Pisces Astrology: ಮೀನ ರಾಶಿಯವರಿಗೆ ಗುರುಬಲ ಇರುವುದರಿಂದ ಈ ತಿಂಗಳ ಕೊನೆವರೆಗೂ ಏನೆಲ್ಲಾ ಆಗುತ್ತೆ ತಿಳಿದುಕೊಳ್ಳಿ

0 750

Pisces Astrology on Kannada: ರಂಗಿನ ಹಬ್ಬವಾದ ಹೋಳಿ ಹಾಗೂ ಹೊಸ ಸಂವತ್ಸರದ ಆರಂಭವಾಗುವ ಯುಗಾದಿಯ ಹಬ್ಬಗಳು ಈ ವರ್ಷ ಮಾರ್ಚ್ ತಿಂಗಳಲ್ಲಿ ಬಂದಿವೆ. ಬಣ್ಣವನ್ನು ಬದುಕಿಗೆ ತುಂಬಿಸಿಕೊಳ್ಳುತ್ತಾ ಹೊಸ ವರ್ಷವನ್ನು ಸ್ವಾಗತಿಸುವ ಈ ತಿಂಗಳಲ್ಲಿ ಮೀನ ರಾಶಿಯವರ ಮಾಸ ಭವಿಷ್ಯ ಹೇಗಿದೆ ಎನ್ನುವುದನ್ನು ನೋಡೊಣ ಬನ್ನಿ.

2023 ರ ಮಾರ್ಚ್ ತಿಂಗಳಿನಲ್ಲಿ ಮೀನ ರಾಶಿಯವರ ಗುರುಗ್ರಹವು ಸ್ವ ಸ್ಥಾನದಲ್ಲಿ ಇದ್ದು, ಗುರುಬಲ ಬಹಳವೇ ಚೆನ್ನಾಗಿದೆ. ಧನಸ್ಥಾನದಲ್ಲಿ ಶುಕ್ರ ಹಾಗೂ ರಾಹು ಗ್ರಹಗಳಿದ್ದು ಅಪರೂಪದಿಂದ ಕೂಡಿವೆ. ಮೀನರಾಶಿಯಲ್ಲಿ ನಾಲ್ಕನೆಯ ಮನೆಯಲ್ಲಿ ಕುಜನಿದ್ದರೆ, ಅಷ್ಟಮದಲ್ಲಿ ಕೇತುವಿದ್ದಾನೆ. ವ್ಯಯಸ್ಥಾನದಲ್ಲಿ ಶನಿ, ಸೂರ್ಯ ಮತ್ತು ಬುಧವಿದ್ದು ಅಷ್ಟು ಚೆನ್ನಾಗಿಲ್ಲದ ಗ್ರಹಸ್ಥಿತಿಯಾಗಿದೆ.

ಈ ಮಾರ್ಚ್ ತಿಂಗಳ ಎರಡನೇ ವಾರದ ನಂತರ ಅಂದರೆ ಹುಣ್ಣಿಮೆ ಕಳೆದ ಮೇಲೆ ನಿಮ್ಮ ರಾಶಿಯಲ್ಲಿ ಒಳ್ಳೆಯ ಫಲಗಳು ಕಾಣುತ್ತವೆ. ಶನಿಯಿಂದ ಎಷ್ಟೇ ಕೆಟ್ಟ ಸ್ಥಿತಿ ಒದಗಿ ಬಂದರು ಸಹ ನಿಮ್ಮ ರಾಶಿಯಲ್ಲಿರುವ ಗುರುಬಲದಿಂದಾಗಿ ಎಲ್ಲವು ಒಳ್ಳೆಯ ಅಂತ್ಯವನ್ನು ಕಾಣುತ್ತವೆ. ಬಹಳ ಒಳ್ಳೆಯ ಫಲಗಳು ಸಿಗದಿದ್ದರು, ಕೆಟ್ಟದ್ದಂತು ಆಗುವುದಿಲ್ಲ ಅಷ್ಟು ಭರವಸೆ ಇಡಬಹುದು.

ಇದನ್ನೂ ಓದಿ..ಮಿಥುನ ರಾಶಿಯವರ ಗುಣಲಕ್ಷಣ, ನಡತೆ ಹಾಗೂ ಉದ್ಯೋಗ ವಿಚಾರದಲ್ಲಿ ಹೇಗಿರತ್ತೆ ಗೊತ್ತಾ..

ವ್ಯಯ ಸ್ಥಾನದಲ್ಲಿ ಸೂರ್ಯನಿರುವುದರಿಂದ ಎಷ್ಟು ದುಡಿದರೂ ಸಾಲದು ಎನ್ನುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆದರೆ ಗುರುವು ನಿಮ್ಮ ಬಲವಾಗಿರುತ್ತಾನೆ. ಕುಟುಂಬದ ಜಾಗ್ರತೆಗಾಗಿ ಕೆಲವು ಖರ್ಚುಗಳನ್ನು ಮಾಡಬೇಕಾಗುತ್ತದೆ. ರಾಹುವಿನಿಂದ ಒಂದಷ್ಟು ಸಾಲಗಳನ್ನು ಮಾಡಿಕೊಳ್ಳ ಬೇಕಾಗಬಹುದು‌‌. ಆದಾಗ್ಯೂ ಸಾಲ‌ ಮಾಡಿಯಾದರು ತುಪ್ಪ ತಿನ್ನು ಎನ್ನುವ ಮನಸ್ಥಿತಿ ನಿಮಗಿರುವುದರಿಂದ ಸಾಲದ ದುಡ್ಡಿನಲ್ಲಿ ಐಶಾರಾಮಿ ವಸ್ತುಗಳ ಖರೀದಿ ನಡೆಸುತ್ತಿರಿ. ಅನವಶ್ಯಕ ಖರ್ಚುವೆಚ್ಚಗಳನ್ನು ಕಡಿಮೆ ಮಾಡಿಕೊಳ್ಳಿ, ಯಾಕೆಂದರೆ ಮುಂದಿನ ದಿನಗಳಲ್ಲಿ ಇದರಿಂದ ತೊಂದರೆ ಆಗಬಹುದು.

ಮೀನ ರಾಶಿಯಲ್ಲಿ ಇರುವ ನಿಮಗೆ, ನಿಮ್ಮ ರಾಶಿಯ ಮೂರನೇ ಸ್ಥಾನಾಧಿಪತಿಯು ನಾಲ್ಕನೇ ಮನೆಗೆ ಚಲಿಸುವುದರಿಂದ ಸಹೋದರ ಸಹೋದರಿಯರಿಂದ ಬಹಳಷ್ಟು ಲಾಭ ಅರಸಿ ಬರಲಿದೆ. ಕುಜಗ್ರಹದ ಬಾಧೆಯಿಂದ ತಾಯಿಯ ಆರೋಗ್ಯದಲ್ಲಿ ಏರುಪೇರಾಗಿ ಸಣ್ಣ ಪುಟ್ಟ ಶಸ್ತ್ರಚಿಕಿತ್ಸೆ ಮಾಡಬೇಕಾಗಿ ಬರಬಹುದು. ಆ ಕುರಿತು ಎಚ್ಚರಿಕೆ ಅಗತ್ಯ. ವಾಹನದಲ್ಲಿ ಪ್ರಯಾಣಿಸುವಾಗ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ. ಅದರಿಂದಲೂ ಸಹ ತೊಂದರೆ ಆಗುತ್ತದೆ.

ಅಷ್ಟಮ ಕೇತುವಿನಿಂದಾಗಿ ಮಾನಸಿಕ ಒತ್ತಡ ಹೆಚ್ಚಾಗುವ ಸಾಧ್ಯತೆಯಿದೆ. ಇದರಿಂದಾಗಿ ಖಿನ್ನತೆಗೆ ಜಾರುವ ಮುನ್ನ ಆರೋಗ್ಯಕರ ಜೀವನ ಶೈಲಿಯ ಕಡೆ ಜಾರುವುದು ಒಳಿತು. ಒಳ್ಳೆಯ ಊಟ ಹಾಗೂ ಯೋಗ ಧ್ಯಾನಗಳು ನಿಮಗೆ ಈ ತಿಂಗಳಿನಲ್ಲಿ ಬಹಳ ಸಮಾಧಾನವನ್ನು ನೀಡುತ್ತವೆ. ಆದಷ್ಟು ಬೆಳಗಿನ ಹೊತ್ತು ಯೋಗಾಭ್ಯಾಸ ಮಾಡಿ. ಸಾಡೆಸಾತಿ ಶನಿ ಇರುವುದರಿಂದ ಆರೋಗ್ಯ, ಹಾಗೂ ಅದಕ್ಕೆ ವ್ಯಯಿಸುವ ದುಡ್ಡಿನ ಕಡೆ ಎಚ್ಚರಿಕೆಯಿಂದ ಇರಬೇಕಾಗಿರುವ ಅಗತ್ಯವಿದೆ.

ವ್ಯಯ ಸ್ಥಾನದಲ್ಲಿ ಶನಿ ಇದ್ದಾನೆ‌. ಹಾಗಾಗಿ ಅನವಶ್ಯಕ ಖರ್ಚು ನಿಮ್ಮನ್ನು ಅರಸಿ ಬರುತ್ತವೆ. ಅವುಗಳಿಂದ ದೂರವಿರಿ. ಗುರುಬಲವು ಬಲಿಷ್ಠವಾಗಿ ಇರುವುದರಿಂದ ಹೆಚ್ಚಿನ ಸಮಸ್ಯೆ ಇರಲಾರವು. ಸರ್ಕಾರಿ ಯೋಜನೆಗಳಲ್ಲಿ ಹಣ ತೊಡಗಿಸುವ ಯೋಚನೆಯಿದ್ದರೆ, ಸದ್ಯಕ್ಕೆ ಮುಂದುಡುವುದು ಒಳಿತು. ಇಲ್ಲವಾದರೆ ಕಾನೂನಾತ್ಮಕ ಒಪ್ಪಂದ ಸಮಸ್ಯೆಗಳು, ದಂಡ ತುಂಬುವಂತಹ ಪ್ರಸಂಗಗಳು ನಿಮ್ಮನ್ನು ಎದುರುಗೊಳ್ಳಬಹುದು. ಕಾನೂನು ನಿಯಮಗಳನ್ನು ಉಲ್ಲಂಘಿಸುವ ಕೆಲಸಗಳಿಗೆ ಕೈ ಹಾಕಬೇಡಿ.

ನಿಮ್ಮ ರಾಶಿಯ ಎಲ್ಲ ಸಮಸ್ಯೆಗಳಿಗೆ ಶನಿಯೆ ಕಾರಣವಾಗಿದ್ದು, ಶನಿಯ ಆರಾಧನೆಯಿಂದ ಪರಿಹಾರ ಪಡೆಯಬಹುದಾಗಿದೆ. ಓಂ ಶನಿಶ್ಚರಾಯ ನಮಃ ಎನ್ನುವ ಜಪವನ್ನು ಯಾವುದಾದರೂ ಒಂದು ಶನಿವಾರ ಹತ್ತುಸಾವಿರ ಬಾರಿ ಜಪ ಮಾಡಿ. ಹನುಮಾನ್ ಚಾಲೀಸಾವನ್ನು ಪಠಿಸುತ್ತಿರಿ. ಶುಭವಾಗುತ್ತದೆ.

ಇದನ್ನೂ ಓದಿ..ಈ ಯುಗಾದಿ ತಿಂಗಳು ಯಾವ ರಾಶಿಯವರಿಗೆ ಲಕ್ ತರುತ್ತೆ? ಇಲ್ಲಿದೆ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ

Leave A Reply

Your email address will not be published.