ಅಧಿಕ ಪೋಷಕಾಂಶಗಳನ್ನು ಹೊಂದಿರುವ ಹಲವಾರು ರೀತಿಯಲ್ಲಿ ನಮ್ಮ ದೇಹದ ಆರೋಗ್ಯಕ್ಕೆ ಸಹಾಯವಾಗುವ ಹಾಲಿನ ಮಹತ್ವದ ಬಗ್ಗೆ ಎಷ್ಟೋ ಜನರಿಗೆ ತಿಳಿದಿರಲ್ಲ. ಅದರ ಬಗ್ಗೆ ಈ ಲೇಖನದಲ್ಲಿ ಓದಿ ತಿಳಿದುಕೊಳ್ಳಿ.

ಪ್ರತಿದಿನ ರಾತ್ರಿ ಮಲಗುವ ಮುನ್ನ ಎಲ್ಲರೂ ಒಂದು ಗ್ಲಾಸ್ ಹಾಲನ್ನು ತಪ್ಪದೇ ಸೇವನೆ ಮಾಡಬೇಕು ಅಂತ ಹೇಳ್ತಾರೆ. ಇದು ಆರೋಗ್ಯಕ್ಕೆ ಮಾತ್ರ ಒಳ್ಳೆಯದು ಅನ್ನೋ ತಿಳುವಳಿಕೆ ಒಂದೇ ಇದ್ರೆ ಅದು ತಪ್ಪು ಇನ್ನೂ ಹಲವಾರು ಪ್ರೈಜನಗಳನ್ನ ಪಡೆಯಬಹುದು.. ಪುರುಷರು ಪ್ರತಿ ದಿನ ರಾತ್ರಿ ಮಲಗುವ ಮುನ್ನ ಹಾಲನ್ನ ಯಾಕೆ ಕುಡಿಯಬೇಕು? ಇದರಿಂದ ಆಗುವ ಪ್ರಯೋಜನಗಳು ಏನು ಅನ್ನೋದನ್ನ ನೋಡೋಣ.

ಹಾಲಿನಲ್ಲಿ ಇರುವ ಫ್ಯಾಟ್ ಮತ್ತು ಪ್ರೊಟೀನ್ ಗಳಿಂದ ಪುರುಷರಲ್ಲಿ ಸಂತಾನೋತ್ಪತ್ತಿ ಹೆಚ್ಚಾಗುತ್ತವೆ. ಹಾರ್ಮೋನುಗಳು ಆಕ್ಟೀವ್ ಆಗಿ ಇರೋದಕ್ಕೆ ಹಾಲು ಸಹಾಯ ಮಾಡುತ್ತದೆ. ಒಂದು ಲೋಟ ಹಾಲು ಕುಡಿಯುವುದರಿಂದ ಶೇಕಡಾ ೩೭ ರಷ್ಟು ಕ್ಯಾಲ್ಸಿಯಂ ಸಿಗತ್ತೆ. ಹಾಲಿನಲ್ಲಿ ಇರುವ ಕ್ಯಾಲ್ಸಿಯಂ, ಸೋಡಿಯಮ್ ಮತ್ತು ಪೊಟ್ಯಾಷಿಯಂ ಇವು ದೇಹಕ್ಕೆ ಎನರ್ಜಿ ನೀಡುತ್ತೆ. ಹಾಲಿನಲ್ಲಿ ಇರುವ ಕ್ಯಾಲ್ಸಿಯಂ ಮತ್ತು ಪ್ರೊಟೀನ್ ದೇಹದಲ್ಲಿ ಇರುವ ಬೇಡವಾದ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಇದರಿಂದ ನಮ್ಮ ದೇಹದ ತೂಕವನ್ನು ಇಳಿಸಿಕೊಳ್ಳಲು ಸಹಾಯ ಆಗತ್ತೆ. ಪ್ರತೀ ದಿನ ಹಾಲು ಕುಡಿಯುವುದರಿಂದ ಹಲ್ಲುಗಳು ಗಟ್ಟಿಯಾಗಿ ಇರತ್ತೆ. ಹಾಗೇ ಹಾಲಿನಲ್ಲಿ ಅಧಿಕ ಪ್ರೊಟೀನ್ ಇರುವುದರಿಂದ ಮಾಂಸ ಖಂಡಗಳ ಬೆಳವಣಿಗೆಗೆ ಸಹಕರಿಸುತ್ತದೆ. ಹಾಲಿನಲ್ಲಿ ಇರುವ ಅಧಿಕ ಪೋಷಕಾಂಶಗಳಿಂದ ಚರ್ಮ ಒಡೆಯುವುದನ್ನು ನಿವಾರಿಸುತ್ತದೆ.

ಆದರೆ ನಮ್ಮಲ್ಲಿ ಕೆಲವರಿಗೆ ಹೇಗೆ ಹಾಲನ್ನು ಸೇವಿಸುವುದು ಅನ್ನೋದರ ಬಗ್ಗೆ ಡೌಟ್ ಇರತ್ತೆ. ಯುವಕರು ಮತ್ತು ವಯಸ್ಕರಾದರೆ ಬೆಳಿಗ್ಗೆ ಮತ್ತು ಸಂಜೆ ಸೇವಿಸಬಹುದು. ಮಕ್ಕಳಿಗೆ ರಾತ್ರಿ ಹಾಲು ಸೇವಿಸಲು ಸೇವಿಸಲು ಕೊಡುವುದು ಸೂಕ್ತವಲ್ಲ ಹಾಗಾಗಿ ಬೆಳಗಿನ ಸಮಯ ಕೊಡಬಹುದು. ಮಹಿಳೆಯರಿಗೆ ಬೆಳಿಗ್ಗೆ ಮತ್ತು ಮಧ್ಯಾನ್ನದ ಸಮಯದಲ್ಲಿ ಹಾಲು ಸೇವಿಸುವುದು ಒಳ್ಳೆಯದು.

Leave a Reply

Your email address will not be published. Required fields are marked *

error: Content is protected !!