Gemini: ಮಿಥುನ ರಾಶಿಯವರ ಗುಣಲಕ್ಷಣ, ನಡತೆ ಹಾಗೂ ಉದ್ಯೋಗ ವಿಚಾರದಲ್ಲಿ ಹೇಗಿರತ್ತೆ ಗೊತ್ತಾ..

Astrology

Gemini Astrology: ಹನ್ನೆರಡು ರಾಶಿಗಳಲ್ಲಿ ಒಂದಾಗಿರುವಂತ ಮಿಥುನ ರಾಶಿಯು ಬಹು ಮುಖ್ಯವಾದ ರಾಶಿಯಾಗಿದೆ. ಮೇಷ, ವೃಷಭ ರಾಶಿಗಳ ನಂತರ ಬರುವಂತದ್ದು ಮಿಥುನ ರಾಶಿಯಾಗಿದ್ದು, ಮೃಗಶಿರಾ ನಕ್ಷತ್ರದ 3,4ನೇ ಪಾದಗಳನ್ನು ಒಳಗೊಂಡಿದೆ. ಹಾಗೆಯೇ ಆರಿದ್ರಾ ನಕ್ಷತ್ರ ಮತ್ತು ಪುನರ್ವಸು ನಕ್ಷತ್ರದ 1,2,3 ಪಾದಗಳನ್ನು ಸಹ ಮಿಥುನ ರಾಶಿಯು ಹೊಂದಿದೆ. ಈ ಮಿಥುನ ರಾಶಿಯಲ್ಲಿ ಜನಿಸಿದವರ ಗುಣ ಲಕ್ಷಗಳನ್ನು ಯಾವವು, ಅವರು ಹೇಗಿರುತ್ತಾರೆ ಮತ್ತು ಎಂತಹ ಉದ್ಯೋಗಗಳನ್ನು ಮಾಡಿದರೆ ಒಳ್ಳೆಯದು ಎನ್ನುವುದನ್ನು ಈ ಲೇಖನದ ಮೂಲಕ ಅರಿಯೋಣವಂತೆ.

ಮಿಥುನ ರಾಶಿಯಲ್ಲಿ ಜನಿಸಿದವರು ಶಾರೀರಿಕವಾಗಿ ಸುರದ್ರೂಪಿಗಳಾಗಿರುತ್ತಾರೆ. ಇವರು ಎತ್ತರವಾದ ವ್ಯಕ್ತಿಗಳಾಗಿದ್ದು, ನೇರವಾದಂತಹ ಶರೀರವನ್ನು ಹೊಂದಿರುತ್ತಾರೆ. ಉದ್ದನೆಯ ಕೈಕಾಲುಗಳು, ಹೆಚ್ಚಾಗಿ ಗೋಧಿ ಅಥವಾ ಬಿಳಿಯ ಬಣ್ಣದವರಾಗಿರುತ್ತಾರೆ. ಅಗಲವಾದ ಹಣೆ ಹಾಗೂ ಚೂಪನೆಯ ಮೂಗನ್ನು ಹೊಂದಿದವರು ಮೂರು ರೀತಿಯ ಪ್ರಕೃತಿಯಿಂದ ಕೂಡಿದವರಾಗಿರುತ್ತಾರೆ. ಇವರು ಮಾನಸಿಕವಾಗಿ ಕೊಂಚ ಚಂಚಲತೆಯಿಂದ ಕೂಡಿದ್ದು, ಆಗಾಗ್ಗೆ ಬದಲಾವಣೆಗಳನ್ನು ಬಯಸುತ್ತಾರೆ.

Kannada Astrology

ಇವರು ಜಾಣರಾಗಿದ್ದು, ಎಲ್ಲವನ್ನೂ ಎರಡು ಬಾರಿ ಪರಿಶೀಲಿಸಿ ಒಪ್ಪಿಕೊಳ್ಳುವ ಬುದ್ಧಿಯವರಾಗಿರುತ್ತಾರೆ‌. ಇವರಲ್ಲಿ ಪ್ರಯೋಗ ಶೀಲತೆ ಹೆಚ್ಚಾಗಿದ್ದು, ಹೊಸ ಹೊಸ ಪ್ರಯೋಗಗಳಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಾರೆ. ಸ್ವಲ್ಪ ಅವಸರ ಪ್ರಕೃತಿಯವರಾಗಿದ್ದು, ಆದಾಗ್ಯೂ ಸಮಬುದ್ಧಿಯನ್ನು ಕಾಯ್ದುಕೊಳ್ಳುತ್ತಾರೆ‌.

ಮಿಥುನ ರಾಶಿಯಲ್ಲಿ ಜನಿಸಿದಂತವರು ಹೆಚ್ಚಾಗಿ ಸಾಹಿತ್ಯ, ಕಲೆ, ನಾಟಕ ಸಂಗೀತಗಳಲ್ಲಿ ಆಸಕ್ತಿ ಹೊಂದಿದವರಾಗಿದ್ದು, ಅದೇ ಕ್ಷೇತ್ರದಲ್ಲಿ ತೊಡಗಿಕೊಳ್ಳಲು ಬಯಸುತ್ತಾರೆ. ಬರವಣಿಗೆ, ಆಡಿಟಿಂಗ್, ವಿಜ್ಞಾನದ ಕೆಲಸಗಳು, ಗುಮಾಸ್ತ, ಲೆಕ್ಕಿಗ, ಗಣಿತಜ್ಞ, ಸುದ್ದಿವಾಹಕರಾಗಿ ಹೆಚ್ಚಿನ ಕೆಲಸ ನಿರ್ವಹಿಸುತ್ತಾರೆ. ಇನ್ನು ಕೆಲವರು ಗಣಕಯಂತ್ರ ನಿರ್ವಾಹಕರು, ದಲ್ಲಾಳಿಗಳು, ವ್ಯಾಪಾರಸ್ಥರು, ಕಾನೂನು ವಿಭಾಗಗಳಲ್ಲಿ ಸಹ ಉದ್ಯೋಗ ಮಾಡುತ್ತಾರೆ.

ಇದನ್ನೂ ಓದಿ..100 ವರ್ಷಗಳ ನಂತರ ಇಂದು ಮಧ್ಯರಾತ್ರಿಯಿಂದಲೆ ಈ 5 ರಾಶಿಯವರಿಗೆ ಭಾರಿ ಅದೃಷ್ಟ ಬರಲಿದೆ

ಇನ್ನೂ ಮಿಥುನ ರಾಶಿಯಲ್ಲಿ ಜನಿಸಿದಂತವರ ನಕ್ಷತ್ರಾವಾರು ಗುಣಲಕ್ಷಣಗಳನ್ನು ನೋಡುವುದಾದರೆ, ಮೃಗಶಿರಾ ನಕ್ಷತ್ರದ ಮೂರನೇ ಪಾದದಲ್ಲಿ ಜನಿಸಿದವರು ಮಿಥುನರಾಶಿಗೆ ಸೇರುತ್ತಾರೆ. ಇವರು ತಮಗೆ ಬೇಕಾಗಿರುವುದನ್ನು ಪಡೆಯಲು ಶ್ರಮ ಪಡುತ್ತಾರೆ ಮತ್ತು ಪಡೆಯುತ್ತಾರೆ. ಇವರಲ್ಲಿ ಸಹನೆ ಹೆಚ್ಚಿದ್ದು, ತೀಕ್ಷ್ಣವಾದ ಬುದ್ಧಿಮತ್ತೆಯಿರುತ್ತದೆ. ಬರವಣಿಗೆಯಲ್ಲಿ ಇವರನ್ನು ಮೀರಿಸಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಇವರಿಗೆ ವಿವಾಹ ಜೀವನದಲ್ಲಿ ಸುಖವೆಂಬುದು ಮರೀಚಿಕೆ, ಸಂತಾನದಲ್ಲಿಯೂ ತೊಂದರೆಗಳು ಉಂಟಾಗುತ್ತದೆ. ಮೊದಲ ಹೆರಿಗೆ ಅದೃಷ್ಟವಶಾತ್ ಸುಖಕರವಾಗಿದ್ದರು ಸಹ ಗರ್ಭಕೋಶದ ಕಾಯಿಲೆಗಳಿಗೆ ಒಳಗಾಗುವ ಲಕ್ಷಣ ಇರುತ್ತದೆ.

ಅಂತೆಯೇ ಮೃಗಶಿರಾ ನಕ್ಷತ್ರದ ನಾಲ್ಕನೇ ಪಾದದಲ್ಲಿ ಜನಿಸಿದವರು, ಜೀವನವನ್ನು ಸುಖಮಯವಾಗಿ ನಡೆಸುವ ಯೋಜನೆಯನ್ನು ಹೊಂದಿರುತ್ತಾರೆ. ಕಠಿಣ ಪರಿಸ್ಥಿತಿಯಲ್ಲಿಯು ಎದೆಗುಂದದೆ ಧೈರ್ಯದಿಂದ ಮುನ್ನುಗ್ಗುವ ಮನಸ್ಥಿತಿಯನ್ನು ಹೊಂದಿರುತ್ತಾರೆ. ಕೆಲವೊಮ್ಮೆ ಇದೇ ಇವರಿಗೆ ಮುಳ್ಳಾಗುವ ಸಾಧ್ಯತೆ ಇರುತ್ತದೆ. ಇವರದು ನೇರಾನೇರ ವ್ಯಕ್ತಿತ್ವವಾದ್ದರಿಂದ ಇವರನ್ನು ದೂಷಿಸುವವರ ಸಂಖ್ಯೆಯು ಹೆಚ್ಚಿರುತ್ತದೆ‌. ಮನೆಯ ವಿಚಾರದಲ್ಲಿ ಹೊಂದಿಕೆ ಇರುವ ಇವರು, ಸಿನಿಮಾ ಕ್ಷೇತ್ರದಲ್ಲಿ ಹೆಚ್ಚಿನ ಕೀರ್ತಿಯನ್ನು ಹೊಂದುತ್ತಾರೆ‌. ಪೋಲಿಸ್, ಇಂಟೆಲಿಜೆನ್ಸ್ ಅಥವಾ ಉಪನ್ಯಾಸಕ ವೃತ್ತಿಗಳನ್ನು ಸಹ ಆರಿಸಿ ಕೊಳ್ಳಬಹುದು.

ಆರಿದ್ರಾ ನಕ್ಷತ್ರದಲ್ಲಿ ಜನಿಸಿ, ಮಿಥುನ ರಾಶಿಗೆ ಸೇರಿದವರು ಬಹಳವೇ ಚುರುಕು ಬುದ್ಧಿಯವರಾಗಿರುತ್ತಾರೆ‌. ಇವರಿಗೆ ಹೊಸ ಹೊಸ ಪ್ರಯೋಗಗಳ ಕಡೆ ಹೆಚ್ಚಿನ ಆಸಕ್ತಿ ಇದ್ದು, ಇದರಿಂದಾಗಿ ಮೋಸ ವಂಚನೆಗಳಿಗೆ ಒಳಗಾಗಿ ಬಿಡುತ್ತಾರೆ. ಇವರಿಗೆ ಕೋಪ ಹೆಚ್ಚಾಗಿರುವುದರಿಂದ ಹೆದರಿಕೆ ಎನ್ನುವುದು ಇವರ ಹತ್ತಿರ ಸುಳಿಯಲಾರದು‌. ಆದರೆ ತಮ್ಮ ಬುದ್ಧಿವಂತಿಕೆಯನ್ನು ಕೆಟ್ಟ ಕೆಲಸಗಳಿಗೆ ಉಪಯೋಗಿಸುವುದು ಹೆಚ್ಚು. ಅಣುಬಾಂಬ್ ತಯಾರಿಕೆ, ಮಾಟ-ಮಂತ್ರಗಳಿಂದ ವಶೀಕರಣ ಮುಂತಾದವುಗಳನ್ನು ಮಾಡುವುದು, ಕಳ್ಳತನ ದರೋಡೆ ಮುಂತಾದ ಸಮಾಜ ಘಾತುಕ ಚಟುವಟಿಕೆಗಳಲ್ಲಿ ಹೆಚ್ಚಾಗಿ ಸಕ್ರಿಯರಾಗಿರುತ್ತಾರೆ.

ಇನ್ನು ಪುನರ್ವಸು ನಕ್ಷತ್ರದ ಒಂದು, ಎರಡು ಹಾಗೂ ಮೂರನೆಯ ಪಾದದಲ್ಲಿ ಜನಿಸುವವರು, ಜನ್ಮತಃ ಒಳ್ಳೆಯ ಸಂಸ್ಕಾರಗಳನ್ನು ರೂಢಿಸಿಕೊಂಡಿರುತ್ತಾರೆ‌‌. ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಗೌರವಕ್ಕೆ ಪಾತ್ರರಾಗುತ್ತಾರೆ. ಇವರು ಪ್ರಾಮಾಣಿಕತೆ ಹಾಗೂ ದಕ್ಷತೆಯಿಂದ ಕೆಲಸ ಮಾಡುತ್ತಾ, ಸಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಾರೆ‌‌‌. ಇವರಿಗೆ ಜ್ಞಾಪಕ ಶಕ್ತಿ ಬಹಳವಿದ್ದು ಕೊಂಚ ಚಂಚಲ ಸ್ವಭಾವವಿರುತ್ತದೆ‌‌. ಬಾರ್ ಹಾಗೂ ರೆಸ್ಟೊರೆಂಟ್ ನಂತಹ ಉದ್ಯಮಗಳಲ್ಲಿ ತೊಡಗಿಕೊಂಡು ರಾಜಕೀಯಕ್ಕೆ ಪ್ರವೇಶ ಪಡೆಯುತ್ತಾರೆ. ಒಳ್ಳೆಯ ರಾಜಕಾರಣಿಗಳಾಗುವ ಯೋಗವಿರುತ್ತದೆ. ಇದು ಒಟ್ಟಾರೆಯಾಗಿ ಮಿಥುನ ರಾಶಿಯಲ್ಲಿ ಜನಿಸಿದವರ ಗ್ರಹಫಲ ಹಾಗೂ ಉದ್ಯೋಗಫಲಗಳಾಗಿದೆ‌. ಶುಭವಾಗಲಿ.

ಇದನ್ನೂ ಓದಿ..ಈ ಯುಗಾದಿ ತಿಂಗಳು ಯಾವ ರಾಶಿಯವರಿಗೆ ಲಕ್ ತರುತ್ತೆ? ಇಲ್ಲಿದೆ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ

Leave a Reply

Your email address will not be published. Required fields are marked *