ಲೇ ಸುಲಭವಾಗಿ ವರ್ಷಗಳ ಕಾಲ ಮಾವಿನಕಾಯಿ ಉಪ್ಪಿನಕಾಯಿ ಕೆಡದ ಹಾಗೆ ಹೇಗೆ ಮಾಡೋದು ಅನ್ನೋದನ್ನ ತಿಳಿಸಿ ಕೊಡ್ತೀವಿ ನೋಡಿ.

ಬೇಕಾಗುವ ಸಾಮಗ್ರಿಗಳು : ತೋತಾಪುರಿ ಮಾವಿನ ಕಾಯಿ ೨, ಕೆಂಪು ಮೆಣಸಿನ ಪುಡಿ, ಉಪ್ಪು, ಎಣ್ಣೆ ಅರ್ಧ ಕಪ್, ಒಂದೂವರೆ ಸ್ಪೂನ್ ಸಾಸಿವೆ, ಅರ್ಧ ಸ್ಪೂನ್ ಮೆಂತೆ, ಒಂದು ಟಿ ಸ್ಪೂನ್ ಜೀರಿಗೆ,ಅರಿಶಿನ ಪುಡಿ,ಇಂಗು

ಮಾಡುವ ವಿಧಾನ: ತೋತಾಪುರಿ ಮಾವಿನಕಾಯಿ (ಯಾವುದೇ ಹುಳು ಮಾವಿನ ಕಾಯಿ) ಯನ್ನು ಚಿಕ್ಕದಾಗಿ ಕಟ್ ಮಾಡಿಕೊಂಡು ಒಂದು ಬೌಲ್ ಗೆ ಹಾಕಿ ಒಂದೂವರೆ ಟಿ ಸ್ಪೂನ್ ಉಪ್ಪು ಮತ್ತು ಒಂದೂವರೆ ಟಿ ಸ್ಪೂನ್ ಖಾರದ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ, ಒಂದು ಪ್ಲೇಟ್ ನಲ್ಲಿ ಹರಡಿ ಒಂದು ಕಾಟ್ಟನ್ ಬಟ್ಟೆ ಮುಚಿ ಒಂದು ದಿನ ಬಿಸಿಲಿನಲ್ಲಿ ಒಣಗಿಸಿಕೊಳ್ಳಬೇಕು. (ಈ ರೀತಿ ಮಾಡುವುದರಿಂದ ಮಾವಿನ ಕಾಯಿಯಲ್ಲಿ ಇರುವ ತೇವಾಂಶ ಆರತ್ತೆ ಮತ್ತೆ ಉಪ್ಪು ಖಾರ ಕೂಡ ಸರಿಯಾಗಿ ಹಿಡಿದುಕೊಳ್ಳುತ್ತದೆ). ಒಂದು ದಿನ ಬಿಸಿಲಿನಲ್ಲಿ ಒಣಗಿಸಿದ ಮೇಲೆ ಉಪ್ಪು ಖಾರ ಸೇರಿಸುವುದರಿಂದ ನೀರು ಬಿತ್ತುಕೊಳ್ಳತ್ತೆ. ಅದನ್ನು ಸೇರಿಸಿ ಒಂದು ಬೌಲ್ ಗೆ ಹಾಕಿಕೊಂಡು . ಒಂದು ಚಿಕ್ಕ ಪ್ಯಾನ್ ಗೆ ಒಂದೂವರೆ ಸ್ಪೂನ್ ಸಾಸಿವೆ ಮತ್ತೆ ಅರ್ಧ ಸ್ಪೂನ್ ಮೆಂತೆ ಹಾಕಿ ಸ್ವಲ್ಪ ಹುರಿದುಕೊಂಡು ನಂತರ ಅದಕ್ಕೆ ಒಂದು ಟಿ ಸ್ಪೂನ್ ಜೀರಿಗೆ ಯನ್ನೂ ಹಾಕಿ ಹುರಿದುಕೊಳ್ಳಬೇಕು. ಅದನ್ನು ತಣ್ಣಗಾಗಲು ಬಿಟ್ಟು ಮಿಕ್ಸಿ ಜಾರ್ ಗೆ ಹಾಕಿ ಚೆನ್ನಾಗಿ ಪೌಡರ್ ಮಾಡಿಕೊಳ್ಳಬೇಕು.

ಒಗ್ಗರಣೆಗೆ ಅರ್ಧ ಕಪ್ ಎಣ್ಣೆ ಹಾಕಿ ಬಿಸಿ ಮಾಡಿ ಕೊಂಡು ಅದಕ್ಕೆ ಅರ್ಧ ಟಿ ಸ್ಪೂನ್ ಸಾಸಿವೆ, ಅರ್ಧ ಟಿ ಸ್ಪೂನ್ ಅರಿಶಿನ, ಅರ್ಧ ಟಿ ಸ್ಪೂನ್ ಇಂಗು ಹಾಕಿ ಅದನ ಪೂರ್ತಿಯಾಗಿ ತಣಿಯಲು ಬಿಡಬೇಕು. ನಂತರ ಮಾವಿನ ಕಾಯಿಗೆ ರೆಡಿ ಮಾಡಿ ಇಟ್ಟುಕೊಂಡಿರುವ ಪೌಡರ್ ಸೇರಿಸಿ ಮತ್ತೆ ಅದಕ್ಕೆ ಎರಡು ಸ್ಪೂನ್ ಉಪ್ಪು ( ಒಟ್ಟು ೩ ಸ್ಪೂನ್ ಉಪ್ಪು) ಹಾಗೂ ನಾಲ್ಕೂ ವರೆ ಟಿ ಸ್ಪೂನ್ ಖಾರದ ಪುಡಿ (ಒಟ್ಟು ೬ಸ್ಪೂನ್ ಖಾರದ ಪುಡಿ) ಸೇರಿಸಿ ಮಿಕ್ಸ್ ಮಾಡಿ, ಪೂರ್ತಿಯಾಗಿ ತಣ್ಣಗಾದ ಎಣ್ಣೆಯನ್ನು ಚೆನ್ನಾಗಿ ಒಮ್ಮೆ ಮಿಕ್ಸ್ ಮಾಡಿ ಮಾವಿನಕಾಯಿ ಗೆ ಸೇರಿಸಿ ಮಿಕ್ಸ್ ಮಾಡಿಕೊಳ್ಳಬೇಕು. ಈ ಸಮಯದಲ್ಲಿ ಉಪ್ಪು ಖಾರ ಬೇಕಿದ್ರೆ ಸರಿ ಹದ ಮಾಡಿಕೊಳ್ಳಬೇಕು. ಚೆನ್ನಾಗಿ ಮಿಕ್ಸ್ ಮಾಡಿ ನಂತರ ಅದನ್ನ ಒಂದು ಗಾಳಿ ಆಡದ ಗಾಜಿನ ಬಾಟಲಿಯಲ್ಲಿ ಹಾಕಿಟ್ಟು ಪ್ರತೀ ದಿನವೂ ಒಂದು ಒಣಗಿದ ಚಮಚದಲ್ಲಿ ಕೈ ಆಡಿಸಬೇಕು. ೩/೪ ದಿನದಲ್ಲಿ ಮಾವಿನಕಾಯಿ ಉಪ್ಪು ಖಾರ ಎಲ್ಲವನ್ನೂ ಹೀರಿಕೊಂಡು ಸರಿಯಾಗಿ ಇರತ್ತೆ ಮತ್ತೆ ಎಣ್ಣೆ ಮೇಲೆ ತೇಲುತ್ತಾ ಇರತ್ತೆ ಹೀಗೆ ಇದ್ರೆ ಉಪ್ಪಿನಕಾಯಿ ವರ್ಷ ಆದರೂ ಹಾಳಾಗಲ್ಲ ಸರಿಯಾಗಿ ಇರತ್ತೆ. ಈ ಕ್ರಮವನ್ನು ಉಪಯೋಗಿಸಿ ಉಪ್ಪಿನಕಾಯಿ ಮಾಡುವುದರಿಂದ ಒಂದು ವರ್ಷ ಆದರೂ ಸಹ ಕೆಡುವುದಿಲ್ಲ. ಒಮ್ಮೆ ಟ್ರೈ ಮಾಡಿ ನೋಡಿ.

By

Leave a Reply

Your email address will not be published. Required fields are marked *