Ugadi prediction of Aries: ಶೋಭಾಕೃತ ಎನ್ನುವ ನಾಮದ ಹೊಸ ಸಂವತ್ಸರದ ಆಗಮನವಾಗುತ್ತಿದೆ. ನಮ್ಮ ಸನಾತನ ಧರ್ಮದಲ್ಲಿ ಯುಗಾದಿಗೆ ವಿಶೇಷ ರೀತಿಯ ಸ್ಥಾನಮಾನಗಳು ಇದೆ. ಹಾಗೆ ಅದರ ಆಚರಣೆಗಳು ಸಹ ಅಷ್ಟೇ ಭಿನ್ನವಾಗಿ ರೂಪುಗೊಂಡಿವೆ. ಹೊಸ ಸಂವತ್ಸರದ ಆರಂಭದಿಂದ ಎಲ್ಲ ರಾಶಿಗಳ ಗ್ರಹಗತಿಗಳು ಸಹ ಬದಲಾವಣೆ ಕಾಣುತ್ತವೆ. ಅಂತದ್ದೆ ಒಂದು ಬದಲಾವಣೆ ಮೊದಲ ರಾಶಿಯಾದ ಮೇಷರಾಶಿಯಲ್ಲಿಯು ಕಾಣಬಹುದು. ಅವು ಯಾವವು ಏನೇನು ಎಂಬುದನ್ನು ನೋಡೊಣ ಬನ್ನಿ.

2023 ಮಾರ್ಚ್ 22 ರಿಂದ ರಾಹು, ಕೇತು, ಗುರು ಹಾಗೂ ಶನಿ ಇವುಗಳ ಸಂಗಮದಿಂದ ಮೇಷ ರಾಶಿಯಲ್ಲಿ ಸಾಕಷ್ಟು ಬದಲಾವಣೆಗಳು, ಅಡತಡೆಗಳು, ಕಷ್ಟ ನಷ್ಟಗಳು ಸುಖವು ಬರಲಿವೆ. ರಾಹು ಸ್ವಸ್ಥಾನದಲ್ಲಿ ಇದ್ದು, ಕೇತು ತುಲಾ ರಾಶಿಯಲ್ಲಿ ಸ್ಥಿರವಾಗಿದ್ದಾನೆ. 2023ರ ಅಕ್ಟೋಬರ್ ತಿಂಗಳ ತನಕವು ಈ ಎರಡು ರಾಶಿಗಳಲ್ಲಿ ಯಾವುದೇ ಸ್ಥಾನ ಪಲ್ಲಟವಾಗದೆ, ಆ ನಂತರ ರಾಹು ಮೇಷದಿಂದ ಮೀನರಾಶಿಗೆ ಚಲಿಸುತ್ತಾನೆ. ಹಾಗೂ ಕೇತುವು ತುಲಾ ರಾಶಿಯಿಂದ ಕನ್ಯಾರಾಶಿಗೆ ಬರುತ್ತಾನೆ. ಈ ಗ್ರಹಗಳ ಹಿಮ್ಮುಖ ಚಲನೆಯಿಂದ ಮೇಷ ರಾಶಿಯಲ್ಲಿ ಬದಲಾಣೆಗಳು, ಅಕ್ಟೋಬರ್ ನಂತರದ ದಿನಗಳಲ್ಲಿ ಕಾಣುತ್ತವೆ‌.

ಶನಿಯು ಮಕರ ರಾಶಿಯಿಂದ ಕುಂಭರಾಶಿಗೆ ಚಲಿಸಿದರೆ, ಗುರುವು ಮೀನ ರಾಶಿಯಲ್ಲಿ ಇದ್ದು ಏಪ್ರಿಲ್‌12, 2023 ನಂತರ ಮೇಷ ರಾಶಿಗೆ ಬರುತ್ತಾನೆ. ಜೂನ್ ಮೊದಲ ವಾರದ ನಂತರ ಗುರುವು ಮತ್ತೆ ಮೀನರಾಶಿಯನ್ನು ಪ್ರವೇಶ ಮಾಡುತ್ತಾನೆ. ಶನಿಯು ಹಿಮ್ಮುಖ ಚಲನೆಯಲ್ಲಿ ಇರುವುದರಿಂದ ವಕ್ರಸ್ಥನಾಗುತ್ತಾನೆ.

2023 ಹಾಗೂ 2024ರ ಒಂದು ವರ್ಷದ ಅವಧಿಯಲ್ಲಿ ಆಯ 5 ಹಾಗೂ ವ್ಯಯ 5 ಇರುವುದರಿಂದ, ಎಷ್ಟು ದುಡಿಯುತ್ತಿರೂ ಅಷ್ಟೇ ಖರ್ಚು ಸಹ ಬರುತ್ತವೆ. ಲಾಭವಿದ್ದಷ್ಟೇ ನಷ್ಟವು ಆಗಿ, ಹಣಕಾಸಿನ ಸ್ಥಿತಿ ಸಮಪ್ರಮಾಣದಲ್ಲಿ ಇರುತ್ತವೆ. ಅವಮಾನ ಒಂದರ ಅಳತೆಯಲ್ಲಿ ಇದ್ದರೆ ಪೂಜ್ಯ ಮೂರರ ಪ್ರಮಾಣದಲ್ಲಿ ಇದೆ. ಈ ಶೋಭಾಕೃತ ಸಂವತ್ಸರದ ಸಮಯದಲ್ಲಿ ನೀವು ಹೆಚ್ಚಾಗಿ ಸಮಾಜದಿಂದ ಗೌರವವನ್ನು ಪಡೆಯಲು ಸಾಧ್ಯವಾಗುತ್ತದೆ.

ಇದನ್ನೂ ಓದಿ..ಮಿಥುನ ರಾಶಿಯವರ ಗುಣಲಕ್ಷಣ, ನಡತೆ ಹಾಗೂ ಉದ್ಯೋಗ ವಿಚಾರದಲ್ಲಿ ಹೇಗಿರತ್ತೆ ಗೊತ್ತಾ..

ಈ ಶೋಭಾಕೃತ ಸಂವತ್ಸರವು ನಿಮಗೆ ಹಣ ಹೂಡಿಕೆಯಲ್ಲಿ ಸಹಾಯ ಮಾಡುವ ವರ್ಷವಾಗಿದೆ. ಗುರುವಿನಿಂದಾಗಿ ಹಣ ಹೂಡಿಕೆಯ ಆಸಕ್ತಿ ನಿಮ್ಮಲ್ಲಿ ಮೂಡಿ, ಹಲವಾರು ಉದ್ಯಮಗಳಲ್ಲಿ ತೊಡಗಿಕೊಳ್ಳಲು ಇದು ಸಕಾಲವಾಗಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಹಣಕಾಸಿನ ಸಮಸ್ಥಿತಿಯನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ. ನಿಮಗೆ ಆದಾಯದ ಮೂಲ ಮಾರ್ಗಗಳನ್ನು ತಿಳಿದು ಕೊಳದ ಶುಕ್ರನು ಸಹಾಯ ಮಾಡುತ್ತಾನೆ.

2023-2024 ರ ಅವಧಿಯಲ್ಲಿ ಶುಕ್ರ ಹಾಗೂ ಕೇತು ವ್ಯತಿರಿಕ್ತ ಪರಿಣಾಮವನ್ನು ಬೀರುವುದರಿಂದ ಬೇರೆ ಬೇರೆ ರೀತಿಯ ಸಮಸ್ಯೆಗಳು ಎದುರಾಗುತ್ತವೆ. ಅಕ್ಟೋಬರ್ ತನಕವೂ ದಿನಗಳು ಅಷ್ಟೊಂದು ಚೆನ್ನಾಗಿಲ್ಲದಿದ್ದರೂ, ಆನಂತರದ ದಿನಗಳಲ್ಲಿ ಸಿನಿಮಾ‌ ಕಷ್ಷೇತ್ರದಲ್ಲಿ ದುಡಿಯುತ್ತಿರುವವರಿಗೆ ಒಳ್ಳೆಯ ದಿನಗಳು ಆರಂಭವಾಗುತ್ತದೆ. ಯಾರನ್ನು ಅತಿಯಾಗಿ ನಂಬಿ, ಅವರ ಸಹಾಯಕ್ಕಾಗಿ ಎದುರು ನೋಡಬೇಡಿ. ನಿಮ್ಮ ಪಾಡಿಗೆ ನಿಮ್ಮ ಕೆಲಸಗಳನ್ನು ಮಾಡಿಕೊಳ್ಳುವ ನಿಟ್ಟಿನಲ್ಲಿ ನಿಮ್ಮ ಯೋಚನೆಗಳಿದ್ದರೆ ಒಳಿತು.

ಭೂಮಿ ವ್ಯವಹಾರಕ್ಕೆ ಅಕ್ಟೋಬರ್, ನವೆಂಬರ್ ಸೂಕ್ತ ಕಾಲವಾಗಿದೆ. ಈ ಸಮಯದಲ್ಲಿ ಜಾಗಗಳನ್ನು ಕೊಳ್ಳುವುದು, ಮಾರುವುದು ಮಾಡಿದಲ್ಲಿ ಲಾಭಾಂಶವನ್ನು ಪಡೆಯಬಹುದು. 2023ರ ಏಪ್ರಿಲ್ ತಿಂಗಳಲ್ಲಿ ಗುರುಬಲ ಚೆನ್ನಾಗಿದ್ದು, ವಿವಾಹ ಯೋಗ್ಯ ಸಮಯವಾಗಿದೆ. ಹಾಗಾಗಿ ಮೇಷ ರಾಶಿಯವರು ಈ ಸಮಯದಲ್ಲಿ ಮದುವೆ, ಮುಂಜಿಯಂತಹ ಮಂಗಳ ಕಾರ್ಯಗಳನ್ನು ಯೋಜಿಸಿಕೊಳ್ಳಬಹುದು. ಇಲ್ಲವಾದರೆ ಅಕ್ಟೋಬರ್ ನಂತರವೇ ಪ್ರಯತ್ನಿಸುವುದು ಒಳಿತು.

ಇದನ್ನೂ ಓದಿ..ಮೀನ ರಾಶಿಯವರಿಗೆ ಗುರುಬಲ ಇರುವುದರಿಂದ ಈ ತಿಂಗಳ ಕೊನೆವರೆಗೂ ಏನೆಲ್ಲಾ ಆಗುತ್ತೆ ತಿಳಿದುಕೊಳ್ಳಿ

ಮೇ ತಿಂಗಳ ನಂತರ ಪಿತ್ರಾರ್ಜಿತ ಆಸ್ತಿ ನಿಮ್ಮ ಪಾಲಿಗೆ ಸಿಗುವ ಯೋಗವಿದೆ. ಭಾಗ್ಯಾಧಿಪತಿಯಾದ ಶುಕ್ರನು ವ್ಯಯಸ್ಥಾನದಲ್ಲಿ ಇರುವುದರಿಂದ, ಪುಣ್ಯ ಕ್ಷೇತ್ರ ದರ್ಶನದ ಯೋಗವಿದೆ. ಸಾಧ್ಯವಾದಷ್ಟು ತೀರ್ಥಕ್ಷೇತ್ರಗಳಿಗೆ ಭೇಟಿಕೊಡಿ. ಸ್ವಂತ ಬ್ಯುಸಿನೆಸ್ ಮಾಡಲು ಇಚ್ಛಿಸುವವರಿಗೆ ಈ ವರ್ಷದ ಜೂನ್ ತಿಂಗಳಿನಿಂದ 2024 ಜೂನ್ ತನಕವು ದಿನಗಳು ಚೆನ್ನಾಗಿವೆ‌. ಎಲ್ಲ ಕಷ್ಟಗಳ ಪರಿಹಾರಕ್ಕಾಗಿ ವಿಘ್ನವಿನಾಯಕನನ್ನು ಆರಾಧನೆ ಮಾಡಿ. ಹಾಗೂ ದೀಪಾರಾದನೆಯನ್ನು ಮಾಡಿ ಶುಭವಾಗುತ್ತದೆ.

Leave a Reply

Your email address will not be published. Required fields are marked *